ಮೂಡಿಗೆರೆ | ಶ್ರೀಗಂಧ ಕಳ್ಳಸಾಗಾಟ ಆರೋಪ: ಇಬ್ಬರ ಬಂಧನ

ಚಿಕ್ಕಮಗಳೂರು: ಮೂಡಿಗೆರೆ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂದ ಕಳ್ಳ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಯೂಸುಫ್ ಮತ್ತು ಸ್ಥಳೀಯ ಪತ್ರಕರ್ತ ಮನ್ಸೂರ್ ಬಂಧಿತ ಆರೋಪಿಗಳು. ಇವರಿಂದ ಶ್ರೀಗಂಧದ ತುಂಡುಗಳನ್ನು,ತುಂಡು ಕಡಿಯಲು ಬಳಸಿದ್ದ ಚಿಕ್ಕ ಗರಗಸ ಹಾಗೂ ಸಾಗಾಟಕ್ಕೆ ಬಳಸಿದ ಬೈಕೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.
ಬುಧವಾರ ರಾತ್ರಿ 8 ಗಂಟೆಯ ವೇಳೆ ಸಮಯದಲ್ಲಿ ಮೂಡಿಗೆರೆ ಶಾಖೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಣೆ ಬಗ್ಗೆ ಖಚಿತ ಮಾಹಿತಿಯನ್ನು ಅನುಸರಿಸಿ ಬೈಕೊಂದನ್ನು ತಡೆದು ಪರಿಶೀಲಿಸಿದಾಗ ಶ್ರೀಗಂಧ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ಬೈಕ್ ಹಾಗೂ ಶ್ರೀಗಂಧದ ತುಂಡುಗಳನ್ನು,ತುಂಡು ಕಡಿಯಲು ಬಳಸಿದ್ದ ಚಿಕ್ಕ ಗರಗಸವನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾoಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಹಾಯಕ ಸಂರಕ್ಷಣಾಧಿಕಾರಿ ಆಕರ್ಷ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿಗಳಾದ ಸುಹಾಸ್, ಅಶ್ವಥ್, ಅರಣ್ಯ ರಕ್ಷಕರಾದ ಉಮೇಶ್, ಸುರೇಶ್, ಮನು, ಸುಮ್ಮಂತ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.





