ಕೊಪ್ಪ | ಅನ್ನಭಾಗ್ಯ ಯೋಜನೆಯಡಿಯಲ್ಲಿ ನೇರ ನಗದು ಬದಲಿಗೆ 5 ಕೆಜಿ ಅಕ್ಕಿ ವಿತರಣೆ
ಫೆಬ್ರವರಿ, ಮಾರ್ಚ್ ತಿಂಗಳ ಅಕ್ಕಿ ಪ್ರಮಾಣ ನಿಗದಿ ಮಾಡಿ ಸರಕಾರ ಆದೇಶ

ಕೊಪ್ಪ : ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಂತ್ಯೋದಯ ಮತ್ತು ಆಧ್ಯತಾ(ಬಿಪಿಎಲ್) ಪಡಿತರ ಚೀಟಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಉಚಿತವಾಗಿ ವಿತರಿಸಲಾಗುವ ಆಹಾರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬಾಬ್ತು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಯೋಜನೆಯಡಿ ನೀಡುತ್ತಿರುವ ಹಣದ ಬದಲಿಗೆ 5 ಕೆಜಿ ಅಕ್ಕಿಯನ್ನು ಫೆಬ್ರವರಿ ತಿಂಗಳಿಗೆ ಅನ್ವಯವಾಗುವಂತೆ ವಿತರಿಸಲು ಸರಕಾರ ಆದೇಶಿಸಿದೆ ಎಂದು ತಹಶೀಲ್ದಾರ್ ಕಚೇರಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸರಕಾರದ ಆದೇಶದಂತೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಸೇರಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪಡಿತರ ವಿತರಣಾ ಪ್ರಮಾಣವನ್ನು ಸರಕಾರ ನಿಗಧಿ ಮಾಡಿದ್ದು, 1ರಿಂದ 3 ಸದಸ್ಯರಿರುವ ಕುಟುಂಬಕ್ಕೆ 35 ಕೆಜಿ ಅಕ್ಕಿ, 4 ಸದಸ್ಯರಿರುವ ಕುಟುಂಬಕ್ಕೆ 45 ಕೆಜಿ, 5 ಸದಸ್ಯರಿರುವ ಕುಟುಂಬಕ್ಕೆ 65 ಕೆಜಿ, 6 ಸದಸ್ಯರಿರುವ ಕುಟುಂಬಕ್ಕೆ 85 ಕೆಜಿ, 7 ಸದಸ್ಯರಿರುವ ಕುಟುಂಬಕ್ಕೆ 105 ಕೆಜಿ, 8 ಸದಸ್ಯರಿರುವ ಕುಟುಂಬಕ್ಕೆ 125, 9 ಸದಸ್ಯರಿರುವ ಕುಟುಂಬಕ್ಕೆ 145 ಕೆಜಿ, 10 ಸದಸ್ಯರಿರುವ ಕುಟುಂಬಕ್ಕೆ 165, 11ಸದಸ್ಯರಿರುವ ಕುಟುಂಬಕ್ಕೆ 185, 12 ಸದಸ್ಯರಿರುವ ಕುಟುಂಬಕ್ಕೆ 205 ಕೆಜಿ ಅಕ್ಕಿ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆದ್ಯತಾ(ಬಿಪಿಎಲ್)ಪಡಿತರ ಚೀಟಿದಾರರಿಗೆ ಸರಕಾರ ನಿಗದಿ ಮಾಡಿರುವ ಅಕ್ಕಿ ಪ್ರಮಾಣ:
ಓರ್ವ ಸದಸ್ಯರಿರುವ ಕುಟುಂಭಕ್ಕೆ 15ಕೆಜಿ, 2ಸದಸ್ಯರಿರುವ ಕುಟುಂಬಕ್ಕೆ 30ಕೆಜಿ, 3ಸದಸ್ಯರಿರುವ ಕುಟುಂಬಕ್ಕೆ 45, 4ಸದಸ್ಯರಿರುವ ಕುಟುಂಬಕ್ಕೆ 60, 5ಸದಸ್ಯರಿರುವ ಕುಟುಂಬಕ್ಕೆ 75, 6ಸದಸ್ಯರಿರುವ ಕುಟುಂಬಕ್ಕೆ 90, 7ಸದಸ್ಯರಿರುವ ಕುಟುಂಬಕ್ಕೆ 105, 8ಸದಸ್ಯರಿರುವ ಕುಟುಂಬಕ್ಕೆ 120, 9ಸದಸ್ಯರಿರುವ ಕುಟುಂಬಕ್ಕೆ 135, 10 ಸದಸ್ಯರಿರುವ ಕುಟುಂಬಕ್ಕೆ 150, 11 ಸದಸ್ಯರಿರುವ ಕುಟುಂಬಕ್ಕೆ 165, 12 ಸದಸ್ಯರಿರುವ ಕುಟುಂಬಕ್ಕೆ 180 ಕೆಜಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ದೊರೆಯಲಿದೆ ಎಂದು ಪ್ರಕಟನೆ ತಿಳಿಸಿದೆ.