Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ದೇಶ ದೋಚಿದ ಸೆಲೆಬ್ರಿಟಿ ಖದೀಮರು ಮತ್ತು...

ದೇಶ ದೋಚಿದ ಸೆಲೆಬ್ರಿಟಿ ಖದೀಮರು ಮತ್ತು ನಮ್ಮನ್ನಾಳುವ ಅವರ ಸಂರಕ್ಷಕರು

ಶಂಬೂಕಶಂಬೂಕ24 Nov 2026 10:55 AM IST
share
ದೇಶ ದೋಚಿದ ಸೆಲೆಬ್ರಿಟಿ ಖದೀಮರು ಮತ್ತು ನಮ್ಮನ್ನಾಳುವ ಅವರ ಸಂರಕ್ಷಕರು

ಭಾಗ - 1

2014 ಮೇ ತಿಂಗಳಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂತು. ಅದಾಗಿ ಕೇವಲ ಒಂದೇ ವರ್ಷದ ಬಳಿಕ, ಅಂದರೆ 2015 ಜೂನ್ ತಿಂಗಳಲ್ಲಿ ಬ್ರಿಟನ್‌ನ ‘ದ ಸಂಡೇ ಟೈಮ್ಸ್’ ಪತ್ರಿಕೆಯು ಮೋದಿ ಸರಕಾರವು ಯಾವ ರೀತಿ ಲಲಿತ್ ಮೋದಿಯ ರಕ್ಷಣೆಗೆ ನಿಂತಿದೆ ಎಂಬುದನ್ನು ಬಹಿರಂಗಪಡಿಸುವ ಲೇಖನವೊಂದನ್ನು ಪ್ರಕಟಿಸಿತು. ಲೇಖನದಲ್ಲಿ ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ನೆರವಾಗುವಂತೆ ಯಾವೆಲ್ಲ ವಿಧದಲ್ಲಿ ಬ್ರಿಟನ್ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಲಾಗಿತ್ತು. ‘ಲಲಿತ್ ಗೇಟ್’ ಎಂದೇ ಕುಖ್ಯಾತವಾಗಿದ್ದ ಈ ಹಗರಣವು ಮೋದಿ ಸರಕಾರವನ್ನು ಮತ್ತು ಅವರ ಪಕ್ಷವನ್ನು ಭಾರೀ ಪೇಚಿಗೆ ಸಿಲುಕಿಸಿತ್ತು.

ಭಾರತದ ಎಲ್ಲ ಅಮಿತೋತ್ಸಾಹಿ ದ್ವೇಷಭಕ್ತರನ್ನು ದಿಗ್ಭ್ರಮೆಗೊಳಿಸುವ ಹೇಳಿಕೆಯೊಂದು ನವೆಂಬರ್ 14ರಂದು ಎಕ್ಸ್ ನಲ್ಲಿ ಪ್ರಕಟವಾಯಿತು. ಹೇಳಿಕೆ ಹೀಗಿತ್ತು:

‘‘ನನ್ನ ಮಟ್ಟಿಗೆ ಇದೊಂದು ಗೌರವದ ಕ್ಷಣ. ಒಂದು ಹೊಸ ಅಧ್ಯಾಯ. ಇಂದು, 14 ನವೆಂಬರ್ 2026, ಆಕ್ಸ್ ಫರ್ಡ್ ಯೂನಿಯನ್‌ನಲ್ಲಿ ಭಾಷಣ ಮಾಡುವ ಗೌರವ ನನಗೆ ದೊರೆಯಿತು. ಅಲ್ಲಿ ನಾನು ಅತ್ಯಂತ ವಿಶೇಷವಾದ ಒಂದು ವೈಯಕ್ತಿಕ ಮೈಲಿಗಲ್ಲನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದೇನೆ.’’

