Chikkamagaluru | ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರಿಂದ ಧರಣಿ

ಚಿಕ್ಕಮಗಳೂರು : ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಧರಣಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಕೆರೆಕಟ್ಟೆ ಗ್ರಾಮದ ಅರಣ್ಯ ಇಲಾಖೆ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಮಹಿಳೆಯೊರ್ವರು, ಫಾರೆಸ್ಟರ್, ರೇಂಜರ್, ವಾಚರ್ ಬಂದರೂ ಏನೂ ಕ್ರಮ ಕೈಗೊಂಡಿಲ್ಲ. ಡಿ.ಎಫ್.ಓ ಗೆ ಪತ್ರ ಕೊಟ್ಟಿದ್ದೇವೆ, ಅದಕ್ಕೂ ಪ್ರತಿಕ್ರಿಯೆ ಇಲ್ಲ. ಕೆರೆಕಟ್ಟೆಯಲ್ಲಿ ಅಧಿಕಾರಿಗಳಿಂದ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆ ಹಾವಳಿಯಿಂದ ಎರಡುವರೆ ಎಕರೆ ಹೊಲ ಸಂಪೂರ್ಣ ಹಾಳಾಗಿದೆ. ಬೆಳೆ ಏನೂ ಉಳಿದಿಲ್ಲ. ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ, ಆದರೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಡಿ.ಎಫ್.ಓ ಅವರು ಸ್ವತಃ ಬಂದು ಕ್ರಮ ಕೈಗೊಳ್ಳಬೇಕು. ಕಾಡಾನೆಯನ್ನು ಹಿಡಿಯಬೇಕು. ಕಾಡಾನೆಯನ್ನು ಬೇರೆಡೆಗೆ ಕಳಿಸಿದರೂ ಮತ್ತೊಬ್ಬರಿಗೆ ತೊಂದರೆ ನೀಡುತ್ತದೆ. ಕಾಡಾನೆಯನ್ನು ಹಿಡಿದು ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.





