ಚಿಕ್ಕಮಗಳೂರು: ಸರ್ಕಲ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದ ಖಾದರ್ ಅವರಿಗೆ ಸನ್ಮಾನ

ಚಿಕ್ಕಮಗಳೂರು: ಇತ್ತೀಚೆಗೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದ ಖಾದರ್ ಅವರಿಗೆ ಚಿಕ್ಕಮಗಳೂರು ಬದ್ರಿಯಾ ಜುಮ್ಮಾ ಮಸೀದಿಯ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಸಿ.ಎಸ್. ಖಲಂದರ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್, ಮಸೀದಿಯ ಖತೀಬ್ ಶರೀಫ್ ಸಖಾಫಿ, ಹಿರಿಯರಾದ ಕೆ. ಮೊಹಮ್ಮದ್, ಬಿ.ಎಸ್. ಮೊಹಮ್ಮದ್, ಅಬ್ದುಲ್ಲ ಹಾಜಿ, ಇಂಪಲ್ ನಾಸಿರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story





