ಚಿಕ್ಕಮಗಳೂರು : ಮಲೆನಾಡಿನಲ್ಲಿ ಭಾರಿ ಮಳೆ; ಬಹುತೇಕ ತಾಲೂಕುಗಳ ಶಾಲೆಗಳಿಗೆ ಇಂದು (ಜು.7) ರಜೆ

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡ ಭಾಗದಲ್ಲಿ ಗಾಳಿ ಮತ್ತು ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಹುತೇಕ ತಾಲೂಕುಗಳ ಶಾಲೆಗಳಿಗೆ ಇಂದು (ಜು.7 ರಂದು)ರಜೆ ನೀಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯ ಜಾಗರ, ಖಾಂಡ್ಯ, ಆಲ್ದೂರು ಆವತಿ ಮತ್ತು ವಸ್ತಾರೆ ಹೋಬಳಿ ಗಳಲ್ಲಿ ತೀವ್ರವಾಗಿ ಮಳೆಯಾಗುತ್ತಿದ್ದು, ಅಂಗನವಾಡಿ ಶಿಶುಪಾಲನ ಕೇಂದ್ರ, ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪೌಢಶಾಲೆಗಳಿಗೆ ರಜೆ ಘೋಷಿಸ ಲಾಗಿದೆ.
ಶೃಂಗೇರಿ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರೆ, ಕಳಸ, ಮೂಡಿಗೆರೆ ಹಾಗೂ ಕೊಪ್ಪ ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ರಜೆ ನೀಡಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ ಕಲಂ 26, 30 ಹಾಗೂ 34 ರ ಅಧಿಕಾರದಡಿ ರಜೆ ಘೋಷಿಸಲಾಗಿದೆ.
ಈ ರಜಾ ದಿನದ ಈ ಅವಧಿಯ ಪಠ್ಯಕ್ರಮವನ್ನು ಇತರೆ ರಜಾ ದಿನಗಳಲ್ಲಿ ತರಗತಿ ತೆಗೆದುಕೊಂಡು ಪಠ್ಯಕ್ರಮ ಪೂರ್ಣಗೊಳಿಸಲು ಜಿಲ್ಲಾಡಳಿತ
Next Story




