'3 ಈಡಿಯಟ್ಸ್' ಚಿತ್ರದ ನಟ ಅಖಿಲ್ ಮಿಶ್ರಾ ನಿಧನ
Photo credit: X/ @united_liberal/ bollykedia
ಮುಂಬೈ: ಅಮೀರ್ ಖಾನ್ ನಟನೆಯ '3 ಈಡಿಯಟ್ಸ್' ನಲ್ಲಿ ಗ್ರಂಥಪಾಲಕ ದುಬೆ ಪಾತ್ರದಲ್ಲಿ ನಟಿಸಿ ಹೆಸರುವಾಸಿಯಾದ ನಟ ಅಖಿಲ್ ಮಿಶ್ರಾ ಮಂಗಳವಾರ (ಸೆ.21) ನಿಧನರಾಗಿದ್ದಾರೆ.
ನಟ ಮಿಶ್ರಾ ಅವರು ಪತ್ನಿ ಹಾಗೂ ನಟಿ ಸುಝಾನ್ ಬರ್ನರ್ಟ್ ರನ್ನು ಅಗಲಿದ್ದಾರೆ. 67 ವರ್ಷದ ನಟ ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.
ಸುಝೇನ್ ಅವರ ಪ್ರಚಾರಕ ಮಿಶ್ರಾ ಸಾವಿನ ಸುದ್ದಿಯನ್ನು ದೃಢಪಡಿಸಿದರು. ನಟ ಅಡುಗೆಮನೆಯಲ್ಲಿ ಜಾರಿಬಿದ್ದ ನಂತರ ತಲೆಗೆ ಏಟು ಬಿದ್ದು ನಿಧನರಾದರು ಎಂದು ಬಹಿರಂಗಪಡಿಸಿದರು.
ಹಲವು ವರ್ಷಗಳಿಂದ , ಅಖಿಲ್ ಮಿಶ್ರಾ ಅವರು 'ಡಾನ್', 'ಗಾಂಧಿ ಮೈ ಫಾದರ್', 'ಶಿಖರ್' ಹಾಗೂ ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. '3 ಈಡಿಯಟ್ಸ್' ಚಿತ್ರದಲ್ಲಿ ಅವರ ಗ್ರಂಥಪಾಲಕ ದುಬೆ ಪಾತ್ರ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಚಲನಚಿತ್ರಗಳಲ್ಲದೆ, ಅಖಿಲ್ ಹಲವಾರು ಜನಪ್ರಿಯ ಟೆಲಿವಿಷನ್ ಕಾರ್ಯಕ್ರಮಗಳಾದ 'ಉತ್ತರನ್', 'ಉಡಾನ್', 'ಸಿಡ್', 'ಶ್ರೀಮಾನ್ ಶ್ರೀಮತಿ', 'ಹತಿಮ್' ಗಳಲ್ಲಿ ನಟಿಸಿದ್ದರು.
ಅಖಿಲ್ ಜರ್ಮನಿ ನಟಿ ಸುಝಾನೆ ಬರ್ನರ್ಟ್ ಅವರನ್ನು ಸೆಪ್ಟೆಂಬರ್ 30, 2011 ರಂದು ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು.