‘ಜೈಲರ್’ ಚಿತ್ರದಲ್ಲಿ ರಜನಿ ಗೆಟಪ್ಗೆ ಅಭಿಮಾನಿಗಳು ಫಿದಾ

credit:(indiatoday.in)
ಜೈಲರ್ ಚಿತ್ರ ತೆರೆ ಕಾಣಲು ಕ್ಷಣಗಣನೆ ಆರಂಭವಾಗಿದೆ. ಎಂಟು ದಿನಗಳಲ್ಲಿ ಬಿಡುಗಡೆಯಾಗುವ ಚಿತ್ರವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತೆರೆಯ ಮೇಲೆ ಮತ್ತೆ ರಜನೀಕಾಂತ್ ಅವರನ್ನು ಕಾಣಲು ಉತ್ಸುಕರಾಗಿದ್ದಾರೆ. ಮೇ ತಿಂಗಳಲ್ಲಿ ಪ್ರೊಮೊ ಬಿಡುಗಡೆಯಾದ ಬಳಿಕ, ಆಗಸ್ಟ್ 2ರಂದು ಟ್ರೈಲರ್ ಅಂತಿಮವಾಗಿ ಅನಾವರಣಗೊಂಡಿದೆ. ಆಗಸ್ಟ್ 10 ಆದಷ್ಟು ಬೇಗ ಬರಲಿ ಎಂಬ ನಿರೀಕ್ಷೆಯಲ್ಲಿ ರಜನಿ ಅಭಿಮಾನಿಗಳು ಇದ್ದಾರೆ.
ರಜನಿಕಾಂತ್ ಮತ್ತೆ "ಜೈಲರ್" ರೂಪದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರದ ಅಧಿಕೃತ ಟ್ರೈಲರ್ ಬುಧವಾರ ಬಿಡುಗಡೆಯಾಗಿದೆ. ಈ ಆ್ಯಕ್ಷನ್ ಚಿತ್ರದ ವಿಕ್ಷಣೆಗಾಗಿ ರಜನಿ ಅಭಿಮಾನಿಗಳು ಕಾತರರಾಗಿದ್ದಾರೆ.
ಅಪೂರ್ವ ನಟನಾ ಕೌಶಲದಿಂದ ಮನಗೆದ್ದಿರುವ ರಜನೀಕಾಂತ್, ಜೈಲರ್ ಟ್ರೈಲರ್ ನಲ್ಲಿ ಅತ್ಯದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಕಣ್ಮನ ಸೂರೆಗೊಳ್ಳುವ ದೃಶ್ಯಗಳ ಜತೆಗೆ ಒಳಸಂಚಿನ ಕಥಾನಕವನ್ನು ಒಳಗೊಂಡಿರುವ ಚಿತ್ರ, ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ. ಪ್ರಭಾವಿ ಆ್ಯಕ್ಷನ್ ಹಾಗೂ ದೃಶ್ಯಾವಳಿಗಳನ್ನು ಒಳಗೊಂಡ ಚಿತ್ರದಲ್ಲಿ ಕಣ್ಣುಕುಕ್ಕುವ ಛಾಯಾಗ್ರಹಣವಿದೆ.
ಜೈಲರ್ ಚಿತ್ರ ಪರಿಪೂರ್ಣ ಸಾಹಸಮಯ ಮತ್ತು ಮನೋರಂಜನಾ ಚಿತ್ರ. ನೆಲ್ಸನ್ ದಿಲೀಪ್ಕುಮಾರ್ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ರಜನೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕಿ ಶ್ರಾಫ್, ರಮ್ಯ ಕೃಷ್ಣನ್, ತಮನ್ನಾ, ಮತ್ತು ವಿನಾಯಕನ್ ತಾರಾಗಣದಲ್ಲಿದ್ದಾರೆ. ಅಂತೆಯೇ ಶಿವರಾಜ್ ಕುಮಾರ್ ಕೂಡಾ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ.







