Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ‘ಪರೋಕ್ಷ ಸಮೂಹ ಹತ್ಯೆ’ ನಡೆಸಿದವರಿಗೆ...

‘ಪರೋಕ್ಷ ಸಮೂಹ ಹತ್ಯೆ’ ನಡೆಸಿದವರಿಗೆ ಯಾಕಿಲ್ಲ ಮರಣದಂಡನೆ?

ಶಂಬೂಕಶಂಬೂಕ9 Oct 2025 11:09 AM IST
share
‘ಪರೋಕ್ಷ ಸಮೂಹ ಹತ್ಯೆ’ ನಡೆಸಿದವರಿಗೆ ಯಾಕಿಲ್ಲ ಮರಣದಂಡನೆ?

ನಮ್ಮಲ್ಲಿ ಸಾಮಾನ್ಯವಾಗಿ ಯಾರಾದರೊಬ್ಬ ಪ್ರಮುಖ ಧಾರ್ಮಿಕ ನಾಯಕ, ರಾಜಕೀಯ ಮುಖಂಡ ಅಥವಾ ಯಾವುದೇ ಸೆಲೆಬ್ರಿಟಿಯ ಹತ್ಯೆ ಸಂಭವಿಸಿದರೆ ಅದರ ಬೆನ್ನಿಗೇ ಭಾರೀ ತನಿಖೆ, ವಿಚಾರಣೆ, ಹತ್ತಾರು ಮಂದಿಯ ಬಂಧನ ಇತ್ಯಾದಿಯೆಲ್ಲಾ ನಡೆದು ಬಿಡುತ್ತವೆ. ಆದರೆ ಧಾರ್ಮಿಕ ಅಥವಾ ರಾಜಕೀಯ ನಾಯಕರ ಕರೆಗೆ ಓಗೊಟ್ಟು ಕುರಿಗಳಂತೆ ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುವ ಅಮಾಯಕ ಮಂದಿಯ ಜೀವಗಳಿಗೆ ಯಾವುದೇ ಬೆಲೆ ಯಾಕಿಲ್ಲ? ಅವರ ಪ್ರಾಣಗಳ ಜೊತೆ ಚೆಲ್ಲಾಟವಾಡಿದವರಿಗೆ ಯಾವುದೇ ಉತ್ತರದಾಯಿತ್ವ ಯಾಕಿಲ್ಲ? ಒಬ್ಬನನ್ನು ಕೊಂದವನು ಹಂತಕನೆನಿಸಿಕೊಳ್ಳುವಾಗ ಹತ್ತಾರು ಮಂದಿಯ ಕೊಲೆಗೆ ಕಾರಣರಾದವರು ಹೊಣೆಮುಕ್ತರಾಗುವುದು ಹೇಗೆ?

ಒಂದು ದುರಂತದಿಂದ ಪಾಠ ಕಲಿಯಲು ನಿರಾಕರಿಸುವುದೆಂದರೆ, ಅದಕ್ಕಿಂತ ದೊಡ್ಡ ದುರಂತವನ್ನು ಆಮಂತ್ರಿಸುವುದೆಂದೇ ಅರ್ಥ. ಈ ರೀತಿ ದುರಂತಗಳನ್ನು ಹಾರ್ದಿಕವಾಗಿ ಆಮಂತ್ರಿಸುವ ಕೆಲಸವನ್ನು ನಾವು ಭಾರತೀಯರು ಪದೇಪದೇ ಮಾಡುತ್ತೇವೆ. ನಿವಾರಣೀಯವಾದ ಸಾಮೂಹಿಕ ದುರಂತಗಳನ್ನು ನಾವು ಮತ್ತೆ ಮತ್ತೆ ನಮ್ಮ ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತೇವೆ.

ಭಾರತದಲ್ಲಿ ನಿಷ್ಕರುಣ ಸಾಮೂಹಿಕ ನರಬಲಿಯ ಹಲವಾರು ಪ್ರಕಾರಗಳು ಬಹುಕಾಲದಿಂದ ನಿರಂತರ ಆಚರಣೆಯಲ್ಲಿವೆ. ಕಳೆದ ಸೆಪ್ಟಂಬರ್ 27ರಂದು ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಸಂಭವಿಸಿದ ದುರಂತವು ಅಂತಹ ಒಂದು ಪ್ರಕಾರದ ಕಡೆಗೆ ದೇಶದ ಗಮನ ಸೆಳೆದಿದೆ.