‘‘ನಾನು ಬ್ರಿಟಿಷ್ ನಾಗರಿಕನಾಗಿರುವುದರ ಬಗ್ಗೆ ಹೆಮ್ಮೆಪಡುತ್ತೇನೆ. (ಬ್ರಿಟಿಷ್ ಧ್ವಜದ ಚಿತ್ರ). 2026 ಸೆಪ್ಟಂಬರ್ 15ರಂದು, ನಾನು ನನ್ನ ಬ್ರಿಟಿಷ್ ನಾಗರಿಕತ್ವವನ್ನು ನನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಸಂಭ್ರಮಿಸುತ್ತಿದ್ದೇನೆ. ಈ ಸಂದರ್ಭವು ನನ್ನ ಹೃದಯದಲ್ಲಿ ಸದಾ ಒಂದು ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಯುನೈಟೆಡ್ ಕಿಂಗ್‌ಡಮ್ ಅನೇಕ ವರ್ಷಗಳಿಂದ ನನ್ನ ಮನೆಯಾಗಿದೆ. ಇದು ನಾನು ಆಳವಾಗಿ ಮೆಚ್ಚುವ ಮತ್ತು ಪ್ರಶಂಸಿಸುವ ದೇಶ. ಇಲ್ಲಿನ ಜನರು, ಸಂಸ್ಥೆಗಳು, ಪರಂಪರೆಗಳು ಮತ್ತು ಮೌಲ್ಯಗಳು ನನಗೆ ಪ್ರಿಯವಾಗಿವೆ. ಬ್ರಿಟಿಷ್ ನಾಗರಿಕನಾಗುವುದು ಒಂದು ವಿಶೇಷ ಗೌರವ ಮತ್ತು ಹೊಣೆಗಾರಿಕೆಯಾಗಿದೆ. ನಾನು ಇದನ್ನು ಹೆಮ್ಮೆ, ಕೃತಜ್ಞತೆ ಮತ್ತು ನಿಜವಾದ ಆತ್ಮೀಯತೆಯ ಭಾವದೊಂದಿಗೆ ಸ್ವೀಕರಿಸುತ್ತೇನೆ.......’’

‘‘........ ಇಂದು ಹಿಜ್ ಮ್ಯಾಜೆಸ್ಟಿ ಕಿಂಗ್ ಚಾರ್ಲ್ಸ್ ತೃತೀಯ ಅವರ ಜನ್ಮದಿನವಾಗಿದ್ದು, ಈ ವಿಶೇಷ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಇದು ಸೂಕ್ತ ಸಂದರ್ಭವಾಗಿದೆ. ಗಾಡ್ ಸೇವ್ ದಿ ಕಿಂಗ್!’’ (ಬ್ರಿಟಿಷ್ ಧ್ವಜ ಮತ್ತು ಕಿರೀಟದ ಚಿತ್ರ)

ಜಗತ್ತಿನ ಮುಂದೆ ಬ್ರಿಟನ್ ದೇಶದ ಬಗ್ಗೆ ಇಷ್ಟೊಂದು ಆಳವಾದ ಪ್ರೀತಿ, ನಿಷ್ಠೆ ಮತ್ತು ಭಕ್ತಿಯನ್ನು ಪ್ರಕಟಿಸಿ, ಬ್ರಿಟನ್ ಪರವಾಗಿ ಇಷೆಲ್ಲಾ ಭಜನೆ, ಕೀರ್ತನೆಗಳಲ್ಲಿ ನಿರತರಾದವರು ಬೇರಾರೂ ಅಲ್ಲ. ಆತ ನಮ್ಮಲ್ಲಿ ದೇಶಭಕ್ತಿಯ ಸರ್ಟಿಫಿಕೇಟ್ ಹಂಚುವವರ ಪರಮಾಪ್ತ ಲಲಿತ್ ಮೋದಿ. ಆಡಳಿತ ಪಕ್ಷದ ಹಲವರ ಬಹುಕಾಲೀನ ಕಣ್ಮಣಿಯಾಗಿದ್ದ ಈ ಮಹಾಶಯನಿಂದ ಜೈಹಿಂದ್, ಭಾರತ್ ಮಾತಾ ಕಿ ಜೈ, ವಂದೇ ಮಾತರಮ್ ಮುಂತಾದ ಘೋಷಣೆಗಳನ್ನು ನಿರೀಕ್ಷಿಸಿದ್ದವರು ಆತನ ಪ್ರಸ್ತುತ ಅಪಮಾನಜನಕ ವರ್ತನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಆತ ಭಾರತದ ಪೌರತ್ವವನ್ನು ತಿರಸ್ಕರಿಸಿ ಇನ್ನೊಂದು ದೇಶದ ಪೌರತ್ವವನ್ನು ಸ್ವೀಕರಿಸಿದ್ದೇ ನಮ್ಮ ವಿಶ್ವಗುರು ಸ್ಥಾನಮಾನಕ್ಕೆ ಮಾಡಿದ ಒಂದು ದೊಡ್ಡ ಅವಹೇಳನ. ಅದು ಸಾಲದ್ದಕ್ಕೆ, ಜಗತ್ತಿನ ಮುಂದೆ ಭಾರತದ ಬಗ್ಗೆ ಒಂದೇ ಒಂದು ಒಳ್ಳೆಯ ಮಾತನ್ನಾಡದೆ ಆ ಹೊರದೇಶವನ್ನು ಅಷ್ಟೆಲ್ಲಾ ವೈಭವೀಕರಿಸುವ ಮೂಲಕ ಅವರು ನಮ್ಮ ರಾಷ್ಟ್ರೀಯ ಭಾವನೆಯನ್ನು ಘಾಸಿಗೊಳಿಸಿದ್ದಾರೆ. ಇಷ್ಟಾಗಿಯೂ ಲಲಿತ್ ಮೋದಿಯ ಸೌಭಾಗ್ಯ ನೋಡಿ. ಭಾರತದ ಯಾವ ದೇಶಭಕ್ತನೂ ಆತನನ್ನು ದೇಶದ್ರೋಹಿ ಎಂದು ಕರೆಯಲಿಲ್ಲ. ಆತನ ಜಾತಿ, ಧರ್ಮ ಇತಿಹಾಸ ಇತ್ಯಾದಿ ಯಾವುದನ್ನೂ ಕೆದಕಲಿಲ್ಲ.

