Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ‘‘ವಿಭಿನ್ನ ಪಾತ್ರಗಳ ನಟನೆಗೆ ನಾನು ಸದಾ...

‘‘ವಿಭಿನ್ನ ಪಾತ್ರಗಳ ನಟನೆಗೆ ನಾನು ಸದಾ ಸಿದ್ಧ’’-ಇಳಾ ವಿಟ್ಲ

ಶಶಿಕರ ಪಾತೂರುಶಶಿಕರ ಪಾತೂರು10 Oct 2026 12:00 PM IST
share
‘‘ವಿಭಿನ್ನ ಪಾತ್ರಗಳ ನಟನೆಗೆ ನಾನು ಸದಾ ಸಿದ್ಧ’’-ಇಳಾ ವಿಟ್ಲ

ದಶಕದ ಹಿಂದೆ ಕಿರುತೆರೆಯಲ್ಲಿ ಜನಪ್ರಿಯ ಖಳನಟಿ. ಈಗ ನೋಡಿದರೆ ‘ಪ್ರೇಮದ ಊರಲಿ’ ಚಿತ್ರದಲ್ಲಿ ಪ್ರೀತಿ ಜೊತೆ ನೀತಿ ಕಥೆ ಹೇಳುವ ಅಜ್ಜಿ! ಮಾಡುವ ಪ್ರತೀ ಪಾತ್ರದಲ್ಲೂ ವಿಭಿನ್ನತೆಗಾಗಿ ಶ್ರಮಿಸುವವರು ಇಳಾ ವಿಟ್ಲ. ಸ್ವತಃ ನಿರ್ಮಿಸುತ್ತಿರುವ ಚಿತ್ರದಲ್ಲಿ ಬೋಲ್ಡ್ ನಾಯಕಿ. ಆದರೆ ಪ್ರಯೋಗ ಎಂದು ಬಂದರೆ ಯಾವುದನ್ನೂ ಯೋಚಿಸದ ಈ ಇಳಾರಿಗೆ ಈಗ ಇಂಡಸ್ಟ್ರಿ ಹಿಟ್‌ನ ಭಾಗವಾದ ಸಂಭ್ರಮ.

‘ಪ್ರೇಮದ ಊರಲಿ’ ಚಿತ್ರದ ಅದ್ಭುತ ಯಶಸ್ಸನ್ನು ಅದರಲ್ಲೊಬ್ಬ ಕಲಾವಿದೆಯಾದ ನೀವು ಹೇಗೆ ನೋಡುತ್ತೀರಿ?

ಇಳಾ ವಿಟ್ಲ: ಈ ಗೆಲುವು ಭ್ರಮೆ ಎಂಬಂತಿದೆ! ದಶಕದ ಹಿಂದೆ ‘ಕಾದಂಬರಿ’ಯ ಖಳನಟಿಯಾಗಿ ‘ತಾರಾ’ ಪಾತ್ರದಲ್ಲಿ ಸಿಕ್ಕ ಜನಪ್ರಿಯತೆಯ ಖುಷಿ ಆನಂತರ ನನಗೆ ಸಿಕ್ಕಿದ್ದು ಈಗಲೇ. ಈ ಭೂಮಿಗೆ ಬಂದಾಗಿನಿಂದ ನನಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞಳಾಗಿದ್ದೇನೆ.

ನಿಮ್ಮ ಪಾತ್ರದ ಬಗ್ಗೆ ಎಷ್ಟು ಸಂತೃಪ್ತಿ ಇದೆ?