ತಮಿಳುನಾಡಿನ ಕರೂರು ಜಿಲ್ಲೆಯ ವೇಲುಸ್ವಾಮಿಪುರಮ್ ನಲ್ಲಿ ಪ್ರಸಿದ್ಧ ಸಿನೆಮಾ ನಟ, ಟಿವಿಕೆ ಪಕ್ಷದ ಸ್ಥಾಪಕ ಹಾಗೂ ರಾಜಕೀಯ ಮಹತ್ವಾಕಾಂಕ್ಷಿ ವಿಜಯ್ ಅವರ ರೋಡ್ ಶೋ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು. ಈ ಮಧ್ಯೆ ಜನಜಂಗುಳಿ ನಿಯಂತ್ರಣ ಮೀರಿ ಗೊಂದಲ ಉಂಟಾಯಿತು. ಜನರು ಚೆಲ್ಲಾಪಿಲ್ಲಿಯಾದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮಾನವ ಜೀವಗಳು ಆಹುತಿಯಾದವು. ಹತ್ತಾರು ಮಂದಿ ತೀವ್ರ ಗಾಯಗೊಂಡರು.

ಇಂತಹ ಘಟನೆಗಳು ನಮ್ಮ ದೇಶದಲ್ಲಿ ವಿರಳವಲ್ಲ. ಪ್ರಚಲಿತ ವರ್ಷ ಮುಗಿಯುವುದಕ್ಕೆ ಇನ್ನೂ ಕೆಲವು ತಿಂಗಳು ಬಾಕಿ ಇದೆ. ಈಗಾಗಲೇ ಈ ವರ್ಷ ವಿವಿಧೆಡೆ ವಿವಿಧ ಸನ್ನಿವೇಶಗಳಲ್ಲಿ ಕಾಲ್ತುಳಿತಕ್ಕೆ ತುತ್ತಾಗಿ ಸತ್ತ ಮಾನವರ ಸಂಖ್ಯೆ 120 ಮೀರಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (NCRB) ವರದಿಯನುಸಾರ ಈ ಶತಮಾನದಲ್ಲಿ 2001ರಿಂದ 2022ವರೆಗಿನ ಅವಧಿಯಲ್ಲಿ ಭಾರತದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 3,074 ಮಂದಿ ಮಾನವರು ಪ್ರಾಣ ಕಳೆದುಕೊಂಡಿದ್ದಾರೆ.

* ಕಳೆದ ಜೂನ್ ತಿಂಗಳಲ್ಲಷ್ಟೇ, ನಮ್ಮ ಬೆಂಗಳೂರಲ್ಲಿ ಕ್ರಿಕೆಟ್ ತಂಡವೊಂದರ ವಿಜಯವನ್ನು ಸಂಭ್ರಮಿಸಲು ಸೇರಿದ್ದ ಜನಜಾತ್ರೆಯು ಅಸ್ತವ್ಯಸ್ತವಾಗಿ, ಕಾಲ್ತುಳಿತದಲ್ಲಿ 11ಜೀವಗಳು ಬಲಿಯಾಗಿದ್ಧವು.

* ಈ ವರ್ಷ ಜನವರಿಯಲ್ಲಿ ಆಂಧ್ರಪ್ರದೇಶದ ತಿರುಪತಿ ಮಂದಿರದಲ್ಲಿ ವೈಕುಂಠ ಏಕಾದಶಿ ಸಂದರ್ಭದಲ್ಲಿ ಸೇರಿದ್ದ ಸಭೆಯಲ್ಲಿ ಕಾಲ್ತುಳಿತಕ್ಕೆ 6 ಮಂದಿ ಬಲಿಯಾಗಿದ್ದರು.

* ಇದೇ ವರ್ಷ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳದ ಸಂದರ್ಭದಲ್ಲಿ, ಗಂಗಾ-ಜಮುನಾ ಸಂಗಮದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನಸಂದಣಿಯಲ್ಲಿ ಗೊಂದಲ ಮೂಡಿ ಸಂಭವಿಸಿದ ಕಾಲ್ತುಳಿತದಲ್ಲಿ 37 ಮಾನವ ಜೀವಗಳು ಬಲಿಯಾಗಿದ್ದವು.

