ಆಲ್ ಇಂಡಿಯಾ ಪೊಲೀಸ್ ಗೇಮ್ಸ್ ವೇಟ್‌ಲಿಫ್ಟಿಂಗ್: ಫಾಝಿಲ್ ರೆಹಮಾನ್‌ಗೆ ಬೆಳ್ಳಿ ಪದಕ

ಕೊಪ್ಪ: ಹರಿಯಾಣದ ಕರ್ನಾಲ್ ಜಿಲ್ಲೆಯ ಮಧುಬನ್‌ನಲ್ಲಿ ಇತ್ತೀಚೆಗೆ 2026-27ನೇ ಸಾಲಿನ ‘ಆಲ್ ಇಂಡಿಯಾ ಪೊಲೀಸ್ ಗೇಮ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್’ ನಡೆಯಿತು.
ಈ ಕ್ರೀಡಾಕೂಟದ 110 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಸಿ.ಐ.ಎಸ್.ಎಫ್ (CISF) ದಿಲ್ಲಿ ತಂಡದ ಪರವಾಗಿ ಕಣಕ್ಕಿಳಿದಿದ್ದ ಕರ್ನಾಟಕದ ಕೊಪ್ಪ ಮೂಲದ ಫಾಝಿಲ್ ರೆಹಮಾನ್ ಸಣ್ಣಕೇರೆ ಅವರು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡು ಸಾಧನೆ ಮಾಡಿದ್ದಾರೆ.
ಇವರ ಸಾಧನೆಗೆ ವ್ಯಾಪಕ ಶ್ಲಾಘನೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.
Next Story




