Chikkamagaluru | ಮಕ್ಕಳ ಆಕ್ಷೇಪಾರ್ಹ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪ: ಮಹಿಳೆಯ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು: ಮಕ್ಕಳ ಲೈಂಗಿಕ ಶೋಷಣೆ ಮತ್ತು ಆಕ್ಷೇಪಾರ್ಹ ಚಿತ್ರದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ಕೇಂದ್ರ (NCMEC) ನೀಡಿದ ವರದಿಯನ್ನಾಧರಿಸಿ ಸೈಬರ್ ಕ್ರೈಂ ಠಾಣೆಯ ಎಎಸ್ಸೈ ಹೇಮಚಂದ್ರೇಗೌಡ ಡಿ. ಅವರು ಎನ್ಸಿಆರ್ಪಿ ಪೋರ್ಟಲ್ ಪರಿಶೀಲಿಸಿದಾಗ ಈ ಜಾಲ ಪತ್ತೆಯಾಗಿದೆ.
ತಾಂತ್ರಿಕ ಮಾಹಿತಿ ಕಲೆ ಹಾಕಿದಾಗ ಚಿಕ್ಕಮಗಳೂರು ಟೌನ್ ಬಾರ್ ಲೈನ್ ರಸ್ತೆಯ ನಿವಾಸಿ ಮುಬೀನಾ ತಾಜ್ ಎಂಬಾಕೆ ತನ್ನ ಇನ್ ಸ್ಟಾಗ್ರಾಮ್ ಮೆಸೆಂಜರ್ ಮೂಲಕ ಅಪ್ರಾಪ್ತ ವಯಸ್ಸಿನ ಮಕ್ಕಳ 20 ಸೆಕೆಂಡುಗಳ ನಗ್ನ ಹಾಗೂ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಶೇರ್ ಮಾಡಿರುವುದು ದೃಢಪಟ್ಟಿದೆ. ಆರೋಪಿ ಮಹಿಳೆಯ ವಿರುದ್ಧ ಸೈಬರ್ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Next Story




