Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ಫಿಫಾ ವಿಶ್ವಕಪ್‌ನಲ್ಲಿ ಮಾನವೀಯತೆಯನ್ನು...

ಫಿಫಾ ವಿಶ್ವಕಪ್‌ನಲ್ಲಿ ಮಾನವೀಯತೆಯನ್ನು ತುಳಿದ ಜನಾಂಗವಾದಿಗಳು

ಶಂಬೂಕಶಂಬೂಕ19 Jun 2026 10:23 AM IST
share
ಫಿಫಾ ವಿಶ್ವಕಪ್‌ನಲ್ಲಿ ಮಾನವೀಯತೆಯನ್ನು ತುಳಿದ ಜನಾಂಗವಾದಿಗಳು

ಫಿಫಾ ವಿಶ್ವ ಕಪ್ 2026 ಹೊರನೋಟಕ್ಕೆ ತುಂಬಾ ರೋಮಾಂಚಕವಾಗಿದೆ. ಸಾಹಸಮಯ ದೃಶ್ಯಾವಳಿಗಳಿಂದ ಸಂಪನ್ನವಾಗಿದೆ. ಜಗತ್ತಿಗೆಲ್ಲಾ ಅಪಾರ ಮನರಂಜನೆ ಒದಗಿಸುತ್ತಿದೆ. ಭಾರೀ ರಂಗುರಂಗಿನ, ಸದ್ದುಗದ್ದಲದ, ಸಂಭ್ರಮ ಸಡಗರದ ವೇದಿಕೆಯಾಗಿದೆ. ಅದೇ ವೇಳೆ ಫಿಫಾ ವಿಶ್ವ ಕಪ್ 2026 ಮಾನವ ಸಮಾಜವನ್ನು ಒಳಗಿನಿಂದ ಕೊರೆಯುತ್ತಿರುವ ಜನಾಂಗವಾದವೆಂಬ ಮಾರಕ, ಘಾತಕ ರೋಗವನ್ನು, ಅದರ ಬೃಹತ್ ಸ್ವರೂಪವನ್ನು ನೆನಪಿಸಿದೆ. ಮಾನವ ಸಮಾಜವು ಈ ಯುಗದಲ್ಲೂ ಏಕತೆ ಮತ್ತು ಸಮಾನತೆಯ ಗುರಿಯಿಂದ ಎಷ್ಟೊಂದು ದೂರವಿದೆ ಎಂಬುದನ್ನು ಅಳೆಯುವುದಕ್ಕೆ ಸಹಾಯಕವಾಯಿತು. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಬಿಳಿಯರ ಜಗತ್ತು ಒಳಗಿನಿಂದ ಅರ್ಬುದ ಪೀಡಿತವಾಗಿ ನರಳುತ್ತಿರುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

ಫಿಫಾ ವಿಶ್ವ ಕಪ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಮೇಳ. ಸದ್ಯ ಯುಎಸ್, ಮೆಕ್ಸಿಕೋ ಮತ್ತು ಕೆನಡಾ ಎಂಬ ಮೂರು ದೇಶಗಳ 16 ನಗರಗಳಲ್ಲಿ, 104 ಪಂದ್ಯಗಳನ್ನೊಳಗೊಂಡ 23ನೇ ಫಿಫಾ ವಿಶ್ವ ಕಪ್ ಪಂದ್ಯಾವಳಿಯು ಈಗ ನಡೆಯುತ್ತಿದೆ. 48 ವಿವಿಧ ದೇಶಗಳ ಫುಟ್ಬಾಲ್ ತಂಡಗಳು ಮತ್ತು ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳು ಅಮಿತೋತ್ಸಾಹದೊಂದಿಗೆ ಇದರಲ್ಲಿ ಭಾಗವಹಿಸಿದ್ದಾರೆ. ಫಿಫಾ ವಿಶ್ವ ಕಪ್ 2026 ಪಂದ್ಯಾವಳಿಯು ಒಲಿಂಪಿಕ್ಸ್ ಅನ್ನೂ ಮೀರಿ, ಜಗತ್ತಿನಲ್ಲಿ ಅತ್ಯಧಿಕ ಮಂದಿ ವೀಕ್ಷಿಸುವ ಪಂದ್ಯಾವಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿ ಅದರ ವೀಕ್ಷಕರ ಸಂಖ್ಯೆ ಸುಮಾರು 600 ಕೋಟಿಯಷ್ಟಿರುವ ಸಾಧ್ಯತೆ ಇದೆ. ಅದರ ಫೈನಲ್ ಪಂದ್ಯವನ್ನು ಜಗತ್ತಿನಾದ್ಯಂತ ಏಕಕಾಲದಲ್ಲಿ ಸುಮಾರು 160 ಕೋಟಿ ಜನ ವೀಕ್ಷಿಸುವರೆಂದು ಅಂದಾಜಿಸಲಾಗಿದೆ. ಸುಮಾರು 1,000 ಕೋಟಿ ಡಾಲರ್‌ಗಳಷ್ಟು ಆದಾಯ ತರುವ, ಜಗತ್ತಿನೆಲ್ಲೆಡೆ ಸಂಚಲನ ಮೂಡಿಸುವ ಈ ಪಂದ್ಯಾವಳಿ ಜಗತ್ತಿನ ಗಮನವನ್ನೆಲ್ಲಾ ತನ್ನೆಡೆಗೆ ಸೆಳೆದಿಟ್ಟು, ಜಗತ್ತಿನೆಲ್ಲೆಡೆ ಅತ್ಯಧಿಕ ಚರ್ಚಿತ ವಿಷಯವಾಗಿರುತ್ತದೆ.

