Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬೇಲ್: ಕಾನೂನಿನ ಬೇಲಿಯಾಚೆಗೊಂದು ನ್ಯಾಯ...

ಬೇಲ್: ಕಾನೂನಿನ ಬೇಲಿಯಾಚೆಗೊಂದು ನ್ಯಾಯ ತೀರ್ಮಾನ

ಶಶಿಕರ ಪಾತೂರುಶಶಿಕರ ಪಾತೂರು3 Oct 2026 3:29 PM IST
share
ಬೇಲ್: ಕಾನೂನಿನ ಬೇಲಿಯಾಚೆಗೊಂದು ನ್ಯಾಯ ತೀರ್ಮಾನ

ಚಿತ್ರ: ಬೇಲ್

ನಿರ್ದೇಶನ: ಪವನ್ ಒಡೆಯರ್

ನಿರ್ಮಾಣ: ಕೆ.ವಿ.ಎನ್.

ತಾರಾಗಣ: ಶಿವರಾಜ್ ಕುಮಾರ್, ಸಾಯಿ ಕುಮಾರ್, ಜಯರಾಮ್ ಮೊದಲಾದವರು

ಕಾನೂನಿನಲ್ಲಿ ಲೋಪಗಳಿರುತ್ತವೆ. ಅವುಗಳನ್ನು ಬಳಸಿಕೊಂಡು ಅಪರಾಧಿಗಳು ಕೂಡ ಸುಲಭದಲ್ಲಿ ಜಾಮೀನು ಪಡೆಯುತ್ತಾರೆ. ಹೀಗೆ ಬೇಲ್ ಮೇಲೆ ಹೊರಬರುವ ಪಾತಕಿಗಳೆಲ್ಲ ಒಬ್ಬೊಬ್ಬರಾಗಿ ಹತ್ಯೆಯಾಗುತ್ತಾರೆ. ಈ ಕೊಲೆಗಳ ಹಿಂದಿರುವ ಶಕ್ತಿಯ ಹುಡುಕಾಟಕ್ಕೆ ಪೊಲೀಸ್ ಇಲಾಖೆ ಸಿದ್ಧವಾಗುತ್ತದೆ. ಆದರೆ ಆ ಶಕ್ತಿ ಯಾರು? ಇಂಥದ್ದೊಂದು ಸರಣಿ ಹತ್ಯೆಯ ಗುರಿ ಸೃಷ್ಟಿಯಾಗಿದ್ದು ಹೇಗೆ? ಎಲ್ಲದಕ್ಕೂ ಚಿತ್ರದಲ್ಲಿ ಸ್ಪಷ್ಟ ಉತ್ತರವಿದೆ.

ಪಾತಕಿಗಳ ವಿರುದ್ಧ ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿ ಚಿತ್ರದ ನಾಯಕ ಎನ್ನುವುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಆರಂಭದಲ್ಲೇ ಅದರ ಸುಳಿವು ಕೂಡ ನೀಡಲಾಗುತ್ತದೆ. ಆತನ ಹೆಸರು

ವಿಜಯ್. ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತಿಗೊಂಡಂಥ ವ್ಯಕ್ತಿ. ಆದರೆ ಖಾಕಿಯಲ್ಲಿದ್ದಾಗ ಮಾಡದಿದ್ದಂಥ ನ್ಯಾಯದ ಪರ ಹೋರಾಟವನ್ನು ಈಗ ಕೈಗೆತ್ತಿಕೊಳ್ಳುತ್ತಾನೆ. ಈ ಕೃತ್ಯದಲ್ಲಿ ಆತನ ಇಬ್ಬರು ಮಿತ್ರರು ಕೈಜೋಡಿಸುತ್ತಾರೆ.

