ಚಾಮರಾಜನಗರ | ಪುಣಜನೂರು-ಬೇಡಗುಳಿ ನಡುವೆ ಮೂರು ಹುಲಿಮರಿಗಳ ಪತ್ತೆ; ತಾಯಿಯಿಂದ ಬೇರ್ಪಟ್ಟ ಮರಿಗಳು

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು-ಬೇಡಗುಳಿ ನಡುವಿನ ಕಾಡಿನಲ್ಲಿ ಮೂರು ಹುಲಿ ಮರಿಗಳು ಪತ್ತೆಯಾಗಿದ್ದು, ಅವುಗಳ ಮೇಲೆ ಅರಣ್ಯ ಇಲಾಖೆ ತೀವ್ರ ನಿಗಾವಹಿಸಿದೆ.
ಪುಣಜನೂರು - ಬೇಡಗುಳಿ ನಡವೆ ಬಜೇಬಾವಿ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳು, ಹಾಗೂ ಕಬ್ಬಿಣ ಕಣಿವೆ ನಡುವೆ ಮತ್ತೊಂದು ಹುಲಿ ಮರಿ ಕಾಣಿಸಿಕೊಂಡು, ತಾಯಿಯಿಂದ ಬೇರ್ಪಟ್ಟಿರಬಹುದೆಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ತಾಯಿ ಹುಲಿಗಾಗಿ ಕೂಬಿಂಗ್ ನಡೆಸಿದರೂ ಸಹ ತಾಯಿ ಹುಲಿ ಕಾಣಿಸಿಕೊಂಡಿಲ್ಲ. ದಾರಿಯಲ್ಲಿ ಸಿಕ್ಕಿರುವ ಮೂರು ಹುಲಿ ಮರಿಗಳನ್ನು ಪಶು ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ ನಡೆಸಿ, ದಿನದ 24 ಗಂಟೆಗಳ ಕಾಲವೂ ಹುಲಿ ಮರಿಗಳ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Next Story