ಹಾಗೆ ನೋಡಿದರೆ, ಪ್ರತಿವರ್ಷ ಸುಮಾರು 2 ಲಕ್ಷ ಭಾರತೀಯರು ಭಾರತದ ಪೌರತ್ವ ತೊರೆದು ಬೇರಾವುದಾದರೂ ದೇಶದ ಪೌರತ್ವ ಸ್ವೀಕರಿಸುತ್ತಾರೆ. ಕಳೆದ ವರ್ಷ ದೇಶದ ವಿದೇಶಾಂಗ ವ್ಯವಹಾರ ಸಚಿವರು ಸಂಸತ್ತಿಗೆ ತಿಳಿಸಿದ ಪ್ರಕಾರ ವರ್ಷ 2011 ಮತ್ತು 2024ರ ನಡುವೆ ಸುಮಾರು 21 ಲಕ್ಷ ಮಂದಿ (20,86,037) ಭಾರತದ ಪೌರತ್ವ ತೊರೆದು ಬೇರಾವುದಾದರೂ ದೇಶದ ಪೌರತ್ವ ಸ್ವೀಕರಿಸಿದ್ದಾರೆ. ಹೀಗೆ ಭಾರತದ ಪೌರತ್ವ ತೊರೆಯುವ ಎಲ್ಲರೂ ಅಪರಾಧಿಗಳಲ್ಲ. ಅವರಲ್ಲಿ ಹೆಚ್ಚಿನವರು ಬಡ ಭಾರತದಲ್ಲಿ ಯಾವ್ಯಾವುದೋ ಮಾರ್ಗದಿಂದ ಶ್ರೀಮಂತರಾದ ಬಳಿಕ ಅಥವಾ ಬೇರಾವುದಾದರೂ ದೇಶದಲ್ಲಿ ಶ್ರೀಮಂತರಾದ ಬಳಿಕ, ಬಡ ಭಾರತ ದೇಶ ನಮಗೇಕೆ? ಎನ್ನುತ್ತಾ ಬಹಳಷ್ಟು ಪ್ರಯಾಸಪಟ್ಟು ಯಾವುದಾದರೂ ಶ್ರೀಮಂತ ದೇಶದ ಪೌರರಾಗಿ ಮಾರ್ಪಟ್ಟವರು.

ಆದರೆ ಲಲಿತ್ ಮೋದಿ ಅಂತಹ ಸಾಮಾನ್ಯ ಹಿನ್ನೆಲೆಯವರಲ್ಲ. ಅವರು ಭಾರತದಲ್ಲಿ ಜನಿಸಿದವರು. ಪ್ರತಿಷ್ಠಿತ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನ ಅಧ್ಯಕ್ಷರಾಗಿದ್ದವರು. ಬಿಸಿಸಿಐ (BCCI) ಉಪಾಧ್ಯಕ್ಷರಾಗಿದ್ದವರು. ನರೇಂದ್ರ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲೇ ಅವರಿಗೆ ತುಂಬಾ ನಿಕಟರಾಗಿದ್ದವರು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸಚಿವರು ಮತ್ತು ಅತ್ಯುನ್ನತ ಮಟ್ಟದ ಸರಕಾರಿ ಅಧಿಕಾರಿಗಳ ಜೊತೆ ಬಹಳ ನಿಕಟ ಒಡನಾಟ ಇಟ್ಟುಕೊಂಡಿದ್ದವರು. ಹಲವು ರಾಜ್ಯಗಳ ಆಂತರಿಕ ರಾಜಕೀಯದಲ್ಲಿ ಮತ್ತು ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಅಕ್ರಮ ಹಸ್ತಕ್ಷೇಪ ನಡೆಸಿದವರು.

