Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ದೇಶ ದೋಚಿದ ಸೆಲೆಬ್ರಿಟಿ ಖದೀಮರು ಮತ್ತು...

ದೇಶ ದೋಚಿದ ಸೆಲೆಬ್ರಿಟಿ ಖದೀಮರು ಮತ್ತು ನಮ್ಮನ್ನಾಳುವ ಅವರ ಪಾಲುದಾರರು

ಶಂಬೂಕಶಂಬೂಕ25 Nov 2026 10:43 AM IST
share
ದೇಶ ದೋಚಿದ ಸೆಲೆಬ್ರಿಟಿ ಖದೀಮರು ಮತ್ತು ನಮ್ಮನ್ನಾಳುವ ಅವರ ಪಾಲುದಾರರು

ವಿಜಯ ಮಲ್ಯ ಎಂಬ ಈ ವ್ಯಕ್ತಿ ದೇಶಕ್ಕೆ ಸಲ್ಲಿಸಿದ್ದ ಅತಿದೊಡ್ಡ ಸೇವೆ ಏನೆಂದರೆ ಒಟ್ಟು 17 ಬ್ಯಾಂಕುಗಳಿಂದ ಸುಮಾರು 7,000 ಕೋಟಿ ರೂಪಾಯಿ ಸಾಲ ಪಡೆದು ಆ ಎಲ್ಲ ಬ್ಯಾಂಕುಗಳಿಗೆ ಮೋಸ ಮಾಡಿದ್ದು. ಭಾರತದ ಹಣಕಾಸು ಸಚಿವಾಲಯದ ಪ್ರಕಾರ ಮಲ್ಯ ಅವರು ವಿವಿಧ ಬ್ಯಾಂಕುಗಳಿಗೆ ಪಾವತಿಸಬೇಕಾಗಿರುವ ಒಟ್ಟು ಮೊತ್ತ- ಅಸಲು ಮತ್ತು ಬಡ್ಡಿ ಇತ್ಯಾದಿ ಸೇರಿ 17,781 ಕೋಟಿ ರೂಪಾಯಿ. ಮಲ್ಯ ಅವರಿಗೆ ಸೇರಿದ ಹಲವು ಸೊತ್ತು ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿ, ಹರಾಜು ಹಾಕುವ ಅಥವಾ ಮಾರುವ ಮೂಲಕ 10,815 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಇಷ್ಟಾಗಿಯೂ ಮಲ್ಯ ಅವರ ಮೇಲೆ ಸುಮಾರು 7,000 ಕೋಟಿ ರೂಪಾಯಿ ಸಾಲದ ಹೊರೆ ಬಾಕಿ ಉಳಿದುಕೊಂಡಿದೆ.

ಪಲಾಯನಕೋರ ಭಾರತೀಯ ಸರಲೆಬ್ರಿಟಿ ಖದೀಮರ ಸಾಲಲ್ಲಿ ಮಾಧ್ಯಮಗಳಿಗೆ ಅತ್ಯಧಿಕ ಆಪ್ತರೆಂದರೆ ವಿಜಯ ಮಲ್ಯ.