ಮಾನವೀಯ ಕಳಕಳಿ ಉಳ್ಳವರು ಮನಸ್ಸು ಮಾಡಿದ್ದರೆ ಇದು, ಜಗತ್ತಿಗೆಲ್ಲಾ ನ್ಯಾಯ, ಏಕತೆ, ಸಮಾನತೆ, ಶಾಂತಿ, ಬಂಧುತ್ವ, ಸೇವೆ, ಸಹತಾಪ, ಸಹಕಾರ, ಪರಿಸರ, ಶಿಕ್ಷಣ, ಆರೋಗ್ಯದಂತಹ ಮೌಲ್ಯಗಳನ್ನು ನೆನಪಿಸುವುದಕ್ಕೆ ಮತ್ತು ಆ ಕುರಿತಾದ ಸಾಮೂಹಿಕ ಹೊಣೆಗಾರಿಕೆಗಳ ನಿರ್ವಹಣೆಗಾಗಿ ಮಾನವರೆಲ್ಲಾ ಒಂದಾಗಬೇಕೆಂಬ ಸ್ಫೂರ್ತಿಯನ್ನು ಬೆಳೆಸುವುದಕ್ಕೆ ಒಂದು ಅದ್ಭುತ ವೇದಿಕೆಯಾಗಬಹುದಿತ್ತು. ಫಿಫಾ ಸಂಘಟಕರು ಆ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನೂ ಕೈಗೊಂಡಿದ್ದಾರೆ. ‘‘ಫುಟ್ಬಾಲ್ ಜಗತ್ತನ್ನು ಒಗ್ಗೂಡಿಸುತ್ತದೆ’’ ಎಂಬ ಪ್ರಧಾನ ಧ್ಯೇಯ ವಾಕ್ಯದ ಜೊತೆ ‘‘ಶಾಂತಿಗಾಗಿ ಒಂದಾಗಿ’’, ‘‘ಶಿಕ್ಷಣಕ್ಕಾಗಿ ಒಂದಾಗಿ’’, ‘‘ಜನಾಂಗವಾದ ಬೇಡ’’, ‘‘ಸಕ್ರಿಯರಾಗಿರಿ’’ ಎಂಬ ಘೋಷಣೆಗಳ ಮೂಲಕ ಅವರು ಕೆಲವು ಸುಂದರ ಸಂದೇಶಗಳನ್ನು ಈ ಬಾರಿ ಜಗತ್ತಿನ ಮುಂದಿಟ್ಟಿದ್ದಾರೆ. ಆದರೆ ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಮತ್ತದರ ಆಸುಪಾಸಿನಲ್ಲಿ ನಡೆದ ಹಲವು ಘಟನೆಗಳು, 21 ನೇ ಶತಮಾನದಲ್ಲೂ ಜನಾಂಗವಾದ ಎಂಬ ವಿಷವು ಯಾವರೀತಿ ಮಾನವೀಯತೆಯನ್ನೇ ತನ್ನ ಕಾಲಡಿಯಲ್ಲಿ ಹೊಸಕಿ ಹಾಕುವಷ್ಟು ಬೃಹತ್ತಾಗಿ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಬಿಟ್ಟಿದೆ. ಈಕುರಿತು ಕೆಲವು ಉದಾಹರಣೆಗಳು ಇಲ್ಲಿವೆ:

* ಸ್ವಿಟ್ಸರ್ ಲ್ಯಾಂಡ್‌ನ ಖ್ಯಾತ ಫುಟ್ಬಾಲ್ ತಾರೆ ಬ್ರೀಲ್ ಡೊನಾಲ್ಡ್ ಎಂಬೋಲೊ, ಸ್ವಿಸ್ ಫುಟ್ಬಾಲ್ ತಂಡದ ಮುಂಚೂಣಿಯ ಆಟಗಾರನಾಗಿ ಫೀಫಾ ವಿಶ್ವ ಕಪ್‌ನಲ್ಲಿ ಭಾಗವಹಿಸಲು ಯುಎಸ್‌ಗೆ ಹೊರಟಿದ್ದರು. ಆದರೆ ಅವರ ಪ್ರಯಾಣ ಸುಗಮವಾಗಿರಲಿಲ್ಲ. ಯುಎಸ್ ಅಧಿಕಾರಿಗಳು ಯಾವ್ಯಾವುದೋ ಕುಂಟು ನೆಪಗಳನ್ನು ಮುಂದಿಟ್ಟು ಅವರನ್ನು ತಡೆಯಲು ಪ್ರಯತ್ನಿಸಿದರು. ಎಂಬೋಲೊರನ್ನು ಯುಎಸ್‌ನೊಳಗೆ ಪ್ರವೇಶಿಸದಂತೆ ತಡೆಯಲು ಪ್ರಸ್ತುತ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಆದರೆ ತನಿಖೆ, ಪರಿಶೀಲನೆ ಇತ್ಯಾದಿಗಳ ಹೆಸರಲ್ಲಿ ಅವರ ಪ್ರಯಾಣವನ್ನು ಕೆಲವು ದಿನಗಳ ಮಟ್ಟಿಗೆ ವಿಳಂಬಿಸಿದ್ದರು.

* ಇರಾಕ್‌ನ ಜನಪ್ರಿಯ ಫುಟ್ಬಾಲ್ ತಾರೆ ಐಮನ್ ಹುಸೈನ್, ಫಿಫಾ ವಿಶ್ವ ಕಪ್‌ನಲ್ಲಿ ಭಾಗವಹಿಸಲಿಕ್ಕೆಂದು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಅಲ್ಲಿ ಯುಎಸ್ ಇಮಿಗ್ರೇಷನ್ ಅಧಿಕಾರಿಗಳು ವಿಚಾರಣೆಯ ಹೆಸರಲ್ಲಿ ಅವರನ್ನು ಆರೇಳು ಗಂಟೆಗಳ ಕಾಲ ತಡೆದಿಟ್ಟಿದ್ದರು. ಅವರನ್ನು ಕಠಿಣ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಅವರ ಕೈಯಿಂದ ಅವರ ಮೊಬೈಲ್ ಫೋನನ್ನು ವಶಪಡಿಸಿಕೊಂಡು ದೀರ್ಘ ತಪಾಸಣೆ ನಡೆಸಿದ್ದರು.