2010ರಲ್ಲಿ, ಐಪಿಎಲ್ ಸೀಝನ್ ನಡೆಯುತ್ತಿದ್ದಾಗಲೇ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ವಿರುದ್ಧ ಹಲವು ಅಕ್ರಮ ಹಾಗೂ ಅವ್ಯವಹಾರಗಳ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಸೀಝನ್ ಮುಗಿದೊಡನೆ, 2010 ಎಪ್ರಿಲ್ 26ರಂದು ಪ್ರಸ್ತುತ ಆರೋಪಗಳ ವಿಷಯದಲ್ಲಿ ಬಿಸಿಸಿಐ, ಲಲಿತ್ ಮೋದಿ ವಿರುದ್ಧ ಅಧಿಕೃತ ತನಿಖೆ ಆರಂಭಿಸಿತ್ತು ಮತ್ತು ಲಲಿತ್ ಮೋದಿಯನ್ನು ಐಪಿಎಲ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಗೊಳಿಸಿತು. ಅದೇ ವರ್ಷ ಮೇ ತಿಂಗಳಲ್ಲಿ ಲಲಿತ್ ಮೋದಿ ಭಾರತ ಬಿಟ್ಟು ಇಂಗ್ಲೆಂಡ್‌ಗೆ ಪಲಾಯನ ಮಾಡಿದರು. ಹಲವರ ಪ್ರಕಾರ ಇದು ಕಾನೂನಿನ ಉರುಳಿನಿಂದ ತಪ್ಪಿಸಿಕೊಳ್ಳುವುದಕ್ಕೆ ನಡೆಸಿದ ಯೋಜಿತ ಪಲಾಯನವಾಗಿತ್ತು. ಆಗಿನಿಂದಲೂ ಅನೇಕರು ಅವರನ್ನು ‘ಪಲಾಯನಕೋರ’ ಎಂದೇ ಗುರುತಿಸುತ್ತಿದ್ದಾರೆ.