ಮಲ್ಯ ಮೂಲತಃ ಭಾರತೀಯ ಪೌರ. ಭಾರತದಲ್ಲಿ ಯಾವುದಾದರೂ ಬೈಕು ಅಥವಾ ಕಾರು ಕದ್ದಿದ್ದರೆ ಅಥವಾ ಯಾವುದಾದರೂ ಬ್ಯಾಂಕಿಗೆ ಒಂದೆರಡು ಲಕ್ಷ ಲೋನು ಕಟ್ಟದೆ ಬಾಕಿ ಇಟ್ಟಿದ್ದರೆ ಇಂದು ಆತ ಜೈಲಲ್ಲಿರುತ್ತಿದ್ದರು. ಆದರೆ ವಿಜಯ ಮಲ್ಯ ಅಸಾಮಾನ್ಯರು. ಅವರು ಮೂಲತಃ ಕನ್ನಡಿಗರು. ಭಾರೀ ದೇವಭಕ್ತಿ ತುಂಬಿರುವವರು. 2012ರಲ್ಲಿ ತನ್ನ 57ನೇ ಜನ್ಮದಿನದ ಸಂದರ್ಭದಲ್ಲಿ ತಿರುಪತಿಯ ವೆಂಕಟೇಶ್ವರ ಮಂದಿರಕ್ಕೆ 3 ಕಿಲೋ ಭಾರದ ಚಿನ್ನದ ಇಟ್ಟಿಗೆಯನ್ನು ಕಾಣಿಕೆಯಾಗಿ ಕೊಟ್ಟ ಮಹಾತ್ಮರು. ಶ್ರೀ ಶ್ರೀ ರವಿಶಂಕರ್‌ರಿಗೆ ತುಂಬಾ ಆಪ್ತರಾಗಿದ್ದವರು. ಅವರ ಜೊತೆ ಜೊತೆಗೆ ಹಲವೆಡೆಗೆ ಪ್ರವಾಸ ಹೋದವರು. ಅನೇಕ ವಿಐಪಿಗಳು, ಸಿನೆಮಾ ತಾರೆಯರು, ಕ್ರೀಡಾಜಗತ್ತಿನ ದಿಗ್ಗಜರು ಮಲ್ಯರ ನಿಕಟ ಸಂಗಾತಿಗಳು. ಜೊತೆಗೇ ಅವರೊಬ್ಬ ಗಣ್ಯ ರಾಜಕೀಯ ನಾಯಕರೂ ಆಗಿದ್ದರು. ಒಂದಲ್ಲ ಎರಡೆರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದವರು. ಎಲ್ಲ ಪಕ್ಷಗಳಿಗೆ ಪ್ರೀತಿಪಾತ್ರರು. 2002ರಲ್ಲಿ ಅವರು ಪ್ರಥಮ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯ ಸಭೆಗೆ ಸ್ಪರ್ಧಿಸಿದ್ದು ಕರ್ನಾಟಕದಿಂದ. ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಎರಡು ‘ನಿಸ್ವಾರ್ಥ ಪಕ್ಷ’ಗಳ ಬೆಂಬಲದಿಂದ ಅವರು ವಿಜಯ ಸಾಧಿಸಿದರು. 2010 ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎಂಬ ದೇಶಭಕ್ತರ ಪಕ್ಷಗಳ ಬೆಂಬಲದೊಂದಿಗೆ ಅವರು ಮತ್ತೆ ರಾಜ್ಯಸಭೆಗೆ ಚುನಾಯಿತರಾದರು. ತನ್ನ ರಾಜ್ಯಸಭೆಯ ಸದಸ್ಯತ್ವದ ಅವಧಿಯಲ್ಲಿ ಅವರು ಇನ್ನೂರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ದೇಶದ ಗಮನ ಸೆಳೆದಿದ್ದರು. ಅವರಿಗೆ ಸರಕಾರವು ವಿಶೇಷ ಸ್ಥಾನಮಾನವಿರುವ ‘ಡಿಪ್ಲೊಮ್ಯಾಟಿಕ್ (ರಾಜತಾಂತ್ರಿಕ) ಪಾಸ್‌ಪೋರ್ಟ್’ ಅನ್ನೂ ಕೊಟ್ಟಿತ್ತು. ಎಲ್ಲವನ್ನೂ ಸಕಾಲದಲ್ಲಿ ಮಾಡುವ ಶಿಸ್ತಿನ ಸಿಪಾಯಿ ಮಲ್ಯ ಅವರು, ರಾಜ್ಯಸಭೆಯ ನೀತಿ ಶಾಸ್ತ್ರ ಸಮಿತಿಯು ಅವರ ಹಲವಾರು ಅಪರಾಧಗಳನ್ನು ಪರಿಗಣಿಸಿ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳುವ ಒಂದೇ ದಿನ ಮೊದಲು ತನ್ನ ಪದವಿಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದರು.

ವಿಜಯ ಮಲ್ಯ ಎಂಬ ಈ ವ್ಯಕ್ತಿ ದೇಶಕ್ಕೆ ಸಲ್ಲಿಸಿದ್ದ ಅತಿದೊಡ್ಡ ಸೇವೆ ಏನೆಂದರೆ ಒಟ್ಟು 17 ಬ್ಯಾಂಕುಗಳಿಂದ ಸುಮಾರು 7,000 ಕೋಟಿ ರೂಪಾಯಿ ಸಾಲ ಪಡೆದು ಆ ಎಲ್ಲ ಬ್ಯಾಂಕುಗಳಿಗೆ ಮೋಸ ಮಾಡಿದ್ದು. ಭಾರತದ ಹಣಕಾಸು ಸಚಿವಾಲಯದ ಪ್ರಕಾರ ಮಲ್ಯ ಅವರು ವಿವಿಧ ಬ್ಯಾಂಕುಗಳಿಗೆ ಪಾವತಿಸಬೇಕಾಗಿರುವ ಒಟ್ಟು ಮೊತ್ತ- ಅಸಲು ಮತ್ತು ಬಡ್ಡಿ ಇತ್ಯಾದಿ ಸೇರಿ 17,781 ಕೋಟಿ ರೂಪಾಯಿ. ಮಲ್ಯ ಅವರಿಗೆ ಸೇರಿದ ಹಲವು ಸೊತ್ತು ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿ, ಹರಾಜು ಹಾಕುವ ಅಥವಾ ಮಾರುವ ಮೂಲಕ 10,815 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಇಷ್ಟಾಗಿಯೂ ಮಲ್ಯ ಅವರ ಮೇಲೆ ಸುಮಾರು 7,000 ಕೋಟಿ ರೂಪಾಯಿ ಸಾಲದ ಹೊರೆ ಬಾಕಿ ಉಳಿದುಕೊಂಡಿದೆ.

