Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ವೋಟಿಗಾಗಿ ಅಮ್ಮಾ, ಅಮ್ಮಾ! ಬೇರೆಲ್ಲೆಡೆ,...

ವೋಟಿಗಾಗಿ ಅಮ್ಮಾ, ಅಮ್ಮಾ! ಬೇರೆಲ್ಲೆಡೆ, ಯಾರಮ್ಮ? ತೊಲಗಮ್ಮಾ!

ಶಂಬೂಕಶಂಬೂಕ11 Jun 2026 10:55 AM IST
share
ವೋಟಿಗಾಗಿ ಅಮ್ಮಾ, ಅಮ್ಮಾ! ಬೇರೆಲ್ಲೆಡೆ, ಯಾರಮ್ಮ? ತೊಲಗಮ್ಮಾ!

ಭಾಗ - 1

ಮಟನ್‌ಗಿಂತ ಅಗ್ಗದ ದರದಲ್ಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಬೀಫ್‌ಗೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದ ಭಾರತದ ಕೆಲವು ಬೀಫ್ ಭಕ್ಷಕರಿಗೆ ಇತ್ತೀಚೆಗೆ ಜ್ಞಾನೋದಯವಾಗಿದ್ದು, ಅವರು ಆರೆಸ್ಸೆಸ್‌ನ ಹಳೆಯ ಬೇಡಿಕೆಗೆ ತಮ್ಮ ಬೆಂಬಲ ಘೋಷಿಸಿ ಬಿಟ್ಟಿದ್ದಾರೆ. ನಾವಿನ್ನು ಬೀಫ್ ತಿನ್ನುವುದಿಲ್ಲ, ಸರಕಾರವು ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಎಂದು ಆಗ್ರಹಿಸತೊಡಗಿದ್ದಾರೆ. ಈ ಬೆಳವಣಿಗೆಯಿಂದ ‘ಗೋರಕ್ಷಕ’ರೆಲ್ಲಾ ಸಂತುಷ್ಟರಾಗಬೇಕಿತ್ತು. ಪ್ರಸ್ತುತ ಬೇಡಿಕೆ ಕೇಳಿ ಬಂದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳೇ ಇವೆ. ಗೋರಕ್ಷಕರು ಆ ತಮ್ಮ ಹಳೆಯ ಬೇಡಿಕೆಯನ್ನು ಹೊಸ ಉತ್ಸಾಹದೊಂದಿಗೆ ಪ್ರಸ್ತುತ ಸರಕಾರಗಳ ಮುಂದಿಟ್ಟು, ಆ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರದಲ್ಲಿರುವ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ ನಿಜವಾಗಿ ಆದದ್ದೇನು?

ಹಿಂದೊಮ್ಮೆ (2015) ಬಿಜೆಪಿಯ ಕೇಂದ್ರ ಸಚಿವರಾಗಿದ್ದ ಮುಕ್ತಾರ್ ಅಬ್ಬಾಸ್ ನಖ್ವಿ ಎಂಬೊಬ್ಬ ಅಮಿತೋತ್ಸಾಹಿ ನಾಯಕ ತಮ್ಮ ಮಾಲಕರನ್ನು ಮೆಚ್ಚಿಸುವ ಆವೇಶದಲ್ಲಿ ‘‘ಬೀಫ್ ತಿನ್ನ ಬಯಸುವವರು ಪಾಕಿಸ್ತಾನಕ್ಕೆ ಹೋಗಿ’’ ಎಂದಿದ್ದರು. ಆಗ ಅದೇ ಪಕ್ಷ ಮತ್ತು ಅದೇ ಸಂಪುಟದ ಇನ್ನೋರ್ವ ಸದಸ್ಯ ಕಿರಣ್ ರಿಜಿಜು ಈ ನಿಲುವನ್ನು ವಿರೋಧಿಸಿ, ‘‘ನಾನು ಅರುಣಾಚಲ ಪ್ರದೇಶದವನು. ನಾನು ಬೀಫ್ ತಿನ್ನುತ್ತೇನೆ. ನನ್ನನ್ನು ತಡೆಯಲು ಯಾರಿಗೆ ಸಾಧ್ಯವಿದೆ? ಭಾರತ ಒಂದು ಜಾತ್ಯತೀತ ದೇಶ. ಇಲ್ಲಿ ಯಾರೂ ತಮ್ಮ ಆಹಾರಾಭ್ಯಾಸಗಳನ್ನು ಇನ್ನೊಬ್ಬರ ಮೇಲೆ ಹೇರುವುದಕ್ಕೆ ಅವಕಾಶ ಇಲ್ಲ’’ ಎಂದು ಹೇಳಿಕೆ ನೀಡಿದ್ದರು. (ಆ ಬಳಿಕ ಆ ಕುರಿತು ಕೆಲವು ಗೊಂದಲಕಾರಿ ವಿವರಣೆಗಳನ್ನು ಬೇರೆ ನೀಡಿದರು) ಗಮ್ಮತ್ತು ನೋಡಿ: ಬೀಫ್ ಪರ ಮಾತನಾಡಿದ್ದ ಕಿರಣ್ ರಿಜಿಜು ಈಗಲೂ ಮೋದಿ ಸಂಪುಟದಲ್ಲಿ ಸಚಿವರಾಗಿ ಮೆರೆಯುತ್ತಿದ್ದಾರೆ. ಬೀಫ್ ವಿರೋಧಿಸಿದ್ದ ಮುಕ್ತಾರ್ ಅಬ್ಬಾಸ್ ನಖ್ವಿ ಪಾಪ, ಕಳೆದ ಕೆಲವು ವರ್ಷಗಳಿಂದ ಜೋಳಿಗೆ ಎತ್ತಿಕೊಂಡು ಅದೆಲ್ಲಿ ಅಜ್ಞಾತವಾಗಿ ಅಲೆಯುತ್ತಿದ್ದಾರೋ ಗೊತ್ತಿಲ್ಲ! ದನ, ಗೋವು, ಗೋಮಾಂಸ, ಬೀಫ್ ಮುಂತಾದ ವಿಷಯಗಳಲ್ಲಿ ಧರ್ಮರಕ್ಷಕರ ನೈಜ ನಿಲುವು ಏನೆಂಬುದು ಸ್ವತಃ ಅವರದೇ ಪಕ್ಷದಲ್ಲಿ ಸಂಸದರೂ, ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕರೂ, ಕೇಂದ್ರ ಸಚಿವರೂ ಆಗಿದ್ದ ನಖ್ವಿಯವರಿಗೆ ಅರ್ಥವಾಗಲಿಲ್ಲ ಅಂದ ಮೇಲೆ ಇತರರ ಕಥೆ ಏನು?

ಕೆಲವು ವರ್ಷಗಳ ಹಿಂದೆ ದಿಲ್ಲಿಯಲ್ಲಿ ಸಮಾನ ನಾಗರಿಕ ಕಾನೂನು ಕುರಿತು ಚರ್ಚೆಯೊಂದು ನಡೆಯುತ್ತಿದ್ದಾಗ ಬಿಜೆಪಿ ನಾಯಕರೊಬ್ಬರು ‘‘ಒಂದೊಂದು ಕಡೆ ಒಂದೊಂದು ಕಾನೂನು ಸರಿಯಲ್ಲ. ಒಂದೇ ದೇಶ ಅಂದ ಮೇಲೆ ಎಲ್ಲ ಕಡೆ ಎಲ್ಲರಿಗೆ ಒಂದೇ ಕಾನೂನು ಅನ್ವಯಿಸಬೇಕು’’ ಎಂದು ಪದೇ ಪದೇ ಚೀರಾಡುತ್ತಿದ್ದರು. ಆಗ ಆಪ್ ನಾಯಕರೊಬ್ಬರು ಎದ್ದು ಕೇಳಿದ ಒಂದು ಸರಳ ಪ್ರಶ್ನೆ, ಬಿಜೆಪಿ ನಾಯಕನನ್ನು ತಬ್ಬಿಬ್ಬುಗೊಳಿಸಿತು. ಪ್ರಶ್ನೆ ಹೀಗಿತ್ತು:

‘‘ಸ್ವಾಮೀ, ನಿಮಗೆ ಬೇಕಾದಾಗಲೆಲ್ಲಾ ಒಂದು ದೇಶ - ಒಂದು ಕಾನೂನು ಎನ್ನುವ ನಿಮ್ಮ ಪಕ್ಷ, ಗೋಮಾಂಸದ ವಿಷಯದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆಬೇರೆ ನಿಲುವು ತಾಳಿರುವುದೇಕೆ? ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಿಮ್ಮ ನಾಯಕರು ಸಂಪೂರ್ಣ ಗೋಮಾಂಸ ನಿಷೇಧ ಅಂತಾರೆ. ಪಕ್ಕದ ಗೋವಾದಲ್ಲಿ ಎಲ್ಲೂ ಯಾರಿಗೂ ಯಾವುದೇ ನಿಷೇಧ ಇಲ್ಲ, ಎಲ್ಲೆಡೆ ಎಲ್ಲರಿಗೆ ಸಮ್ಮತ ಎನ್ನುತ್ತಿದ್ದಾರೆ. ಅತ್ತ ಹರ್ಯಾಣದಲ್ಲಿ, ಸ್ಥಳೀಯರಿಗೆ ಮಾತ್ರ ನಿಷಿದ್ಧ - ವಿದೇಶಿ ಪ್ರವಾಸಿಗರಿಗೆ ಸಮ್ಮತ ಎನ್ನುತ್ತಿದ್ದಾರೆ. ಗೋವಿನ ವಿಷಯದಲ್ಲಿ ದೇಶದೆಲ್ಲೆಡೆ ಒಂದೇ ಧೋರಣೆ ತಾಳಲು ನಿಮಗೇಕೆ ಸಾಧ್ಯವಿಲ್ಲ?’’

ಗೋವಿನ ವಿಷಯದಲ್ಲಿ ಸಾವರ್ಕರ್ ಅಸಂಗತ

‘ಹಿಂದುತ್ವ’ ಎಂಬ ಜನಾಂಗವಾದಿ ಸಿದ್ಧಾಂತದ ಸ್ಥಾಪಕ ವಿ.ಡಿ. ಸಾವರ್ಕರ್ ಅವರು ಮನುವಾದಿ ಅಂಧಭಕ್ತರ ಪರಮಪೂಜ್ಯ, ಪ್ರಾತಃಸ್ಮರಣೀಯ ನಾಯಕರು. ಅವರು ಹಗಲಿರುಳೆನ್ನದೆ, ಭಕ್ತಿಪೂರ್ವಕ ಆ ತಮ್ಮ ಆದರ್ಶಪುರುಷನ ನಾಮ ಜಪಿಸುತ್ತಿರುತ್ತಾರೆ. ಅವರ ಕುರಿತಾದ ಕಹಿಸತ್ಯಗಳನ್ನೆಲ್ಲಾ ಮುಚ್ಚಿಟ್ಟು ಸುಳ್ಳುಗಳ ಕಂತೆಯನ್ನೇ ಸೃಷ್ಟಿಸಿ, ವೀರ ಶೂರ ಎಂದೆಲ್ಲಾ ಸಾವರ್ಕರ್‌ರನ್ನು ವೈಭವೀಕರಿಸುತ್ತಿರುತ್ತಾರೆ. ಆದರೆ ಗೋವು, ಗೋಮಾತೆ, ಗೋಪೂಜೆ, ಗೋಮಾಂಸ ಇತ್ಯಾದಿಗಳ ವಿಷಯದಲ್ಲಿ ಸಾವರ್ಕರ್ ಏನು ಹೇಳಿದ್ದರು? ಎಂದು ಅವರೊಡನೆ ಕೇಳಿ ನೋಡಿ. ಈ ಕುರಿತು ಅವರು ಅಪ್ಪಿತಪ್ಪಿಯೂ ಮಾತನಾಡುವುದಿಲ್ಲ. ಏಕೆಂದರೆ ಗೋವಿನ ಕುರಿತು ಸಾವರ್ಕರ್ ಅವರ ಹೇಳಿಕೆಗಳ ಸ್ವರೂಪ ಆ ಥರ ಇದೆ.

‘‘ಗೋ ಪಾಲನ್ ಹಾವೇ, ಗೋ ಪೂಜನ್ ನಾವ್ಹೇ’’ (ಗೋವನ್ನು ಪೋಷಿಸಿ ಆದರೆ ಗೋವನ್ನು ಪೂಜಿಸಬೇಡಿ) - ಇದು ನಿಜವಾಗಿ, ವಿ.ಡಿ. ಸಾವರ್ಕರ್ ಅವರ ಒಂದು ಮರಾಠಿ ಪ್ರಬಂಧದ ಶೀರ್ಷಿಕೆಯಾಗಿತ್ತು. ಮಹಾರಾಷ್ಟ್ರ ಮೂಲದ ಹಿರಿಯ ರಾಜಕಾರಣಿ ಹಾಗೂ ಸಾವರ್ಕರ್ ಅಭಿಮಾನಿ ಶರದ್ ಪವಾರ್ ತಮ್ಮ ಆತ್ಮಚರಿತ್ರೆ (ಅಪ್ನೀ ಶರತ್ತೊಂ ಪರ್)ಯಲ್ಲಿ ಸಾವರ್ಕರ್ ಅವರ ಇಂತಹ ಅನೇಕ ಮಾತುಗಳನ್ನು ಉದ್ಧರಿಸಿದ್ದಾರೆ. ‘‘ಗೋವು ರೈತನ ಮೇಲೆ ಒಂದು ಹೊರೆಯಾಗಬಾರದು. ಯಾರಾದರೂ ಗೋಮಾಂಸವನ್ನು ತಿನ್ನುತ್ತಾರೆಂದಾದರೆ ನಾನು ಅವರನ್ನು ಅಪರಾಧಿ ಎಂದು ಪರಿಗಣಿಸುವುದಿಲ್ಲ’’ ಎಂದು ಸಾವರ್ಕರ್ ಹೇಳಿರುವುದನ್ನು ಪವಾರ್ ನೆನಪಿಸಿದ್ದಾರೆ.

ಒಂದು ಸಂದರ್ಭದಲ್ಲಿ, ಸಾವರ್ಕರ್ ಅವರು ಹಸು ಮತ್ತು ಎಮ್ಮೆಗಳನ್ನು ಆಲದ ಮರ ಮತ್ತು ಅರಳಿ ಮರಗಳಿಗೆ ಹೋಲಿಸಿದ್ದರು. ‘‘ಅವು ಮನುಷ್ಯನಿಗೆ ಉಪಯುಕ್ತವಾಗಿರುವುದರಿಂದ ನಾವು ಅವುಗಳನ್ನು ಪ್ರೀತಿಸುತ್ತೇವೆ. ಆ ಮಟ್ಟಿಗೆ ನಾವು ಅವುಗಳನ್ನು ಪೂಜನೀಯವೆಂದೂ ಪರಿಗಣಿಸಬಹುದು. ಆ ಅರ್ಥದಲ್ಲಿ ಮಾತ್ರ ಅವುಗಳ ರಕ್ಷಣೆ, ಪೋಷಣೆ ಮತ್ತು ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಮತ್ತು ನಮ್ಮ ಧರ್ಮವೂ ಹೌದು! ಆದರೆ ಕೆಲವು ಸಂದರ್ಭಗಳಲ್ಲಿ, ಆ ಪ್ರಾಣಿ ಅಥವಾ ಮರವು ಮಾನವಕುಲಕ್ಕೆ ಕಂಟಕವಾದಾಗ, ಅದನ್ನು ಪೋಷಿಸುವ ಅಥವಾ ರಕ್ಷಿಸುವ ಅಗತ್ಯವಿಲ್ಲ, ನಿಜವಾಗಿ ಆಗ ಅದರ ನಾಶವು ಮಾನವೀಯತೆ ಅಥವಾ ರಾಷ್ಟ್ರೀಯತೆಯ ಹಿತಾಸಕ್ತಿಗೆ ಪೂರಕವಾಗಿದ್ದಾಗ, ಅದುವೇ ಮಾನವ ಅಥವಾ ರಾಷ್ಟ್ರೀಯ ಧರ್ಮವಾಗುತ್ತದೆಯಲ್ಲವೇ?’’ ಎಂದು ಸಾವರ್ಕರ್ 1935 ರಲ್ಲಿ ಹೇಳಿದ್ದಾಗಿ ಅವರ ಮರಾಠಿ ಬರಹಗಳ ಸಂಕಲನ ‘ಸಮಗ್ರ ಸಾವರ್ಕರ್ ವಾಙ್ಮಯ’ ಸಂಪುಟ - 2ರಲ್ಲಿ ಉಲ್ಲೇಖಿಸಲಾಗಿದೆ.

ಗೋರಕ್ಷಕರಿಗೆ ಸಾವರ್ಕರ್ ನೀಡಿದ ಒಂದು ಉಪದೇಶವನ್ನು ಗಮನಿಸಿ: ‘‘ಗೋ ಸಂರಕ್ಷಣಾ ಚಳವಳಿಯು ಧಾರ್ಮಿಕ ಮೂಢನಂಬಿಕೆಗಳನ್ನು ಅವಲಂಬಿಸುವ ಬದಲು ಸ್ಪಷ್ಟ ಮತ್ತು ಪ್ರಾಯೋಗಿಕವಾದ ಆರ್ಥಿಕ ಹಾಗೂ ವೈಜ್ಞಾನಿಕ ತತ್ವಗಳ ಆಧಾರದಲ್ಲಿ ಬೆಳೆದು ಜನಪ್ರಿಯವಾಗಬೇಕು. ಆಗ ಮಾತ್ರ ಅಮೆರಿಕನ್ನರಂತೆ ನಿಜವಾದ ಗೋರಕ್ಷಣೆಯನ್ನು ಸಾಧಿಸಲು ನಮಗೆ ಸಾಧ್ಯವಾದೀತು.’’ - ಸಮಗ್ರ ಸಾವರ್ಕರ್ ವಾಙ್ಮಯ ಸಂಪುಟ- 3

ಕಾಂಗ್ರೆಸ್ ನೇತಾರ ಶಶಿ ತರೂರ್ ‘‘ಒಂದುವೇಳೆ ಹಿಂದುತ್ವವು ಗೋವಿನ ಕಾಲನ್ನು ಆಧರಿಸಿ ನಿಂತರೆ, ತೀರಾ ಸಣ್ಣ ಬಿಕ್ಕಟ್ಟು ಎದುರಾದಾಗಲೂ ಅದು ಕುಸಿದು ನೆಲಕ್ಕೆ ಉರುಳುವುದು ಖಚಿತ’’ ಎಂಬ ಸಾವರ್ಕರ್ ನುಡಿಮುತ್ತನ್ನು ಹಲವೆಡೆ ಪ್ರಸ್ತಾಪಿಸಿದ್ದಾರೆ.

‘ಗೋರಕ್ಷಕ’ರ ಬಣ್ಣ ಬಯಲು ಮಾಡಿದ ಶಂಕರಾಚಾರ್ಯರು

ಮನುವಾದಿ ಅಂಧಭಕ್ತರು ಹಲವು ದಶಕಗಳಿಂದ ನಮ್ಮ ದೇಶದಲ್ಲಿ ಗೋವಿನ ಹೆಸರಲ್ಲಿ ತೀರಾ ಹೊಲಸು ಮಟ್ಟದ ರಾಜಕೀಯ ನಡೆಸುತ್ತಾ ಬಂದಿದ್ದಾರೆ. ಆ ಹೆಸರಲ್ಲಿ ವ್ಯಾಪಕ ಹಿಂಸಾಚಾರ, ರಕ್ತಪಾತಗಳನ್ನೂ ಆಯೋಜಿಸಿದ್ದಾರೆ. ನೂರಾರು ನರಹತ್ಯೆಗಳನ್ನೂ ನಡೆಸಿದ್ದಾರೆ. ಆದರೆ ಗೋವಿನ ವಿಷಯದಲ್ಲಿ ಅವರ ನಿಜವಾದ ನಿಲುವು ಏನು? ಈ ಕುರಿತು ಎಷ್ಟು ಸಂಶೋಧನೆ ನಡೆಸಿದರೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಏಕೆಂದರೆ ಈ ವಿಷಯದಲ್ಲಿ ಅಸ್ಪಷ್ಟತೆ ಮತ್ತು ಗೊಂದಲವೇ ಮನುವಾದಿಗಳ ನೈಜ ನಿಲುವಾಗಿದೆ. ರಾಜಕೀಯ ಅಗತ್ಯ ಮತ್ತು ಅನುಕೂಲಕ್ಕನುಸಾರವಾಗಿ ಬೇರೆಬೇರೆ ಕಡೆ, ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆಬೇರೆ ಧೋರಣೆ ಅನುಸರಿಸುವುದಕ್ಕೆ ಈ ‘ಯೋಜಿತ ಅಸ್ಪಷ್ಟತೆ’ಯು ಅವರಿಗೆ ನೆರವಾಗುತ್ತದೆ. ಅವರ ದೃಷ್ಟಿಯಲ್ಲಿ ಧರ್ಮ, ದೇವರು, ದೇವಾಲಯ, ಸಂಸ್ಕೃತಿ, ಪರಂಪರೆ ಇತ್ಯಾದಿಗಳಂತೆ ಗೋವು ಕೂಡಾ ವಿವಿಧ ಸ್ವಾರ್ಥಗಳ ಸಾಧನೆಗಾಗಿ ಸಂದರ್ಭಾನುಸಾರ ಬಳಸಬಹುದಾದ ಒಂದು ಆಟಿಕೆ ಅಥವಾ ಅಸ್ತ್ರವೇ ಹೊರತು ಅದು ಅವರ ದೃಷ್ಟಿಯಲ್ಲಿ ತಾಯಿಯಾಗಲಿ, ದೇವರಾಗಲಿ, ಪೂಜಾರ್ಹವಾಗಲಿ, ಪ್ರೀತ್ಯಾರ್ಹವಾಗಲಿ ಖಂಡಿತ ಅಲ್ಲ. ಇದಕ್ಕೆ ಹತ್ತಾರು ಜ್ವಲಂತ ಪುರಾವೆಗಳು ನಮ್ಮ ಮುಂದಿವೆ. ಉದಾ:

ಹಿಂದೂ ಸಮಾಜದ ಪ್ರಮುಖ ಧಾರ್ಮಿಕ ನೇತಾರ, ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮೊನ್ನೆ (ಜೂನ್ 9) ಆಗ್ರಾದಲ್ಲಿ ಗೋರಕ್ಷಣೆಯ ಕುರಿತು ಮಾತನಾಡುತ್ತಾ, ‘‘ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಉತ್ತರ ಪ್ರದೇಶವು ದೇಶದಲ್ಲೇ ಅತ್ಯಧಿಕ ಬೀಫ್ ರಫ್ತು ಮಾಡುವ ರಾಜ್ಯವಾಗಿ ಬಿಟ್ಟಿದೆ. ಯೋಗಿಯಿಂದಾಗಿ ಕೇಸರಿ ವಸ್ತ್ರಕ್ಕೆ ಇದ್ದ ಮರ್ಯಾದೆ ನಷ್ಟವಾಗಿದೆ’’ ಎಂದು ಟೀಕಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಗೋವಿನ ವಿಷಯದಲ್ಲಿ ಮೋದಿ ಮತ್ತು ಯೋಗಿ ಸರಕಾರಗಳ ವಿರುದ್ಧ ನೇರ ಘರ್ಷಣೆಗೆ ಇಳಿದಿದ್ದಾರೆ. ಗೋವಿನ ಹೆಸರಲ್ಲಿ ಬಿಜೆಪಿಯವರು ಹಿಂದೂ ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ ಎಂಬುದು ಅವರ ಪ್ರಮುಖ ಆರೋಪವಾಗಿದೆ. ಕೇಂದ್ರ ಸರಕಾರವು ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು ಮತ್ತು ಬೀಫ್ ರಫ್ತು ಉದ್ಯಮದ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬುದು ಶಂಕರಾಚಾರ್ಯರ ಎರಡು ಪ್ರಮುಖ ಬೇಡಿಕೆಗಳಾಗಿವೆ. ಇದಕ್ಕಾಗಿ ಅವರು ದೇಶವ್ಯಾಪಿ ‘ಗೋರಕ್ಷಾ ಯಾತ್ರೆ’ ಯನ್ನೂ ನಡೆಸಿದ್ದಾರೆ. ಪ್ರಸ್ತುತ ಅಭಿಯಾನಕ್ಕೆ ದೇಶದ ಇತರ 3 ಮಂದಿ ಶಂಕರಾಚಾರ್ಯರು ಕೂಡಾ ತಮ್ಮ ಬೆಂಬಲ ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಗೋವಿಗೆ 14 ವರ್ಷ ವಯಸ್ಸಾಗುವ ತನಕ ಮಾತ್ರ ಅದು ಮಾತೆಯಾಗಿರುತ್ತದೆ. ಆ ಬಳಿಕ ಅದು ಸರಕಾಗಿ ಬಿಡುತ್ತದೆ’’ ಎಂದು ಇತ್ತೀಚೆಗಷ್ಟೇ ಅವರು ವ್ಯಂಗ್ಯವಾಡಿದ್ದರು.

2024ರಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಯವರು ತಮ್ಮ ರಾಷ್ಟ್ರವ್ಯಾಪಿ ಗೋರಕ್ಷಾಯಾತ್ರೆಯ ಭಾಗವಾಗಿ ನಾಗಾಲ್ಯಾಂಡ್‌ಗೆ ಹೋಗಬಯಸಿದ್ದರು. ಬಿಜೆಪಿಯವರು ಆ ತನ್ನ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕಿದ್ದನ್ನು ಶಂಕರಾಚಾರ್ಯರು ನೆನಪಿಸಿಕೊಳ್ಳುತ್ತಾರೆ. ನಾಗಾಲ್ಯಾಂಡ್‌ನಲ್ಲಿ ದೈನಂದಿನ ಆಹಾರದ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಬಳಕೆಯಾಗುತ್ತದೆ. ಅಲ್ಲಿ ಗೋರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಶಂಕರಾಚಾರ್ಯರ ಯೋಜಿತ ಪ್ರವಾಸದ ಉದ್ದೇಶವಾಗಿತ್ತು. ಆದರೆ ಬೇರೆಲ್ಲರಿಗಿಂತ ಹೆಚ್ಚಾಗಿ ಬಿಜೆಪಿಯ ನಾಗಾಲ್ಯಾಂಡ್ ಘಟಕದವರೇ ಅವರ ಪ್ರವಾಸವನ್ನು ವಿರೋಧಿಸಿದ್ದರು. ನಾಗಾಲ್ಯಾಂಡ್ ರಾಜ್ಯದ ಆಡಳಿತ ಬಳಗದ ಭಾಗವಾಗಿರುವ ಬಿಜೆಪಿಯ ರಾಜ್ಯ ಘಟಕವು, ರಾಜ್ಯ ಸರಕಾರಕ್ಕೆ ಒಂದು ಪತ್ರ ಬರೆದು, ಗೋಮಾಂಸ ಭಕ್ಷಣೆಯು ನಾಗಾಲ್ಯಾಂಡ್ ಜನತೆಯ ಸಂಸ್ಕೃತಿಯ ಭಾಗವಾಗಿದ್ದು ಅದರ ವಿರುದ್ಧ ಯಾವುದೇ ಅಭಿಯಾನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿತ್ತು. ಆ ಪ್ರಕಾರ ನಾಗಾಲ್ಯಾಂಡ್ ಸರಕಾರವು, ಶಂಕರಾಚಾರ್ಯರ ಪ್ರವಾಸಕ್ಕೆ ನಿರ್ಬಂಧ ಹೇರಿತ್ತು. ಸಾಲದ್ದಕ್ಕೆ ಯೋಗಿ ಆದಿತ್ಯನಾಥ್ ಮತ್ತವರ ಚೇಲಾಗಳು ಶಂಕರಾಚಾರ್ಯರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಕೇಸುಗಳನ್ನು ದಾಖಲಿಸಿದ್ದಲ್ಲದೆ, ಅವರ ವಿರುದ್ಧ ತೀರಾ ಅಪಮಾನಾತ್ಮಕ ಮಾತುಗಳನ್ನು ಆಡತೊಡಗಿದರು. ಅವರ ಅನುಯಾಯಿಗಳ ಮೇಲೆ ಪೊಲೀಸ್ ಹಲ್ಲೆ ಕೂಡಾ ನಡೆಯಿತು. ಇದೇ ಕೆಲಸವನ್ನು ಬೇರಾವುದಾದರೂ ಪಕ್ಷದವರು ಮಾಡಿದ್ದರೆ ಬಹುಶಃ ಸಂಘ ಪರಿವಾರದವರು ಶಂಕರಾಚಾರ್ಯರ ವಿರೋಧಿಗಳನ್ನು ಹಿಂದೂ ವಿರೋಧಿ, ದೇಶದ್ರೋಹಿ ಎಂದೆಲ್ಲಾ ಕರೆದು ದೇಶದೆಲ್ಲೆಡೆ ಪ್ರಕ್ಷೋಭೆ ಎಬ್ಬಿಸಿಬಿಡುತ್ತಿದ್ದರು.

ಈ ಹಿಂದೆ ದ್ವಾರಕಾ ಮಠದ ದಿವಂಗತ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ಗೋವಿನ ವಿಷಯದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ನವರ ಇಬ್ಬಂದಿ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ಬಿಜೆಪಿಯ ನಾಯಕರೇ ಬೀಫ್ ರಫ್ತು ಮಾಡುವವರು ಎಂದೂ ಅವರು ಆರೋಪಿಸಿದ್ದರು.

ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಹಿಂದೇಟು

‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಆ ಮೂಲಕ ಅದಕ್ಕೆ ಎಲ್ಲ ಬಗೆಯ ಗೌರವ ಮತ್ತು ರಕ್ಷಣೆ ಒದಗಿಸಬೇಕು’ - ಇದು ಆರೆಸ್ಸೆಸ್‌ನವರು ಅದೆಷ್ಟೋ ದಶಕಗಳಿಂದ ಮುಂದಿಡುತ್ತಾ ಬಂದಿರುವ ಒಂದು ಹಳೆಯ ಬೇಡಿಕೆ. ಅದಕ್ಕಾಗಿ ಅವರು ಎಷ್ಟೋ ರಾಷ್ಟ್ರೀಯ ಅಭಿಯಾನ, ಆಂದೋಲನ, ಚಳವಳಿ, ಮುಷ್ಕರ ಇತ್ಯಾದಿ ಏನೇನೆಲ್ಲಾ ನಡೆಸಿದ್ದುಂಟು. 2009ರಲ್ಲಂತೂ ಸಂಘ ಪರಿವಾರದವರು ಈ ಕುರಿತು ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ಆಂದೋಲನವನ್ನೇ ನಡೆಸಿದ್ದರು. ಇವರ ಭಕ್ತಿ ಮತ್ತು ಸಂವೇದನೆ ಕೇವಲ ಗೋವು, ದನ, ಹಸು ಅಥವಾ ಅವುಗಳ ಕರುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವರು ಸಮಾಜದಲ್ಲಿ ಗೋವಿನ ಮಹಿಮೆಯನ್ನು ವಿವರಿಸುವ ಮತ್ತು ಗೋರಕ್ಷಣೆಯ ಧಾರ್ಮಿಕ ಅಗತ್ಯವನ್ನು ಮನವರಿಕೆ ಮಾಡಿಸುವ ಹೆಸರಲ್ಲಿ ಭಾರೀ ಭಾವೋದ್ವೇಗದ ಭಾಷಣಗಳನ್ನು ಮಾಡಿ ಜನರಲ್ಲಿ ಉನ್ಮಾದವನ್ನು ಬೆಳೆಸುತ್ತಾರೆ. ಆನಂತರ ಗೋವಿಗೆ ಆರೋಪಿಸಲಾದ ಎಲ್ಲ ಪಾವಿತ್ರ್ಯ, ಮಹಿಮೆ, ಗೌರವ ಇತ್ಯಾದಿಗಳನ್ನು ಇತರ ಹಲವು ಜಾತಿಯ ಜಾನುವಾರುಗಳಿಗೂ ವಿಸ್ತರಿಸಿ ಬಿಡುತ್ತಾರೆ. ದನ ಸಾಗಿಸುವವರು ಕೈಗೆ ಸಿಗದೇ ಇದ್ದಾಗ ಎಮ್ಮೆ, ಕೋಣ, ಎತ್ತು ಇತ್ಯಾದಿಗಳನ್ನು ಸಾಗಿಸುವವರನ್ನು ಗುರಿಯಾಗಿಸುತ್ತಾರೆ. ಆರೆಸ್ಸೆಸ್, ವಿಶ್ವ ಹಿಂದೂ ಪರಿಷದ್, ಬಿಜೆಪಿ, ಬಜರಂಗದಳ ಇತ್ಯಾದಿ ಸಂಘಪರಿವಾರದ ಅಧಿಕೃತ ಹಾಗೂ ಅನಧಿಕೃತ ಉಪಸಂಸ್ಥೆಗಳು ಮತ್ತು ವಿವಿಧೆಡೆ ತಮ್ಮ ಅವಶ್ಯಾನುಸಾರ ಅವರು ವಿವಿಧ ಹೆಸರುಗಳೊಂದಿಗೆ ತಾತ್ಕಾಲಿಕ ಉಪಯೋಗಕ್ಕಾಗಿ ಜನ್ಮ ನೀಡುವ ಜಾಗೃತ ಸಮಿತಿ, ರಕ್ಷಾದಳ, ರಕ್ಷಣಾಪಡೆ ಇತ್ಯಾದಿಗಳು ಬೇರೆಬೇರೆ ಕಡೆ, ಬೇರೆಬೇರೆ ಸಂದರ್ಭಗಳಲ್ಲಿ ಮಂಜೂರು ಮಾಡಿದ ಅಥವಾ ಮಂಡಿಸಿದ ನಿರ್ಣಯ, ಠರಾವು, ಗೊತ್ತುವಳಿ, ಬೇಡಿಕೆ ಇತ್ಯಾದಿಗಳಲ್ಲಿ ಹೋರಿ, ಗೂಳಿ, ಎಮ್ಮೆ, ಎತ್ತು ಇತ್ಯಾದಿ ಗೋಪ್ರಜಾತಿಗೆ ಸೇರಿದ ಎಲ್ಲ ಪ್ರಾಣಿಗಳನ್ನು ರಕ್ಷಿಸಬೇಕೆಂಬ ಹಾಗೂ ಅವುಗಳ ವಧೆ, ಮಾರಾಟ, ಸಾಗಾಟ ಇತ್ಯಾದಿಗಳ ಮೇಲೆ ನಿರ್ಬಂಧ ಹೇರಬೇಕೆಂಬ ಆಗ್ರಹ ಕಂಡು ಬರುತ್ತವೆ. ಈ ಪೈಕಿ ಯಾವುದೇ ಪ್ರಾಣಿಯನ್ನು ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಸಮಾಜವನ್ನು ವಿಂಗಡಿಸುವುದಕ್ಕೆ, ವೈಷಮ್ಯ ಹರಡುವುದಕ್ಕೆ ಮತ್ತು ಹಿಂಸೆ ಪ್ರಚೋದಿಸುವುದಕ್ಕೆ ಸಬೂಬಾಗಿ ಬಳಸಿಕೊಳ್ಳುತ್ತಾರೆ.

ಭಾರತದಲ್ಲಿ ನವಿಲಿಗೆ 1963ರಿಂದಲೇ ‘ರಾಷ್ಟ್ರೀಯ ಪಕ್ಷಿ’ಯ ಸ್ಥಾನಮಾನ ಪ್ರಾಪ್ತವಿದೆ. 2010ರಲ್ಲಿ ಆನೆಯನ್ನು ನಮ್ಮ ದೇಶದ ‘ರಾಷ್ಟ್ರೀಯ ಪಾರಂಪರಿಕ ಪ್ರಾಣಿ’ ಎಂದು ಘೋಷಿಸಲಾಯಿತು. 1950ರಿಂದ 1972ರ ತನಕ ಸಿಂಹವು ಭಾರತದ ‘ರಾಷ್ಟ್ರೀಯ ಪ್ರಾಣಿ’ ಆಗಿತ್ತು. 1973 ರಲ್ಲಿ ಭಾರತ ಸರಕಾರವು ‘ರಾಯಲ್ ಬೆಂಗಾಲ್ ಟೈಗರ್’ ಅನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಅಂಗೀಕರಿಸಿತು. ಇಲ್ಲಿರುವ ಒಂದು ವಿಪರ್ಯಾಸ ಏನೆಂದರೆ ಸಿಂಹಗಳಂತೆ ಹುಲಿ ಅಥವಾ ಟೈಗರ್‌ಗಳಿಗೂ ದನಗಳ ಜೊತೆ ಒಂದು ವಿಶೇಷ ಸಂಬಂಧ ಇದೆ. ಅವು ಕೂಡಾ ಏಕಪಕ್ಷೀಯವಾಗಿ ದನಗಳನ್ನು ಪ್ರೀತಿಸುತ್ತವೆ. ಅವಕಾಶ ಸಿಕ್ಕಾಗಲೆಲ್ಲಾ ದನಗಳನ್ನು ಮತ್ತು ಆ ಪ್ರಜಾತಿಯ ಎಲ್ಲ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಭಾರತದಲ್ಲಿ ಈ ರೀತಿ ‘ರಾಷ್ಟ್ರೀಯ ಪ್ರಾಣಿ’ ಎಂಬ ಸ್ಥಾನಮಾನವನ್ನು ದನಕ್ಕೆ ನೀಡುವ ಬದಲು ದನಗಳನ್ನು ಬೇಟೆಯಾಡುವ ಹುಲಿಗಳಿಗೆ ನೀಡಿರುವುದೇಕೆ? ಎಂದು ಗೋರಕ್ಷಕರು ಆಕ್ಷೇಪಿಸಬೇಕಿತ್ತು. ಅದರ ವಿರುದ್ಧ ಆಂದೋಲನ ನಡೆಸಬೇಕಿತ್ತು. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ಇಲ್ಲೀಗ, ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂಬ ಬೇಡಿಕೆಗೆ ಅತ್ಯಧಿಕ ಪ್ರತಿರೋಧವು ತಥಾಕಥಿತ ‘ಗೋರಕ್ಷಕ’ರ ಕಡೆಯಿಂದಲೇ ಬರುತ್ತಿದೆ!

ಮಟನ್‌ಗಿಂತ ಅಗ್ಗದ ದರದಲ್ಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಬೀಫ್‌ಗೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದ ಭಾರತದ ಕೆಲವು ಬೀಫ್ ಭಕ್ಷಕರಿಗೆ ಇತ್ತೀಚೆಗೆ ಜ್ಞಾನೋದಯವಾಗಿದ್ದು, ಅವರು ಆರೆಸ್ಸೆಸ್‌ನ ಹಳೆಯ ಬೇಡಿಕೆಗೆ ತಮ್ಮ ಬೆಂಬಲ ಘೋಷಿಸಿ ಬಿಟ್ಟಿದ್ದಾರೆ. ನಾವಿನ್ನು ಬೀಫ್ ತಿನ್ನುವುದಿಲ್ಲ, ಸರಕಾರವು ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಎಂದು ಆಗ್ರಹಿಸತೊಡಗಿದ್ದಾರೆ. ಈ ಬೆಳವಣಿಗೆಯಿಂದ ‘ಗೋರಕ್ಷಕ’ರೆಲ್ಲಾ ಸಂತುಷ್ಟರಾಗಬೇಕಿತ್ತು. ಪ್ರಸ್ತುತ ಬೇಡಿಕೆ ಕೇಳಿ ಬಂದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳೇ ಇವೆ. ಗೋರಕ್ಷಕರು ಆ ತಮ್ಮ ಹಳೆಯ ಬೇಡಿಕೆಯನ್ನು ಹೊಸ ಉತ್ಸಾಹದೊಂದಿಗೆ ಪ್ರಸ್ತುತ ಸರಕಾರಗಳ ಮುಂದಿಟ್ಟು, ಆ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರದಲ್ಲಿರುವ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ ನಿಜವಾಗಿ ಆದದ್ದೇನು?