* ಅದಕ್ಕೆ ಮುನ್ನ ಕುಂಭಮೇಳಕ್ಕೆ ಹೋಗಲೆಂದು ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಜನಜಂಗುಳಿಯಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 18 ಜೀವಗಳು ಬಲಿಯಾಗಿದ್ದವು.

ಬಿಬಿಸಿ ವರದಿಯೊಂದರ ಪ್ರಕಾರ ಈ ವರ್ಷದ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ನಾಲ್ಕು ಭಿನ್ನ ಘಟನೆಗಳಲ್ಲಿ ಒಟ್ಟು 82 ಜೀವಗಳು ಬಲಿಯಾಗಿವೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಾಕಾರ್ ಹರಿ ಎಂಬೊಬ್ಬ ಚಮತ್ಕಾರಿ ಬಾಬಾನ ಬೆಂಬಲಿಗರು ಒಂದು ‘ಸತ್ಸಂಗ್’ ಅಥವಾ ಪ್ರಾರ್ಥನಾ ಸಭೆಯನ್ನು ಏರ್ಪಡಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನಜಾತ್ರೆ ನಿಯಂತ್ರಣ ಮೀರಿ ಕಾಲ್ತುಳಿತವಾಗಿ 100ಕ್ಕೂ ಹೆಚ್ಚು ಮಂದಿ ಪ್ರಾಣ ತೆರಬೇಕಾಯಿತು.

2023 ಮಾರ್ಚ್‌ನಲ್ಲಿ ಮಧ್ಯಪ್ರದೇಶದ ಇಂದೋರ್ ಸಮೀಪದ ಮಂದಿರವೊಂದರಲ್ಲಿ ರಾಮನವಮಿಯ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ‘ಹವನ’ ಕಾರ್ಯಕ್ರಮವೊಂದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲ್ಲಿ ಉಂಟಾದ ಗೊಂದಲದಲ್ಲಿ 36 ಮಂದಿ ಅಸುನೀಗಿದರು.

ಅಂದ ಹಾಗೆ, ಮಹಾ ಕುಂಭ ಮೇಳಕ್ಕೂ ಈ ರೀತಿ ಕಾಲ್ತುಳಿತದ ರೂಪದಲ್ಲಿ ನಡೆಯುವ ಮುಗ್ಧ ಜನರ ಹತ್ಯಾಕಾಂಡಕ್ಕೂ ತುಂಬಾ ಹಳೆಯ ಭದ್ರ ಸಂಬಂಧವಿದೆ.

* 1954ರಲ್ಲಿ ಅಲ್ಲಹಾಬಾದ್ (ಈಗ ಪ್ರಯಾಗರಾಜ್) ಕುಂಭ ಮೇಳದಲ್ಲಿ ಪವಿತ್ರ ಸ್ನಾನಕ್ಕೆಂದು ಇಳಿದ ಬೃಹತ್ ಜನಜಂಗುಳಿಯಲ್ಲಿ ಗೊಂದಲ ಮೆರೆದು ಸುಮಾರು 800 ಮಂದಿ ಕಾಲ್ತುಳಿತಕ್ಕೆ ಸಿಕ್ಕಿ ಅಥವಾ ನದಿಯಲ್ಲಿ ಮುಳುಗಿ ಹತರಾಗಿದ್ದರು.

* 1986ರಲ್ಲಿ ಹರಿದ್ವಾರದಲ್ಲಿ ಕುಂಭಮೇಳದ ವೇಳೆ ನಡೆದ ಕಾಲ್ತುಳಿತದಲ್ಲಿ 200 ಮಾನವ ಜೀವಗಳು ಆಹುತಿಯಾಗಿದ್ದವು.

* 2003ರಲ್ಲಿ ನಾಸಿಕ್‌ನಲ್ಲಿ ಕುಂಭ ಮೇಳದ ವೇಳೆ ಗೋದಾವರಿ ನದಿಯಲ್ಲಿ ಪವಿತ್ರ ಸ್ನಾನಕ್ಕೆಂದು ಹೋದವರಲ್ಲಿ 39 ಮಂದಿ ಕಾಲ್ತುಳಿತಕ್ಕೆ ಸಿಕ್ಕಿ ಸತ್ತಿದ್ದರು.

