ಚಿಕ್ಕಮಗಳೂರು| ಮಹಿಳೆ ಜೊತೆ ಖಾಸಗಿ ಹೋಮ್‍ಸ್ಟೇಯಲ್ಲಿದ್ದ ಬಿಜೆಪಿ ಮುಖಂಡನ ಮೇಲೆ ಗ್ರಾಮಸ್ಥರಿಂದ ಹಲ್ಲೆ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಪ್ತ ಆನಂದ್ ಮೇಲೆ ಮತ್ತಾವರ ಗ್ರಾಮದ ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ವಿಧವೆ ಮಹಿಳೆ ಜತೆ ಖಾಸಗಿ ಹೋಮ್‍ಸ್ಟೇಯಲ್ಲಿ ತಂಗಿದ್ದ ವೇಳೆ ಆನಂದ್ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
ಚಿಕ್ಕಮಗಳೂರು-ಕಡೂರು ಮಾರ್ಗದ ಖಾಸಗಿ ಹೋಮ್‍ಸ್ಟೇ ಮೇಲೆ ಗ್ರಾಮಸ್ಥರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Next Story





