ಚಿಕ್ಕಮಗಳೂರು: ಪೋಕ್ಸೋ ಪ್ರಕರಣ; ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಚಿಕ್ಕಮಗಳೂರು: ಪೋಕ್ಸೋ ಪ್ರಕರಣ ಒಂದರ ಸಂಬಂಧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಚಿಕ್ಕಮಗಳೂರು ಸಮೀಪದ ರಾಮನಹಳ್ಳಿಯ ಫರ್ಜಾನ್, ಆದರ್ಶ ನಗರದ ಪ್ರಶಾಂತ ,ಹಾಸನದ ಗಾಡಿ ದೇವಣ್ಣ ರಸ್ತೆಯ ಲಕ್ಷ್ಮಿ ದಿನೇಶ್, ಮತ್ತು ದಿನೇಶ ಡಿ ಎಂ ಆರೋಪಿಗಳು.
2 ಮತ್ತು 1 ನೇ ಆರೋಪಿಗೆ 10 ವರ್ಷ ಶಿಕ್ಷೆ ಮತ್ತು ತಲಾ ರೂ. 32,000/- ದಂಡ ಹಾಗೂ 3 ಮತ್ತು 4 ನೇ ಆರೋಪಿಗೆ 10 ವರ್ಷ ಶಿಕ್ಷೆ ಮತ್ತು ತಲಾ ರೂ. 35,000/- ದಂಡ ವಿಧಿಸಲಾಗಿದೆ.
ಸಂತ್ರಸ್ತ ಬಾಲಕಿಗೆ ರೂ. 1 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಮತ್ತು ಸೇವಗಳ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ .
ಪ್ರಕರಣದ ತನಿಖೆಯಲ್ಲಿ ಡಿ.ವೈ.ಎಸ್.ಪಿ. ಶೈಲೇಂದ್ರ ಹೆಚ್. ಎಂ. ರವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್. ಎಸ್ ಲೋಹಿತಾಶ್ವಚಾರ್ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ಬಿ. ಭರತ್ ಕುಮಾರ್ ವಾದ ಮಂಡಿಸಿದ್ದರು.
Next Story





