ಪತ್ರಿಕೋದ್ಯಮ ಸಮಾಜದ ಧ್ವನಿ : ಶಾಸಕ ಎಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು : ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, 2025-28ರ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾರಂಗ ಜನಪರವಾಗಿ ನಿಂತು ಕೆಲಸ ಮಾಡುತ್ತಿದೆ. ಸರಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ. ಪ್ರಸಕ್ತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಪತ್ರಿಕಾರಂಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, ಹಿಂದೆ ಮಾಧ್ಯಮದಲ್ಲಿ ಕೆಲಸ ಮಾಡುವ ಯುವ ಸಮುದಾಯದಲ್ಲಿ ಕಲಿಕೆಯ ಆಸಕ್ತಿ ಮತ್ತು ಗುರಿ ಇತ್ತು. ಆದರೆ, ಇಂದು ಆಸಕ್ತಿಯೂ ಇಲ್ಲ, ಗುರಿಯೂ ಇಲ್ಲವಾಗಿದೆ. ಪತ್ರಕರ್ತರಲ್ಲಿ ತಾಳ್ಮೆ ಮತ್ತು ಸಮಾಧಾನವಿಲ್ಲದಿರುವುದರಿಂದ ಸತ್ಯದ ಸುದ್ದಿಗಳ ಜತೆ ಜತೆಗೆ ಸುಳ್ಳು ಸುದ್ದಿಗಳು ರಾರಾಜಿಸುತ್ತಿವೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕರಾದ ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್‌ಗೌಡ, ಪತ್ರಕರ್ತರಾದ ರವಿ ಹೆಗಡೆ, ಜ್ಯೋಗಿ, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್, ಬಿ.ಟಿ.ತಿಪ್ಪೇರುದ್ರಪ್ಪ, ಅಜ್ಜಂಪುರ ಅಪ್ಪಾಜಿ, ತರೀಕೆರೆ ಅನಂತ್ ನಾಡಿಗ್, ಕೊಪ್ಪ ಬಿ.ವಿ.ವಿಶ್ವನಾಥ್ ಶೆಟ್ಟಿ, ಕಡೂರು ಎನ್.ಗಿರೀಶ್ ಬೀರೂರು, ಪ್ರಸನ್ನ ಗೌಡನಹಳ್ಳಿ ಮೂಡಿಗೆರೆ, ಯೂಸೂಪ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ದತ್ತಿ ಪ್ರಶಸ್ತಿ ಪ್ರದಾನ
ಡಿ.ವಿ.ಜಿ. ಪ್ರಶಸ್ತಿ- ಬಿ.ವಿ.ಗೋಪಿನಾಥ್, ಗೊಮ್ಮಟ ಮಾಧ್ಯಮ ಪ್ರಶಸ್ತಿ- ಗಿರೀಶ್ ರಾವ್ ಹತ್ವಾರ (ಜೋಗಿ), ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ- ರವಿಪ್ರಕಾಶ್, ಎಸ್.ವಿ.ಜಯಶೀಲರಾವ್ ಪ್ರಶಸ್ತಿ-ಮೀನಾ ಮೈಸೂರು, ಸಿ.ಆರ್.