ಕೊಪ್ಪ: ಜೂ.11 ರಂದು ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟದ ವತಿಯಿಂದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕೊಪ್ಪ ತಾಲ್ಲೂಕಿನ ಎಲ್ಲಾ ಮಸೀದಿಗಳ ಜಮಾಅತ್ ಬಾಂಧವರ ಒಕ್ಕೂಟವಾದ "ಮುಸ್ಲಿಂ ಸಂಯುಕ್ತ ಜಮಾಅತ್ ಒಕ್ಕೂಟ ಕೊಪ್ಪ ತಾಲ್ಲೂಕು ಇದರ ಆಶ್ರಯದಲ್ಲಿ ಜೂ.11, ಬುಧವಾರ ಬೃಹತ್ ಪ್ರತಿಭಟನಾ ಮೌನ ಮೆರವಣಿಗೆ ಹಾಗೂ ಬಹಿರಂಗ ಸಭೆ ಕೊಪ್ಪ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಪುರಸಭಾ ಕ್ರೀಡಾಂಗಣ ಪಕ್ಕದ ಮೊಹಿಯುದ್ದೀನ್ ಜುಮ್ಮಾ ಮಸೀದಿಯಿಂದ ಟೌನ್ ಹಾಲ್ ವರೆಗೆ ಮೌನ ಮೆರವಣಿಗೆ ಹಾಗೂ 10 ಗಂಟೆಯಿಂದ ಪುರಭವನದಲ್ಲಿ ಬಹಿರಂಗ ಸಭಾ ಕಾರ್ಯಕ್ರಮ ನಡೆಯಲಿದೆ. ಮೊಹಿದ್ದೀನ್ ಶಾಫಿ ಜುಮಾ ಮಸೀದಿ, ಕೊಪ್ಪ ಇದರ ಖತೀಬ್ ಹನೀಫ್ ಖಾಸಿಮಿ ಉದ್ಘಾಟನಾ ದುಆ ನಡೆಸಲಿದ್ದಾರೆ.
ಕೊಪ್ಪ ಮುಸ್ಲಿಂ ಸಂಯಕ್ಷ ಜಮಾಅತ್ ಒಕ್ಕೂಟದ ಅಧ್ಯಕ್ಷ ಸೈಯದ್ ಎಜಾಸ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿ ಕೊಪ್ಪ ಇದರ ಖತೀಬ್ ಅಬ್ದುಲ್ ಖಲೀಲ್ ಸಾಹೇಬ್ ಸಮಾರೋಪ ದುಆ ನಡೆಸಲಿದ್ದಾರೆ. ರಾಘವೇಂದ್ರ ನಗರ ನೂರುಲ್ ಆಲಂ ಜುಮಾ ಮಸೀದಿಯ ಖತೀಬ್ ಸದ್ದಾಮ್ ಹುಸೇನ್ ಫೈಝಿ ಅಲ್ ಬುರ್ಹಾನಿ ಕಿರಾಅತ್ ಪಠಿಸಲಿದ್ದಾರೆ.
ಕರ್ನಾಟಕ ಉಲಮಾ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಅಝೀಝ್ ದಾರಿಮಿ, ಚೊಕ್ಕಬೆಟ್ಟು, ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ, ನ್ಯಾಯವಾದಿ ಜೀಷಾನ್ ಅಲಿ ಸುರತ್ಕಲ್ ಅವರು ಮುಖ್ಯಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಿಝ್ವಿ, ಜಾಮಿಯಾ ಮಸೀದಿ ಕೊಪ್ಪ ಇದರ ಅಧ್ಯಕ್ಷ ಜಹೂರ್ ಹುಸೇನ್ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.