ಇಳಾ ವಿಟ್ಲ: ನನಗೆ ನೂರಕ್ಕೆ ಇನ್ನೂರರಷ್ಟು ತೃಪ್ತಿ ಇದೆ. ಯಾಕೆಂದರೆ ಎಂತಹ ಪಾತ್ರ ಕೊಟ್ಟರೂ ನಿಭಾಯಿಸಬಲ್ಲೆ ಎನ್ನುವ ನನ್ನ ನಂಬಿಕೆ ಸಾಕಾರವಾಯಿತು. ನಿರ್ದೇಶಕರಿಂದ ಹಿಡಿದು ಪ್ರೇಕ್ಷಕರ ತನಕ ಎಲ್ಲರೂ ನನ್ನ ನಟನೆಗೆ ಮೆಚ್ಚುಗೆಯ ಮಾತಾಡಿದ್ದಾರೆ. ಮೇಕಪ್ ಬಗ್ಗೆ ಸಹಜ ಅಸಮಾಧಾನ ತೋರಿದವರೂ ಇದ್ದಾರೆ. ಅಂತಿಮವಾಗಿ ನಟಿಯಾಗಿ ಜನರ ಪ್ರೀತಿ ಸಿಕ್ಕಿರುವುದಂತೂ ಸತ್ಯ.

ಒಂದಷ್ಟು ಮಂದಿ ನಿಮ್ಮ ಪಾತ್ರ ಉಮಾಶ್ರೀಯವರು ಮಾಡಬೇಕಿತ್ತು ಅಂತಿದ್ದಾರಲ್ಲ?

ಇಳಾ ವಿಟ್ಲ: ಅವರಿಗೆ ಉಮಾಶ್ರೀಯವರು ನೆನಪಾಗಲು ಕಾರಣ ‘ಪುಟ್ನಂಜ’ದಲ್ಲಿನ ಅವರ ಅಜ್ಜಿ ಪಾತ್ರ. ಅಜ್ಜಿ ಪಾತ್ರ ಹೇಗಾದರೂ ಮಾಡಬಹುದು. ಆದರೆ ಅಷ್ಟೊಂದು ವಯಸ್ಸಾದ ಗಟ್ಟಿಗಿತ್ತಿ ಅಜ್ಜಿ ಅಂದರೆ ಆಗ ಉಮಾಶ್ರೀ ಅವರ ಶೈಲಿಯೇ ಸರಿ. ಯಾಕೆಂದರೆ ಅದು ಸಹಜತೆಯನ್ನು ಅರೆದು ತಯಾರು ಮಾಡಿದ ‘ಒಡಲಾಳ’ ನಾಟಕದ ಪಾತ್ರ. ಹಾಗಾಗಿ ನಾನೇ ಅಜ್ಜಿಯ ನೈಜತೆ ಮೂಡಿಸಿದರೂ ತಿರುಗಿ ಅವರ ಪಾತ್ರದ ಹೋಲಿಕೆ ಸಹಜ. ಆದರೆ ನಾನೇ ಸ್ವಂತ ಶ್ರಮ ಹಾಕಿ ಸೊಂಟ ಬಗ್ಗಿಸಿ, ಕಂಠ ಬದಲಾಯಿಸಿ ಮಾಡಿದಂಥ ಪಾತ್ರ ಇದು! ಒಂದು ವೇಳೆ ಮಂಗಳೂರು ಕಡೆಯ ಅಜ್ಜಿಯಾಗಿದ್ದರೆ ಭಾಷೆಯಲ್ಲಾದರೂ ಬದಲಾವಣೆ ತೋರಿಸುತ್ತಿದ್ದೆ!

ನೀವು ಮಂಗಳೂರು ಭಾಗದವರಾಗಿ ಕೂಡ ಮಂಗಳೂರು ತಂಡದವರ ಸಿನೆಮಾಗಳಲ್ಲಿ ಯಾಕೆ ನಟಿಸಿಲ್ಲ?

ಇಳಾ ವಿಟ್ಲ: ನೀವು ಸರಿಯಾಗಿ ಅವರ ಸಿನೆಮಾಗಳನ್ನು ಗಮನಿಸಿದರೆ ಅವರ ಚಿತ್ರಗಳ ಸಾರಥ್ಯ ಮಾತ್ರ ಮಂಗಳೂರಿಗರ ಕೈಯಲ್ಲಿರುತ್ತದೆ. ಉಳಿದಂತೆ ಎಲ್ಲ ಕಡೆಯ ಪ್ರತಿಭಾವಂತ ಕಲಾವಿದರನ್ನು ಬಳಸುತ್ತಾರೆ. ಉದಾಹರಣೆಗೆ ‘ಸು ಫ್ರಮ್ ಸೋ’ನಲ್ಲಿ ನಟಿಸಿದ ಸಂಧ್ಯಾ ಅರಕೆರೆ ಅವರನ್ನೇ ನೆನಪಿಸಬಹುದು. ಅಂಥ ಪಾತ್ರಗಳನ್ನು ನನಗೂ ಕೊಟ್ಟರೆ ಖಂಡಿತಾ ನಾನು ಅದೃಷ್ಟವಂತೆ ಎಂದೇ ಹೇಳಬಹುದು. ನನಗೆ ಇದುವರೆಗೂ ಮಂಗಳೂರಿನ ಯಾವ ತಂಡದ ಭೇಟಿಗೂ ಅವಕಾಶ ಸಿಕ್ಕಿಲ್ಲ. ನಿಮ್ಮ ಈ ಸಂದರ್ಶನ ನೋಡಿದ ರಿಷಬ್ ಸರ್, ರಕ್ಷಿತ್ ಸರ್, ರಾಜ್ ಬಿ. ಶೆಟ್ಟಿ ಸರ್, ಕಿರಣ್ ರಾಜ್ ಸರ್, ಜೆ.ಪಿ. ತೂಮಿನಾಡು ಸರ್ ಮೊದಲಾದವರು ಕರೆದರೆ ಖಂಡಿತಾ ಓಡೋಡಿ ಹೋಗಿ ನಟಿಸುತ್ತೇನೆ!

ನಿಮಗೆ ಸದಾ ವಿಭಿನ್ನ ಪಾತ್ರಗಳಲ್ಲೇ ಆಸಕ್ತಿ ಮೂಡಲು ಕಾರಣವೇನು?

ಇಳಾ ವಿಟ್ಲ: ಜನರ ಮಧ್ಯೆ ನಟಿಯಾಗಿ ಹೆಸರಾದ ಬಳಿಕ ಪ್ರತೀ ಕಲಾವಿದೆಗೂ ಪಾತ್ರಗಳಾಗಿ ಜನರಿಂದ ಗುರುತಿಸಿಕೊಳ್ಳುವುದೇ ದೊಡ್ಡ ಸಾಧನೆ. ಇಳಾ ವಿಟ್ಲ ಅಂದ ತಕ್ಷಣ ಒಂದೆರಡು ವಿಭಿನ್ನ ಪಾತ್ರಗಳು ನೆನಪಾದರೆ ಅದರಷ್ಟು ಸಾರ್ಥಕತೆ ಬೇರೇನಿದೆ? ನನ್ನ ಇಂಥ ಮೆಂಟಾಲಿಟಿಗೆ ಹೊಂದುವಂತೆ ಸಿಕ್ಕವರೇ ನಿರ್ದೇಶಕ ಮನೋಜ್ ಕುಮಾರ್. ಅವರ ಈ ಹಿಂದಿನ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಅಕ್ಷಿ’ಯಲ್ಲೂ ನನಗೆ ವಿಭಿನ್ನ ಪಾತ್ರ ನೀಡಿದ್ದರು. ಅದರಲ್ಲಿ ಹಳ್ಳಿಯ ಬಡ, ಮುಗ್ಧ ಹೆಣ್ಣು ಮಗಳಾಗಿ ನಟಿಸಿದ್ದೆ. ಈ ಬಾರಿಯೂ ಅಜ್ಜಿಯಾಗಿ ದೊಡ್ಡ ಪಾತ್ರವನ್ನೇ ನೀಡಿದ್ದರು. ಆದರೆ ಮೇಕಪ್ ಸೇರಿದಂತೆ ಕೆಲವು ಕಾರಣಗಳಿಂದಾಗಿ ನಾನಿದ್ದ ಏಳೆಂಟು ದೃಶ್ಯಗಳನ್ನು ಕತ್ತರಿಸಬೇಕಾಗಿ ಬಂದಿತ್ತು.

(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)

Tags

Eela Vitla
share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X