* ಕೆಲವು ವಾರಗಳ ಹಿಂದೆಯಷ್ಟೇ ಸೊಮಾಲಿಯಾದ, ಪ್ರಶಸ್ತಿ ವಿಜೇತ ಅಂತರ್‌ರಾಷ್ಟ್ರೀಯ ಫುಟ್ಬಾಲ್ ರೆಫ್ರಿ ಉಮರ್ ಅಬ್ದುಲ್ ಕಾದಿರ್ ಅರ್ತಾನ್‌ರನ್ನು ಫಿಫಾ ವಿಶ್ವ ಕಪ್ ಪಂದ್ಯಾವಳಿಯ ರೆಫ್ರಿಗಳಲ್ಲೊಬ್ಬರಾಗಿ ಆರಿಸಲಾಗಿತ್ತು. ಆ ಸುದ್ದಿಯನ್ನು ಸಂಪೂರ್ಣ ಸೊಮಾಲಿಯಾ ದೇಶವು ಭಾರೀ ಸಂಭ್ರಮದೊಂದಿಗೆ ಸ್ವಾಗತಿಸಿತ್ತು. ಅವರಿಗೆ ಯುಎಸ್ ಪ್ರವೇಶಿಸುವುದಕ್ಕೆ ಬೇಕಾದ ವೀಸಾ ಕೂಡಾ ಸಿಕ್ಕಿತ್ತು. ಆದರೆ ಕೊನೆಯ ಕ್ಷಣದಲ್ಲಿ, ಮಯಾಮಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರ್ತಾನ್‌ರನ್ನು ತಡೆದ ಯುಎಸ್ ಅಧಿಕಾರಿಗಳು ಅವರ ಕೆಲವು ಕಾಗದ ಪತ್ರಗಳ ಬಗ್ಗೆ ತಕರಾರು ಎಬ್ಬಿಸಿ ಅವರಿಗೆ ಪ್ರವೇಶ ನಿರಾಕರಿಸಿ ಬಿಟ್ಟರು. ಅವರು ಅಲ್ಲಿಂದಲೇ ಮರಳಿ ಹೋಗಬೇಕಾಯಿತು. ಈ ಬೆಳವಣಿಗೆಯ ಕಾರಣ ಅವರ ಹೆಸರನ್ನು ಫಿಫಾ ವಿಶ್ವಕಪ್ ರೆಫ್ರಿಗಳ ಪಟ್ಟಿಯಿಂದ ಕಿತ್ತು ಹಾಕಲಾಯಿತು.

* ಫಿಫಾ ವಿಶ್ವ ಕಪ್‌ನಲ್ಲಿ ಭಾಗವಹಿಸಲು ನಿಯುಕ್ತವಾಗಿದ್ದ ದಕ್ಷಿಣ ಆಫ್ರಿಕಾದ ಅಧಿಕೃತ ನಿಯೋಗದ ಸದಸ್ಯರಿಗೆ ನಿಗದಿತ ಸಮಯದಲ್ಲಿ ಯುಎಸ್ ತಲುಪಲು ಸಾಧ್ಯವಾಗಲಿಲ್ಲ. ನಿಯೋಗದ ಅನೇಕ ಸದಸ್ಯರ ವೀಸಾ ಪ್ರಕ್ರಿಯೆಯನ್ನು ವಿಳಂಬಿಸಲಾಗಿತ್ತು. ಆದ್ದರಿಂದ ಅವರೆಲ್ಲಾ ಹಲವು ದಿನ ತಡವಾಗಿ ಯುಎಸ್ ತಲುಪಿದರು.

* ಸೆನೆಗಲ್‌ನ ರಾಷ್ಟ್ರೀಯ ಫುಟ್ಬಾಲ್ ತಂಡವು ಫಿಫಾ ವಿಶ್ವ ಕಪ್‌ನಲ್ಲಿ ಭಾಗವಹಿಸಲಿಕ್ಕಾಗಿ ಯುಎಸ್ ಗೆ ಬಂದಿಳಿದಾಗ ಅವರನ್ನು ಅಪಮಾನಿಸಲಾಯಿತು. ವಿಚಾರಣೆಯ ಹೆಸರಲ್ಲಿ ಅವರನ್ನು ಇಮಿಗ್ರೇಷನ್ ವಿಭಾಗದಲ್ಲಿ ತಡೆದು ಎಲ್ಲ ಬಗೆಯ ಕಿರುಕುಳಕ್ಕೊಳಪಡಿಸಿ ಅವರ ಹುರುಪು ಉತ್ಸಾಹಗಳನ್ನೆಲ್ಲಾ ನುಚ್ಚುನೂರು ಮಾಡಲಾಯಿತು. ಅಧಿಕಾರಿಗಳು ಅವರನ್ನು ಸಂಶಯದಿಂದ ನೋಡುತ್ತಾ ಅವರೊಡನೆ ನೂರಾರು ಪ್ರಶ್ನೆಗಳನ್ನು ಕೇಳಿದ್ದು ಮಾತ್ರವಲ್ಲದೆ ಅವರ ಶೂಗಳನ್ನು ಬಿಚ್ಚಿಸಿ, ಕಠಿಣ ಶೋಧ ನಡೆಸಿ ಅವರನ್ನು ಸತಾಯಿಸಿದರು.

* ಉಜ್ಬೆಕಿಸ್ತಾನ್ ದೇಶದ ರಾಷ್ಟ್ರೀಯ ಫುಟ್ಬಾಲ್ ತಂಡವು ಫಿಫಾ ವಿಶ್ವ ಕಪ್‌ನಲ್ಲಿ ಭಾಗವಹಿಸಲಿಕ್ಕೆಂದು ಯುಎಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಬಾಂಬ್ ಪತ್ತೆಹಚ್ಚುವ, ಭಯಾನಕ ಶ್ವಾನದಳಗಳ ಮೂಲಕ ಅವರನ್ನು ಸ್ವಾಗತಿಸಲಾಯಿತು. ಅವರನ್ನು ಕಠಿಣ ಪರಿಶೋಧನೆಗೆ ಒಳಪಡಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು.