ಮೇ ಕೊನೆಯ ವಾರ ಬಕ್ರೀದ್ ಇದ್ದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಗೋಮಾಂಸದ ಕುರಿತು ಬಿರುಸಿನ ಚರ್ಚೆ ಆರಂಭವಾಯಿತು. ಈ ವೇಳೆ ‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು’ ಎಂಬ ಕೆಲವು ಮುಸ್ಲಿಮ್ ವಿದ್ವಾಂಸರು ಮತ್ತು ನಾಯಕರ ಕಡೆಯಿಂದ ಬಂದ ಬೇಡಿಕೆ ಎಲ್ಲರ ಗಮನ ಸೆಳೆಯಿತು. ಅವರ ನಿಲುವನ್ನು ದೇಶದ ಹಲವಾರು ವಲಯಗಳು ಮನಸಾರೆ ಸ್ವಾಗತಿಸಿದವು. ಇದನ್ನು ಒಂದು ಹೊಸ ಯುಗದ ಆರಂಭ ಎಂದು ಪರಿಗಣಿಸಿದ ಅನೇಕರು, ಇದರೊಂದಿಗೆ ಒಂದು ಹಳೆಯ ವಿವಾದ ಮುಕ್ತಾಯವಾಗಿ ಬಿಡುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು’ ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದ ಗೋರಕ್ಷಕರು ಹಾಗೂ ಧರ್ಮರಕ್ಷಕರೆಂಬ ಮುಖವಾಡ ಧರಿಸಿಕೊಂಡವರು ಮಾತ್ರ ಈ ಸನ್ನಿವೇಶದಲ್ಲಿ ಹಠಾತ್ತನೆ ಪಲ್ಟಿ ಹೊಡೆದು, ಹುಚ್ಚು ಹುಚ್ಚಾಗಿ ವರ್ತಿಸತೊಡಗಿದರು. ‘‘ದನ ಒಂದು ಪ್ರಾಣಿಯೇ ಅಲ್ಲ. ಆದ್ದರಿಂದ ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂಬ ಹೊಸ ರಾಗವೊಂದು ಮೂಡಿಬಂತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಡನೆ, ಈ ಬೇಡಿಕೆಯ ಬಗ್ಗೆ ವಿಚಾರಿಸಿದಾಗ ಅವರು ಸಂತೋಷ ಪ್ರಕಟಿಸುವ ಬದಲು, ಪ್ರಸ್ತುತ ಬೇಡಿಕೆ ಮಂಡಿಸಿದವರನ್ನು ನಿಂದಿಸಿ ಮಾತನಾಡತೊಡಗಿದರು. ‘‘ದನವನ್ನು ಪ್ರಾಣಿ ಎಂದು ಕರೆಯುವುದೇ ಒಂದು ರೋಗಗ್ರಸ್ತ ಮಾನಸಿಕತೆ. ದನ ನಮ್ಮ ತಾಯಿ, ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವ ಅಗತ್ಯವೂ ಇಲ್ಲ. ನಿಜವಾಗಿ, ದನವನ್ನು ಪ್ರಾಣಿ ಎಂದು ಕರೆಯುವುದು ದನಕ್ಕೆ ಮಾಡುವ ಅಪಮಾನ....’’ ಎಂದೆಲ್ಲಾ ವಾದಿಸತೊಡಗಿದರು. ಯೋಗಿಯವರ ಮೂಡ್ ನೋಡಿದರೆ, ಈ ತನಕ ಗೋಮಾಂಸ ತಿನ್ನುವವರು ಮತ್ತು ಸಾಗಿಸುವವರ ವಿರುದ್ಧ ಯುದ್ಧ ನಿರತರಾಗಿದ್ದ ಅವರಿಗೆ ಬೋರ್ ಆಗಿದ್ದು, ದನವನ್ನು ಪ್ರಾಣಿ ಎಂದು ಕರೆಯುವವರ ವಿರುದ್ಧ ಯುದ್ಧ ಸಾರುವ ಹೊಸ ಉತ್ಸಾಹ ಅವರೊಳಗೆ ಚಿಗುರಿದಂತಿತ್ತು!

ಅದೇ ವೇಳೆ, ಪ್ರಸ್ತುತ ಬೇಡಿಕೆಯ ಕುರಿತು ಮಾತನಾಡಿದ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ‘‘ದನವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಯೋಜನೆ ಕೇಂದ್ರ ಸರಕಾರದ ಮುಂದಿಲ್ಲ. ಹಾಗೆಯೇ ದೇಶದ ಎಲ್ಲ ಭಾಗಗಳಲ್ಲಿ ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಯಾವುದೇ ಪ್ರಸ್ತಾವ ಕೂಡಾ ಕೇಂದ್ರ ಸರಕಾರದ ಮುಂದೆ ಇಲ್ಲ’’ ಎಂದು ಸ್ಪಷ್ಟಪಡಿಸಿದರು.

Tags

votes
share
ಶಂಬೂಕ
ಶಂಬೂಕ
Next Story
X