2016 ಮಾರ್ಚ್ ತಿಂಗಳಲ್ಲಿ ಮಲ್ಯ ಭಾರತ ಬಿಟ್ಟು ಬ್ರಿಟನ್‌ಗೆ ಹೋದರು. ಆಗ ಅವರಿನ್ನೂ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ಅವರ ಬಳಿ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಇತ್ತು. ಮುಂದಿನ ತಿಂಗಳಲ್ಲಿ ಅವರು ತನ್ನ ರಾಜ್ಯ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು ಮತ್ತು ಭಾರತ ಸರಕಾರವು ಅವರ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಿತು. ಅವರ ದೂರದೃಷ್ಟಿ ಹಾಗೂ ಪೂರ್ವ ಸಿದ್ಧತೆಯನ್ನು ಹೊಗಳಲೇ ಬೇಕು. 1992 ರಿಂದಲೇ ಬ್ರಿಟನ್ ನಲ್ಲಿ ಅವರಿಗೆ ‘ಶಾಶ್ವತ ನಿವಾಸದ ಹಕ್ಕು’ ಅಥವಾ ‘ಐಎಲ್‌ಆರ್’ (ಇಂಡೆಫಿನಿಟ್ ಲೀವ್ ಟು ರಿಮೈನ್) ಅನುಮತಿ ಪ್ರಾಪ್ತವಿತ್ತು. 2017 ಎಪ್ರಿಲ್ 18ರಂದು ಭಾರತ ಸರಕಾರದ ದೂರಿನ ಆಧಾರದಲ್ಲಿ ಬ್ರಿಟಿಷ್ ಪೊಲೀಸರು ವಿಜಯ ಮಲ್ಯ ಅವರನ್ನು ಬ್ರಿಟನ್ ನಲ್ಲಿ ಬಂಧಿಸಿದರು. ಆ ಬಳಿಕ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.

ಆರ್ಥಿಕ ಅಪರಾಧಗಳನ್ನು ಮಾಡಿ ವಿದೇಶಗಳಲ್ಲಿ ಅವಿತುಕೊಳ್ಳುವ ಮೂಲಕ ದೇಶದ ಕಾನೂನಿನಿಂದ ತಪ್ಪಿಸಿಕೊಳ್ಳುವ ಅಪರಾಧಿಗಳನ್ನು ದಂಡಿಸಲಿಕ್ಕೆಂದೇ 2018ರಲ್ಲಿ ಭಾರತ ಸರಕಾರವು ‘ದಿ ಫ್ಯೂಜಿಟಿವ್ ಇಕೋನೋಮಿಕ್ ಒಫೆಂಡೆರ್ಸ್ ಆಕ್ಟ್’ ಎಂಬ ಒಂದು ವಿಶೇಷ ಕಾನೂನನ್ನು ನಿರ್ಮಿಸಿತು. 100 ಕೋಟಿ ರೂಪಾಯಿಗಿಂತ ಅಧಿಕ ಮೊತ್ತವನ್ನೊಳಗೊಂಡ ವಂಚನೆಯ ಪ್ರಕರಣಗಳಿಗೆ ಈ ನಿಯಮವನ್ನು ಅನ್ವಯಿಸಲಾಯಿತು. 2019 ರಲ್ಲಿ ಮಲ್ಯ ಅವರು ಈ ನಿಯಮದ ಪ್ರಕಾರ ಅಪರಾಧಿ ಎಂದು ಘೋಷಿಸಲಾದ ಪ್ರಥಮ ಆರೋಪಿಯಾದರು. ಅತ್ತ ಬ್ರಿಟನ್ ನಲ್ಲಿ, ಬ್ರಿಟನ್ ನಿಂದ ಹೊರಹೋಗದಂತೆ ಅವರ ಮೇಲೆ ನಿರ್ಬಂಧ ಹೇರಲಾಯಿತು. 2018 ರಲ್ಲೇ ಬ್ರಿಟನ್ ನ ನ್ಯಾಯಾಲಯವೊಂದರಲ್ಲಿ ಮಲ್ಯರನ್ನು ತಪ್ಪಿತಸ್ಥ ಎಂದು ಗುರುತಿಸಿ ಅವರನ್ನು ಭಾರತಕ್ಕೆ ಒಪ್ಪಿಸಲು ಆದೇಶಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಮಲ್ಯ ಬ್ರಿಟನ್‌ನ ರಾಯಲ್ ಕೋರ್ಟ್ಸ್‌ಗೆ ಸಲ್ಲಿಸಿದ ಮೇಲ್ಮನವಿ ಕೂಡಾ ತಿರಸ್ಕೃತವಾಯಿತು. ಆದರೆ ಬ್ರಿಟನ್ ನ ವಿವಿಧ ನ್ಯಾಯಾಲಯಗಳಲ್ಲಿ ಮಲ್ಯ ಅವರ ವಿರುದ್ಧ ಬೇರೆ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿರುವುದರಿಂದ ಅವುಗಳು ಇತ್ಯರ್ಥವಾಗುವ ತನಕ ಅವರನ್ನು ಭಾರತ ಸರಕಾರದ ವಶಕ್ಕೊಪ್ಪಿಸಲು ಸಾಧ್ಯವಿಲ್ಲ ಎಂದು ಭಾರತಕ್ಕೆ ತಿಳಿಸಲಾಯಿತು. ಈಮಧ್ಯೆ 2016 ರಲ್ಲೇ ಬ್ರಿಟನ್ ನಲ್ಲಿ ತನಗೆ ದೊರೆತ ಸುಮಾರು 4 ಕೋಟಿ ಡಾಲರ್ ಮೊತ್ತವನ್ನು ಮಲ್ಯ ತನ್ನ ಮಕ್ಕಳ ಖಾತೆಗಳಿಗೆ ವರ್ಗಾಯಿಸಿದರು.

ಹೀಗೆ, ವಿಜಯ ಮಲ್ಯ ಎಂಬ ಕುಬೇರ ಮತ್ತು ಆತನಿಂದ ಬರಬೇಕಾಗಿರುವ 7,000 ಕೋಟಿ ರೂಪಾಯಿ ಇನ್ನೂ ಭಾರತ ಸರಕಾರದ ಎಟುಕಿನಿಂದ ದೂರವೇ ಇದೆ. ಆದರೆ ಮಲ್ಯ ಅವರ ಮಟ್ಟದ ಮಹಾ ಖದೀಮ ಅಷ್ಟು ದೊಡ್ಡ ದರೋಡೆ ಮಾಡಿ ಸುರಕ್ಷಿತವಾಗಿ ವಿದೇಶವನ್ನು ತಲುಪಿದ್ದರಲ್ಲಿ ಆತನ ಚಾಣಾಕ್ಷತನದ ಜೊತೆ ನಮ್ಮ ವ್ಯವಸ್ಥೆಯ ದೌರ್ಬಲ್ಯ ಹಾಗೂ ಭ್ರಷತೆ ಗಳಿಗೂ ಪಾತ್ರವಿತ್ತು. ಆ ಪಾತ್ರ ಎಂತಹದೆಂಬುದನ್ನು ಶೋಧಿಸುತ್ತಾ ಹೋದಂತೆ ಹಲವು ಹೃದಯ ವಿದ್ರಾವಕ ಮಾಹಿತಿಗಳು ಮುಂದೆ ಬರುತ್ತವೆ. ಉದಾ:

► 2016ರಲ್ಲಿ ವಿಜಯ ಮಲ್ಯ ಭಾರತದಿಂದ ಪಲಾಯನ ಮಾಡಿದಾಗ ಕಾನೂನಿನ ದೃಷ್ಟಿಯಲ್ಲಿ ಸಂಪೂರ್ಣ ಮುಗ್ಧರಾಗಿರಲಿಲ್ಲ. 2014ರಲ್ಲೇ ಮಲ್ಯ ಮತ್ತು ಅವರ ಮಾಲಕತ್ವದ ಕಿಂಗ್ ಫಿಷರ್ ಏರ್‌ಲೈನ್ಸ್ ವಿರುದ್ಧ ಗಂಭೀರ ಸ್ವರೂಪದ ಕಾನೂನು ಉಲ್ಲಂಘನೆ ಹಾಗೂ ಆರ್ಥಿಕ ಅವ್ಯವಹಾರದ ಆರೋಪಗಳಿದ್ದವು. 2014 ಆಗಸ್ಟ್ ತಿಂಗಳಲ್ಲೇ ಅವರ ವಿರುದ್ಧ ಸಿಬಿಐ ಯವರ ಪ್ರಾಥಮಿಕ ತನಿಖೆ ಆರಂಭವಾಗಿತ್ತು.