* ಸ್ಕಾಟ್ಲೆಂಡ್‌ನ ನೂರಾರು ಫುಟ್ಬಾಲ್ ಅಭಿಮಾನಿಗಳು ಫಿಫಾ ವಿಶ್ವ ಕಪ್ ಪಂದ್ಯಗಳನ್ನು ಖುದ್ದಾಗಿ ವೀಕ್ಷಿಸಲು ಯುಎಸ್‌ಗೆ ಹೊರಡುವ ತಯಾರಿಯಲ್ಲಿದ್ದರು. ನಿಜವಾಗಿ ನಿಯಮಾನುಸಾರ ಅವರು ಯುಎಸ್‌ನೊಳಗೆ ವೀಸಾ ರಹಿತ ಪ್ರವೇಶಕ್ಕೆ ಅರ್ಹರಾಗಿದ್ದರು. ಆದರೆ ಫಿಫಾ ಪಂದ್ಯಾವಳಿ ಆರಂಭವಾಗುವ ಕೆಲವೇ ದಿನಗಳ ಮುನ್ನ ಅವರನ್ನು ಯುಎಸ್ ಪ್ರವೇಶಕ್ಕೆ ಅನರ್ಹರೆಂದು ಘೋಷಿಸಲಾಯಿತು. ಈ ಅನುಭವ, ಮುಂಗಡವಾಗಿ ಟಿಕೆಟ್ ಖರೀದಿಸಿ ವೀಸಾ ಪಡೆದಿದ್ದ ಇತರ ಹಲವು ದೇಶಗಳ ಫುಟ್ಬಾಲ್ ಅಭಿಮಾನಿಗಳಿಗೂ ಆಯಿತು.

ಇವು ಫಿಫಾ ವಿಶ್ವ ಕಪ್ ಹಿನ್ನೆಲೆಯಲ್ಲಿ ಜಗತ್ತಿನ ಗಮನ ಸೆಳೆದ ಅನ್ಯಾಯಗಳ ದೀರ್ಘ ಸರಮಾಲೆಯ ಒಂದು ಕಿಂಚಿತ್ ಕಿರಣ ಮಾತ್ರ. ನಿಜವಾಗಿ ಇದೆಲ್ಲಾ ಯುಎಸ್ ಎಂಬ ಒಂದು ದೇಶದ ಅಧಿಕಾರಿಗಳ ಮಟ್ಟದಲ್ಲಿ ನಡೆದ ಕೆಲವು ಅನ್ಯಾಯಗಳು. ಒಟ್ಟು ಪಶ್ಚಿಮದ ಸಮಾಜದಲ್ಲಿ ಜನಾಂಗವಾದದ ಅರ್ಬುದ ಎಷ್ಟು ಆಳವಾಗಿ ಬೇರೂರಿದೆ ಮತ್ತು ಎಷ್ಟು ವ್ಯಾಪಕವಾಗಿ ಹರಡಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗುವ ನೂರಾರು ಘಟನೆಗಳು ಪ್ರಸ್ತುತ ವಿಶ್ವ ಕಪ್ ಪಂದ್ಯಾವಳಿಯಲ್ಲೂ ಅದರ ಹಿನ್ನೆಲೆಯಲ್ಲೂ ನಡೆದಿದ್ದು, ಅವುಗಳ ಕಥೆ ಬೇರೆಯೇ ಇದೆ.

ಯುಎಸ್ ಸರಕಾರವು ಅಧಿಕೃತವಾಗಿ ಜನಾಂಗವಾದಿ ಅನ್ನಬಹುದಾದ ಯಾವುದೇ ಕಾನೂನನ್ನು ಮಾಡಿಲ್ಲ. ಆದರೂ ಈ ಬಾರಿ ಅದರ ವಿವಿಧ ಗಡಿ ಪ್ರದೇಶಗಳಲ್ಲಿ, ದೂತಾವಾಸ ಕಚೇರಿಗಳಲ್ಲಿ, ವೀಸಾ ನೀಡುವ ಕೇಂದ್ರಗಳಲ್ಲಿ ಮತ್ತು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅದರ ಅಧಿಕಾರಿಗಳು ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿಕ್ಕೆಂದು ಯುಎಸ್‌ನೊಳಗೆ ಪ್ರವೇಶಿಸಲು ಬಯಸಿದ್ದ ಆಯ್ದ ವಿದೇಶಿಯರ ಜೊತೆ ವರ್ತಿಸಿದ ರೀತಿ, ಅವರು ಪ್ರದರ್ಶಿಸಿದ ಜನಾಂಗೀಯ ಪೂರ್ವಾಗ್ರಹ, ಕಾಗದ ಪತ್ರಗಳನ್ನು ಕೇಳುವ ಹೆಸರಲ್ಲಿ ಅವರು ನಿಗದಿತ ವಿದೇಶಿಯರಿಗೆ ನೀಡಿದ ಕಿರುಕುಳ ಇವೆಲ್ಲಾ ಯುಎಸ್‌ನ ಒಳಗೂ ಹೊರಗೂ ವ್ಯಾಪಕ ಚರ್ಚೆಗೆ ವಸ್ತುವಾಗಿವೆ. ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್, ಹ್ಯೂಮನ್ ರೈಟ್ಸ್ ವಾಚ್ ಮುಂತಾದ ಜಾಗತಿಕ ಮಾನವ ಹಕ್ಕು ಸಂಸ್ಥೆಗಳು ಈ ಬೆಳವಣಿಗೆಯನ್ನು ಖಂಡಿಸಿವೆ. ಜೊತೆಗೆ, ವಿಶ್ವ ಕಪ್ 2026 ಪಂದ್ಯಾವಳಿಗೆ ಆತಿಥ್ಯ ಒದಗಿಸುತ್ತಿರುವ ದೇಶ (ಯುಎಸ್) ಜೊತೆ, ಜನಾಂಗೀಯ ಪೂರ್ವಾಗ್ರಹ ಸಹಿತ ವಿವಿಧ ಬಗೆಯ ತಾರತಮ್ಯಗಳನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಪೂರ್ವಭಾವಿ ಒಪ್ಪಂದಗಳನ್ನು ಮಾಡಿಕೊಳ್ಳದೆ ಇದ್ದುದಕ್ಕಾಗಿ ಪ್ರಸ್ತುತ ಸಂಸ್ಥೆಗಳು, ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಫಿಫಾ ಸಂಸ್ಥೆಯನ್ನು ಕಟುವಾಗಿ ಖಂಡಿಸಿವೆ.

ಯುಎಸ್ ಅಧಿಕಾರಿಗಳ ಕೈಯಲ್ಲಿ ಕಿರುಕುಳ ಎದುರಿಸಿದವರೆಲ್ಲಾ ಮೇಲ್ನೋಟಕ್ಕೆ ತೀರಾ ಭಿನ್ನ ಹಿನ್ನೆಲೆಯವರಾಗಿ ಕಾಣಿಸುತ್ತಾರಾದರೂ ಯುಎಸ್ ಅಧಿಕಾರಿಗಳ ಸಹಿತ ಪಶ್ಚಿಮದ ಬಿಳಿಯ ಜನಾಂಗವಾದಿಗಳ ಕೆಂಗಣ್ಣಿಗೆ ಗುರಿಯಾಗುವವರಲ್ಲಿ ಕೆಲವು ಸಮಾನ ಅಂಶಗಳಿವೆ. ಅವರೆಲ್ಲಾ ಯಾವುದಾದರೂ ಆಫ್ರಿಕನ್ ದೇಶದ ನಾಗರಿಕರು ಅಥವಾ ಆಫ್ರಿಕನ್ ಮೂಲದವರು, ಕರಿವರ್ಣದವರು ಅಥವಾ ಬ್ರೆಝಿಲ್, ಮೆಕ್ಸಿಕೋ, ಅರ್ಜೆಂಟೀನ, ಕೊಲಂಬಿಯಾ, ಪೆರು ಮುಂತಾದ ಲ್ಯಾಟಿನ್ ಅಮೆರಿಕದ ದೇಶಗಳ ಆಟಗಾರರು ಅಥವಾ ಅರಬ್ ಅಥವಾ ಮುಸ್ಲಿಮ್ ದೇಶಗಳಿಗೆ ಸೇರಿದವರು ಅಥವಾ ಏಶ್ಯ ಖಂಡದವರು, ವಲಸಿಗ ಅಥವಾ ನಿರಾಶ್ರಿತ ಮೂಲದವರೆಂಬ ಸಂಶಯಕ್ಕೊಳಗಾದವರು, ತೃತೀಯ ಲಿಂಗಿಗಳು ಅಥವಾ ಜನಾಂಗವಾದಿಗಳ ನೆಚ್ಚಿನ ತಂಡದ ವಿರುದ್ಧ ಆಡುವ ತಂಡಗಳ ಬೆಂಬಲಿಗರಾಗಿರುತ್ತಾರೆ. ಪ್ರಸ್ತುತ ಯಾವುದೇ ವರ್ಗಕ್ಕೆ ಸೇರಿದ ಆಟಗಾರರು ಮಾತ್ರವಲ್ಲ, ರೆಫ್ರಿಗಳು, ಸಿಬ್ಬಂದಿಗಳು, ಕಾಮೆಂಟರಿ ಹೇಳುವವರು, ಮಾಧ್ಯಮದವರು, ವೀಕ್ಷಕರು, ಕರಿಯ ಅಥವಾ ಮಹಿಳಾ ರೆಫ್ರಿಗಳು... ಹೀಗೆ ಸಂಕ್ಷಿಪ್ತವಾಗಿ, ಬಿಳಿಯ ಜನಾಂಗವಾದಿ ಜಂತುಗಳಿಗೆ ‘ಅನ್ಯರು’ ಎಂದು ಅನಿಸುವ ಜಗತ್ತಿನ ಯಾವುದೇ ಭಾಗದ, ಯಾವುದೇ ವರ್ಗದ ಮಾನವರು ಅವರ ಕೋಪತಾಪ ಮತ್ತು ದ್ವೇಷಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ಬಿಳಿಯ ಜನಾಂಗವಾದಿಗಳು ತಮ್ಮ ಹಿರಿಮೆಯನ್ನು ಮೆರೆಯುವುದಕ್ಕೆ ಮತ್ತು ಇತರ ಜನಾಂಗೀಯರನ್ನು ಹಾಗೂ ತಾವು ತಾತ್ಸಾರದಿಂದ ಕಾಣುವ ಅನ್ಯ ರಾಷ್ಟ್ರೀಯರನ್ನು ನಿಂದಿಸುವುದಕ್ಕೆ ಹತ್ತು ಹಲವು ವಿಧಾನಗಳನ್ನು ಬಳಸುತ್ತಾರೆ. ಇದರಲ್ಲಿ, ನಿರ್ದಿಷ್ಟ ಪದಗಳು, ಧ್ವನಿಗಳು, ಘೋಷಣೆಗಳು, ಹಾಡುಗಳು, ಸಂಜ್ಞೆಗಳು, ಸಂಕೇತಗಳು, ಧ್ವಜಗಳು, ಬ್ಯಾನರ್ - ಪೋಸ್ಟರ್‌ಗಳು ಇತ್ಯಾದಿ ಸೇರಿವೆ. ತಾವು ಇಷ್ಟ ಪಡದ ತಂಡಗಳನ್ನು, ನಿರ್ದಿಷ್ಟ ಆಟಗಾರರನ್ನು ಅಥವಾ ರೆಫ್ರಿಗಳನ್ನು ಗುರಿಯಾಗಿಸಿ, ಅವರನ್ನು ಹಿಂಸಿಸಲು ಈ ವಿಧಾನಗಳನ್ನು ಬಳಸಲಾಗುತ್ತದೆ. ಈ ಪೈಕಿ ಕೆಲವು ವಿಧಾನಗಳು ಸಾಕಷ್ಟು ಪರಿಚಿತವಾಗಿವೆ ಮತ್ತು ಅವುಗಳನ್ನು ಸಾಮಾನ್ಯ ಸಂಭಾಷಣೆಗಳಲ್ಲಿ, ಆಟದ ಮೈದಾನಗಳಲ್ಲಿ, ವೀಕ್ಷಕರ ಗ್ಯಾಲರಿಗಳಲ್ಲಿ, ಪಂದ್ಯಗಳ ಕಮೆಂಟರಿಗಳಲ್ಲಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವ್ಯಾಪಕವಾಗಿ ಬಳಸಲಾಗುತ್ತವೆ. ಉದಾ:

