ವನ್ಯಜೀವಿ ಸಫಾರಿಗಳಲ್ಲಿ ಮೊಬೈಲ್ಗೆ ಸಂಪೂರ್ಣ ಬ್ರೇಕ್

ಸಾಂದರ್ಭಿಕ ಚಿತ್ರ | Photo Credit : magnific
ಗುಂಡ್ಲುಪೇಟೆ : ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವನ್ಯಜೀವಿ ಸೂಬೈಲ್ ಫೋನ್ ಬಳಕೆಯನ್ನು ಸಂಪೂರ್ಣ ಬ್ರೇಕ್ ಹಾಕಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಪ್ರದೇಶಗಳಲ್ಲಿ ವನ್ಯಜೀವಿ ಸಫಾರಿಗಳಲ್ಲಿ ಚಾಲಕರು, ಪ್ರವಾಸಿಗರು ಮತ್ತು ಗೈಡ್ಗಳು ತಮ್ಮ ಮೊಬೈಲ್ ಫೋನ್ಗಳನ್ನು ಏರೋಪ್ಲೇನ್ ಮೋಡ್ನಲ್ಲಿರಿಸಿ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶ ಕಲ್ಪಿಸಲಾಗಿತ್ತು. ಮುಂದುವರಿದು, ಸುಪ್ರೀಂ ಕೋರ್ಟ್ ಆದೇಶದನ್ವಯ ಸೆ.15 ರಂದು ಎನ್.ಟಿ.ಸಿ.ಎ ಕಾರ್ಯದರ್ಶಿ ಜೊತೆ ಸಭೆ ನಡೆಸಿ ರಾಜ್ಯದ ಕೋರ್ ಭಾಗಗಳಲ್ಲಿನ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸಿ ಆದೇಶಿಸುವ ಜೊತೆಗೆ ತುರ್ತು ಸಂವಹನಕ್ಕಾಗಿ ಎಲ್ಲಾ ಸಫಾರಿ ವಾಹನಗಳಿಗೂ ವೈರ್ ಲೆಸ್ ವ್ಯವಸ್ಥೆ ಅಳವಡಿಸುವಂತೆ ಅ.9ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್ ಆದೇಶ ಹೊರಡಿಸಿದ್ದಾರೆ.
ಅದೇ ರೀತಿ ಚಾಮರಾಜನಗರ ಜಿಲ್ಲೆಯ ಬಂಡೀಪುರ, ಪಿ.ಜಿ.ಪಾಳ್ಯ, ಕೆ.ಗುಡಿ ಹಾಗೂ ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ನಡೆಯುತ್ತಿದೆ. ಈ ಹಿಂದೆ ಸಫಾರಿ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ಏರೋಪ್ಲೇನ್ ಮೋಡ್ನಲ್ಲಿರಿಸಿ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶವಿತ್ತು. ಆದರೆ ಇದೀಗ ಸಫಾರಿಯಲ್ಲಿ ಮೊಬೈಲ್ ಪೋನ್ಗಳಿಗೆ ನಿರ್ಬಂಧ ಹೇರಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಸಫಾರಿಗಳಲ್ಲಿ ಮೊಬೈಲ್ ಫೋನ್ ಬಳಕೆ ಸಂಪೂರ್ಣ ನಿರ್ಬಂಧಿಸಿ ಆದೇಶವನ್ನು ಸೋಮವಾರದ ಬಳಿಕ ಜಾರಿಗೆ ಕ್ರಮ ವಹಿಸಲಾಗುವುದು.
-ಕೆ.ಪಿ.ಸತೀಶ್ ಕುಮಾರ್, ಆರ್.ಎಫ್.ಓ, ಜಿ.ಎಸ್.ಬೆಟ್ಟ






