ಚಾರ್ಮಾಡಿ ಘಾಟ್‌ನ ಪ್ರಪಾತಕ್ಕೆ ಬಿದ್ದು ಯುವಕ ಗಂಭೀರ

ಮೂಡಿಗೆರೆ, ಆ.11: ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗವಾದ ಚಾರ್ಮಾಡಿ ಘಾಟಿಯಲ್ಲಿ ಯುವಕನೋರ್ವ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.
ಚಕ್‌ಮಕ್ಕಿ ಗ್ರಾಮದ ನಿವಾಸಿ ಮುಝಮ್ಮಿಲ್ (21) ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ.
ಮೂತ್ರವಿಸರ್ಜನೆಗಾಗಿ ಪ್ರಪಾತದ ಅಂಚಿನತ್ತ ಹೋದಾಗ ಯುವಕ ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು, ತಕ್ಷಣ ಹೈವೇ ಪಟ್ರೊಲ್ ಸಹಾಯಕ್ಕೆ ಧಾವಿಸಿ ಆತನನ್ನು ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