ನಿಜವಾಗಿ ಮೋದಿ, ಒಟ್ಟು ಸುಮಾರು 2 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತವನ್ನೊಳಗೊಂಡ ಹಲವು ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದ ಹಲವು ಕೋರ್ಟುಗಳಲ್ಲಿ ಅವರ ವಿರುದ್ಧ ಅನೇಕ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ನಿಜವಾಗಿ ಐಪಿಎಲ್‌ನಲ್ಲಿ ನಡೆಸಿದ ಅವ್ಯವಹಾರಕ್ಕಾಗಿ ಬಿಸಿಸಿಐ 2010ರಲ್ಲೇ ಲಲಿತ್ ಮೋದಿಯ ಮೇಲೆ ಆಜೀವನ ನಿಷೇಧ ಹೇರಿತ್ತು. ಅದೇ ವರ್ಷ ಭಾರತ ಸರಕಾರವು ಅವರ ಪಾಸ್‌ಪೋರ್ಟ್ ಅನ್ನು ಹಿಂದೆಗೆದುಕೊಂಡಿತ್ತು. ಅನುಷ್ಠಾನ ನಿರ್ದೇಶನಾಲಯದ (ಈ.ಡಿ.) ಮನವಿಯ ಮೇರೆಗೆ ‘ಇಂಟರ್ ಪೋಲ್’ ಸಂಸ್ಥೆಯು, ಲಲಿತ್ ಮೋದಿ ಭಾರತದಲ್ಲಿ ವಿಚಾರಣೆಗಾಗಿ ‘ಬೇಕಾಗಿದ್ದಾರೆ’ ಎಂಬ ‘ಬ್ಲೂ ಕಾರ್ನರ್’ ನೋಟಿಸ್ ಅನ್ನೂ ಹೊರಡಿಸಿತ್ತು. 2012ರಲ್ಲಿ ಅಂದಿನ ಯುಪಿಎ ಸರಕಾರವು ಲಲಿತ್ ಮೋದಿಗೆ ಯಾವುದೇ ಬಗೆಯ ಪ್ರಯಾಣ ಸಂಬಂಧಿ ದಾಖಲೆಪತ್ರಗಳನ್ನು ಒದಗಿಸಬಾರದು ಎಂದು ಬ್ರಿಟಿಷ್ ಸರಕಾರಕ್ಕೆ ಮನವಿ ಮಾಡಿತ್ತು. ಹಾಗೆಯೇ, ಲಲಿತ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಸರಕಾರದ ಮೇಲೆ ಒತ್ತಡ ಹೇರತೊಡಗಿತ್ತು. 2013ರಲ್ಲಿ ಲಲಿತ್ ಮೋದಿ ವಿರುದ್ಧ ಇದ್ದ 22 ಆರೋಪಗಳನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಬಿಸಿಸಿಐ, ಆ ಪೈಕಿ 8 ಪ್ರಕರಣಗಳಲ್ಲಿ ಆತ ತಪ್ಪಿತಸ್ಥ ಎಂದು ಘೋಷಿಸಿತ್ತು. ಅನುಷ್ಠಾನ ನಿರ್ದೇಶನಾಲಯವು ತನ್ನ ಮುಂದೆ ತನಿಖೆಗೆ ಹಾಜರಾಗುವಂತೆ ಸತತ 10 ವರ್ಷಗಳ ಕಾಲ ಅವರಿಗೆ ನೋಟಿಸ್ ನೀಡುತ್ತಲೇ ಇತ್ತು. 2015ರಲ್ಲಿ ಭಾರತದ ವಿಶೇಷ ನ್ಯಾಲಯವೊಂದು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಭಾರತದಲ್ಲಿ ಕೇಂದ್ರ ಸರಕಾರವು ಬದಲಾದಾಗ ಎಲ್ಲವೂ ಬದಲಾಯಿತು. 2014 ಮೇ ತಿಂಗಳಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂತು. ಅದಾಗಿ ಕೇವಲ ಒಂದೇ ವರ್ಷದ ಬಳಿಕ, ಅಂದರೆ 2015 ಜೂನ್ ತಿಂಗಳಲ್ಲಿ ಬ್ರಿಟನ್‌ನ ‘ದ ಸಂಡೇ ಟೈಮ್ಸ್’ ಪತ್ರಿಕೆಯು ಮೋದಿ ಸರಕಾರವು ಯಾವ ರೀತಿ ಲಲಿತ್ ಮೋದಿಯ ರಕ್ಷಣೆಗೆ ನಿಂತಿದೆ ಎಂಬುದನ್ನು ಬಹಿರಂಗಪಡಿಸುವ ಲೇಖನವೊಂದನ್ನು ಪ್ರಕಟಿಸಿತು. ಲೇಖನದಲ್ಲಿ ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ನೆರವಾಗುವಂತೆ ಯಾವೆಲ್ಲ ವಿಧದಲ್ಲಿ ಬ್ರಿಟನ್ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಲಾಗಿತ್ತು. ‘ಲಲಿತ್ ಗೇಟ್’ ಎಂದೇ ಕುಖ್ಯಾತವಾಗಿದ್ದ ಈ ಹಗರಣವು ಮೋದಿ ಸರಕಾರವನ್ನು ಮತ್ತು ಅವರ ಪಕ್ಷವನ್ನು ಭಾರೀ ಪೇಚಿಗೆ ಸಿಲುಕಿಸಿತ್ತು. ಲಲಿತ್ ಮೋದಿ ಗಂಭೀರ ಆರೋಪಗಳನ್ನು ಹೊತ್ತು ದೇಶದಿಂದ ಪಲಾಯನ ಮಾಡಿದ್ದ ವ್ಯಕ್ತಿ ಎಂಬ ಅರಿವಿದ್ದರೂ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಆಗಿನ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯಾ ಅವರು, ತಮ್ಮ ಅಧಿಕಾರವನ್ನು ದುರುಪಯೋಗಿಸಿ, ಲಲಿತ್ ಮೋದಿಯ ರಕ್ಷಣೆಗೆ ನಿಂತು ಅವರಿಗೆ ಕಾನೂನುಬಾಹಿರವಾದ ನೆರವನ್ನು ನೀಡಿದ್ದಾರೆ ಎಂಬ ಆರೋಪವು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ದೇಶದ ಹಲವೆಡೆ ಈ ಹಗರಣದ ವಿರುದ್ಧ ಬೃಹತ್ ಪ್ರದರ್ಶನಗಳು ನಡೆದಿದ್ದವು.

ಆದರೆ ಮುಂದಿನ ದಿನಗಳಲ್ಲಿ ಲಲಿತ್ ಮೋದಿಯ ಪಾಲಿಗೆ ಎಲ್ಲವೂ ಸುಗಮವಾಗಿ ಬಿಟ್ಟಿತು. ಇಂದು ಲಲಿತ್ ಮೋದಿಯ ಕುಟುಂಬದ ಮಾಲಕತ್ವದಲ್ಲಿರುವ ‘ಮೋದಿ ಎಂಟರ್‌ಪ್ರೈಸಸ್’ ಕಂಪೆನಿಯ ಬಳಿ ಸುಮಾರು 12,000 ಕೋಟಿ ರೂಪಾಯಿಯ ಸಂಪತ್ತಿದೆ ಮತ್ತು ವ್ಯಕ್ತಿಗತವಾಗಿ ಲಲಿತ್ ಮೋದಿಯ ಸಂಪತ್ತು ಸುಮಾರು 4,555 ಕೋಟಿ ರೂಪಾಯಿಯಷ್ಟಿದೆ ಎಂದು ಅಂದಾಜಿಸಲಾಗಿದೆ.

