Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ಅತ್ಯುನ್ನತ ಶಿಕ್ಷಣ ಕೇಂದ್ರಗಳಲ್ಲಿ...

ಅತ್ಯುನ್ನತ ಶಿಕ್ಷಣ ಕೇಂದ್ರಗಳಲ್ಲಿ ಅತಿನೀಚ ಮಟ್ಟದ ಜಾತಿ ತಾರತಮ್ಯ

ಶಂಬೂಕಶಂಬೂಕ14 Sept 2026 10:58 AM IST
share
ಅತ್ಯುನ್ನತ ಶಿಕ್ಷಣ ಕೇಂದ್ರಗಳಲ್ಲಿ ಅತಿನೀಚ ಮಟ್ಟದ ಜಾತಿ ತಾರತಮ್ಯ

ಭಾಗ - 1

ಸದ್ಯ ನಮ್ಮ ಸಮಾಜದಲ್ಲಿ, ನಮ್ಮ ತುರ್ತು ಗಮನ ಬಯಸುವ, ನಾವೆಷ್ಟೇ ಕಣ್ಣುಮುಚ್ಚಿಕೊಂಡಿದ್ದರೂ ನಾಳೆ ಭಾರೀ ಅನಾಹುತಗಳ ರೂಪದಲ್ಲಿ ನಮ್ಮ ಕಣ್ಣುಕುಕ್ಕಲಿರುವ ಹಲವು ಕಠೋರ ವಾಸ್ತವಗಳಿವೆ. ಜಿರಳೆ ಆಂದೋಲನವು ಚರ್ಚೆಗೆ ತಂದದ್ದು ಅಂತಹ ಹಲವಾರು ವಾಸ್ತವಗಳ ಪೈಕಿ ಕೇವಲ ಒಂದನ್ನು ಮಾತ್ರ. ಪ್ರಶ್ನೆ ಪತ್ರಿಕೆಗಳು ಲೀಕ್ ಆದ ಕಾರಣ ಈ ವರ್ಷದ ನೀಟ್ (NEET) ಪರೀಕ್ಷೆಯನ್ನು ಮುಂದೂಡಿ, ಕೆಲವು ವಾರಗಳ ಬಳಿಕ ನಡೆಸಲಾಯಿತು. ಈಬೆಳವಣಿಗೆಯಿಂದ ತೀವ್ರ ನಿರಾಶರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಪೈಕಿ ಹಲವರು ಆತ್ಮಹತ್ಯೆ ಮಾಡಿಕೊಂಡರು. ಲೀಕ್ ಹಗರಣ ಮತ್ತು ಮರುಪರೀಕ್ಷೆಯ ನಡುವಣ ಸುಮಾರು ಐದು ವಾರಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 12 ರಿಂದ 21ರಷ್ಟು ಎಂದು ಅಂದಾಜಿಸಲಾಯಿತು. ಪೇಪರ್ ಲೀಕ್ ದುರಂತದ ಹಿನ್ನೆಲೆಯಲ್ಲಿ ದೇಶದ ಶೈಕ್ಷಣಿಕ ಕ್ಷೇತ್ರದ ಅಧೋಗತಿಯ ವಿರುದ್ಧ ಆಕ್ರೋಶ ಪ್ರಕಟಿಸುವ ಒಂದು ದೊಡ್ಡ ಆಂದೋಲನವೇ ನಡೆಯಿತು. ಅದಕ್ಕೆ ಗಮನಾರ್ಹ ಯಶಸ್ಸು ಕೂಡಾ ಪ್ರಾಪ್ತವಾಯಿತು. ಅದೆಷ್ಟೋ ನಿರಾಶರಲ್ಲಿ, ಪ್ರತಿರೋಧದಲ್ಲಿ ಫಲ ಇದೆ ಎಂಬೊಂದು ಹೊಸ ಆಶಾವಾದ ಚಿಗುರಿತು.

ಇದೇವೇಳೆ, ಭಾರತದ ಇದೇ ಶಿಕ್ಷಣ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳ ಆತ್ಮಹತ್ಯೆಯ ಇನ್ನೊಂದು ಸರಣಿ ಮೌನವಾಗಿ ನಡೆಯುತ್ತಲೇ ಇದೆ. ವಿಶೇಷವಾಗಿ, ಸಂಪೂರ್ಣವಾಗಿ ಸರಕಾರಿ ವೆಚ್ಚದಿಂದಲೇ ನಡೆಯುವ ದೇಶದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ತಾವು ಎದುರಿಸಿದ ಜಾತಿಯಾಧಾರಿತ ನಿಂದನೆ, ತಾರತಮ್ಯ, ಬೆದರಿಕೆ ಇತ್ಯಾದಿಗಳಿಂದ ಬೇಸತ್ತು ಮರಣಕ್ಕೆ ಶರಣಾದ ಪ್ರತಿಭಾವಂತ, ಮುಗ್ಧ ಯುವ ಜೀವಗಳ ಆತ್ಮಹತ್ಯೆಯ ಸರಣಿ. ಮೇಲ್ಜಾ

ತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕೈಯಲ್ಲಿ ಕಿರುಕುಳ ಅನುಭವಿಸಿ ಬದುಕಿನ ಬಗ್ಗೆಯೇ ಜಿಗುಪ್ಸೆ ತಾಳಿದವರ ಸರಣಿ. ಪೇಪರ್ ಲೀಕ್ ಸಂಬಂಧಿ ಆತ್ಮಹತ್ಯೆಗಳಿಗೆ ಹೋಲಿಸಿದರೆ ತುಂಬಾ ಹಳೆಯ, ತುಂಬಾ ದೊಡ್ಡ ಪ್ರಮಾಣದ ಸರಣಿ ಅದು. ಆದರೆ ಆ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆ ಆಗಿಲ್ಲ. ಅದರ ವಿರುದ್ಧ ಯಾವುದೇ ದೊಡ್ಡ ಆಂದೋಲನ ನಡೆದಿಲ್ಲ. ಜಿರಳೆ ಪಕ್ಷದವರು ಕೂಡಾ ಈತನಕ ಆ ಕುರಿತು ಮಾತನಾಡಿಲ್ಲ.

