14 ದಿನಗಳಲ್ಲಿ 174 ಕೋಟಿ ಬಾಚಿದ ಅಜಯ್ ದೇವಗನ್ ನಟನೆಯ 'ರೈಡ್-2'

PC: screengrab/instagram.com/ajaydevgn
ಮುಂಬೈ: ಅಜಯ್ ದೇವಗನ್ ಅವರ ಕ್ರೈಮ್ ಡ್ರಾಮಾ 'ರೈಡ್-2' ಚಿತ್ರದ ಗಳಿಕೆ ಎರಡನೇ ವಾರದಲ್ಲಿ ಸ್ವಲ್ಪಮಟ್ಟಿಗೆ ಕುಂಠಿತವಾಗಿದ್ದರೂ, ಬಾಕ್ಸ್ ಆಫೀಸ್ ನಲ್ಲಿ ಪ್ರಾಬಲ್ಯ ಮೆರೆದಿದೆ. ಶಕ್ತಿಶಾಲಿ ಕನಾಥಕ ಮತ್ತು ಅಜಯ್ ದೇವಗನ್, ರಿತೇಶ್ ದೇಶ್ಮುಖ್ ಮತ್ತು ವಾಣಿಕಪೂರ್ ಅವರ ಅತ್ಯುತ್ತಮ ನಟನೆಯ ಕಾರಣದಿಂದ ಯಾವುದೇ ಪ್ರಮುಖ ಸ್ಪರ್ಧಿಗಳಿಲ್ಲದೇ ಮುನ್ನುಗ್ಗುತ್ತಿದೆ. ಇದೀಗ ಜಾಗತಿಕವಾಗಿ 174 ಕೋಟಿ ರೂಪಾಯಿ ಆದಾಯ ಗಳಿಸಿರುವ 'ರೈಡ್ 2', ಸಲ್ಮಾನ್ ಖಾನ್ ಅವರ ಚಿತ್ರವನ್ನು ಹಿಂದಿಕ್ಕುವ ಸನಿಹಕ್ಕೆ ಬಂದಿದೆ.
ರಾಜ್ ಕುಮಾರ್ ನಿರ್ದೇಶನದ 'ರೈಡ್ 2' ಆದಾಯ ತೆರಿಗೆ ಉಪ ಆಯುಕ್ತ ಅಮಯ್ ಪಟ್ನಾಯಕ್ ಅವರು ಶಕ್ತಿಶಾಲಿ ಮತ್ತು ಭ್ರಷ್ಟ ವೈರಿಯನ್ನು ಎದುರಿಸುವ ಕಥಾನಕವನ್ನು ಹೊಂದಿದೆ. ರಿತೇಶ್ ದೇಶಮುಖ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. 2018ರ ಸೂಪರ್ ಹಿಟ್ ಚಿತ್ರ ರೈಡ್ ಸರಣಿಯ ಯಶಸ್ಸಿನ ಆಧಾರದಲ್ಲಿ ಅನುಕ್ರಮಣಿಕೆಯನ್ನು ಹೆಣೆಯಲಾಗಿದೆ. ಇಡೀ ಕಥಾನಕದ ಭಾವನಾತ್ಮಕ ಬೆನ್ನೆಲುಬಾಗಿ ವಾಣಿ ಕಪೂರ್ ಅಭಿನಯಿಸಿದ್ದಾರೆ. ಪಟ್ನಾಯಕ್ ಅವರ ಕಾರ್ಯಗಳಿಗೆ ಬೆಂಬಲ ನೀಡುವ ಪತ್ನಿಯಾಗಿ ಗಮನ ಸೆಳೆದಿದ್ದಾರೆ.
ಹದಿನಾಲ್ಕನೇ ದಿನವಾದ ಬುಧವಾರ 'ರೈಡ್ 2' ಗಳಿಕೆ ಸ್ವಲ್ಪಮಟ್ಟಿಗೆ ಇಳಿದಿದ್ದರೂ, 3.35 ಕೋಟಿ ಸಂಗ್ರಹವಾಗಿದೆ ಎಂದು ಸ್ಕ್ಯಾನ್ ಲಿಕ್ ಅಂದಾಜಿಸಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 133.45 ಕೋಟಿ ತಲುಪಿದೆ. ಈ ಮೊದಲಿನ ವಾರದ ದಿನಗಳ ಗಳಿಕೆಯಿಂದ ಇದು ಕಡಿಮೆಯಾದರೂ, ಚಿತ್ರಾಸಕ್ತರಲ್ಲಿ ನಿಯತ ಆಸಕ್ತಿಯನ್ನು ಉಳಿಸಿಕೊಂಡಿದೆ. ಚಿತ್ರಕ್ಕೆ ಸ್ಪರ್ಧೆ ನೀಡುವ ಯಾವ ಚಿತ್ರಗಳೂ ಸದ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲದಿರುವುದರಿಂದ ನಗರಗಳಲ್ಲಿ ಪ್ರೇಕ್ಷಕರ ಬೆಂಬಲ ಮುಂದುವರಿಯಲಿದೆ. ಪ್ರೇಕ್ಷಕರ ಭರ್ತಿ ಪ್ರಮಾಣ ಮಾರ್ನಿಂಗ್ ಶೋದಲ್ಲಿ ಶೇಕಡ 4.99 ಇದ್ದರೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಕ್ರಮವಾಗಿ ಶೇಕಡ 10.5, 10.58 ಹಾಗೂ 15.15ರಷ್ಟಿದೆ.
ಭಾರತದಲ್ಲಿ ಉತ್ತಮ ಗಳಿಕೆ ಹೊಂದಿರುವ 'ರೈಡ್-2' ವಿದೇಶಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದೆ. 13ನೇ ದಿನವಾದ ಮಂಗಳವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ 10 ಲಕ್ಷ ರೂಪಾಯಿ ಗಳಿಕೆ ಕಂಡುಬಂದಿದ್ದು, ಒಟ್ಟು ಸಾಗರೋತ್ತರ ಗಳಿಕೆ 19.60 ಕೋಟಿ ತಲುಪಿದೆ. ವಿಶ್ವಮಟ್ಟದಲ್ಲಿ ಚಿತ್ರದ ಒಟ್ಟು ಗಳಿಕೆ 174.25 ಕೋಟ ಆಗಿದ್ದು, ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರ ಜಾಗತಿಕವಾಗಿ ಗಳಿಸಿದ 184.6 ಕೋಟಿಯ ಸನಿಹಕ್ಕೆ ಬಂದಿದೆ.