ʼಜೈಲರ್ 2ʼ ಟ್ರೇಲರ್ ಬಿಡುಗಡೆ; ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನೀಕಾಂತ್ ಅಬ್ಬರದ ನಿರೀಕ್ಷೆ

ರಜನೀಕಾಂತ್ | Photo Credit : imdb.com
2023ರಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶಿಸಿದ್ದಾರೆ. ಟ್ರೇಲರ್ನಲ್ಲಿ ರಜನೀಕಾಂತ್ ಮಾಸ್ ಅವತಾರ, ಆಕ್ಷನ್ ದೃಶ್ಯಗಳು, ಥ್ರಿಲ್ ಮತ್ತು ನೆಲ್ಸನ್ ಶೈಲಿಯ ಹಾಸ್ಯದ ಝಲಕ್ ಕಾಣಿಸಿಕೊಂಡಿದೆ.
ಸೂಪರ್ ಸ್ಟಾರ್ ರಜನೀಕಾಂತ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಜೈಲರ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಮ್ಮೆ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನೀಕಾಂತ್ ಅಬ್ಬರಿಸುವ ಸೂಚನೆ ದೊರೆತಿದೆ. 2023ರ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾದ ಈ ಸಿನಿಮಾ ಅಕ್ಟೋಬರ್ 15ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
2023ರಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶಿಸಿದ್ದಾರೆ. ಟ್ರೇಲರ್ನಲ್ಲಿ ರಜನೀಕಾಂತ್ ಮಾಸ್ ಅವತಾರ, ಆಕ್ಷನ್ ದೃಶ್ಯಗಳು, ಥ್ರಿಲ್ ಮತ್ತು ನೆಲ್ಸನ್ ಶೈಲಿಯ ಹಾಸ್ಯದ ಝಲಕ್ ಕಾಣಿಸಿಕೊಂಡಿದೆ.
ಟ್ರೇಲರ್ ಆರಂಭದಲ್ಲೇ ಎರಡು ತಿಂಗಳಿನಿಂದ ನಡೆಯುತ್ತಿರುವ ಭಾರೀ ಅವಾಂತರಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಆ ವ್ಯಕ್ತಿಯ ನಿಜವಾದ ಗುರುತು ಪತ್ತೆಹಚ್ಚುವುದು ಅಸಾಧ್ಯ ಎಂಬ ಮಾತುಗಳ ನಡುವೆ ಅನಿರುದ್ಧ ರವಿಚಂದ್ರನ್ ಅವರ ಸಂಗೀತದ ಜೊತೆಗೆ ರಜನೀಕಾಂತ್ ಅವರ ಪ್ರವೇಶವಾಗುತ್ತದೆ. ‘ಜೈಲರ್’ ಚಿತ್ರದಲ್ಲಿ ನಿವೃತ್ತ ಜೈಲರ್ ಪಾತ್ರದಾರಿ ರಜನೀಕಾಂತ್ ವಿಗ್ರಹ ಕಳ್ಳಸಾಗಣೆ ಜಾಲದ ವಿರುದ್ಧ ಹೋರಾಡಿದ್ದರು. ಎರಡನೇ ಭಾಗದಲ್ಲಿ ಅದೇ ಜಾಲವು ಅವರ ವಿರುದ್ಧ ತಿರುಗಿ ಬೀಳುತ್ತದೆ, ಟೈಗರ್ ಅವರನ್ನು ಮತ್ತೆ ಸಂಘರ್ಷಕ್ಕೆ ಎಳೆಯುತ್ತದೆ.
ಟೈಗರ್ ದೂರದ ಹಳ್ಳಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಾ ಶಾಂತಿಯುತ ಜೀವನ ನಡೆಸುತ್ತಿರುವುದು ಟ್ರೇಲರ್ನಲ್ಲಿ ಕಂಡುಬರುತ್ತದೆ. ಆದಾಗ್ಯೂ ಅವರ ಹಿಂದಿನ ಸಹಚರರು ಮತ್ತು ಹೊಸ ಶತ್ರುಗಳು ಅವರನ್ನು ಹುಡುಕಲು ಪ್ರಾರಂಭಿಸುವುದರಿಂದ ಅವರ ಭೂತಕಾಲವು ಮತ್ತೆ ಬೆನ್ನಟ್ಟುತ್ತದೆ.
ಎರಡನೇ ಭಾಗದಲ್ಲಿ ಸಂಘರ್ಷದ ವಿವಿಧ ಬದಿಗಳಲ್ಲಿ ನಿಲ್ಲುವ ಹಲವಾರು ಪಾತ್ರಗಳಿರುತ್ತವೆ. ