ಚಿಕ್ಕಮಗಳೂರು | ಪೈಪ್‌ಲೈನ್ ಕೊರೆದು ಪೆಟ್ರೋಲ್ ಕಳ್ಳತನ; ಆರೋಪಿಗಳ ಪತ್ತೆಗೆ ಶೋಧ

ಚಿಕ್ಕಮಗಳೂರು : ಪೆಟ್ರೋಲ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದ ಬಳಿ ಲಾರಿ ಪತ್ತೆಯಾಗಿದೆ. ಕಳ್ಳತನದ ಲಾರಿಗೆ ನಂಬರ್ ಪ್ಲೇಟ್ ಕೂಡ ಇಲ್ಲ.ಲಾರಿ ಬಿಟ್ಟು ಪೆಟ್ರೋಲ್ ಆರೋಪಿಗಳು ಪರಾರಿಯಾಗಿದ್ದಾರೆ.
ಲಾರಿಯನ್ನ ವಶಕ್ಕೆ ಪಡೆದಿರುವ ಗೋಣಿಬೀಡು ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ
Next Story





