Chamarajanagar | ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಸಾಂದರ್ಭಿಕ ಚಿತ್ರ | PC : AI
ಚಾಮರಾಜನಗರ : ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯ್ತಿಯ ಕುಳ್ಳೂರು ಗ್ರಾಮದ ಸಮೀಪ ನಡೆದಿದೆ.
ತಾಲ್ಲೂಕಿನ ಸುವರ್ಣಾವತಿ ಜಲಾಶಯದ ಹಿನ್ನೀರ ಸಮೀಪದ ಕುಳ್ಳೂರು ಗ್ರಾಮದ ಬಳಿಯ ಧನದ ಓಣಿ ರಸ್ತೆಯಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಗ್ರಾಮದ ಜಡೇಮಾದ (45) ಮೃತಪಟ್ಟಿದ್ದಾರೆ.
ಸುವರ್ಣಾವತಿ ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿದ್ದ ಜಡೇಮಾದರ ಮೇಲೆ ಏಕಾಎಕಿಯಾಗಿ ಕಾಡಾನೆ ದಾಳಿ ನಡೆಸಿತು ಎನ್ನಲಾಗಿದ್ದು, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ಕೆ.ಗುಡಿ ವಲಯದ ಅಟ್ಟಗುಳಿಪುರದ ರಾಮಾಪುರ ಬೀಟ್ ನಲ್ಲಿ ಘಟನೆ ನಡೆದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story