ಕಳೆದ ವಾರ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಐಐಟಿಯಲ್ಲಿ ನಡೆದ ಒಂದು ಘಟನೆ ಹಲವರ ಗಮನ ಸೆಳೆಯಿತು. ಐಐಟಿಯಂತಹ ವೈಜ್ಞಾನಿಕ ಸಂಸ್ಥೆಗಳಲ್ಲಿ ಜಾತಿವಾದದ ವಿಷ ಯಾವ ಮಟ್ಟಿಗೆ ಹರಡಿದೆ ಮತ್ತು ಈ ವಿಷದ ಪ್ರಸಾರಕರು ಎಲ್ಲ ಮುಚ್ಚುಮರೆಗಳನ್ನು ಬದಿಗಿಟ್ಟು ಯಾವ ರೀತಿ ತಮ್ಮ ವ್ಯಾಧಿಯನ್ನು ಬಹಿರಂಗವಾಗಿ ಪ್ರದರ್ಶಿಸುವ ಸಾಹಸಕ್ಕಿಳಿದಿದ್ದಾರೆ ಎಂಬುದಕ್ಕೆ ಆ ಘಟನೆ ಸಾಕ್ಷಿಯಾಯಿತು. ಸೆಪ್ಟ್ಟಂಬರ್ ೪ ರಂದು ಐಐಟಿ ಮಂಡಿಯಲ್ಲಿ ವಿದ್ಯಾರ್ಥಿಗಳ ಒಂದು ವರ್ಗವು ಕೃಷ್ಣಾಷ್ಟಮಿಯನ್ನು ಆಚರಿಸುತ್ತಿತ್ತು. ಅದೇವೇಳೆ ಸಂಸ್ಥೆಯ ಸಭಾಂಗಣದ ಹೊರಗೆ ಆಂಗ್ಲ ಭಾಷೆಯಲ್ಲಿ ಮುದ್ರಿತವಾಗಿದ್ದ ಒಂದು ಪೋಸ್ಟರ್ ಕಾಣಿಸಿಕೊಂಡಿತು. ‘ಭಗವದ್ಗೀತೆ -

ಕಾಲಾತೀತ ಜ್ಞಾನ’ ಎಂಬುದು ಅದರ ಶೀರ್ಷಿಕೆ ಯಾಗಿತ್ತು. ಅದರ ಕೆಳಗೆ ‘ಕರ್ಮ’ ಎಂಬ ಪದವನ್ನು ದೊಡ್ಡಕ್ಷರಗಳಲ್ಲಿ ಬರೆಯಲಾಗಿತ್ತು. ಅದರ ಕೆಳಗೆ ಭಗವದ್ಗೀತೆಯ ಒಂದು ಶ್ಲೋಕದ ಸಾರಾನುವಾದವಿತ್ತು:

ನಮ್ಮನ್ನು ನಾವು ಕಾಪಾಡಿಕೊಳ್ಳಲು ಕರ್ಮ ಮಾಡುವುದು ಅಗತ್ಯ. ನಮಗೆ ನಿಯೋಜಿಸಲಾದ ಕರ್ತವ್ಯವನ್ನು ನಿರ್ವಹಿಸುವುದು, ಕೆಲಸ ಮಾಡದೇ ಇರುವುದಕ್ಕಿಂತ ಉತ್ತಮ. ಕೆಲಸವಿಲ್ಲದೆ ಯಾರೂ ತಮ್ಮ ಭೌತಿಕ ದೇಹವನ್ನೂ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. (ಭಗವದ್ಗೀತೆ: ಅಧ್ಯಾಯ 3, ಶ್ಲೋಕ 8)

ಅದರ ಕೆಳಗೆ ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಸಮಾಜವನ್ನು ನಾಲ್ಕು ಪ್ರತ್ಯೇಕ ವರ್ಗಗಳಾಗಿ ಬಿಂಬಿಸುವ ನಾಲ್ಕು ಚಿತ್ರಗಳಿದ್ದವು. ಚಿತ್ರದಲ್ಲಿ ಆ ನಾಲ್ಕು ವರ್ಗಗಳನ್ನು ಈರೀತಿ ಪರಿಚಯಿಸಲಾಗಿತ್ತು:

ಬ್ರಾಹ್ಮಣರು - ದಿವ್ಯ ಸಂದೇಶದ ಪ್ರಸಾರ ಮಾಡುವವರು.

ಕ್ಷತ್ರಿಯರು - ಸಮಾಜವನ್ನು ಮತ್ತು ಆಧ್ಯಾತ್ಮಿಕತೆಯನ್ನು ರಕ್ಷಿಸುವವರು

ವೈಶ್ಯರು - ಆರ್ಥಿಕತೆಯನ್ನು ಮುನ್ನಡೆಸುವವರು ಮತ್ತು ಇತರರಿಗೆ ಬೆಂಬಲ ನೀಡುವವರು.

► ಶೂದ್ರರು - ಮೇಲ್ವರ್ಗಗಳ ಜನರಿಗೆ ಸೇವೆ ಸಲ್ಲಿಸುವವರು.

ಪೋಸ್ಟರ್ನಲ್ಲಿ ಇನ್ನೂ ಅನೇಕ ವಿಷಯಗಳಿದ್ದುವು. ಆದರೆ, ಪ್ರಸ್ತುತ ನಿರ್ದಿಷ್ಟ ಭಾಗವು ಹಲವರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಯಿತು. ಪೋಸ್ಟರ್ನ ಫೋಟೊ ಮತ್ತು ವೀಡಿಯೊಗಳು ಕ್ಯಾಂಪಸ್ ನಲ್ಲೂ ಹೊರಗೂ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ತಲುಪತೊಡಗಿದವು. ವಿವಿಧ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳಿರುವ ಕ್ಯಾಂಪಸ್ನಲ್ಲಿ ಇಂತಹದೊಂದು ಪೋಸ್ಟರ್ ಪ್ರಕಟವಾಗಲು ಕಾರಣವೇನು? ಎಂಬ ಕುರಿತು ಊಹಾಪೋಹ ನಡೆಯಿತು. ಹಲವರು ಇದನ್ನು ಕ್ಯಾಂಪಸ್ ನೊಳಗೆ ಯಾವ ಜಾತಿಯವರು ಯಾವ ಕೆಲಸ ಮಾಡಬೇಕು ಎಂಬ ಬಗ್ಗೆ ಮೇಲ್ಜಾತಿಯವರು ನೀಡಿರುವ ಅಧಿಕೃತ ಆದೇಶ ಎಂದು ವ್ಯಾಖ್ಯಾನಿಸಿಕೊಂಡರು. ಈ ಆದೇಶ ಪಾಲಿಸಲು ಸಿದ್ಧರಿಲ್ಲದವರು ಅದರ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಹಗರಣವು ಕ್ಯಾಂಪಸ್ನ

ಹೊರಗೂ ಚರ್ಚೆಗೆ ಬಂತು. ಕೆಲವು ಮಾಧ್ಯಮಗಳು ಕೂಡಾ ಅದನ್ನು ಪ್ರಸ್ತಾಪಿಸಿದವು. ಪೋಸ್ಟರ್ ಮಾಯವಾಯಿತು. ಎಂದಿನಂತೆ ಸ್ಪಷ್ಟೀಕರಣ, ನಿರಾಕರಣೆ, ಆಶ್ವಾಸನೆ, ಎಫ್ಐಆರ್, ತನಿಖಾ ಸಮಿತಿಯ ರಚನೆ ಇತ್ಯಾದಿ ‘ಉತ್ತರಕ್ರಿಯೆ’ಗಳು ನಡೆದವು.

