ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಚಿಕ್ಕಮಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲೆ ಇದರ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ವಿಜಯಪುರ ನೂರುಲ್ ಇಸ್ಲಾಂ ಮದ್ರಸಾ ಹಾಲ್ ನಲ್ಲಿ ನಡೆಯಿತು.
ಅಧ್ಯಕ್ಷರಾದ ಶಂಸುದ್ದೀನ್ ಶೈಖ್ ಬದ್ರಿಯಾ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಸಭೆಯನ್ನು ಫಾಝಿಲ್ ಸಅದಿ ಉದ್ಘಾಟಿಸಿದರು. ಶಾಧುಲಿ ಜುಮಾ ಮಸ್ಜಿದ್ ಮುದರಿಸರಾದ ಮಾಚಾರು ಇಸ್ಮಾಯಿಲ್ ಸಅದಿಯವರು ಸಂಘಟನಾ ಕಾರ್ಯಾಚರಣೆ ಬಗ್ಗೆ ಮಾತನಾಡಿದರು. ವೀಕ್ಷಕರಾಗಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ರಶೀದ್ ಮಡಂತ್ಯಾರು ಸಮ್ಮುಖದಲ್ಲಿ ಸಮಿತಿಯ ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ-ವ್ಯಯ ಲೆಕ್ಕ ಮಂಡಿಸಿದ ಬಳಿಕ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಅಲ್ತಾಫ್ ಸಖಾಫಿ ಅಲ್ ಮುಈನಿ ಹಂಡುಗುಳಿ, ಪ್ರಧಾನ ಕಾರ್ಯದರ್ಶಿಯಾಗಿ ಜಾಸೀರ್ ಹಿಮಮಿ ಸಖಾಫಿ ಬಾಳೆಹೊನ್ನೂರು, ಕೋಶಾಧಿಕಾರಿಯಾಗಿ ಅಡ್ವೊಕೇಟ್ ನೌಶಾದ್ ಅಲ್ ಬದ್ರಿಯಾ, ಉಪಾಧ್ಯಕ್ಷರಾಗಿ ಸಲೀಂ.ಕೆ.ಕುದ್ರೆಗುಂಡಿ, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ಹಸೈನಾರ್ ಆಲ್ದೂರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ತಮೀಮ್ ಉಪ್ಪಳ್ಳಿ, ವಿಸ್ಡಮ್ ಕಾರ್ಯದರ್ಶಿಯಾಗಿ ಆದಂ ಉಪ್ಪಳ್ಳಿ, ಕಲ್ಚರಲ್ ಕಾರ್ಯದರ್ಶಿಯಾಗಿ ಖಲಂದರ್ ಮಸೀದಿಕೆರೆ, ದುವಾ ಕಾರ್ಯದರ್ಶಿಯಾಗಿ ಸಲಾಂ ಹನೀಫಿ, ರೈನ್ ಬೋ ಕಾರ್ಯದರ್ಶಿಯಾಗಿ ಮೊಹಿದ್ದೀನ್ ಮಾಗುಂಡಿ, ಮೀಡಿಯಾ ಕಾರ್ಯದರ್ಶಿಯಾಗಿ ಸಲೀಂ ಬೀ ಕುದ್ರೆಗುಂಡಿ, ರೀಡ್ ಪ್ಲಾಸ್ ಕಾರ್ಯದರ್ಶಿಯಾಗಿ ನಿಜಾಮ್ ಮಾಗುಂಡಿ, ಐ.ಟಿ. ಕಾರ್ಯದರ್ಶಿ ಆಗಿ ಜುನೈದ್ ಹಂಡುಗುಳಿ, ಕಾರ್ಯಕಾರಿ ಸದಸ್ಯರಾಗಿ ನಿಜಾಮುದ್ದೀನ್ ಬದ್ರಿಯಾ, ಷರೀಫ್ ಕುದ್ರೆಗುಂಡಿ, ಫಾಝಿಲ್ ಸಅದಿ, ಜಬಿವುಲ್ಲಾ ಉಪ್ಪಳ್ಳಿ, ಝಾಕಿರ್ ಶಾಂತಿಪುರ, ರಮೀಜ್ ಬಾಳೆಹೊನ್ನೂರು, ಅಲ್ಫಾಝ್ ಎನ್.ಆರ್.ಪುರ, ಇರ್ಫಾನ್ ಶೆಟ್ಟಿ ಕೊಪ್ಪ, ಹಾರಿಸ್ ಮಾಗುಂಡಿ, ಅಬೂಬಕ್ಕರ್ ಮಾರ್ಝೂಕಿ ತರೀಕೆರೆ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು, SYS ಜಿಲ್ಲಾ ನಾಯಕರಾದ ಉಸ್ಮಾನ್ ಹಾಜಿ ಹಂಡುಗುಳಿ, ಕೆ.ಎಂ.ಜೆ ನಾಯಕರಾದ ಯೂಸುಫ್ ಹಾಜಿ ಉಪ್ಪಳ್ಳಿ, ಅಲ್ ಬದ್ರಿಯಾ ಮಸೀದಿ ಖತೀಬರಾದ ಷರೀಫ್ ಸಖಾಫಿ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಲ್ತಾಫ್ ಮುಈನಿ ಸ್ವಾಗತಿಸಿ, ಜಾಸಿರ್ ಸಖಾಫಿ ವಂದಿಸಿದರು.