ಮೊದಲ ಬಾರಿಗೆ ಶಿವರಾಜ್ ಕುಮಾರ್ ತಮ್ಮ ವಯಸ್ಸಿನದೇ ಪಾತ್ರ ಮಾಡಿದ್ದಾರೆ. ವಿಜಯ್ ಎನ್ನುವ ಹೆಸರಲ್ಲಿ ಅವರು ಒಂದೊಂದೇ ವಿಜಯದ ಮೆಟ್ಟಿಲೇರುವಾಗ ಪ್ರತೀ ಪ್ರೇಕ್ಷಕರು ಕೂಡ ಸಂಭ್ರಮಿಸುತ್ತಾರೆ. ಒಂದೊಂದು ಹತ್ಯೆಯನ್ನು ಕೂಡ ತಂತ್ರಜ್ಞಾನ ಬಳಸಿ ಮಾಡುವ ರೀತಿಯಲ್ಲಿ ‘ಅಪ್ಪು ರಾಜ’ದ ಕಮಲ್ ಹಾಸನ್ ನೆನಪಾಗುತ್ತಾರೆ.

ಶಿವರಾಜ್ ಕುಮಾರ್ ನಟನೆಯ ಬಗ್ಗೆ ಎರಡು ಮಾತಿಲ್ಲ. ಎಲ್ಲೋ ಜೈಲರ್ ಪಾತ್ರದ ಮುಂದುವರಿದ ಭಾಗವೇನೋ ಎನ್ನುವ ಭಾವ ಮೂಡಿಸುತ್ತದೆ. ಅದು ಪಾತ್ರದ ಸ್ವಭಾವ ಮತ್ತು ಸ್ನೇಹಿತರ ವರ್ಗಕ್ಕಷ್ಟೇ ಸೀಮಿತ.

ನಿವೃತ್ತ ನ್ಯಾಯಾಧೀಶನಾಗಿ ಸಾಯಿ ಕುಮಾರ್ ಮತ್ತು ರಾಬರ್ಟ್ ಎನ್ನುವ ನಿವೃತ್ತ ವಿಜ್ಞಾನಿಯಾಗಿ ಮಲಯಾಳಂ ನಟ ಜಯರಾಮ್ ನಟಿಸಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಪೂರ್ತಿ ಕಥೆಯನ್ನು ಚಿತ್ರವಾಗಿಸುವುದರಲ್ಲಿ ಮಾತ್ರವಲ್ಲ, ಪಾತ್ರಕ್ಕೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡುವಲ್ಲಿಯೂ ಗೆದ್ದಿದ್ದಾರೆ. ಆರಂಭದಲ್ಲಿ ಸಾಯಿಕುಮಾರ್ ಮತ್ತು ಜಯರಾಮ್ ಅವರಿಗೆ ಈ ಪಾತ್ರಗಳು ಹೊಂದಿಕೊಳ್ಳದಂತೆ ಕಾಣುತ್ತದೆ. ಆದರೆ ಕೊನೆಯಾಗುವ ಹೊತ್ತಿಗೆ ಅವರಿಬ್ಬರು ಅಲಿ ಮತ್ತು ರಾಬರ್ಟ್ ಆಗಿ ಮಾತ್ರ ನೆನಪಲ್ಲಿ ಉಳಿಯುತ್ತಾರೆ.