ಕೆಲವೇ ತಿಂಗಳ ಹಿಂದೆ (ಜೂನ್ 3 ರಿಂದ 6) ಮಂಡಿಯ ಇದೇ ಐಐಟಿಯಲ್ಲಿ MBCC 2026 (ಮೈಂಡ್, ಬ್ರೈನ್ ಆಂಡ್ ಕಾನ್ಷಿಯಸ್ನೆಸ್ ಕಾನ್ಫರೆನ್ಸ್) ಎಂಬೊಂದು ಸಮ್ಮೇಳನ ನಡೆದಿತ್ತು. ಐಐಟಿ ಮಂಡಿ, ಕೇಂದ್ರ ಶಿಕ್ಷಣ ಇಲಾಖೆ ಮತ್ತು ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಗಳ ಸಹಭಾಗಿತ್ವದೊಂದಿಗೆ ನಡೆದ ಈ ದುಬಾರಿ ಸಮ್ಮೇಳನವು ಹಲವು ವಿವಾದಗಳಿಗೆ ಕಾರಣವಾಗಿತ್ತು. ವಿಜ್ಞಾನವನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ಥಾಪಿತ ಐಐಟಿ ಸಂಸ್ಥೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ವಿಜ್ಞಾನದ ಜೊತೆ ಸಂಬಂಧವೇ ಇಲ್ಲದ ಧ್ಯಾನ, ಉಪಾಸನೆ, ಪುನರ್ಜನ್ಮ, ಮರಣೋತ್ತರ ಸಂವಹನ, ಜ್ಯೋತಿಷ್ಯ ಇತ್ಯಾದಿ ಬ್ರಾಹ್ಮಣ ಕೇಂದ್ರಿತ ನಂಬಿಕೆಗಳ ವೈಭವೀಕರಣ ಮತ್ತು ಸಾಂಪ್ರದಾಯಿಕ ನಂಬಿಕೆಗಳಿಗೆ ವಿಜ್ಞಾನದ ಮುಖವಾಡ ತೊಡಿಸುವ ಪ್ರಯತ್ನ ನಡೆಯಿತೆಂಬುದು ವಿವಾದಕ್ಕೆ ಒಂದು ಕಾರಣವಾಗಿತ್ತು. ಈ ಸಮ್ಮೇಳನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳ ಮೇಲೆ ಹೇರಲಾದ ನಿರ್ಬಂಧ ಮತ್ತು ಯಾರೆಲ್ಲಾ ಭಾಗವಹಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ಯಂತ್ರಗಳ ಬಳಕೆಯ ವಿರುದ್ಧ ಕೂಡಾ ಅನೇಕರು ಗಂಭೀರ ಆಕ್ಷೇಪ ಎತ್ತಿದರು.

ಇವೆಲ್ಲಾ ಐಐಟಿ ಮಂಡಿ ಎಂಬ ಒಂದೇ ಸಂಸ್ಥೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಗಮನ ಸೆಳೆದ ಎರಡು ಪ್ರಮುಖ ಘಟನೆಗಳು. ಪ್ರಬಲ ಜಾತಿಗಳಿಗೆ ಸೇರಿದವರು ಇತರ ವರ್ಗಗಳ ಮುಂದೆ ತಮ್ಮ ಪ್ರಾಬಲ್ಯ ಮೆರೆಯಲು ಮತ್ತು ಅವರ ಮೇಲೆ ತಮ್ಮ ನಂಬಿಕೆಗಳನ್ನು ಹೇರಲು ಯತ್ನಿಸಿದ ಎರಡು ಘಟನೆಗಳು. ಇಂತಹ ಘಟನೆಗಳು ಕೇವಲ ಮಂಡಿಯ ಐಐಟಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಇತರ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೂ ಇಂತಹ ಘಟನೆಗಳು ಧಾರಾಳವಾಗಿ ನಡೆದಿವೆ. ಮಾತ್ರವಲ್ಲ, ಪ್ರಸ್ತುತ ಕ್ಯಾಂಪಸ್ಗಳಲ್ಲಿ ದುರ್ಬಲ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಬದುಕನ್ನೇ ದುಸ್ತರಗೊಳಿಸುವಂತಹ ಶ್ರಮಗಳು ಕೂಡಾ ವಿವಿಧ ಸ್ವರೂಪಗಳಲ್ಲಿ ನಡೆಯುತ್ತಲೇ ಬಂದಿವೆ.

‘ಆತ್ಮಹತ್ಯೆ’ ಎಂದು ಕರೆಯಲಾದ ಸಾಂಸ್ಥಿಕ ಹತ್ಯೆಗಳ ಸರಣಿ

ಹೈದರಾಬಾದ್ ಕೇಂದ್ರೀಯ ವಿದ್ಯಾಲಯದಲ್ಲಿ ಪಿಎಚ್ಡಿ ಮಾಡುತ್ತಿದ್ದ ರೋಹಿತ್ ವೇಮುಲ ಎಂಬ ವಿದ್ಯಾರ್ಥಿ ೨೦೧೫ ಡಿಸೆಂಬರ್ ೧೮ ರಂದು ವಿವಿಯ ಉಪಕುಲಪತಿಯವರಿಗೆ ಒಂದು ಪತ್ರ ಬರೆದಿದ್ದ. ಅದರಲ್ಲಿ ಇತರ ಕೆಲವು ವಿಷಯಗಳ ಜೊತೆ ಎರಡು ಮನವಿಗಳಿದ್ದವು:

1. ಎಲ್ಲ ದಲಿತ ವಿದ್ಯಾರ್ಥಿಗಳಿಗೆ, ಅವರ ದಾಖಲಾತಿಯ ಸಮಯದಲ್ಲೇ 10 ಮಿಲ್ಲಿ ಗ್ರಾಮ್ ವಿಷ ಕೊಟ್ಟುಬಿಡಿ. ಅದರ ಜೊತೆಗೆ, ಅಂಬೇಡ್ಕರ್ ಕುರಿತು ಅಧ್ಯಯನ ಮಾಡಲು ಇಚ್ಛೆಯಾದಾಗ ಇದನ್ನು ಸೇವಿಸಿ ಎಂಬ ಆದೇಶವನ್ನೂ ಕೊಟ್ಟುಬಿಡಿ.

2. ದಲಿತ ವಿದ್ಯಾರ್ಥಿಗಳು ವಾಸಿಸುವ ಎಲ್ಲ ಕೋಣೆಗಳಿಗೆ ಚಂದದ ಒಂದು ಹಗ್ಗವನ್ನೂ ಒದಗಿಸಿ ಬಿಡಿ.

ಈ ಪತ್ರ ಬರೆದ ಒಂದು ತಿಂಗಳ ಬಳಿಕ (2016 ಜನವರಿ 17) ರೋಹಿತ್ ವೇಮುಲ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಕೆಲವು ವರ್ಷಗಳ ಹಿಂದೆ, ಸಂಸದ ಡಾ.ವಿ. ಶಿವದಾಸನ್ ಅವರ ಪ್ರಶ್ನೆಯೊಂದಕ್ಕೆ ಉತ್ತರವಾಗಿ, ಅಂದಿನ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಸ್ ಸರ್ಕಾರ್, ಸಂಸತ್ತಿಗೆ ಕೆಲವು ಆಘಾತಕಾರಿ ಮಾಹಿತಿಗಳನ್ನು ನೀಡಿದ್ದರು. ಅವರ ಪ್ರಕಾರ, ಕೇಂದ್ರೀಯ ವಿವಿಗಳು ಹಾಗೂ ಐಐಟಿ, ಐಐಐಟಿ, ಐಐಎಂಎಸ್, ಎನ್ ಐಟಿ, ಐಐಎಸ್ ಸಿ