* 2013ರಲ್ಲಿ ಅಲ್ಲಹಾಬಾದ್ ರೈಲ್ವೆ ನಿಲ್ದಾಣದ ಕಾಲ್ಸೇತುವೆ ಕುಸಿದಾಗ, ಕುಂಭಮೇಳಕ್ಕೆಂದು ಅಲ್ಲಿಗೆ ಹೋಗಿದ್ದ ತೀರ್ಥ ಯಾತ್ರಿಗಳ ಪೈಕಿ 42 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಹೀಗೆ ಜನಜಂಗುಳಿ ವಿಪರೀತವಾಗಿ, ನಿಯಂತ್ರಣ ಮೀರಿ ಹತ್ತು ಹಲವು ಮಾನವರ ಪ್ರಾಣಹರಣವಾಗುವ ಪ್ರಕರಣಗಳು ಅತ್ಯಧಿಕವಾಗಿ ಧಾರ್ಮಿಕ ಮೇಳಗಳಲ್ಲಿ, ಡೋಂಗಿ ಬಾಬಾಗಳ ಉತ್ಸವಗಳಲ್ಲಿ, ಅದು ಬಿಟ್ಟರೆ ರಾಜಕೀಯ ರ್ಯಾಲಿಗಳಲ್ಲಿ ಮತ್ತು ಸಿನೆಮಾ, ಕ್ರೀಡೆ ಇತ್ಯಾದಿಗಳಿಗೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಿ ನಡೆಯುತ್ತವೆ. ಪುಢಾರಿಗಳು, ಪುರೋಹಿತರು, ಸಿನೆಮಾ ತಾರೆಯರು, ಕ್ರೀಡಾಹೀರೊಗಳು ಮುಂತಾದವರು ಆಯೋಜಿಸುವ ಈ ಬಗೆಯ ‘ಪರೋಕ್ಷ ಸಮೂಹ ಹತ್ಯೆ’ಯಲ್ಲಿ ಸಾಯುವವರು ಹೆಚ್ಚಾಗಿ ಬಡ ಹಾಗೂ ಕೆಳ ಮಧ್ಯಮ ವರ್ಗದವರಾಗಿರುತ್ತಾರೆ. ಈ ಮುಗ್ಧ ಭಕ್ತರು ಮತ್ತು ಅಭಿಮಾನಿಗಳನ್ನು ಆಮಂತ್ರಿಸಿದವರಿಗೆ, ತಮ್ಮನ್ನು ನೋಡಲು ಅಥವಾ ತಮ್ಮ ಕರೆಗೆ ಓಗೊಟ್ಟು ಕುರಿಗಳಂತೆ ಧಾವಿಸಿಬರುವ ಮನುಷ್ಯರ ಪರಿಚಯವಿರುವುದಿಲ್ಲ. ಮಾತ್ರವಲ್ಲ, ಅವರ ಜೀವಗಳ ಬಗ್ಗೆ ಯಾವುದೇ ಕಾಳಜಿಯಂತೂ ಖಂಡಿತ ಇರುವುದಿಲ್ಲ.

ಮೇಲೆ ಪ್ರಸ್ತಾಪಿಸಿದ ದುರಂತಗಳ ಪೈಕಿ ಹೆಚ್ಚಿನವುಗಳಲ್ಲಿ ಎದ್ದುಕಾಣುವ ಒಂದು ಸಮಾನ ಅಂಶವೇನೆಂದರೆ ಅವೆಲ್ಲವೂ ನಿರೀಕ್ಷಿತ ಹಾಗೂ ನಿವಾರಣೀಯ ದುರಂತಗಳಾಗಿದ್ದವು. ದೂರದೃಷ್ಟಿಯೊಂದಿಗೆ ಸಂಘಟಕರು ಒಂದಷ್ಟು ಸಿದ್ಧತೆ ನಡೆಸಿದ್ದರೆ ಮತ್ತು ಸ್ಥಳೀಯ ಹಾಗೂ ಜಿಲ್ಲಾಡಳಿತವು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೆ ಖಂಡಿತವಾಗಿಯೂ ತಪ್ಪಿಸಬಹುದಾದ ದುರಂತಗಳಾಗಿದ್ದವು. ಎಲ್ಲ ಸಭೆ ಸಮಾರಂಭಗಳ ಆಯೋಜಕರು ಮತ್ತು ಕಾನೂನು ವ್ಯವಸ್ಥೆ ಕಾಪಾಡುವ ಹೊಣೆಯುಳ್ಳ ಅಧಿಕಾರಿಗಳು, ಪುರೋಹಿತರು, ಪುಢಾರಿಗಳು, ಸೆಲೆಬ್ರಿಟಿಗಳು ಹಾಗೂ ವಿಐಪಿಗಳ ಆತಿಥ್ಯ ಮತ್ತು ಅವರ ಭದ್ರತೆಯ ಬಗ್ಗೆ ವಹಿಸುವ ಮುತುವರ್ಜಿಯ ಒಂದಂಶವನ್ನಾದರೂ ಜನಸಾಮಾನ್ಯರ ರಕ್ಷಣೆಗೆಂದು ಮೀಸಲಿಟ್ಟಿದ್ದರೆ ಪ್ರಸ್ತುತ ಹತ್ಯಾಕಾಂಡಗಳನ್ನು ಖಂಡಿತ ನಿವಾರಿಸಬಹುದಿತ್ತು.