* ಪಂದ್ಯಗಳು ನಡೆಯುತ್ತಿರುವಾಗ, ಚೀನಾ, ಜಪಾನ್, ಕೊರಿಯಾ ಮುಂತಾದ ಪೂರ್ವ ಏಶ್ಯದ ದೇಶಗಳ ಆಟಗಾರರನ್ನು ಹಂಗಿಸಲಿಕ್ಕಾಗಿ, ಎರಡು ಕೈಗಳ ತೋರು ಬೆರಳನ್ನು ಎರಡು ಕಣ್ಣುಗಳ ಬದಿಗಿಟ್ಟು ಕಣ್ಣಿನ ಮೂಲೆಗಳನ್ನು ಎಳೆದು ಆ ಮೂಲಕ, ಅವರೆಲ್ಲಾ ಸಣ್ಣ ಕಣ್ಣಿನವರು ಅಥವಾ ಓರೆ ಕಣ್ಣಿನವರು ಎಂದು ಸೂಚಿಸುವುದು.

* ಆಫ್ರಿಕನ್ ಮೂಲದ ಆಟಗಾರರನ್ನು ನಿಂದಿಸಲು ಕೋತಿಯ ಥರ ಮುಖಭಾವ ಮಾಡಿ ತೋರಿಸುವುದು, ಕೋತಿಯ ಧ್ವನಿಯಲ್ಲಿ ಕೂಗು ಹಾಕುವುದು, ಕೋತಿಯ ಚಿತ್ರ ತೋರಿಸುವುದು, ಆಟಗಾರರ ಮೇಲೆ ಬಾಳೆ ಹಣ್ಣಿನ ಸಿಪ್ಪೆ ಎಸೆಯುವುದು.

* ನಾಝಿ ಸೆಲ್ಯೂಟ್, ಸ್ವಸ್ತಿಕ, ಎಸ್ಸೆಸ್ ಮುಂತಾದ ಕುಖ್ಯಾತ ಜನಾಂಗವಾದಿ ಸಂಕೇತಗಳನ್ನು ಪ್ರದರ್ಶಿಸುವುದು.

* ಅವಹೇಳನಕಾರಿ ಚಿತ್ರ, ಕಾರ್ಟೂನ್, ಟ್ಯಾಟೂ ಇತ್ಯಾದಿಗಳನ್ನು ತೋರಿಸುವುದು.

* ಹೆಬ್ಬೆರಳು ಎತ್ತಿದ ಸ್ಥಿತಿಯಲ್ಲಿ ಮುಷ್ಟಿಯನ್ನು ತಲೆಕೆಳಗಾಗಿಸಿ ‘ಡೌನ್’ ಸಂಕೇತವನ್ನು ಅಥವಾ ‘ನಾಟ್ ಓಕೆ’ ಸಂಕೇತವನ್ನು ಅಥವಾ ಎರಡು ಬೆರಳು ಗಳನ್ನೂ ವೃತ್ತರೂಪದಲ್ಲಿ ಜೋಡಿಸಿ, ಉಳಿದ ಮೂರು ಬೆರಳುಗಳನ್ನು ಎತ್ತಿಹಿಡಿದು WP (White People) ತೋರಿಸುವುದು, ಪ್ರದರ್ಶಿಸುವುದು, ‘ಗೋಬ್ಯಾಕ್’ ಪೋಸ್ಟರ್ ಹಾಗೂ ಘೋಷಣೆಗಳನ್ನು ಕೂಗುವುದು.

* ಜನರು ಸರದಿಯ ಸಾಲಲ್ಲಿ ನಿಂತಿರುವಾಗ ಅಧಿಕಾರಿಗಳು ಅಥವಾ ಭದ್ರತಾ ಸಿಬ್ಬಂದಿ ‘ನಮ್ಮವರು’ ಎಂದು ಪರಿಗಣಿಸಿ ಕೆಲವರನ್ನು ಯಾವುದೇ ವಿಚಾರಣೆ ಇಲ್ಲದೆ ಮುಂದೆ ಹೋಗಲು ಅನುಮತಿಸುವುದು ಮತ್ತು ಕೆಲವರನ್ನು ‘ಅನ್ಯರು’ ಎಂದು ಪರಿಗಣಿಸಿ ಅವರನ್ನು ಕಠಿಣ ತಪಾಸಣೆಗೆ ಒಳಪಡಿಸುವುದು.

* ಟಿಕೆಟ್ ಖರೀದಿಸಿ ಗ್ಯಾಲರಿಯನ್ನು ಪ್ರವೇಶಿಸಿದವರಿಗೆ ಸೀಟು ಒದಗಿಸುವ ವಿಷಯದಲ್ಲಿ ತಾರತಮ್ಯ ಮಾಡುವುದು.