ಮುಂತಾದ ಪ್ರತಿಷ್ಠಿತ ಕೇಂದ್ರೀಯ ವಿದ್ಯಾ ಸಂಸ್ಥೆಗಳಲ್ಲಿ ವರ್ಷ 2014 ಮತ್ತು 2021 ರ ನಡುವೆ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಮನಾರ್ಹ ಸಂಗತಿಯೇನೆಂದರೆ, ಆತ್ಮಹತ್ಯೆ ಮಾಡಿಕೊಂಡ ಪ್ರಸ್ತುತ 122 ವಿದ್ಯಾರ್ಥಿಗಳ ಪೈಕಿ 71 (58 ಶೇ.) ಮಂದಿ ವಿವಿಧ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದರು. (24 ಮಂದಿ ಪರಿಶಿಷ್ಟ ಜಾತಿಗಳಿಗೆ, 3 ಮಂದಿ ಪರಿಶಿಷ್ಟ ಪಂಗಡಗಳಿಗೆ, 41 ಮಂದಿ ಇತರ ಹಿಂದುಳಿದ ವರ್ಗಗಳಿಗೆ ಮತ್ತು 3 ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು.) ಅದೇ ಸಚಿವಾಲಯವು 2023 ರಲ್ಲಿ ರಾಜ್ಯ ಸಭೆಗೆ ತಿಳಿಸಿದ ಪ್ರಕಾರ, ವರ್ಷ 2018 ಮತ್ತು 2023ರ ನಡುವೆ, ಪ್ರತಿಷ್ಠಿತ ಕೇಂದ್ರೀಯ ವಿವಿಗಳು, ಐಐಟಿಗಳು, ಎನ್ಐಟಿಗಳು, ಐಐಎಂ ಗಳು ಮುಂತಾದ ಕೇಂದ್ರೀಯ ವಿದ್ಯಾ ಸಂಸ್ಥೆಗಳಲ್ಲಿ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಲ್ಲೂ ಹೆಚ್ಚಿನವರು ದಲಿತ, ಆದಿವಾಸಿ ಹಾಗೂ ಬಹುಜನ ಸಮಾಜಕ್ಕೆ ಸೇರಿದವರಾಗಿದ್ದರು.

► ಕ್ಯಾಂಪಸ್ ತ್ಯಾಗಗಳ ಸರಣಿ

2023 ಜುಲೈ ತಿಂಗಳಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಸಭೆಗೆ ನೀಡಿದ ಲಿಖಿತ ಮಾಹಿತಿ ಪ್ರಕಾರ, ವರ್ಷ 2019 ಮತ್ತು 2023ರ

ನಡುವೆ ಭಾರತದ ಕೇಂದ್ರೀಯ ವಿವಿಗಳು, ಐಐಟಿಗಳು, ಎನ್ಐಟಿಗಳು, ಐಐಎಂಗಳು ಮುಂತಾದ ಸಂಸ್ಥೆಗಳಲ್ಲಿ ಕಲಿಯುತ್ತಿದ್ದ 34,035 ವಿದ್ಯಾರ್ಥಿಗಳು ತಮ್ಮ ಶಿಕ್ಷಣಾವಧಿ ಮುಗಿಯುವ ಮುನ್ನವೇ ಪ್ರಸ್ತುತ ಸಂಸ್ಥೆಗಳನ್ನು ಬಿಟ್ಟು ಹೋಗಿದ್ದಾರೆ. ಆಪೈಕಿ 32,186 ಮಂದಿಯ ಜಾತಿ ಹಿನ್ನೆಲೆ ಲಭ್ಯವಿದೆ, ಅವರಲ್ಲಿ 17,454 ಅಥವಾ 52 ಶೇ. ಮಂದಿ ಮೀಸಲಾತಿಯ ಫಲಾನುಭವಿಗಳು ಅಂದರೆ ಎಸ್ಸಿಗಳು (4,423 ಮಂದಿ), ಎಸ್ಟಿಗಳು (3,774 ಮಂದಿ) ಮತ್ತು ಒಬಿಸಿ ವರ್ಗಗಳಿಗೆ ಸೇರಿದವರು (8,602 ಮಂದಿ).

(ಆಧಾರ: ಹಿಂದುಸ್ತಾನ್ ಟೈಮ್ಸ್ ಜುಲೈ 27, 2023).

ಪ್ರಾಣತ್ಯಾಗ ಮತ್ತು ಕ್ಯಾಂಪಸ್ ತ್ಯಾಗಕ್ಕೆ ಜಾತಿಯ ಜೊತೆಗೇನು ಸಂಬಂಧ?

ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಥವಾ ಮಧ್ಯೆ ಶಿಕ್ಷಣ ಮೊಟಕುಗೊಳಿಸಿ ಕ್ಯಾಂಪಸ್ ತೊರೆದು ಹೋದ ವಿದ್ಯಾರ್ಥಿಗಳಲ್ಲಿ ಎಲ್ಲ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿಗಳೂ ಇದ್ದಾರೆ. ಅಲ್ಲದೆ, ತೀವ್ರವಾದ ಸ್ಪರ್ಧಾತ್ಮಕ ವಾತಾವರಣ, ಹೆಚ್ಚು ಅಂಕ ಗಳಿಸುವ ಒತ್ತಡ, ಸೋಲಿನ ಭಯ, ಭಾಷೆಯ ಸಮಸ್ಯೆ, ಅಪರಿಚಿತ ವಾತಾವರಣದಲ್ಲಿ ಇತರರ ಜೊತೆ ಬೆರೆಯುವಲ್ಲಿ ಹಿಂಜರಿಕೆ, ಮನೆಯವರಿಂದ ದೂರ, ಭಿನ್ನ ಸನ್ನಿವೇಶದಲ್ಲಿ ಬದುಕುವ ನೋವು, ಆರ್ಥಿಕ ಸಮಸ್ಯೆಗಳು....... ಹೀಗೆ ಹಲವು ವಿಭಿನ್ನ ಅಂಶಗಳು ಪ್ರಸ್ತುತ ಆತ್ಮಹತ್ಯೆಗಳು ಮತ್ತು ಕ್ಯಾಂಪಸ್ ತ್ಯಾಗದ ಘಟನೆಗಳಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಆದ್ದರಿಂದ ಈ ಘಟನೆಗಳನ್ನು ಜಾತಿಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಅನೇಕರು ವಾದಿಸಿದ್ದಾರೆ. ಆದರೆ ಕನಿಷ್ಠ ಪಕ್ಷ ಮೂರು ಅಂಶಗಳು ಈ ವಾದವನ್ನು ಧ್ವಂಸಗೊಳಿಸುತ್ತವೆ:

1. ಆತ್ಮಹತ್ಯೆ ಮಾಡಿಕೊಂಡ ಹಾಗೂ ಕ್ಯಾಂಪಸ್ ಬಿಟ್ಟು ತೆರಳಿದ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಜಾತಿ, ವರ್ಗಗಳಿಗೆ ಸೇರಿದವರ ಸಂಖ್ಯೆಯು ನಿರ್ಲಕ್ಷಿಸಲಾಗದಷ್ಟು ಅಧಿಕವಿದೆ.

