ಕಡೂರು : ವಿದ್ಯುತ್ ಶಾಕ್ ತಗುಲಿ ಬಾಲಕ ಮೃತ್ಯು

ಸಾಂದರ್ಭಿಕ ಚಿತ್ರ (AI)
ಚಿಕ್ಕಮಗಳೂರು: ಸ್ನಾನ ಮಾಡಲು ಬಾತ್ ರೂಮ್ ಗೆ ತೆರಳಿದ್ದ 8 ವರ್ಷದ ಬಾಲಕ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಸಖರಾಯಪಟ್ಟಣದ ನೀಲಾಂಶ್ (8) ಮೃತಪಟ್ಟ ಬಾಲಕ. ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ರವಿವಾರ ಶಾಲೆಗೆ ರಜೆಯ ಹಿನ್ನೆಲೆ ಮನೆಯಲ್ಲೇ ಇದ್ದ. ಸ್ನಾನ ಮಾಲು ಬಾತ್ ರೂಮ್ ಗೆ ತೆರಳಿದ್ದ ವೇಳೆ ನೀರು ಕಾಯಿಸಲು ಬಕೆಟ್ ನಲ್ಲಿ ವಿದ್ಯುತ್ ವಾಟರ್ ಹೀಟರ್ ಹಾಕಲಾಗಿತ್ತು. ಹೀಟರ್ ನಿಂದ ಬಿಸಿಯಾಗುತ್ತಿದ್ದ ನೀರಿಗೆ ಕೈ ಹಾಕಿದ ಬಾಲಕ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥನಾಗಿದ್ದ.
ಕೂಡಲೇ ರಕ್ಷಿಸಲು ಪ್ರಯತ್ನಿಸಿದರೂ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸಖರಾಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




