ಹುಲಿಗಳ ಸಾವು ಪ್ರಕರಣ | ನ್ಯಾಯಾಂಗ ತನಿಖೆಗೆ ನಿವೃತ್ತ ಐಎಫ್ಎಸ್ ಅಧಿಕಾರಿ ಒತ್ತಾಯ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕು ಮಲೇ ಮಹದೇಶ್ವರ ವನ್ಯ ಧಾಮ ವ್ಯಾಪ್ತಿಯ ಮೀಣ್ಯಂ ಆರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದ 5 ಹುಲಿಗಳ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆ ಇಲ್ಲದೇ ಜಂಟಿ ತನಿಖೆಗೆ ವಹಿಸಬೇಕು ಎಂದು ನಿವೃತ್ತ ಐಎಫ್ ಎಸ್ ಅಧಿಕಾರಿ ಡಾ.ಆರ್.ರಾಜು ಒತ್ತಾಯಿಸಿದರು.
ಚಾಮರಾಜನಗರದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿ ಹುಲಿ ಸೇರಿ ಐದು ಹುಲಿಗಳಿಗೆ ವಿಷಪ್ರಾಶ ನೀಡಿ ಹತ್ಯೆ ಮಾಡಲಾಗಿದೆ. ಇದೊಂದು ಹೇಯ ಕೃತ್ಯವಾಗಿದ್ದು, ದೇಶದಲ್ಲಿ ಎಲ್ಲೂ ಇಂಥ ಕೃತ್ಯ ನಡೆದಿಲ್ಲ. ಆದರೆ, ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ಆಗಿದೆ. ಅದು ಸಹ ಮಲೆ ಮಹದೇಶ್ವರರನ್ನು ಆರಾಧ್ಯ ದೇವ ಎಂದು ಪೂಜಿಸುವ ಮತ್ತು ಅವರ ಫೋಟೋ ಇಟ್ಟು ಮನೆ ಮನೆಗಳಲು ಪೂಜೆ ಮಾಡುವ ಸ್ಥಳದಲ್ಲಿಯೇ ಅವರ ವಾಹನ ಹುಲಿ ಅನ್ನು ವಿಷವಿಕ್ಕಿ ಕೊಲ್ಲುವುದು ದುರಂತವಾಗಿದೆ. ಧಾರ್ಮಿಕ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ನಮ್ಮ ನಾಡಿನಲ್ಲಿ ಇಂತಹ ಕೃತ್ಯ ನಡೆಸಿರುವುದು ದುಃಖಕರ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ದೇಶದಲ್ಲಿಯೇ 3,600 ಹುಲಿಗಳಿದ್ದು, ಕರ್ನಾಟಕ 563 ಹುಲಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಚಾಮರಾಜನಗರ ಜಿಲ್ಲೆಯ ಅರಣ್ಯ ವ್ಯಾಪ್ತಿಯು ಹೆಚ್ಚು ಹುಲಿಗಳನ್ನು ಹೊಂದಿದೆ. ಎರಡು ವನ್ಯಧಾಮ ವಿರುವ ಜಿಲ್ಲೆಯಲ್ಲಿ ಹುಲಿಗಳ ಇರುವುದಿರಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಅದ್ಯತೆ ನೀಡದಂತಾಗುತ್ತಿದೆ. ಹುಲಿಗಳು ಕಾಡಿನಲ್ಲಿ ವಾಸವಿದ್ದು. ಅರಣ್ಯ ಸಂಮೃದ್ಧಿಯಾಗಿ ಬೆಳೆಯುತ್ತದೆ. ಸಸ್ಯ ಹಾರಿ ಪ್ರಾಣಿಗಳನ್ನು ಬೇಟೆಯಾಡಿ ಅವರ ಸಂತತಿ ಹೆಚ್ಚದಂತೆ ಮಾಡುವ ಮೂಲಕ ಪರಿಸರ ರಕ್ಷಣೆಯಲ್ಲಿ ಹುಲಿಯ ಪಾತ್ರ ಬಹುಮುಖ್ಯವಾಗಿದೆ ಎಂದರು.
ಪಾರದರ್ಶಕ ತನಿಖೆಯಾಗಲಿ:
ಐದು ಹುಲಿಗಳ ಹತ್ಯೆ ಪ್ರಕರಣವು ಪಾರದರ್ಶಕವಾಗಿ ತನಿಖೆಯಾಗಬೇಕು. ಆಗ ಮಾತ್ರ ಸತ್ಯ ಹೊರ ಬರಲಿದೆ. ಈಗ ನೇಮಕವಾಗಿರುವ ತನಿಖೆ ತಂಡದಿಂದ ಸತ್ಯಾಂಶ ಹೊರ ಬರುತ್ತವೆ ಎಂಬುವುದು ಅನುಮಾನ. ಹೀಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಇಲ್ಲವೇ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದ ಜಂಟಿ ತನಿಖೆಯಾಗಬೇಕು ಎಂದರು.