2. ಆತ್ಮಹತ್ಯೆ ಮಾಡಿಕೊಂಡ ಅಥವಾ ಕ್ಯಾಂಪಸ್ ಬಿಟ್ಟು ತೆರಳಿದ ಅನೇಕ ವಿದ್ಯಾರ್ಥಿಗಳು, ಜಾತಿಯ ಹೆಸರಲ್ಲಿ ತಾವು ಎದುರಿಸಿದ ಅಪಮಾನ ಮತ್ತು ಕಿರುಕುಳವೇ ತಮ್ಮ ಈ ಕ್ರಮಕ್ಕೆ ಕಾರಣವೆಂದು ಹೇಳಿದ ದಾಖಲೆ ಇದೆ.

3. ಕ್ಯಾಂಪಸ್ಗಳಲ್ಲಿ ಜಾತಿ ತಾರತಮ್ಯವು ಒಂದು ಗಂಭೀರ ಸಮಸ್ಯೆಯಾಗಿದೆ ಮತ್ತು ಅದರಿಂದಾಗಿ ವಂಚಿತ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣವು ತೀವ್ರವಾಗಿ ಬಾಧಿತವಾಗುತ್ತದೆ ಎಂಬುದನ್ನು, ಕ್ಯಾಂಪಸ್ ನೊಳಗಿನ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದ ಹಲವು ಆಯೋಗಗಳು ಮತ್ತು ಸಮಿತಿಗಳು ಪುರಾವೆ ಸಹಿತ ಸಾಬೀತು ಪಡಿಸಿವೆ.

ಈ ಹಿನ್ನೆಲೆಯಲ್ಲಿ, ಸಮಸ್ಯೆಯ ಹಿಂದಿರುವ ವಿವಿಧ ಆಯಾಮಗಳ ಪೈಕಿ ಜಾತಿಯ ಆಯಾಮವನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳುವುದು ಸಮರ್ಥನೀಯ ಮಾತ್ರವಲ್ಲ, ಅನಿವಾರ್ಯವಾಗಿದೆ.

►ಜಾತಿ ತಾರತಮ್ಯದ ದೂರುಗಳು

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಡೆಯುತ್ತಿದೆ ಎಂಬುದು ಕೇವಲ ಊಹೆಯಾಗಲಿ ಆರೋಪವಾಗಲಿ ಅಲ್ಲ. ಅದಕ್ಕೆ ಧಾರಾಳ ಅಧಿಕೃತ ಪುರಾವೆಗಳೂ ಇವೆ. ಯುಜಿಸಿ ವರದಿ ಪ್ರಕಾರ ದೇಶದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆದ ಜಾತಿತಾರತಮ್ಯದ ಕುರಿತು ದಾಖಲಾಗುತ್ತಿರುವ ದೂರುಗಳಲ್ಲಿ ಕಳೆದ 5 ವರ್ಷಗಳಲ್ಲಿ ಕನಿಷ್ಠ 118 ಶೇ. ಹೆಚ್ಚಳವಾಗಿದೆ. ವರ್ಷ 2019-20 ರಲ್ಲಿ ಜಾತಿತಾರತಮ್ಯದ 173 ದೂರುಗಳು ದಾಖಲಾಗಿದ್ದವು. ವರ್ಷ 2023-24 ರಲ್ಲಿ ಅಂತಹ 378 ದೂರುಗಳು ಬಂದಿದ್ದವು. 2019 ರಿಂದ 2024 ವರೆಗಿನ

ಅವಧಿಯಲ್ಲಿ ದೇಶದ 704 ವಿವಿಗಳು ಹಾಗೂ 1,553 ಕಾಲೇಜುಗಳಿಂದ ಇಔಅ (ಸಮಾನ ಅವಕಾಶ ಸೆಲ್ಲ್) ಗಳಿಗೆ ಹಾಗೂ ಎಸ್ಸಿ/ಎಸ್ಟಿ ಸೆಲ್ಲ್ ಗಳಿಗೆ ಜಾತಿ ತಾರತಮ್ಯದ ಒಟ್ಟು 1,160 ದೂರುಗಳು ತಲುಪಿವೆ.

►ಖಾಸಗಿ ರಂಗದ ಉದ್ಯೋಗಾವಕಾಶಕ್ಕೂ ಜಾತಿಯ ಉರುಳು

ಸಾಮಾನ್ಯವಾಗಿ ಪ್ರತಿವರ್ಷ ದೇಶದ ಹಲವು ಖಾಸಗಿ ಕಂಪೆನಿಗಳು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಅಭಿಯಾನಗಳನ್ನು ನಡೆಸುತ್ತವೆ. ವಿಶೇಷವಾಗಿ ಕೊನೆಯ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ತಮ್ಮ ಕಂಪೆನಿಗೆ ಬೇಕಾದವರನ್ನು ಆರಿಸುವ ಪ್ರಕ್ರಿಯೆ ಅದು. ಸಾಮಾನ್ಯವಾಗಿ ನೇಮಕಾತಿ ನಡೆಸುವುದು ಖಾಸಗಿ ಕಂಪೆನಿಗಳಾದ್ದರಿಂದ ಅಲ್ಲಿ ಜಾತಿ ಅಥವಾ ಮೀಸಲಾತಿಗೆ ಯಾವುದೇ ಪಾತ್ರ ಇರುವುದಿಲ್ಲ. ಆದರೂ ಐಐಟಿ ಮುಂಬೈಯ ಆಡಳಿತ ವರ್ಗವು ಈನೇಮಕಾತಿ ಪ್ರಕ್ರಿಯೆಯಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯ ನೀಡಿ ವಂಚಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಹಿಂದಕ್ಕೆ ತಳ್ಳಲು ಒಂದು ಕುತಂತ್ರ ನಡೆಸಿತ್ತು. ಅದು, ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸುವಾಗ, ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ತಮ್ಮ ಜಾತಿ ಹಿನ್ನೆಲೆಯನ್ನು ತಿಳಿಸಬೇಕೆಂಬುದನ್ನು ಕಡ್ಡಾಯಗೊಳಿಸಿತ್ತು. ಈಸೂಕ್ಷ್ಮವನ್ನು ಗುರುತಿಸಿದ ಅನೇಕ ವಿದ್ಯಾರ್ಥಿಗಳು, ಖಾಸಗಿ ನೇಮಕಾತಿ ಪ್ರಕ್ರಿಯೆಯಲ್ಲೂ ಜಾತಿಯಾಧಾರಿತ ಸಾಂಸ್ಥಿಕ ಪಕ್ಷಪಾತ ನಡೆಯುತ್ತಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಗೆ, ಯುಜಿಸಿಗೆ ಮತ್ತು ರಾಷ್ಟ್ರೀಯ ಎಸ್ಸಿ ನಿಗಮಕ್ಕೆ (NCSC) ದೂರುಗಳನ್ನು ಸಲ್ಲಿಸಿದ್ದರು. ಐಐಟಿ ದಿಲ್ಲಿಯ ಹಳೆ ವಿದ್ಯಾರ್ಥಿಗಳಿಂದಲೂ ಈ ಬಗೆಯ ದೂರುಗಳು ಬಂದಿದ್ದವು. 2023 ರಲ್ಲಿ ಈವಿಷಯವನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ಎಸ್ಸಿ ನಿಗಮವು ಈ ಕುರಿತು ತನಿಖೆಯನ್ನು ಆರಂಭಿಸಿತು. ನಿಗಮವು ಐಐಟಿ ಮುಂಬೈಯ ಅಧಿಕಾರಿಗಳೊಡನೆ ಈವಿಷಯದಲ್ಲಿ ಸ್ಪಷ್ಟೀಕರಣ ಕೇಳಿದಾಗ, ಕೆಲವು ಸಾರ್ವಜನಿಕ ವಲಯದ ಉದ್ಯಮಗಳು (PSU) ಅಭ್ಯರ್ಥಿಗಳ ಜಾತಿಯ ಬಗೆಗಿನ ಮಾಹಿತಿ ಕೇಳಿದ್ದರಿಂದ ತಾವು ಹಾಗೆ ಮಾಡಿದ್ದಾಗಿ ಸಂಸ್ಥೆಯು ಸ್ಪಷ್ಟೀಕರಣ ನೀಡಿತು. ಈಬಗ್ಗೆ ಪ್ರತಿರೋಧ ಕಾವೇರತೊಡಗಿದಾಗ, 2024 ರಲ್ಲಿ ಈಸಂಸ್ಥೆಯು ಒಂದು ಪ್ರಕಟಣೆಯನ್ನು ಹೊರಡಿಸಿ, ಉದ್ಯೋಗ ನೇಮಕಾತಿಯ ಪ್ರಕ್ರಿಯೆಯಲ್ಲಿ ಜಾತಿ ಕುರಿತಾದ ಮಾಹಿತಿ ಕೇಳುವ ಸಂಪ್ರದಾಯವನ್ನು ತಾನು ಕೈಬಿಟ್ಟಿರುವುದಾಗಿ ಘೋಷಿಸಿತ್ತು. ಐಐಟಿ ದಿಲ್ಲಿ ಸಂಸ್ಥೆಯು ತಾನು ನೇಮಕಾತಿ ಪ್ರಕ್ರಿಯೆಯಲ್ಲಿ ಜಾತಿಯ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಗುರುತಿಸುವ ಕಾರ್ಯವನ್ನು ಮಾಡಿಯೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿತು.