► 2014ರಲ್ಲಿ ಐಡಿಬಿಐ ಬ್ಯಾಂಕ್, ಹಲವು ಪ್ರಮುಖ ನಿಯಮಗಳನ್ನು ಉಲ್ಲಂಘಿಸಿ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ 950 ಕೋಟಿ ರೂಪಾಯಿಯ ಸಾಲ ನೀಡಿತ್ತು. 2015 ಜುಲೈ ತಿಂಗಳಲ್ಲಿ ಈ ವಿಷಯದಲ್ಲಿ ಮಲ್ಯ, ಅವರ ಕಿಂಗ್ ಫಿಷರ್ ವಿಮಾನಯಾನ ಕಂಪೆನಿ ಮತ್ತು ಐಡಿಬಿಐ ಬ್ಯಾಂಕಿನ ಕೆಲವು ಉನ್ನತ ಅಧಿಕಾರಿಗಳ ವಿರುದ್ಧ ಸಿಬಿಐ ಸಂಸ್ಥೆಯು ಅಧಿಕೃತ ಎಫ್‌ಐಆರ್ ದಾಖಲಿಸಿತ್ತು ಮತ್ತು ಅದರ ಬೆನ್ನಿಗೇ ಅಧಿಕೃತ ಸಿಬಿಐ ತನಿಖೆ ಆರಂಭವಾಗಿತ್ತು. 2015 ಅಕ್ಟೊಬರ್ ತಿಂಗಳಲ್ಲಿ ಮುಂಬೈ, ಬೆಂಗಳೂರು ಮತ್ತು ಗೋವಾದಲ್ಲಿದ್ದ ಮಲ್ಯ ಅವರಿಗೆ ಸಂಬಂಧಿಸಿದ ಕಚೇರಿಗಳು ಮತ್ತು ನಿವಾಸಗಳ ಮೇಲೆ ಪ್ರಥಮ ಹಂತದ ಸಿಬಿಐ ದಾಳಿಗಳು ಕೂಡಾ ನಡೆದಿದ್ದವು. ಹಾಗೆಯೇ, ಗಂಭೀರ ಪ್ರಕರಣಗಳಲ್ಲಿ ತಲೆತಪ್ಪಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಹೊರಡಿಸಲಾಗುವಂತಹ ಎಲ್‌ಒಸಿ ಸುತ್ತೋಲೆ (ಲುಕ್ ಔಟ್ ಸರ್ಕ್ಯುಲರ್)ಯನ್ನು ಕೂಡಾ ಮಲ್ಯರ ವಿರುದ್ಧ ಜಾರಿಗೊಳಿಸಲಾಗಿತ್ತು.

► ಇಂತಹ ಸನ್ನಿವೇಶದಲ್ಲಿ ವಿಜಯ ಮಲ್ಯ ದೇಶ ಬಿಟ್ಟು ಹೋಗದಂತೆ ತಡೆಯುವುದಕ್ಕೆ ಸರಕಾರದ ಬಳಿ ಎಲ್ಲ ಅಧಿಕಾರಗಳೂ ಇದ್ದವು, ಅವಕಾಶಗಳೂ ಇದ್ದವು. ಆದರೆ ಅಪರಾಧಗಳ ನಿಗ್ರಹಕ್ಕೆಂದೇ ಇರುವ ಸಿಬಿಐ ಎಂಬ ಭಾರತದ ತನಿಖಾ ಸಂಸ್ಥೆಯು, ಸ್ವತಃ ತಾನೇ ವಿಶೇಷ ಆಸಕ್ತಿ ವಹಿಸಿ ಮಲ್ಯ ಅವರು ಸುರಕ್ಷಿತವಾಗಿ ಭಾರತದಿಂದ ಓಡಿ ಹೋಗುವುದಕ್ಕೆ ಬೇಕಾದ ದಾರಿಯನ್ನು ಸುಗಮಗೊಳಿಸಿ ಕೊಟ್ಟಿತು ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದೆ. ಈ ಕುರಿತು ಸಿಬಿಐ ನೀಡಿರುವ ಸ್ಪಷ್ಟೀಕರಣವನ್ನು ಈ ಬೃಹತ್ ಹಗರಣದ ವೀಕ್ಷಕರು ಒಂದು ಕ್ರೂರ ತಮಾಷೆ ಎಂದು ಕರೆಯುತ್ತಿದ್ದಾರೆ. ವಿಜಯ ಮಲ್ಯರನ್ನು ರಕ್ಷಿಸಲಿಕ್ಕಾಗಿ ನಮ್ಮ ಸಿಬಿಐ ಸಂಸ್ಥೆಯು ಮಾಡಿದ ಕಾರ್ಯಾಚರಣೆ ನಿಜಕ್ಕೂ ಸ್ವಾರಸ್ಯಕರವಾಗಿದೆ.