ಪುರುಸೊತ್ತಿಲ್ಲದ ಘನ ಸರಕಾರ

ಕಳ್ಳಕಾಕರು ಹಾಗೂ ದೇಶದ್ರೋಹಿಗಳನ್ನು ಸಕಾಲದಲ್ಲಿ ಗುರುತಿಸಿ ಹದ್ದುಬಸ್ತಿನಲ್ಲಿಡಬೇಕಾದದ್ದು, ಯಾವ ಕಾರಣಕ್ಕೂ ಅವರು ದೇಶದಿಂದ ಹೊರಹೋಗದಂತೆ ತಡೆಯಬೇಕಾದುದು ಮತ್ತು ಅವರನ್ನು ಕಠಿಣ ವಿಚಾರಣೆಗೊಳಪಡಿಸಿ ಅವರಿಗೆ ನ್ಯಾಯೋಚಿತ ಗತಿ ಒದಗಿಸಬೇಕಾದುದು ನಮ್ಮ ಕೇಂದ್ರ ಸರಕಾರದ ಕರ್ತವ್ಯ. ಒಂದು ವೇಳೆ ಅಪ್ಪಿತಪ್ಪಿ ಯಾರಾದರೂ ಖದೀಮರು ದೇಶದಿಂದ ತಪ್ಪಿಸಿಕೊಂಡು ಹೊರಗೆ ಹೋದರೂ, ಅವರು ಜಗತ್ತಿನ ಯಾವ ಮೂಲೆಯಲ್ಲೇ ಅಡಗಿರಲಿ, ತನ್ನೆಲ್ಲಾ ಸಂಪರ್ಕ, ಸಾಮರ್ಥ್ಯ, ಅಧಿಕಾರ ಹಾಗೂ ಪ್ರಭಾವವನ್ನು ಬಳಸಿ ಅವರನ್ನು ಮರಳಿ ದೇಶಕ್ಕೆ ಎಳೆದು ತಂದು ಕಠಿಣ ವಿಚಾರಣೆಗೆ ಒಳಪಡಿಸುವ ಹೊಣೆ ಕೂಡಾ ಸರಕಾರದ ಮೇಲೆಯೇ ಇದೆ. ಆದರೆ ನಮ್ಮ ಭಾರತ ಸರಕಾರ ಈ ವಿಷಯದಲ್ಲಿ ಸಂಪೂರ್ಣ ಸೋತಿದೆ. ಭಾರತದ ಎಷ್ಟೋ ಮಂದಿ ಪ್ರಭಾವಶಾಲಿ ಕಳ್ಳಕಾಕರು, ದೇಶದ ಸಾವಿರಾರು ಕೋಟಿ ಸಂಪತ್ತನ್ನು ದೋಚಿ ವಿದೇಶಗಳಿಗೆ ಪಲಾಯನ ಮಾಡಿದ್ದಾರೆ, ಮಾಡುತ್ತಿದ್ದಾರೆ. ಮಾತ್ರವಲ್ಲ, ಅವರೆಲ್ಲಾ ಕ್ರಮೇಣ ದೇಶದ ಪೌರತ್ವವನ್ನೇ ಬಿಟ್ಟು ಬೇರೆ ದೇಶಗಳ ಪೌರತ್ವವನ್ನು ಸ್ವೀಕರಿಸುತ್ತಿದ್ದಾರೆ. ದೇಶದಲ್ಲಿ ಇಂತಹ ದುರಂತಗಳು ನಡೆಯುತ್ತಿರುವಾಗ ನಮ್ಮ ಕೇಂದ್ರ ಸರಕಾರ ಏನು ಮಾಡುತ್ತಿದೆ ಗೊತ್ತೇ? ಭಾರತ ಸರಕಾರವು ನಿಷ್ಠಾವಂತ, ಮುಗ್ಧ ಭಾರತೀಯ ನಾಗರಿಕರ ವಿರುದ್ಧ ಬೃಹತ್ ಕಾರ್ಯಾಚರಣೆಗಳನ್ನು ನಡೆಸುವುದರಲ್ಲಿ ಮಗ್ನವಾಗಿದೆ. ಸರಕಾರದ ಶಕ್ತಿ ಸಾಮರ್ಥ್ಯ ಮತ್ತು ಸಂಪನ್ಮೂಲಗಳೆಲ್ಲಾ ಕೋಟಿಗಟ್ಟಲೆ ಭಾರತೀಯ ನಾಗರಿಕರಿಂದ ಅವರ ಮತದಾನದ ಹಕ್ಕನ್ನು ಮತ್ತು ಆ ಮೂಲಕ ಕ್ರಮೇಣ ಅವರ ಪೌರತ್ವವನ್ನೇ ಕಿತ್ತುಕೊಳ್ಳುವ ವಿನಾಶಕಾರಿ ಸಂಚಿನಲ್ಲಿ ವ್ಯಯವಾಗುತ್ತಿವೆ.