ಜನರು ಸೇರುವ ಎಲ್ಲ ಸ್ಥಳಗಳ ಬಗ್ಗೆ, ಅಲ್ಲಿ ಹೆಚ್ಚೆಂದರೆ ಎಷ್ಟು ಜನ ಸುರಕ್ಷಿತವಾಗಿ ಸೇರಿ ಸುರಕ್ಷಿತವಾಗಿ ಮರಳಬಹುದು ಎಂಬ ಬಗ್ಗೆ ಒಂದು ಸಾಮಾನ್ಯ ಅಂದಾಜಿರುತ್ತದೆ. ತಜ್ಞರ ಸೇವೆ ಪಡೆದರೆ ಕರಾರುವಾಕ್ಕಾದ ಲೆಕ್ಕ ಸಿಗುತ್ತದೆ. ಸ್ಥಳದ ವಿಸ್ತೀರ್ಣ ಮಾತ್ರವಲ್ಲ, ನೀರು, ಭೋಜನ, ಶೌಚಾಲಯ ಇತ್ಯಾದಿ ಸವಲತ್ತುಗಳು, ಆಸನ ವ್ಯವಸ್ಥೆ, ಅಲ್ಲಿಗೆ ಬಂದು ಹೋಗುವುದಕ್ಕೆ ಲಭ್ಯ ದಾರಿಗಳು, ಆ ದಾರಿಗಳ ಧಾರಣಾ ಸಾಮರ್ಥ್ಯ, ಸ್ಥಳದಲ್ಲಿರುವ ಸೇತುವೆ, ಚಪ್ಪರ ಇತ್ಯಾದಿಗಳ ಸಾಮರ್ಥ್ಯ, ಸಭೆಗೆ ಬರಬಹುದಾದ ವಾಹನಗಳ ಸಂಖ್ಯೆ, ಪಾರ್ಕಿಂಗ್ ಸೌಲಭ್ಯ, ಎಲ್ಲದಕ್ಕೂ ಸರದಿಯ ಸಾಲು, ಟೋಕನ್ ಇತ್ಯಾದಿ ಏರ್ಪಾಡು ಹೀಗೆ ವಿವಿಧ ಅವಶ್ಯಕ ಸವಲತ್ತುಗಳ ಬಗ್ಗೆ ಪೂರ್ವಭಾವಿಯಾಗಿ ಅಂದಾಜು ಮಾಡಿ ಅದಕ್ಕೆಲ್ಲ ಬೇಕಾದ ಏರ್ಪಾಡುಗಳನ್ನು ಮಾಡಲು ಸಾಧ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾರಂಭದುದ್ದಕ್ಕೂ ಜನಸಂಚಾರವನ್ನು ನಿಯಂತ್ರಣದಲ್ಲಿಟ್ಟು ಶಿಸ್ತನ್ನು ಕಾಯ್ದುಕೊಳ್ಳುವುದಕ್ಕೆ ಲಭ್ಯವಿರುವ ನುರಿತ, ಅನುಭವಸ್ಥ ಭದ್ರತಾ ಸಿಬ್ಬಂದಿ ಅಥವಾ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಸಂಖ್ಯೆ, ಎಲ್ಲ ಪ್ರಯತ್ನಗಳ ಹೊರತಾಗಿಯೂ ಆಕಸ್ಮಿಕವಾಗಿ ಸಂಭವಿಸಬಹುದಾದ ಬೆಂಕಿ, ಮಳೆ, ಚಂಡಮಾರುತ, ಭೂಕಂಪ ಇತ್ಯಾದಿ ದುರಂತಗಳನ್ನು ನಿಭಾಯಿಸುವುದಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಸಾಧ್ಯವಿದೆ. ಪ್ರಸ್ತುತ ಎಲ್ಲ ಸವಲತ್ತು ಮತ್ತು ಸಿದ್ಧತೆಗಳನ್ನು ಗಣನೆಗೆ ತೆಗೆದು ಕೊಂಡು ಎಷ್ಟು ಜನರನ್ನು ಆಮಂತ್ರಿಸಬೇಕು? ಎಷ್ಟು ಮಂದಿಗೆ ಸಭಾಂಗಣವನ್ನು ಪ್ರವೇಶಿಸಲು ಅನುಮತಿಸಬೇಕು? ಹೊರಗೆ ಉಳಿದವರನ್ನು ಹೇಗೆ ನಿಭಾಯಿಸಬೇಕು? ಎಂಬುದನ್ನೆಲ್ಲಾ ನಿರ್ಧರಿಸುವುದು ಪ್ರಾಥಮಿಕವಾಗಿ ಸಂಘಟಕರ ಕರ್ತವ್ಯ. ಅವರು ಆ ತಮ್ಮ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಆ ವಿಷಯದಲ್ಲಿ ಎಲ್ಲೂ ಯಾವುದೇ ವೈಫಲ್ಯ ಸಂಭವಿಸದಂತೆ ನೋಡಿಕೊಳ್ಳಬೇಕಾದುದು ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಪ್ರದೇಶದ ಸರಕಾರಿ ಅಧಿಕಾರಿಗಳ ಹೊಣೆಗಾರಿಕೆ. ನಮ್ಮ ಸಮಾಜದಲ್ಲಿ ಮಾನವ ಜೀವಗಳಿಗೆ ಏನಾದರೂ ಬೆಲೆ ಇದೆ ಎಂದಾದರೆ ದೊಡ್ಡ ಸಂಖ್ಯೆಯಲ್ಲಿ ಮಾನವರನ್ನು ಆಮಂತ್ರಿಸುವವರು ಅಥವಾ ಆಕರ್ಷಿಸುವವರು ಅವರಿಗೆ ಲಗ್ಸುರಿ ಸವಲತ್ತುಗಳನ್ನು ಒದಗಿಸದಿದ್ದರೆ ಕನಿಷ್ಠ ಇಷ್ಟಾದರೂ ಪೂರ್ವ ಸಿದ್ಧತೆ ಮಾಡಿಕೊಂಡಿರಬೇಕು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಅವರಿಂದ ಅಷ್ಟನ್ನು ಮಾಡಿಸಲೇಬೇಕು. ದುರದೃಷ್ಟವಶಾತ್, ಇಂತಹ ಯಾವುದೇ ಸಿದ್ಧತೆ ನಡೆಸದೆ ಜನಜಾತ್ರೆ ಸೇರಿಸುವವರು ಮತ್ತು ಅದನ್ನು ಅನುಮತಿಸುವ ಅಧಿಕಾರಿಗಳು ನೂರಾರು ಬಡ ಜನರ ಕ್ರೂರ ಸಾವಿಗೆ ಕಾರಣರಾಗುತ್ತಿದ್ದಾರೆ ಮತ್ತು ತಮ್ಮ ದೃಷ್ಟಿಯಲ್ಲಿ ಮಾನವ ಜೀವಗಳಿಗೆ ಚಿಕ್ಕಾಸಿನ ಬೆಲೆಯೂ ಇಲ್ಲ ಎಂದು ಜಗತ್ತಿನ ಮುಂದೆ ಸಾರುತ್ತಿದ್ದಾರೆ.

