ಚಿಕ್ಕಮಗಳೂರು | ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಮೃತ್ಯು

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕನೋರ್ವ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಗರದ ಉಪ್ಪಳ್ಳಿ ಬಡಾವಣೆ ಸಮೀದಲ್ಲಿ ನಡೆದಿದೆ.
ರಂಜಿತ್(15) ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟ ಬಾಲಕನಾಗಿದ್ದು, ಚಿಕ್ಕಮಗಳೂರು ತಾಲೂಕಿನ ಬ್ಯಾಗಡೇಹಳ್ಳಿ ನಿವಾಸಿಯಾಗಿರುವ ರಂಜಿತ್, ಶುಕ್ರವಾರ ಸ್ನೇಹಿತರೊಂದಿಗೆ ಉಪ್ಪಳ್ಳಿ ಬಡಾವಣೆ ಸಮೀಪದಲ್ಲಿರುವ ಕುಂಬಾರಕಟ್ಟೆ ಕೆರೆಯಲ್ಲಿ ಈಜಲು ಹೋಗಿದ್ದರು.
ಈ ವೇಳೆ ಕೆರೆಗೆ ಇಳಿದಿದ್ದ ಬಾಲಕ ರಂಜಿತ್ ಈಜಲು ಬಾರದೇ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.
ಘಟನೆ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story