ಅಧ್ಯಯನಗಳು, ಸಮೀಕ್ಷೆಗಳು, ಆಯೋಗಗಳು ಮತ್ತು ಶಿಫಾರಸುಗಳು

2023 ರಲ್ಲಿ ದಿಲ್ಲಿಯ ಐಐಟಿಯಲ್ಲಿ, ಎರಡೇ ತಿಂಗಳ ಅವಧಿಯಲ್ಲಿ ಇಬ್ಬರು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ಕುರಿತು ಪ್ರಕಟವಾದ ವ್ಯಾಪಕ ಕಳವಳಕ್ಕೆ ಪ್ರತಿಕ್ರಿಯೆಯಾಗಿ ಪ್ರಸ್ತುತ ಐಐಟಿ ಸಂಸ್ಥೆಯು ತನ್ನ ಕ್ಯಾಂಪಸ್ ನಲ್ಲಿ ಒಂದು ಸಮೀಕ್ಷೆ ನಡೆಸಲು ನಿರ್ಧರಿಸಿತು. ಸಮೀಕ್ಷೆಗಾಗಿ 45 ಪ್ರಶ್ನೆಗಳಿದ್ದ ಒಂದು ಸವಿಸ್ತಾರ ಪ್ರಶ್ನಾವಳಿಯನ್ನು ರಚಿಸಿ ಕ್ಯಾಂಪಸ್ ನ ವಿದ್ಯಾರ್ಥಿಗಳಿಗೆ ತಲುಪಿಸಲಾಯಿತು. ಅದು ವಿದ್ಯಾರ್ಥಿಗಳ ಕೈಸೇರಿದ ಬೆನ್ನಿಗೇ, ಅದರ ಕಳಪೆ ಗುಣಮಟ್ಟದ ಬಗ್ಗೆ ಮತ್ತು ಪ್ರಶ್ನೆಗಳು ತೀರಾ ಸಂವೇದನಾರಹಿತ ಹಾಗೂ ಪೂರ್ವಾಗ್ರಹಪೀಡಿತವಾಗಿರುವ ಬಗ್ಗೆ ಗಂಭೀರ ಆಕ್ಷೇಪಗಳು ಪ್ರಕಟವಾದವು. ಪ್ರಶ್ನಾವಳಿ ತಯಾರಿಸಿದವರು ಐಐಟಿ ಕ್ಯಾಂಪಸ್ ನೊಳಗೇ ಇದ್ದ ‘ಎಸ್ಸಿಎಸ್ಟಿ ಸೆಲ್’ ಜೊತೆ ಈ ಕುರಿತು ಯಾವುದೇ ಪೂರ್ವಭಾವಿ ಸಮಾಲೋಚನೆ ನಡೆಸಿರಲಿಲ್ಲ ಎಂಬ ಆಕ್ಷೇಪವೂ ಪ್ರಕಟವಾಯಿತು. ಇದು ಸತ್ಯವನ್ನು ಅರಿಯುವ ಬದಲು ಅದನ್ನು ಮುಚ್ಚಿಹಾಕುವ ಶ್ರಮ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂತು. ಈಹಿನ್ನೆಲೆಯಲ್ಲಿ ಕೆಲವೇ ಗಂಟೆಗಳೊಳಗೆ ಪ್ರಸ್ತುತ ಪ್ರಶ್ನಾವಳಿಯನ್ನು ಹಿಂಪಡೆಯಲಾಯಿತು.

ಹಿಂದೊಮ್ಮೆ ಇದೇ ಸಂಸ್ಥೆಯಲ್ಲಿ (ವರ್ಷ 2019-20ರಲ್ಲಿ) ಇಲ್ಲಿನ ವಿದ್ಯಾರ್ಥಿ ಪ್ರಕಾಶನ ಮಂಡಳಿಯ ವತಿಯಿಂದ ಒಂದು ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಕ್ಯಾಂಪಸ್ ನೊಳಗೆ ಪದವಿ ಮಟ್ಟದಲ್ಲಿ ಕಲಿಯುತ್ತಿರವ 545 ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ನಿರ್ದಿಷ್ಟ ವಿಷಯಗಳ ಕುರಿತು ಅವರ ಅಭಿಪ್ರಾಯ ಸಂಗ್ರಹಿಸಲಾಯಿತು. ಆಪೈಕಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿಭಾಗಕ್ಕೆ ಸೇರಿದ 75ಶೇ. ವಿದ್ಯಾರ್ಥಿಗಳು, ತಾವು ಕ್ಯಾಂಪಸ್ ನಲ್ಲಿ ಜಾತಿ ಆಧಾರಿತ ಚುಚ್ಚು ಮಾತುಗಳಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ಆಘಾತಕಾರಿ ಅಂಶವೇನೆಂದರೆ, ಅದೇ ಕ್ಯಾಂಪಸ್ ನಲ್ಲಿದ್ದ ಜನರಲ್ ಕೆಟಗರಿಯ ಅಥವಾ ಮೇಲ್ಜಾತಿಯ ವಿದ್ಯಾರ್ಥಿಗಳೊಡನೆ ಇಂತಹ ಕಿರುಕುಳದ ಕುರಿತು ವಿಚಾರಿಸಿದಾಗ ಅವರಲ್ಲಿ 59ಶೇ. ಮಂದಿ ಅದನ್ನು ತಪ್ಪೆಂದು ಖಂಡಿಸುವ ಬದಲು, ಒಂದೋ ಅದಕ್ಕೆ ತಮ್ಮ ಸಹಮತ ಪ್ರಕಟಿಸಿದ್ದರು ಅಥವಾ ಆ ಕುರಿತು ತಟಸ್ಥ ನಿಲುವು ತಾಳಿದ್ದರು.