ನಮ್ಮಲ್ಲಿ ಸಾಮಾನ್ಯವಾಗಿ ಯಾರಾದರೊಬ್ಬ ಪ್ರಮುಖ ಧಾರ್ಮಿಕ ನಾಯಕ, ರಾಜಕೀಯ ಮುಖಂಡ ಅಥವಾ ಯಾವುದೇ ಸೆಲೆಬ್ರಿಟಿಯ ಹತ್ಯೆ ಸಂಭವಿಸಿದರೆ ಅದರ ಬೆನ್ನಿಗೇ ಭಾರೀ ತನಿಖೆ, ವಿಚಾರಣೆ, ಹತ್ತಾರು ಮಂದಿಯ ಬಂಧನ ಇತ್ಯಾದಿಯೆಲ್ಲಾ ನಡೆದು ಬಿಡುತ್ತವೆ. ಆದರೆ ಧಾರ್ಮಿಕ ಅಥವಾ ರಾಜಕೀಯ ನಾಯಕರ ಕರೆಗೆ ಓಗೊಟ್ಟು ಕುರಿಗಳಂತೆ ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುವ ಅಮಾಯಕ ಮಂದಿಯ ಜೀವಗಳಿಗೆ ಯಾವುದೇ ಬೆಲೆ ಯಾಕಿಲ್ಲ? ಅವರ ಪ್ರಾಣಗಳ ಜೊತೆ ಚೆಲ್ಲಾಟವಾಡಿದವರಿಗೆ ಯಾವುದೇ ಉತ್ತರದಾಯಿತ್ವ ಯಾಕಿಲ್ಲ? ಒಬ್ಬನನ್ನು ಕೊಂದವನು ಹಂತಕನೆನಿಸಿಕೊಳ್ಳುವಾಗ ಹತ್ತಾರು ಮಂದಿಯ ಕೊಲೆಗೆ ಕಾರಣರಾದವರು ಹೊಣೆಮುಕ್ತರಾಗುವುದು ಹೇಗೆ? ಅಕ್ಷರಶಃ ಹತ್ತಾರು ಮಂದಿಯ ಹತ್ಯೆಗೆ ಕಾರಣರಾದ ಧಾರ್ಮಿಕ ಅಥವಾ ರಾಜಕೀಯ ನಾಯಕರ ಅಥವಾ ಸಿಲೆಬ್ರಿಟಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಯಾಕೆ ಕೈಗೊಳ್ಳಲಾಗುವುದಿಲ್ಲ? ದೊಡ್ಡದೊಡ್ಡ ಮಾರಣ ಹೋಮಗಳಿಗೆ ನೇರವಾಗಿ ಕಾರಣಕರ್ತರಾದವರು ಆರೋಪ-ಪ್ರತ್ಯಾರೋಪ, ಸ್ಪಷ್ಟೀಕರಣ, ವಿಷಾದ ಪ್ರಕಟಣೆ, ಪರಿಹಾರ ಘೋಷಣೆ, ಮೃತರ ಪೈಕಿ ಒಬ್ಬಿಬ್ಬರ ಮನೆಗಳಿಗೆ ಭೇಟಿ ಇತ್ಯಾದಿ ಕೆಲವು ಔಪಚಾರಿಕತೆಗಳ ಬಳಿಕ ಮುಕ್ತವಾಗಿ ತಿರುಗಾಡಲು ಸಾಧ್ಯವಾಗುವುದೇಕೆ? ಒಂದು ದೊಡ್ಡ ದುರಂತದ ಬಳಿಕ ಆ ದುರಂತದ ಪ್ರಾಯೋಜಕರು ಬಹುಬೇಗನೆ ಮತ್ತೆ ಇನ್ನೊಂದು ಉತ್ಸವ, ಮೇಳ ಅಥವಾ ಸಮ್ಮೇಳನವನ್ನು ಆಯೋಜಿಸಿ ಮತ್ತೆ ದೊಡ್ಡ ಸಂಖ್ಯೆಯಲ್ಲಿ ಬಂದು ಸೇರುವಂತೆ ಜನರಿಗೆ ಕರೆನೀಡಲು ಸಾಧ್ಯವಾಗುವುದೇಕೆ?

ಇವೆಲ್ಲಾ ತಮ್ಮ ಪ್ರಾಣಕ್ಕೆ ಏನಾದರೂ ಬೆಲೆ ಇದೆ ಎಂದು ನಂಬುವವರೆಲ್ಲಾ ಸಾಮೂಹಿಕವಾಗಿ ದೊಡ್ಡ ಧ್ವನಿಯಲ್ಲಿ ಕೇಳಬೇಕಾದ, ಉತ್ತರ ಸಿಗುವ ತನಕವೂ ಕೇಳುತ್ತಲೇ ಇರಬೇಕಾದ ಪ್ರಶ್ನೆಗಳು.

share
ಶಂಬೂಕ
ಶಂಬೂಕ
Next Story
X