* ಪಂದ್ಯಗಳು ನಡೆಯುತ್ತಿರುವಾಗ ಆ ಕುರಿತಾದ ಕಮೆಂಟರಿಯಲ್ಲಿ ನಿರ್ದಿಷ್ಟ ಹಿನ್ನೆಲೆಯ ಆಟಗಾರರು ಮತ್ತವರ ದೇಶ, ಜನಾಂಗ ಅಥವಾ ಹಿನ್ನೆಲೆಯನ್ನು ಅಪಮಾನಿಸುವಂತಹ ದ್ವಂದ್ವ ಅರ್ಥದ ಪದಗಳನ್ನು ಬಳಸುವುದು.

ಜನಾಂಗವಾದಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ದೇಶ, ಧರ್ಮ, ಭಾಷೆ, ಜನಾಂಗ ಇತ್ಯಾದಿ ಆಧಾರಿತ ಎಲ್ಲ ಪೂರ್ವಾಗ್ರಹ, ಪಕ್ಷಪಾತಗಳನ್ನು ತಡೆಯಲು, ಫಿಫಾ ಸಂಸ್ಥೆಯು ತನ್ನ ಕಡೆಯಿಂದ ಹಲವು ಕಠಿಣ ನಿಯಮ ನಿರ್ಬಂಧಗಳನ್ನು ಜಾರಿಗೊಳಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣಕ್ರಮಗಳನ್ನು ಕೈಗೊಳ್ಳುವುದಕ್ಕೆ ಬೇಕಾದ ಹಕ್ಕುಗಳನ್ನೂ ತನ್ನ ಬಳಿ ಇಟ್ಟುಕೊಂಡಿದೆ. ಉದಾ:

* ಯಾವುದಾದರೂ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿಯಿಂದ ಯಾರಾದರೂ ಜನಾಂಗವಾದಿ ಘೋಷಣೆಗಳನ್ನು ಕೂಗಿದರೆ, ಹಾಡುಗಳನ್ನು ಹಾಡಿದರೆ, ರೆಫ್ರಿ ಅಥವಾ ಆಟಗಾರರನ್ನು ಗುರಿಯಾಗಿಸಿ ಘಾತಕ ಸಂಕೇತಗಳನ್ನು ತೋರಿಸಿದರೆ, ಫಿಫಾ ಆ ಪಂದ್ಯವನ್ನು ಮಧ್ಯದಲ್ಲೇ ನಿಲ್ಲಿಸಿ, ವೀಕ್ಷಕರಿಗೆ ಎಚ್ಚರಿಕೆ ನೀಡಬಹುದು. ಅಟ್ಟಗಾರರನ್ನೆಲ್ಲ ಡ್ರೆಸ್ಸಿಂಗ್ ರೂಮ್‌ಗೆ ಕಳಿಸಿ ಪಂದ್ಯವನ್ನು ಸ್ವಲ್ಪ ಸಮಯಕ್ಕಾಗಿ ಸ್ಥಗಿತಗೊಳಿಸಬಹುದು ಅಥವಾ ಪಂದ್ಯವನ್ನು ಪುನರಾರಂಭಿಸಿ, ಅಂತಹ ಘಟನೆ ಮತ್ತೆ ನಡೆದರೆ ಪಂದ್ಯವನ್ನೇ ರದ್ದುಗೊಳಿಸಬಹುದು.

* ಈ ಬಾರಿಯ ಫಿಫಾ ನಿಯಮಾನುಸಾರ ಆಟಗಾರರು ತಮ್ಮ ವಿರೋಧಿ ತಂಡದ ಆಟಗಾರರಿಂದ ಅಥವಾ ಪ್ರೇಕ್ಷಕರ ಕಡೆಯಿಂದ ಜನಾಂಗೀಯ ನಿಂದನೆಯನ್ನು ಎದುರಿಸಿದರೆ ಅವರು ತಮ್ಮ ಎರಡೂ ಮುಂಗೈಗಳನ್ನು ಘಿ ರೂಪದಲ್ಲಿ ಜೋಡಿಸಿ ರೆಫ್ರಿಗೆ ತೋರಿಸಬೇಕು. ರೆಫ್ರಿ ತಕ್ಷಣವೇ ಈ ಕುರಿತು ವಿಚಾರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.