2022ರಲ್ಲಿ ಮುಂಬೈ ಐಐಟಿಯಲ್ಲಿ, ಕ್ಯಾಂಪಸ್ ನೊಳಗೆ ನಡೆಯುವ ಜಾತಿ ಆಧಾರಿತ ತಾರತಮ್ಯದ ಕುರಿತು ಒಂದು ಸಮೀಕ್ಷೆ ನಡೆದಿತ್ತು. ಆ ಸಮೀಕ್ಷೆಯನ್ನು ಪ್ರಸ್ತುತ ಸಂಸ್ಥೆಯಲ್ಲಿದ್ದ ಎಸ್ಸಿಎಸ್ಟಿ ಸೆಲ್ ನಡೆಸಿತ್ತು. ಸಮೀಕ್ಷೆಯಲ್ಲಿ ಐಐಟಿಯಲ್ಲಿ ಕಲಿಯುತ್ತಿದ್ದ ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಸೇರಿದ37 ಶೇ. ವಿದ್ಯಾರ್ಥಿಗಳು, ಕ್ಯಾಂಪಸ್ ನಲ್ಲಿ ತಾವು ಮೇಲ್ಜಾತಿಯವರಿಂದ ಜಾತಿ ಆಧಾರಿತ ಕಿರುಕುಳ ಅನುಭವಿಸಿರುವುದಾಗಿ ದೂರಿದ್ದರು. ಈ ಸಮೀಕ್ಷೆಯಲ್ಲಿ ಜನರಲ್ ಕೆಟಗರಿಗೆ ಸೇರಿದ ವಿದ್ಯಾರ್ಥಿಗಳೊಡನೆಯೂ ಅವರ ಅನಿಸಿಕೆ ಮತ್ತು ಅನುಭವಗಳ ಕುರಿತು ವಿಚಾರಿಸಲಾಗಿತ್ತು. ಅವರಲ್ಲಿ ಸುಮಾರು 50 ಶೇ. ವಿದ್ಯಾರ್ಥಿಗಳು, ತಾವು ಜಾತಿ ಆಧಾರಿತ ಚುಚ್ಚು ಮಾತುಗಳನ್ನು ಆಡಿರುವುದಾಗಿ ಒಪ್ಪಿಕೊಂಡಿದ್ದರು. ಅವರಲ್ಲಿ 15ಶೇ. ವಿದ್ಯಾರ್ಥಿಗಳಂತೂ ತಾವು ಉದ್ದೇಶಪೂರ್ವಕವಾಗಿಯೇ ಜಾತಿಯಾಧಾರಿತ ಚುಚ್ಚುಮಾತುಗಳನ್ನು ಆಡಿರುವುದಾಗಿ ಹೇಳಿಕೊಂಡಿದ್ದರು. 11ಶೇ. ವಿದ್ಯಾರ್ಥಿಗಳು, ಸಂಸ್ಥೆಯಲ್ಲಿ ಜಾತಿ ಆಧಾರಿತ ಚುಚ್ಚುಮಾತುಗಳನ್ನಾಡುವ ಪ್ರೊಫೆಸರ್ ಗಳನ್ನು ಮತ್ತು ಆಡಳಿತ ಸಿಬ್ಬಂದಿಯನ್ನು ತಾವು ಗುರುತಿಸುತ್ತೇವೆ ಎಂದೂ ಹೇಳಿದ್ದರು.

ಒಂದು ಕ್ರೂರ ತಮಾಷೆಯೇನೆಂದರೆ, ಎಸ್ಸಿಎಸ್ಟಿ ಸೆಲ್ ಕಡೆಯಿಂದ ಆ ಸಮೀಕ್ಷೆ ನಡೆದು ಅದರ ವರದಿಯನ್ನು ಸಂಸ್ಥೆಗೆ ಸಲ್ಲಿಕೆಯಾದ ಬಳಿಕವೂ ಬಹುಕಾಲ ಅದನ್ನು ಬಿಡುಗಡೆಗೊಳಿಸಲಾಗಿರಲಿಲ್ಲ. ಮುಂದಿನ ವರ್ಷ ಆ ಕ್ಯಾಂಪಸ್ ನಲ್ಲಿ ದರ್ಶನ ಸೋಲಂಕಿ ಎಂಬ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಾಗ, ಜಾತಿ ತಾರತಮ್ಯದ ಆರೋಪವು ದೊಡ್ಡಪ್ರಮಾಣದಲ್ಲಿ ಚರ್ಚೆಗೆ ಬಂದಿತ್ತು. ಆ ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ಪ್ರಸ್ತುತ ಸಮೀಕ್ಷೆಯ ವರದಿಯ ಆಯ್ದ ಭಾಗಗಳು ಅನಧಿಕೃತವಾಗಿ ಅನಾವರಣಗೊಂಡಿದ್ದವು.

ದೇಶದ ವಿದ್ಯಾಲಯಗಳಲ್ಲಿ ಎಸ್ಸಿ, ಎಸ್ಟಿ ಅಥವಾ ಒಬಿಸಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಎದುರಿಸಬೇಕಾಗುವ ಪ್ರತಿಕೂಲ ಸನ್ನಿವೇಶಗಳ ಕುರಿತು ಹಲವು ಸಮೀಕ್ಷೆ, ಅಧ್ಯಯನಗಳೆಲ್ಲಾ ನಡೆದಿವೆ. ಅವುಗಳಿಂದ ತಿಳಿದು ಬಂದ ಪ್ರಕಾರ, ಪ್ರಸ್ತುತ ವರ್ಗಗಳ ವಿದ್ಯಾರ್ಥಿಗಳು ಕ್ಯಾಂಪಸ್ ಗಳ ಒಳಗೂ ಹೊರಗೂ ನಿಂದನೆ, ಅಪಮಾನ, ದ್ವೇಷ ಮತ್ತು ಬಹಿಷ್ಕಾರವನ್ನು, ಮಾತ್ರವಲ್ಲ, ಸಾಂಸ್ಥಿಕವಾದ ಅಡೆತಡೆಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಪ್ರಸ್ತುತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವು ವಿವಿಧ ಸ್ವರೂಪಗಳಲ್ಲಿ ನಡೆಯುತ್ತದೆ. ಉದಾ:

ವಿದ್ಯಾರ್ಥಿಯ ಮೌಲ್ಯಮಾಪನ, ಪ್ರಾಕ್ಟಿಕಲ್ಸ್ ನ ಅಂಕಗಳು, ಮುಖತಃ ಪರೀಕ್ಷೆಯ ಫಲಿತಾಂಶ ಇತ್ಯಾದಿಗಳು ಶಿಕ್ಷಕರ ಕೈಯಲ್ಲಿದ್ದಾಗಲೆಲ್ಲಾ ಪ್ರಸ್ತುತ ವರ್ಗಗಳ ವಿರುದ್ಧ ಪೂರ್ವಾಗ್ರಹ ಉಳ್ಳ ಶಿಕ್ಷಕರು ಅವರಿಗೆ ಅವರ ಅರ್ಹತೆಗಿಂತ ಕಡಿಮೆ ಅಂಕ ಅಥವಾ ಶ್ರೇಣಿ ನೀಡುತ್ತಾರೆ.

