Koppa | ಜಯಪುರ ಬದ್ರಿಯಾ ಜುಮಾ ಮಸೀದಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಬಿ.ಬಿ.ನಾಸಿರ್ ಹುಸೇನ್
ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು. ಬಿ.ಬಿ.ನಾಸಿರ್ ಹುಸೇನ್ ಅವರು ಮಸೀದಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಹಳೆಯ ಸಮಿತಿಯು ಕೈಗೊಂಡ ಕಟ್ಟಡ ನಿರ್ಮಾಣ ಕಾರ್ಯಗಳು ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿ, ಅಭಿನಂದನೆ ಸಲ್ಲಿಸಲಾಯಿತು.
ನೂತನ ಕಾರ್ಯಕಾರಿ ಸಮಿತಿ ವಿವರ: ಅಧ್ಯಕ್ಷರಾಗಿ ಬಿ.ಬಿ.ನಾಸಿರ್ ಹುಸೇನ್, ಉಪಾಧ್ಯಕ್ಷರಾಗಿ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್, ಖಜಾಂಜಿಯಾಗಿ ಹಾಜಿ ಇಸಾಕ್ ಕಟ್ಟೆಮನೆ, ಸಹಕಾರ್ಯದರ್ಶಿಗಳಾಗಿ ರಶೀದ್ ಮಕ್ಕಿಕೊಪ್ಪ ಮತ್ತು ಹುಮಯೂನ್ ಕಬೀರ್ ಹಾಗೂ ಸದಸ್ಯರಾಗಿ ಇಸ್ಮಾಯಿಲ್ ಮಕ್ಕಿಕೊಪ್ಪ, ಅಬೂಬಕ್ಕರ್ ಹಾಜಿ, ಅಶ್ರಫ್ ಕೊಗ್ರೆ, ಅಬ್ಬಾಸ್ ಜಲದುರ್ಗ, ಬಿ.ಎ.ಇಬ್ರಾಹೀಂ ಹೆಗ್ಗರುಕುಡಿಗೆ ಅವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ಖಾದರ್