ವಿಜಯ ಮಲ್ಯ ಅನೈತಿಕ, ಅಕ್ರಮ ವಿಧಾನಗಳನ್ನು ಬಳಸಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆದಿದ್ದಾರೆ ಮತ್ತು ಅವರ ಕಿಂಗ್ ಫಿಷರ್ ಕಂಪೆನಿಯು ಸತತ ನಷ್ಟ ಅನುಭವಿಸುತ್ತಿದೆ ಎಂಬ ವದಂತಿಗಳು ಸಾರ್ವಜನಿಕ ವಲಯಗಳಲ್ಲಿದಟ್ಟ ಚರ್ಚೆಯಲ್ಲಿದ್ದವು. ಆತ ಶೀಘ್ರವೇ ದೇಶಬಿಟ್ಟು ಪಲಾಯನ ಮಾಡುತ್ತಾರೆ ಎಂಬುದು ಆ ಹಂತದಲ್ಲೇ ಹೆಚ್ಚಿನವರಿಗೆಲ್ಲಾ ಸ್ಪಷ್ಟವಾಗಿ ಬಿಟ್ಟಿತ್ತು ಮತ್ತು ಹಾಗೆಂದು ಹಲವರು ಭವಿಷ್ಯ ನುಡಿಯತೊಡಗಿದ್ದರು. ಜನಸಾಮಾನ್ಯರಿಗೆ ತಿಳಿದಿದ್ದ ಈ ಸರಳ ಸತ್ಯ ಸರಕಾರಕ್ಕೆ ಮಾತು ವಿಶೇಷವಾಗಿ ಸಿಬಿಐಯವರಿಗೆ ತಿಳಿದಿಲಿಲ್ಲವೆಂದರೆ ನಂಬಲಿಕ್ಕಾಗುತ್ತದೆಯೇ?

