ಕೊಪ್ಪ: ಉದ್ಯಮಿ ಹಾಜಿ ಉಮರಬ್ಬ ನಿಧನ

ಚಿಕ್ಕಮಗಳೂರು: ಕೊಪ್ಪದ ಹಿರಿಯ ಉದ್ಯಮಿ ಹಾಜಿ ಉಮರಬ್ಬ (77) ಅವರು ರವಿವಾರ ಬೆಳಗಿನ ಜಾವ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಯೋ ಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಕೊನೆಯುಸಿರೆಳೆದರು.
ಹಾಜಿ ಉಮರಬ್ಬ ಅವರು ಮುಹಿಯುದ್ದೀನ್ ಶಾಫಿಈ ಜುಮಾ ಮಸೀದಿಯ ಸ್ಥಾಪಕ ಕಾರ್ಯದರ್ಶಿ ಮತ್ತು ಸುಧೀರ್ಘ ಅವಧಿಗೆ ಜಮಾಅತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಐದು ಗಂಡು ,ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





