ಸೆಟ್ಟೇರಿತು 'ತನಿಂ ಫಿಲ್ಮ್ಸ್' ನಿರ್ಮಾಣದ ಪ್ರಥಮ ತುಳು ಚಲನಚಿತ್ರ

ಮಂಗಳೂರು: ಮುಂಬೈಯ ಕ್ರಿಯಾಶೀಲ ರಂಗನಟ, ಚಲನಚಿತ್ರ ನಟ ರಹೀಂ ಸಚ್ಚೇರಿಪೇಟೆ ಅವರ 'ತನಿಂ ಫಿಲ್ಮ್ಸ್' ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಹೊಸ ತುಳು ಚಲನಚಿತ್ರವೊಂದು ಸೆಟ್ಟೇರಿದೆ.
ಪ್ರೊಡಕ್ಷನ್ ನಂಬರ್ 1 ಇದು 'ತನಿಂ ಫಿಲ್ಮ್ಸ್'ನ ಪ್ರಥಮ ಚಲನಚಿತ್ರ. ಮುಂಬೈ ತುಳು - ಕನ್ನಡ ರಂಗಭೂಮಿಯ ಸೃಜನಶೀಲ ರಂಗ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶನದ ಈ ಚಲನಚಿತ್ರದ ಮುಹೂರ್ತವು ಅ.16ರಂದು ಪಿಲಾರ್ ನ ಶ್ರೀ ಧರ್ಮದೈವ ಜಾರಂದಾಯ ಸ್ಥಾನದಲ್ಲಿ ನೆರವೇರಿತು.
ಕ್ಷೇತ್ರದ ಪೂಜಾರಿ ಗುಣಕರ ಪೂಜಾರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಾಯಿನಾಥ್ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು. ಚಿತ್ರ ನಿರ್ಮಾಪಕ ನಟ ಡಾ.ರಾಜಶೇಖರ್ ಕೋಟ್ಯಾನ್ ಕ್ಲಾಪ್ ಮಾಡಿ ಚಲನಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿತೈಷಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನಾಗರಾಜ್ ಗುರುಪುರ ಅವರ ಡೋಲು ನಾಟಕ ಆಧಾರಿತ ಈ ಚಲನಚಿತ್ರದ ಕತೆ - ಸಂಭಾಷಣೆ ರಂಗ ನಿರ್ದೇಶಕ ವಿದ್ದು ಅವರದ್ದು. ನಾಟಕಕಾರ ನಾರಾಯಣ ಶೆಟ್ಟಿ ನಂದಳಿಕೆಯವರ ಸಾಹಿತ್ಯದಿಂದ ಕೂಡಿರುವ ಈ ಚಿತ್ರದ ಡಿಓಪಿ ಹಾಗೂ ಸಂಕಲನದ ಕಾರ್ಯ ನಿರ್ವಹಿಸುವವರು ಪ್ರಜ್ವಲ್ ಸುವರ್ಣ. ಶ್ರುತಿನ್ ಶೆಟ್ಟಿ / ಕಿಶೋರ್ ಪಿಲಾರ್ ಪ್ರೊಡಕ್ಷನ್ ಮೆನೇಜರ್ ಆಗಿರುವ ಈ ಚಿತ್ರ ತಂಡದ ಮೇಕಪ್ ಮೆನ್ ಮಂಜುನಾಥ್ ಶೆಟ್ಟಿಗಾರ್ ಹಾಗೂ ಸಂಗೀತ ನಿರ್ದೇಶನ ಶಿಣೋಯಿ ಜೋಸೆಫ್.
ತುಳುನಾಡಿನ ಸಾಂಸ್ಕೃತಿಕ ಬದುಕನ್ನು, ಪರಂಪರೆ, ನಂಬಿಕೆಗಳನ್ನು ಬಿಂಬಿಸುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಮೋಹನ್ ಶೇಣಿ, ಉದಯ ಪೂಜಾರಿ ಬಲ್ಲಾಳ್ ಭಾಗ, ರೂಪಾ ವರ್ಕಾಡಿ, ನಿತೀಶ್ ಎಳಿಂಜೆ, ಜಯರಾಮ್ ಆಚಾರ್ಯ, ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಬಾಳಿಕೆ, ಕರ್ನೂರು ಮೋಹನ್ ರೈ, ಶಿವರಾಮ್ ಶೆಟ್ಟಿ ಕಾರ್ಯನಗುತ್ತು, ಅಶೋಕ್ ಕೊಡ್ಯಡ್ಕ, ಸುನೀಲ್, ನೀಲೇಶ್, ಜಗದೀಶ್, ಸದಾನಂದ, ಸುನೀತಾ ಸುವರ್ಣ, ದೀಕ್ಷಾ ದೇವಾಡಿಗ, ಪ್ರತಿಮಾ ಬಂಗೇರ, ಪ್ರವೀಣಾ ಶೆಟ್ಟಿ ಇನ್ನ, ಸುಜಾತಾ ಕೋಟ್ಯಾನ್ ಮೊದಲಾದವರು ನಟಿಸಿದ್ದಾರೆ.