► 2015 ಅಕ್ಟೋಬರ್‌ನಲ್ಲಿ ಮಲ್ಯ ವಿದೇಶದಲ್ಲಿದ್ದರು. ಆ ತಿಂಗಳು 15ರ ಸುಮಾರಿಗೆ ಮಲ್ಯ ವಿರುದ್ಧ ಸಿಬಿಐಯವರು ‘ಲುಕ್ ಔಟ್ ಸರ್ಕ್ಯುಲರ್’ (ಎಲ್‌ಒಸಿ) ಹೊರಡಿಸಿದ್ದರು. ಆ ಲುಕ್ ಔಟ್ ನೋಟಿಸ್‌ನಲ್ಲಿ ‘ಡಿಟೈನ್’ (detain) ಅಥವಾ ಆತನನ್ನು ತಡೆದಿಡಬೇಕೆಂಬ ಆದೇಶವಿತ್ತು. ಮೂಲತಃ ಇದರ ಉದ್ದೇಶವೇ ಆತ ಭಾರತದಿಂದ ಹೊರಗೆ ಹೋಗುವುದನ್ನು ತಡೆಯುವುದು ಮತ್ತು ಆತ ವಿದೇಶದಿಂದ ಭಾರತಕ್ಕೆ ಬಂದರೆ ಆತನನ್ನು ಬಂಧಿಸುವುದಾಗಿತ್ತು. ಆದರೆ ನೈಜ ಕಸರತ್ತು ಮುಂದಿನ ತಿಂಗಳಲ್ಲಿ ನಡೆಯಿತು. ನವೆಂಬರ್‌ನಲ್ಲಿ ಮಲ್ಯ ಲಂಡನ್‌ನಿಂದ ಮರಳಿ ದಿಲ್ಲಿಗೆ ಬರುವವರಿದ್ದರು. ಆ ವೇಳೆ ‘‘ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದಿಡಬೇಕೇ?’’ ಎಂದು ಇಮಿಗ್ರೇಷನ್ ಬ್ಯೂರೋ ಅಧಿಕಾರಿಗಳು ಸಿಬಿಐ ಅಧಿಕಾರಿಗಳೊಡನೆ ಸ್ಪಷ್ಟೀಕರಣ ಕೇಳಿದರು. ಈ ನಿರ್ಣಾಯಕ ಕ್ಷಣದಲ್ಲಿ ಸಿಬಿಐ ಮಾಡಿದ ಕೃತ್ಯವನ್ನು ಕಿಡಿಗೇಡಿತನ ಎಂದೇ ಕರೆಯಲಾಗುತ್ತದೆ. ಇಮಿಗ್ರೇಷನ್ ಬ್ಯೂರೋದವರ ಪ್ರಶ್ನೆಗೆ ಉತ್ತರವಾಗಿ ಸಿಬಿಐ, ಆತನನ್ನು ಬಂಧಿಸಬೇಡಿ ಎಂದು ಆದೇಶಿಸಿತು! ನವೆಂಬರ್ 24 ರಂದು ಸಿಬಿಐ ಒಂದು ಹೊಸ ಎಲ್‌ಒಸಿಯನ್ನು ಹೊರಡಿಸಿತು. ಅದರಲ್ಲಿ ಹಿಂದಿನ ಸುತ್ತೋಲೆಯಲ್ಲಿದ್ದ ‘ಡಿಟೈನ್’ ಎಂಬ ಪದವನ್ನು ಕಿತ್ತು ಹಾಕಿ ಅದರ ಜಾಗದಲ್ಲಿ inform / report ಎಂಬ ಪದಗಳನ್ನು ಬಳಸಲಾಗಿತ್ತು. ಅಂದರೆ ವಿಮಾನ ನಿಲ್ದಾಣದಲ್ಲಿ ಮಲ್ಯರನ್ನು ತಡೆಯುವ ಬದಲು ಆತನ ಆಗಮನ ಅಥವಾ ನಿರ್ಗಮನದ ಕುರಿತು ಸಿಬಿಐಗೆ ‘ಮಾಹಿತಿ’ ನೀಡಬೇಕು ಎಂಬುದು ಈ ಹೊಸ ಸುತ್ತೋಲೆಯ ಆಶಯವಾಗಿತ್ತು.

► ಮುಂದೆ 2015 ಡಿಸೆಂಬರ್ ಮತ್ತು 2016 ಫೆಬ್ರವರಿಯ ನಡುವೆ ಮಲ್ಯ ಹಲವು ಬಾರಿ ವಿದೇಶಕ್ಕೆ ಹೋಗಿ ಮರಳಿ ಬಂದರು. ಈ ಪ್ರವಾಸಗಳ ಕುರಿತು ಅವರು ಸಿಬಿಐಗೆ ಮಾಹಿತಿ ಮಾತ್ರ ನೀಡಬೇಕಿತ್ತು. ಅವರ ಪ್ರಯಾಣಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಅವರು ಮೂರು ಬಾರಿ ವಿಚಾರಣೆಗಾಗಿ ಸಿಬಿಐ ಮುಂದೆ ಹಾಜರಾಗಿ ಅವರ ಆತಿಥ್ಯ ಸ್ವೀಕರಿಸಿದ್ದರು.

► ಅಕ್ರಮ ವಿಧಾನಗಳಿಂದ ಮಲ್ಯರಿಗೆ ನೂರಾರು ಕೋಟಿ ಸಾಲಕೊಟ್ಟು ಮೋಸಹೋಗಿದ್ದ 17 ಬ್ಯಾಂಕುಗಳು ಎಸ್‌ಬಿಐ ನೇತೃತ್ವದಲ್ಲಿ ಒಂದು ಒಕ್ಕೂಟವನ್ನು ರಚಿಸಿಕೊಂಡು 2016 ಫೆಬ್ರವರಿ 27ರಂದು, ಬೆಂಗಳೂರಿನಲ್ಲಿ, ‘ಡೆಬ್ಟ್ ರಿಕವರಿ ಟ್ರಿಬ್ಯೂನಲ್’ (DRT)ಗೆ ಒಂದು ಅರ್ಜಿಯನ್ನು ಸಲ್ಲಿಸಿತು. ಮಲ್ಯ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಬೇಕು ಮತ್ತು ಅವರು ವಿದೇಶಕ್ಕೆ ಹೋಗದಂತೆ ತಡೆಯಬೇಕು ಎಂದು ಪ್ರಸ್ತುತ ಅರ್ಜಿಯಲ್ಲಿ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಅವರ ಮನವಿ ಯಾವುದೇ ಪರಿಣಾಮ ಬೀರಲಿಲ್ಲ.