ಶಿವಣ್ಣನ ಪತ್ನಿಯಾಗಿ ಸಂಗೀತಾ ಮತ್ತು ಪುತ್ರಿಯಾಗಿ ಸಂಜನಾ ಆನಂದ್ ತಮಗೆ ಲಭಿಸಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪೊಲೀಸ್ ತನಿಖಾಧಿಕಾರಿಯಾಗಿ ದೀಕ್ಷಿತ್ ಶೆಟ್ಟಿಯ ಪ್ರವೇಶ ಮಧ್ಯಂತರದ ಬಳಿಕ. ಅದರ ಬಳಿಕ ರಂಗ ಪ್ರವೇಶ ಮಾಡುವ ಲೂಸ್ ಮಾದ ಯೋಗಿ ತಾವು ಎಂಥ ನಟ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪ್ರವೃತ್ತಿಯಲ್ಲಿ ಮಹಾನ್ ಕ್ರೂರಿಯಾದರೂ ಎಂಥ ಸಂದರ್ಭದಲ್ಲೂ ಧ್ವನಿ ತಗ್ಗಿಸಿಕೊಂಡೇ ಮಾತನಾಡುವ ತಂತ್ರಗಾರಿಕೆ ಕಣ್ಮರೆಯಾದ ಖಳನಟ ಸುಂದರ ಕೃಷ್ಣ ಅರಸ್ ಅವರನ್ನು ನೆನಪಿಸುತ್ತದೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ರಮೇಶ್ ಇಂದಿರಾ ಅವರು ಕ್ಲೋಸಪ್ ದೃಶ್ಯವೊಂದರಲ್ಲಿ ಜಿದ್ದಾಜಿದ್ದಿ ಎನ್ನುವ ರೀತಿಯಲ್ಲಿ ನಟಿಸಿದ್ದಾರೆ.

ಒಂದೆರಡು ದೃಶ್ಯಗಳಲ್ಲಿ ಬಂದು ಹೋಗುವ ಉದ್ಯಮಿ ಸುನೀಲ್ ಪುರಾಣಿಕ್, ವಕೀಲನಾಗಿ ಹನುಮಂತೇಗೌಡ, ಪತ್ರಿಕಾ ಸಂಪಾದಕ ರಮೇಶ್ ಇಂದಿರಾ, ಸಂತ್ರಸ್ತೆಯ ಪೋಷಕರಾಗಿ ನಟಿಸಿದ ರಮೇಶ್ ಭಟ್, ಅರುಣಾ ಬಾಲಾಜಿ ಕೂಡ ಪಾತ್ರಗಳಾಗಿಯೇ ಗಮನ ಸೆಳೆಯುತ್ತಾರೆ.

ಉಗ್ರಗಾಮಿಗಳಿಂದ ಸ್ಟಾರ್ ಹೋಟೆಲ್ ಮೇಲೆ ನಡೆಯುವ ದಾಳಿಯಿಂದ ಚಿತ್ರ ಆರಂಭವಾಗುತ್ತದೆ. ಇನ್ನೇನು ಕಥೆ ಮತ್ತೊಂದು ‘ಕಾಶ್ಮೀರ್ ಫೈಲ್ಸ್’ನಂತೆ ಏಕಮುಖಿಯಾಗಿ ಸಾಗುವುದೇನೋ ಎನ್ನುವ ಆತಂಕ ಸೃಷ್ಟಿಯಾಗುವ ಹೊತ್ತಿಗೆ ನಿರ್ದೇಶಕರು ಪಥ ಬದಲಾಯಿಸುತ್ತಾರೆ. ಮತ್ತೋರ್ವ ಸಮಾಜ ದ್ರೋಹಿಯಾಗಿ ಸಿರಾಜ್ ಥಾಮಸ್ ಎನ್ನುವ ಹೆಸರು ಬರುತ್ತದೆ. ಪರದೇಶಕ್ಕೆ ನಮ್ಮ ಗುಟ್ಟುಗಳನ್ನು ಮಾರಿದ ವ್ಲಾಗರ್ ಸೇರಿದಂತೆ ನೈಜ ಘಟನೆಗಳಲ್ಲಿದ್ದಂಥ ಎಲ್ಲ ಧರ್ಮಗಳ ಸಮಾಜ ದ್ರೋಹಿಗಳ ಬಗ್ಗೆಯೂ ತೋರಿಸುತ್ತಾ ಹೋಗುತ್ತಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಲಿ ಎನ್ನುವುದಕ್ಕೆ ಇರಬೇಕು ನಾಯಕನ ಸ್ನೇಹಿತರಲ್ಲೂ ಒಬ್ಬ ಮುಸಲ್ಮಾನ ಮತ್ತು ಇನ್ನೋರ್ವ ಕ್ರಿಶ್ಚಿಯನ್ ಪಾತ್ರಗಳೆಂದು ತೋರಿಸಿದ್ದಾರೆ. ಹಾಗಂತ ಹಳೆಯ ಅಮರ್ ಅಕ್ಬರ್ ಆ್ಯಂಟನಿ ಕಥೆ ಹೇಳದೆ ಹೊಸಕಾಲದ ಗಂಡಾಂತರಗಳ ದರ್ಶನ ಮಾಡಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತದಲ್ಲಿನ ಮೂರು ಹಾಡುಗಳು ಕೂಡ ಈ ಹಿಂದೆ ಎಲ್ಲೋ ಕೇಳಿ ಮರೆತಂಥ ಭಾವ ಸೃಷ್ಟಿಸುತ್ತವೆ. ಸ್ವತಃ ಪವನ್ ಒಡೆಯರ್ ರಚನೆಯಲ್ಲಿ ಮೂಡಿರುವ ‘ಉಸಿರು ನೀನೇ..’ ಗೀತೆ ವಿಜಯ್ ಯೇಸುದಾಸ್ ಕಂಠದಲ್ಲಿ ಮನಸೇರುವಂತೆ ಮೂಡಿ ಬಂದಿದೆ. ಹಿನ್ನೆಲೆ ಸಂಗೀತ ಕೂಡ ದೃಶ್ಯದೊಂದಿಗೆ ಸೇರಿಕೊಂಡಿದೆ.

