ಕಳಸ | ಹಿರೇಬೈಲು ನೂತನ ಮಸೀದಿಗೆ ಶಿಲಾನ್ಯಾಸ

ಚಿಕ್ಕಮಗಳೂರು: ಕಳಸ ತಾಲೂಕಿನ ಹಿರೇಬೈಲು ಬದ್ರಿಯಾ ಜುಮಾ ಮಸೀದಿ ನವೀಕರಣಗೊಳಿಸಲಾಗುತ್ತಿದ್ದು, ನೂತನ ಮಸೀದಿಗೆ ಸಮಸ್ತ ವಿದ್ಯಾಬ್ಯಾಸ ಬೋರ್ಡ್ ಕಾರ್ಯದರ್ಶಿ ಶೈಖುನಾ ಎಂ.ಟಿ.ಉಸ್ತಾದ್ ಇಂದು(ಫೆ.17) ಶಿಲಾನ್ಯಾಸ ನೆರವೇರಿಸಿದರು.
ಮೂಡಿಗೆರೆ ಸಂಯುಕ್ತ ಜಮಾಅತ್‌ನ ವಿವಿಧ ಮೊಹಲ್ಲಾಗಳ ಖತೀಬರುಗಳು, ನೇತಾರರು ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಸಹಾಯ ಸಹಕಾರದ ಭರವಸೆ ನೀಡಿದರು.
ಇಬ್ರಾಹಿಂ ಹಾಜಿ ಹೆಮ್ಮಕ್ಕಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿನಾನ್ ಪೈಝಿ ಖಲಂದರಿಯ್ಯ ಚಿಕ್ಕಮಕ್ಕಿ ಸಮಾರಂಭ ನಿರ್ವಹಿಸಿದರು.
ಸಲೀಂ ಸಂಪಿಗೆ ಖಾನ್ ಸ್ವಾಗತಿಸಿದರು. ಆಬ್ದುಲ್ ಹಮೀದ್ ಸಅದಿ ದನ್ಯವಾದ ಸಮರ್ಪಿಸಿದರು.
Next Story







