ಚಿಕ್ಕಮಗಳೂರು | ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿರುವ 10 ಮಂದಿ ಚಾರಣಿಗರು
ಪೊಲೀಸರು, ಅರಣ್ಯ ಸಿಬ್ಬಂದಿಯಿಂದ ಶೋಧ

ಚಿಕ್ಕಮಗಳೂರು: ಚಿತ್ರದುಗದಿಂದ ಚಾರಣಕ್ಕೆ ತೆರಳಿದ್ದ 10 ಮಂದಿಯ ತಂಡ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿರುವ ಘಟನೆ ಸೋಮವಾರ ವರದಿಯಾಗಿದೆ.
ಸೋಮವಾರ ಬೆಳಗ್ಗೆ ಬೆಳ್ತಂಗಡಿ ಮಾರ್ಗವಾಗಿ ಟ್ರೆಕ್ಕಿಂಗ್ ಆರಂಭಿಸಿದ ಚಾರಣಿಗರು ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ನಂತರ ಕಾರ್ಯ ಪ್ರವೃತ್ತರಾದ ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಜೊತೆ ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story