ಮೀಸಲಾತಿ ಮೂಲಕ ದಾಖಲಾತಿ ಪಡೆದವರನ್ನು ಉದ್ದೇಶಪೂರ್ವಕವಾಗಿ ‘ಕೋಟಾ ವಿದ್ಯಾರ್ಥಿ’ ಗಳೆಂದು ಮತ್ತು ಜನರಲ್ ಕೆಟಗರಿಯವರನ್ನು ‘ಮೆರಿಟ್ ವಿದ್ಯಾರ್ಥಿ’ ಗಳೆಂದು ಗುರುತಿಸಲಾಗುತ್ತದೆ ಮತ್ತು ಪದೇ ಪದೇ ಬಹಿರಂಗವಾಗಿ ಅದನ್ನು ಅವರಿಗೆ ನೆನಪಿಸಲಾಗುತ್ತದೆ.

ಮೇಲ್ಜಾತಿಗಳಿಗೆ ಸೇರಿದ ಶಿಕ್ಷಕರು ವಂಚಿತ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಬೇಕಾದ, ಸಹಜವಾದ ವೃತ್ತಿಪರ ಬೆಂಬಲ, ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ನೀಡಲು ನಿರಾಕರಿಸುತ್ತಾರೆ ಅಥವಾ ಅವರ ಪ್ರಗತಿಯ ಬಗ್ಗೆ ನಿರಾಸಕ್ತಿ ತೋರುತ್ತಾರೆ.

ಕೋರ್ಸ್ ಆರಂಭವಾದ ಮೊದಲ ಕೆಲವು ತಿಂಗಳ ಕಾಲ ರ್ಯಾಗಿಂಗ್ ಹೆಸರಲ್ಲಿ ಪ್ರಸ್ತುತ ವರ್ಗಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಸತಾಯಿಸಲಾಗುತ್ತದೆ.

ಮೇಲ್ಜಾತಿಯ ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ, ಎಸ್ಸಿ ಎಸ್ಟಿ ಅಥವಾ ಒಬಿಸಿ ವರ್ಗಗಳ ವಿದ್ಯಾರ್ಥಿಗಳ ಜೊತೆ ಕೋಣೆ ಹಂಚಿಕೊಳ್ಳಲು, ಮೆಸ್ ಗಳಲ್ಲಿ ಅವರ ಜೊತೆ ಒಂದೇ ಮೇಜಿನಲ್ಲಿ ಊಟ ಮಾಡಲು ಮತ್ತು ಲೈಬ್ರೆರಿ ಗಳಲ್ಲಿ ಅವರ ಜೊತೆ ಕೂತು ಅಧ್ಯಯನ ಮಾಡಲು ನಿರಾಕರಿಸುತ್ತಾರೆ.

ಕ್ಲಾಸಿನ ಒಳಗೂ ಹೊರಗೂ ವಿದ್ಯಾರ್ಥಿಗಳನ್ನು ಜಾತಿ ಆಧಾರಿತ ಅಡ್ಡಹೆಸರುಗಳಿಂದ ಕರೆಯಲಾಗುತ್ತದೆ ಅಥವಾ ಅವರ ಭಾಷೆ ಅಥವಾ ಮಾತಿನ ಧಾಟಿಯ ಕುರಿತಾಗಿ ವ್ಯಂಗ್ಯ ಮಾತುಗಳನ್ನಾಡಲಾಗುತ್ತದೆ.

ಹೊಸ ಪರಿಸರ, ಅಪರಿಚಿತ ವಾತಾವರಣ ಮತ್ತು ಹೊಸ ಪಠ್ಯಕ್ರಮದ ಒತ್ತಡ - ಹೀಗೆ ಹಲವು ಬಗೆಯ ಒತ್ತಡಗಳಿಂದ ನರಳುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಜಾತಿ ಅಥವಾ ಮೆರಿಟ್ ಹೆಸರಲ್ಲಿ ಮತ್ತಷ್ಟು ಮಾನಸಿಕ ಒತ್ತಡ ಹೇರಲಾಗುತ್ತದೆ.

ತಮ್ಮ ವಿರುದ್ಧ ಯಾರಿಗಾದರೂ ಯಾವುದೇ ರೀತಿಯ ದೂರು ಸಲ್ಲಿಸಿದರೆ ಉಗ್ರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಹಿರಿಯ ವಿದ್ಯಾರ್ಥಿಗಳು ಕಿರಿಯರು ಮತ್ತು ಹೊಸಬರನ್ನು ಬೆದರಿಸುತ್ತಾರೆ.

ಮೇಲ್ಜಾತಿಯ ವಿದ್ಯಾರ್ಥಿಗಳು, ಕ್ಯಾಂಪಸ್ನೊಳಗೆ ವಂಚಿತ ವರ್ಗದ ವಿದ್ಯಾರ್ಥಿಗಳು ಯಾರೆಂಬುದನ್ನು ಮತ್ತು ಅವರು ಯಾವ ಜಾತಿಗೆ ಸೇರಿದವರೆಂಬುದನ್ನು ಗುರುತಿಸುವುದಕ್ಕಾಗಿ ಹಲವು ವಿಧಾನಗಳನ್ನು ಬಳಸುತ್ತಾರೆ. ಉದಾ: ಹೊಸದಾಗಿ ಬಂದ ವಿದ್ಯಾರ್ಥಿಗಳೊಡನೆ, ಎಂಟ್ರೆನ್ಸ್ ಪರೀಕ್ಷ್ಷೆಯಲ್ಲಿ ನಿಮಗೆ ಯಾವ ರ್ಯಾಂಕ್ ಸಿಕ್ಕಿತ್ತು? ಎಂದು ಪದೇ ಪದೇ ವಿಚಾರಿಸುತ್ತಾರೆ. ಆ ಮೂಲಕ ಅವರು, ಮೀಸಲಾತಿಯ ಫಲಾನುಭವಿಗಳು ಅಥವಾ ಎಸ್ಸಿ, ಎಸ್ಟಿ, ಒಬಿಸಿ ಜಾತಿಗಳಿಗೆ ಸೇರಿದವರು ಯಾರೆಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.

Tags

highest educational institutions
share
ಶಂಬೂಕ
ಶಂಬೂಕ
Next Story
X