ಚಿಕ್ಕಮಗಳೂರು | ವಾಹನದೊಂದಿಗೆ ಚಾಲಕ ನದಿಯಲ್ಲಿ ಕೊಚ್ಚಿ ಹೋಗಿದ್ದ ಪ್ರಕರಣ: 5 ದಿನಗಳ ಬಳಿಕ ಯುವಕನ ಮೃತದೇಹ ಪತ್ತೆ

ಚಿಕ್ಕಮಗಳೂರು: ಪಿಕಪ್ ವಾಹನದೊಂದಿಗೆ ಚಾಲಕ ಕೊಚ್ಚಿ ಹೋಗಿದ್ದ ಪ್ರಕರಣ ಸಂಬಂಧ ಐದು ದಿನಗಳ ಬಳಿಕ ಚಾಲಕ ಶಮಂತ್ ಮೃತದೇಹ ಪತ್ತೆಯಾಗಿದೆ.
ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಧು ಹಿಂದಿರುಗುತ್ತಿದ್ದ ವೇಳೆ ಪಿಕಪ್ ವಾಹನ ಭಧ್ರಾ ನದಿ ತೀರದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು . ಚಾಲಕ ಶಮಂತ್ ನಿಯಂತ್ರಣ ತಪ್ಪಿದ ಪಿಕಪ್ ಬದ್ರಾ ನದಿಗೆ ಉರುಳಿತ್ತು. ಶಮಂತ್ ಕೂಡ ನದಿ ಪಾಲಾಗಿದ್ದ, ಮಗ ಶಮಂತ್ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆಯಿಂದ ನೊಂದಿದ್ದ ತಾಯಿ ರವಿಕಲಾ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ತೆ ಮಾಡಿಕೊಂಡಿದ್ದರು.
ಘಟನೆ ನಡೆದ ಎರಡು ದಿನಗಳ ನಂತರ ನದಿಯಲ್ಲಿಪಿಕಪ್ ಪತ್ತೆಯಾಗಿದ್ದು, 5 ದಿನಗಳ ಬಳಿಕ ಶಮಂತ್ ಮೃತದೇಹ ಕಳಸ ಪಟ್ಟಣ ಸಮೀಪದ( ಕೋಟೆಹೊಳೆ)ಎಂಬಲ್ಲಿ ಪತ್ತೆಯಾಗಿದೆ.
ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕದಳ, ಮಂಗಳೂರಿನ ಮುಳುಗು ತಜ್ಜರು 5 ದಿನಗಳಿಂದ ಶಮಂತ್ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದರು.
Next Story