* ಈ ಬಾರಿಯ ವಿಶ್ವ ಕಪ್ ಪಂದ್ಯಗಳಲ್ಲಿ ಆಟಗಾರರು ಪಂದ್ಯ ನಡೆಯುತ್ತಿರುವಾಗ ತಮ್ಮ ಟಿ ಶರ್ಟ್‌ಗಳನ್ನು ಬಳಸಿ ತಮ್ಮ ಮುಖ ಮುಚ್ಚಿಕೊಳ್ಳುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಮೇಲ್ನೋಟಕ್ಕೆ ವಿಚಿತ್ರವೆಂಬಂತೆ ಕಾಣಿಸುವ ಈ ಪ್ರತ್ಯೇಕ ಕ್ರಮಕ್ಕೆ ಒಂದು ದೀರ್ಘ ಹಿನ್ನೆಲೆ ಇದೆ. ಕೆಲವು ವರ್ಷಗಳ ಹಿಂದಿನವರೆಗೂ ಫುಟ್ಬಾಲ್ ಸ್ಟೇಡಿಯಂನೊಳಗೆ ಕೆಲವು ಜನಾಂಗವಾದಿ ಆಟಗಾರರು ‘ಅನ್ಯ’ ಆಟಗಾರರ ಅಥವಾ ರೆಫ್ರಿಗಳ ವಿರುದ್ಧ ಜಗಳಕ್ಕಿಳಿದು ಜನಾಂಗೀಯ ನಿಂದನೆಯ ಮಾತುಗಳನ್ನು ಆಡುವ ಹಲವಾರು ಪ್ರಕರಣಗಳು ನಡೆದಿದ್ದವು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳ ಕುರಿತು ದೂರುಗಳು ಬಂದಾಗ ಆ ಕುರಿತು ವಿಚಾರಣೆಯ ವೇಳೆ, ವೀಡಿಯೊ ಫೂಟೇಜ್ ಬಳಸಿ ಆರೋಪಿಗಳ ತುಟಿ ಚಲನೆಯ ಆಧಾರದಲ್ಲಿ ಅವರು ಯಾವ ಪದಗಳನ್ನು ಉಚ್ಚರಿಸಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು ಆರೋಪ ಸಾಬೀತಾದಲ್ಲಿ ಆರೋಪಿಗಳಿಗೆ ದಂಡನೆ ವಿಧಿಸುವ ನಿಯಮ ಆರಂಭವಾಯಿತು. ಇತ್ತೀಚಿನ ವರ್ಷಗಳಲ್ಲಿ ಜನಾಂಗವಾದಿ ಕಿಡಿಗೇಡಿಗಳು ತಮ್ಮ ಅಪರಾಧವನ್ನು ಅಡಗಿಸಲು ಒಂದು ನೂತನ ಉಪಾಯವನ್ನು ಕಂಡುಕೊಂಡರು. ಅವರು ಕ್ರೀಡಾಂಗಣದೊಳಗೆ ಹಲವಾರು ವೀಡಿಯೊಗಳ ಸಮಕ್ಷಮ ಇನ್ನೊಬ್ಬ ಆಟಗಾರನನ್ನು ಅಥವಾ ರೆಫ್ರಿಯನ್ನು ನಿಂದಿಸುವ ಮುನ್ನ ತಮ್ಮ ಟಿ ಶರ್ಟ್ ಅನ್ನು ಮುಖದ ಮೇಲೆ ಎಳೆದುಕೊಂಡು ತಮ್ಮ ತುಟಿ ಚಲನೆಯ ಸುಳಿವು ಸಿಗದಂತೆ ನೋಡಿಕೊಳ್ಳತೊಡಗಿದ್ದರು. ಇದರಿಂದಾಗಿ ಅವರ ಕುಕೃತ್ಯವನ್ನು ಸಾಬೀತುಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈ ಬಾರಿ ಫಿಫಾ ಸಂಘಟಕರು, ಯಾವ ಕಾರಣಕ್ಕೂ ಆಟಗಾರರು ಕ್ರೀಡಾಂಗಣದೊಳಗೆ ತಮ್ಮ ಟಿ ಶರ್ಟುಗಳನ್ನು ಬಳಸಿ ಮುಖ ಮುಚ್ಚಿಕೊಳ್ಳಬಾರದೆಂಬ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಿದರು.

ಇತ್ತೀಚೆಗೆ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ನಿರ್ದಿಷ್ಟ ದೇಶ, ತಂಡ, ಆಟಗಾರರು, ರೆಫ್ರಿಗಳು ಮತ್ತಿತರರನ್ನು ಗುರಿಯಾಗಿಸಿ ಜನಾಂಗೀಯ ನಿಂದನೆ ಮಾಡುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವ್ಯಾಪಕವಾಗಿ ಪ್ರಸಾರದಲ್ಲಿದ್ದವು. ಇದನ್ನು ತಡೆಗಟ್ಟುವುದಕ್ಕಾಗಿ ಫಿಫಾ ಸಂಘಟಕರು ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡರು. ತಾಂತ್ರಿಕ ಉಪಕ್ರಮಗಳ ಮೂಲಕ ಅವರು ಸಾಮಾಜಿಕ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿನ ಸುಮಾರು 25 ಕೋಟಿ ಪೋಸ್ಟ್‌ಗಳನ್ನು ಪರಿಶೀಲನೆಗೆ ಒಳಪಡಿಸಿ, ಜೂನ್ 18ರ ತನಕ ಸುಮಾರು 4 ಲಕ್ಷ ಪೋಸ್ಟ್‌ಗಳನ್ನು ಅಳಿಸಿಬಿಡುವ ಏರ್ಪಾಟು ಮಾಡಿದರು.

ಒಟ್ಟಿನಲ್ಲಿ ಫಿಫಾ ವಿಶ್ವ ಕಪ್ 2026 ಹೊರನೋಟಕ್ಕೆ ತುಂಬಾ ರೋಮಾಂಚಕವಾಗಿದೆ. ಸಾಹಸಮಯ ದೃಶ್ಯಾವಳಿಗಳಿಂದ ಸಂಪನ್ನವಾಗಿದೆ. ಜಗತ್ತಿಗೆಲ್ಲಾ ಅಪಾರ ಮನರಂಜನೆ ಒದಗಿಸುತ್ತಿದೆ. ಭಾರೀ ರಂಗುರಂಗಿನ, ಸದ್ದುಗದ್ದಲದ, ಸಂಭ್ರಮ ಸಡಗರದ ವೇದಿಕೆಯಾಗಿದೆ. ಅದೇ ವೇಳೆ ಫಿಫಾ ವಿಶ್ವ ಕಪ್ 2026 ಮಾನವ ಸಮಾಜವನ್ನು ಒಳಗಿನಿಂದ ಕೊರೆಯುತ್ತಿರುವ ಜನಾಂಗವಾದವೆಂಬ ಮಾರಕ, ಘಾತಕ ರೋಗವನ್ನು, ಅದರ ಬೃಹತ್ ಸ್ವರೂಪವನ್ನು ನೆನಪಿಸಿದೆ. ಮಾನವ ಸಮಾಜವು ಈ ಯುಗದಲ್ಲೂ ಏಕತೆ ಮತ್ತು ಸಮಾನತೆಯ ಗುರಿಯಿಂದ ಎಷ್ಟೊಂದು ದೂರವಿದೆ ಎಂಬುದನ್ನು ಅಳೆಯುವುದಕ್ಕೆ ಸಹಾಯಕವಾಯಿತು. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಬಿಳಿಯರ ಜಗತ್ತು ಒಳಗಿನಿಂದ ಅರ್ಬುದ ಪೀಡಿತವಾಗಿ ನರಳುತ್ತಿರುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

Tags

FIFA World Cup2026
share
ಶಂಬೂಕ
ಶಂಬೂಕ
Next Story
X