ಸಂಭಾಷಣೆಯ ವಿಚಾರಕ್ಕೆ ಬಂದರೆ ಪವನ್ ಒಡೆಯರ್ ತಮ್ಮತನ ಕಾಯ್ದುಕೊಂಡಿದ್ದಾರೆ.

ನಿವೃತ್ತ ನ್ಯಾಯಾಧೀಶ ಮುಸಲ್ಮಾನನಾಗಿದ್ದರೆ ಆತನ ಕೃತ್ಯಗಳನ್ನು ಕೂಡ ಜನ ಹೇಗೆ ಧರ್ಮದ ಆಧಾರದಲ್ಲಿ ಗುರುತಿಸುತ್ತಾರೆ ಎನ್ನುವ ಸೂಕ್ಷ್ಮವಾದ ಮಾತುಗಳನ್ನು ನಿರ್ದೇಶಕರು ಪಾತ್ರದ ಮೂಲಕ ಹೇಳಿಸಿದ್ದಾರೆ. ಆದರೆ ಹಾಸ್ಯಕ್ಕಾಗಿ ದ್ವಯಾರ್ಥದ ಹೊಸಿಲಲ್ಲಿ ಸುಳಿದಿದ್ದಾರೆ. ಒಂದು ಕಾಕ್ರೋಚ್ ಸಾಯಿಸುವುದರಿಂದ ಎಲ್ಲ ಮುಗಿಯುವುದಿಲ್ಲ ಎನ್ನುವ ಸಂಭಾಷಣೆ ಕಾಕತಾಳೀಯವಲ್ಲ ಅನಿಸುತ್ತದೆ. ಉದ್ದೇಶ ಪೂರ್ವಕವೇ ಆಗಿದ್ದಲ್ಲಿ ಚಿತ್ರದಲ್ಲಿ ಅದನ್ನು ಶಿವಣ್ಣನಿಂದ ಹೇಳಿಸುವ ಅಗತ್ಯ ಇರಲಿಲ್ಲ.

ಪೂರ್ತಿ ಸಿನೆಮಾ ಎಲ್ಲಿಯೂ ನೀರಸವೆನಿಸದಂತೆ ಮೂಡಿರುವ ಈ ಚಿತ್ರ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಮಾತ್ರವಲ್ಲ, ಆ್ಯಕ್ಷನ್ ಥ್ರಿಲ್ಲರ್ ಪ್ರಿಯರಿಗೆ ಮೆಚ್ಚುಗೆಯಾಗುವಂತೆ ಮೂಡಿಬಂದಿದೆ

(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)

Tags

Bailmovie
share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X