ಕೃಷ್ಣರಾವ್ ಪ್ರಶಸ್ತಿ-ಅನಂತ ಚಿನಿವಾರ್, ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ-ಜಾನ್ ಮಥಾಯಿಸ್, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ-ಮಾವಳ್ಳಿ ಶಂಕರ್, ಪಾಟೀಲ್ ಪುಟ್ಟಪ್ಪ ಪ್ರಶಸ್ತಿ-ಅಡಿವೇಂದ್ರ ಇನಾಂದಾರ, ಶ್ರೀಮತಿ ಯಶೋದಮ್ಮ ಜಿ.ನಾರಾಯಣ ಪ್ರಶಸ್ತಿ- ಮಂಜುಳ ಕಿರುಗಾವಲು, ಬದರಿನಾಥ ಹೊಂಬಾಳೆ ಪ್ರಶಸ್ತಿ-ಡಿ.ಜಿ.ಮೋಮಿನ್, ಕಿಡಿಶೇಷಪ್ಪಪ್ರಶಸ್ತಿ-ದಿನೇಶ್ ಗೌಡಗೆರೆ, ರವಿ ಬೆಳಗೆರೆ ಪ್ರಶಸ್ತಿ-ಎಚ್.ಸಿ.ದಿನೇಶ್‌ಕುಮಾರ್, ಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿ-ಭವಾನಿ ಲಕ್ಷ್ಮೀನಾರಾಯಣ, ಎಚ್.ಕೆ.ವೀರಣ್ಣಗೌಡ ಸ್ಮಾರಕ ಪ್ರಶಸ್ತಿ-ಬಿ.ಎಸ್.ಜಯರಾಂ, ರಾಜಶೇಖರ ಕೋಟೆ ಪ್ರಶಸ್ತಿ-ಟಿ.ವಿ.ರಾಜೇಶ್ವರ, ಪಿ.ರಾಮಯ್ಯ ಪ್ರಶಸ್ತಿ-ಎಚ್.ಬಿ.ದಿನೇಶ್, ಮಾ.ರಾಮಮೂರ್ತಿ ಪ್ರಶಸ್ತಿ-ಪ್ರದೀಪ್ ಅಣ್ಣಾಜಿ ಕುಲಕರ್ಣಿ, ಮಹದೇವ ಪ್ರಕಾಶ್ ಪ್ರಶಸ್ತಿ-ಸುರೇಶ್ ಕೆ., ಶಿವಮೊಗ್ಗ ಮಿಂಚು ಶ್ರೀನಿವಾಸ್ ಪ್ರಶಸ್ತಿ-ಶ್ರೀಕಾಂತ್ ಭಟ್, ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ- ಜಿ.ವಾದಿರಾಜ್ ಕಮರೂರ, ಎಂ.ನಾಗೇಂದ್ರ ರಾವ್ ಪ್ರಶಸ್ತಿ- ಕಣ್ಣಪ್ಪ ಉಷಾಮಹಿ, ಶ್ರೀಮತಿ ಗಿರಿಜಮ್ಮ ರುದ್ರಪ್ಪತಾಳಿಕೋಟಿ ಪ್ರಶಸ್ತಿ-ಬಿ.ಕೆ.ರಮ್ಯಶ್ರೀ, ಅಪ್ಪಾಜಿಗೌಡ (ಸಿನಿ) ಪ್ರಶಸ್ತಿ-ಹರ್ಷವರ್ಧನ್ ಬ್ಯಾಡನೂರು, ಮೂಡಣ ಹಾವೇರಿ ಪ್ರಶಸ್ತಿ- ಎಸ್.ಆರ್.ನಂದಿಹಳ್ಳಿ ಅವರಿಗೆ ಪ್ರದಾನಿಸಲಾಯಿತು.
ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿ
ವಿಜಯ ಕರ್ನಾಟಕ ಕೆ.ಎಚ್.ರುದ್ರಯ್ಯ, ಸುವರ್ಣ ನ್ಯೂಸ್ ಕೆ.ಕಿರಣ್, ವಿಜಯವಾಣಿ ತರೀಕೆರೆ ವರದಿಗಾರ ಬಿ.ಉಮೇಶ್ ನಾಯಕ್, ಹಿರಿಯ ಫೋಟೊ ಜರ್ನಲಿಸ್ಟ್ ಅಕ್ರಮ್ ಅಬ್ದುಲ್ ಹಕ್, ವಾರ್ತಾಭಾರತಿ ವರದಿಗಾರ ಇಬ್ರಾಹಿಂ ಅಡ್ಕಸ್ಥಳ, ಶಿವಕುಮಾರ್ ಪತ್ತಾರ ಟಿವಿ 9 ಕೊಪ್ಪಳ, ಬಿಳಿಗಿರಿ ಶ್ರೀನಿವಾಸ್ ಚಾಮರಾಜನಗರ, ಎಚ್.ಪಿ.ರವಿಕುಮಾರ್ ಜನತಾಮಾಧ್ಯಮ ಹಾಸನ ಇವರಿಗೆ ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.