ಇನ್ನೊಬ್ಬ ಕುಖ್ಯಾತ ಮೋದಿ ನಿಜವಾಗಿ, ಲಲಿತ್ ಮೋದಿಗೆ ಪೌರತ್ವ ನೀಡಿದ ಅದೇ ಬ್ರಿಟನ್ ದೇಶದಲ್ಲಿ ಇನ್ನೊಬ್ಬ ಮೋದಿ ಚರ್ಚೆಯಲ್ಲಿದ್ದಾರೆ. ಅವರ ಹೆಸರು ನೀರವ್ ಮೋದಿ. ಅವರೊಬ್ಬ ಭಾರತೀಯ ವಜ್ರ ವ್ಯಾಪಾರಿ. ಸರಕಾರವೇ ಒಬ್ಬ ಖದೀಮನ ರಕ್ಷಣೆಗೆ ನಿಲ್ಲದಿದ್ದರೆ ಅವನ ಗತಿ ಏನಾಗಬಹುದೆಂಬುದಕ್ಕೆ ಈ ನೀರವ್ ಮೋದಿಯೇ ಸಾಕ್ಷಿ. ಸದ್ಯ ಆತ ಬ್ರಿಟನ್‌ನ ಜೈಲಿನಲ್ಲಿದ್ದಾರೆ. 2018ರಲ್ಲಿ ಆತ ದೇಶ ಬಿಟ್ಟು ಪಲಾಯನ ಮಾಡಿದ್ದರು. ಸರಕಾರ ಮನಸ್ಸು ಮಾಡಿದ್ದರೆ ಅದನ್ನು ತಡೆಯಬಹುದಿತ್ತು. ಆದರೆ ತಡೆಯಲಿಲ್ಲ. ಮುಂದಿನ ದಿನಗಳಲ್ಲಿ, ಭಾರತ ಸರಕಾರವು ಬ್ರಿಟನ್ ಸರಕಾರದ ಜೊತೆ ಮಾತುಕತೆ ನಡೆಸಿ ನೀರವ್ ಮೋದಿಯ ವಿರುದ್ಧ ಉರುಳನ್ನು ಬಿಗುಗೊಳಿಸಿತು. ಲಲಿತ್ ಮೋದಿಯಂತೆ ನೀರವ್ ಮೋದಿಗೆ ಕೂಡಾ ಭಾರತದ ಹಲವು ಬಲಿಷ್ಠರಿಂದ ನೆರವು, ರಿಯಾಯಿತಿ ಎಲ್ಲಾ ಸಿಕ್ಕಿತು. ಆದರೆ ಲಲಿತ್ ಮೋದಿಗೆ ಸಿಕ್ಕಂತಹ ಅತ್ಯುನ್ನತ ಮಟ್ಟದ ಶ್ರೀರಕ್ಷೆ ನೀರವ್ ಮೋದಿಗೆ ಸಿಗಲಿಲ್ಲ. ನೀರವ್ ಮೋದಿ ಎಂಬ ಗುಜರಾತ್ ಮೂಲದ ಆ ಖದೀಮ ನಡೆಸಿದ ಹಗರಣ ಎಷ್ಟು ದೊಡ್ಡದು ಗೊತ್ತೇ? 2011 ಮತ್ತು 2018ರ ನಡುವೆ ಆ ವ್ಯಕ್ತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಬ ಒಂದೇ ಬ್ಯಾಂಕಿಗೆ ಸುಮಾರು 14,000 ಕೋಟಿ ರೂಪಾಯಿ ಪಂಗನಾಮ ಹಾಕಿದ್ದ. ಇತರ ಅವ್ಯವಹಾರಗಳು ಬೇರೆಯೇ ಇದ್ದವು. 2018 ಜನವರಿಯಲ್ಲಿ ಪ್ರಸ್ತುತ ಬ್ಯಾಂಕ್‌ನವರು ಅಧಿಕೃತವಾಗಿ ಪೊಲೀಸರಿಗೆ ದೂರು ಸಲ್ಲಿಸಿದರು. ಆದರೆ ಅದಕ್ಕಿಂತ ಕೆಲವು ದಿನ ಮುನ್ನವೇ ಆತ ಭಾರತದಿಂದ ಪಲಾಯನ ಮಾಡಿದ್ದ. ಆತನ ಈ ಸಕಾಲಿಕ ಹಾಗೂ ಜಾಣ ಪಲಾಯನ ಬ್ಯಾಂಕ್ ನಿರ್ದೇಶಕರು ಮತ್ತು ಸರಕಾರೀ ಅಧಿಕಾರಿಗಳ ಸಹಕಾರವಿಲ್ಲದೆ ಸಾಧ್ಯವಿರಲಿಲ್ಲ. ಈ ಬೃಹತ್ ಹಗರಣದಲ್ಲಿ ನೀರವ್ ಮೋದಿ ಮತ್ತು ಆತನ ನಿಕಟವರ್ತಿಗಳು ಮಾತ್ರವಲ್ಲದೆ, ಪ್ರಸ್ತುತ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಉನ್ನತ ಮಟ್ಟದ ಹಲವು ಸರಕಾರೀ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸಮಾನ ಪಾತ್ರ ವಹಿಸಿದ್ದಾರೆ ಎಂಬುದು ನಿಷ್ಪಕ್ಷ ವೀಕ್ಷಕರ ದೃಢ ಅಭಿಪ್ರಾಯ.