► ಇದಾಗಿ ಒಂದೇ ವಾರದ ಬಳಿಕ, ಅಂದರೆ 2016 ಮಾರ್ಚ್ 2ರಂದು ವಿಜಯ ಮಲ್ಯ ತನ್ನ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಬಳಸಿ ಭಾರತ ಬಿಟ್ಟು ಬ್ರಿಟನ್‌ಗೆ ತೆರಳಿದರು. ಅವರನ್ನು ತಡೆಯಬಾರದೆಂಬ ಯಾವುದೇ ಆದೇಶ ಇಮಿಗ್ರೇಷನ್ ಅಧಿಕಾರಿಗಳ ಬಳಿ ಇರಲಿಲ್ಲ. ಅವರ ಬಳಿ ಇದ್ದದ್ದು ಮಲ್ಯ ಅವರ ಆಗಮನ, ನಿರ್ಗಮನಗಳ ಕುರಿತು ತಮಗೆ ಮಾಹಿತಿ ನೀಡಬೇಕೆಂಬ ಸಿಬಿಐಯವರ ಆದೇಶ ಮಾತ್ರ. ಆ ಆದೇಶವನ್ನು ಅವರು ಪಾಲಿಸಿದರು. ಆ ಮೂಲಕ ಮಲ್ಯ ಮತ್ತು ಸಿಬಿಐ ಇವರಿಬ್ಬರ ಉದ್ದೇಶವೂ ಈಡೇರಿತ್ತು.

► ಈ ಸತ್ಕಾರ್ಯಾಚರಣೆಯಲ್ಲಿ ಬ್ಯಾಂಕುಗಳ ಪಾತ್ರವೂ ಇತ್ತು. 2016 ಆಗಸ್ಟ್ ತಿಂಗಳಲ್ಲಿ, ಅಂದರೆ ಮಲ್ಯ ಬ್ರಿಟನ್‌ಗೆ ಪಲಾಯನ ಮಾಡಿದ 5 ತಿಂಗಳ ಬಳಿಕ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಮಲ್ಯ ವಿರುದ್ಧ ಸಿಬಿಐಗೆ ಅಧಿಕೃತ ದೂರು ಸಲ್ಲಿಸಿತು. ಈ ಹಿಂದೆ 9,000 ಕೋಟಿ ರೂಪಾಯಿಯ ಹಗರಣದ ಕುರಿತು ದೂರು ದಾಖಲಿಸಿದ್ದ ಸಿಬಿಐ ಈ ಬಾರಿ ಹೆಚ್ಚುವರಿ 6,000 ಕೋಟಿ ರೂಪಾಯಿಯ ಹಗರಣವನ್ನೂ ಸೇರಿಸಿ ಸವಿಸ್ತಾರ ಎಫ್‌ಐಆರ್ ದಾಖಲಿಸಿತು. ಮಲ್ಯ ಭಾರತದಲ್ಲಿದ್ದಾಗ ಅವರನ್ನು ವಿದೇಶಕ್ಕೆ ಹೋಗದಂತೆ ಯಾಕೆ ತಡೆಯಲಿಲ್ಲ ಎಂಬ ಪ್ರಶ್ನೆ ಈಗಲೂ ಸಿಬಿಐಯನ್ನು ಮುಜುಗರಕ್ಕೆ ಒಳಪಡಿಸುತ್ತಲೇ ಇರುತ್ತದೆ.

ಸಾವಿರಾರು ಕೋಟಿ ದೋಚಿ ಕಾಲ್ಕಿತ್ತ ವಿಜಯ ಮಲ್ಯ ಬ್ರಿಟನ್‌ನಲ್ಲಿ ಸ್ವತಂತ್ರವಾಗಿದ್ದಾರೆ. ಕೇವಲ ಕೆಲವು ಸಾವಿರ ರೂ. ಮೌಲ್ಯದ ಸಣ್ಣಪುಟ್ಟ ಕಳ್ಳತನ ಮಾಡಿದವರು ಭಾರತದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಯಾವ ಅಪರಾಧವನ್ನೂ ಮಾಡಿಲ್ಲದ ಕೋಟ್ಯಂತರ ಭಾರತೀಯ ನಾಗರಿಕರು ತಾವು ಈ ದೇಶದ ಪೌರರೆಂಬುದನ್ನು ಔಪಚಾರಿಕವಾಗಿ ಸಾಬೀತು ಪಡಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ.

Tags

CelebrityScamCorruptionPoliticalCorruptionLootedNation
share
ಶಂಬೂಕ
ಶಂಬೂಕ
Next Story
X