ಭಾರತವು ಆತನನ್ನು ಪರಾರಿಯಾಗಿರುವ ಆರೋಪಿ ಎಂದು ಘೋಷಿಸಿತು. ಆತನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತು. ಆತನ ಪತ್ತೆಗಾಗಿ ಇಂಟರ್ ಪೋಲ್ ಸಂಸ್ಥೆಯು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತು. ಆತನನ್ನು ತನಗೆ ಹಸ್ತಾಂತರಿಸಬೇಕೆಂದು ಭಾರತ ಸರಕಾರವು ಅಧಿಕೃತವಾಗಿ ಬ್ರಿಟನ್ ಸರಕಾರಕ್ಕೆ ಮನವಿ ಸಲ್ಲಿಸಿತು. ಬ್ರಿಟನ್‌ನಲ್ಲಿ ಅಜ್ಞಾತ ಸ್ಥಳದಲ್ಲಿ ಅವಿತುಕೊಂಡಿದ್ದ ನೀರವ್ ಮೋದಿಯನ್ನು 2019 ಮಾರ್ಚ್ ತಿಂಗಳಲ್ಲಿ ಅಲ್ಲಿಯ ಪೊಲೀಸರು ಲಂಡನ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಿದರು. ಆತ ಜಾಮೀನು ಬಿಡುಗಡೆಗಾಗಿ ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಬ್ರಿಟನ್‌ನ ಕೋರ್ಟುಗಳು ತಿರಸ್ಕರಿಸಿದವು. (ಭಾರತದಲ್ಲಾಗಿದ್ದರೆ ಆತನಿಗೆ ಒಂದಲ್ಲ ಹತ್ತಾರು ಬಾರಿ ಜಾಮೀನು ಸಿಗುತ್ತಿತ್ತು). ಆತನನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರ ಕೂಡಾ ಅಲ್ಲಿನ ಕೋರ್ಟುಗಳಲ್ಲಿ ವಿಚಾರಣೆಗೆ ಒಳಪಟ್ಟಿದೆ. ಲಂಡನ್‌ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಅವರ ಕೋರ್ಟು, ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಬೇಕಾದ ಪ್ರಾಥಮಿಕ ಪುರಾವೆಗಳು ಪ್ರಾಪ್ತವಾಗಿವೆ ಎಂದು 2021ರಲ್ಲೇ ಘೋಷಿಸಿತ್ತು. 2024ರಲ್ಲಿ ಭಾರತ ಸರಕಾರವು ಈತನಿಗೆ ಮತ್ತು ಈತನ ನಿಕಟ ಪಾಲುದಾರರಿಗೆ ಸೇರಿದ ಸುಮಾರು 693 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿತು. ಲಲಿತ್ ಮೋದಿ ವಂಚಿಸಿದ ಮೊತ್ತಕ್ಕೆ ಹೋಲಿಸಿದರೆ ಇದು ಶೇ.5ಕ್ಕಿಂತ ಕಡಿಮೆ!

Tags

celebritynationProtectorsModi government
share
ಶಂಬೂಕ
ಶಂಬೂಕ
Next Story
X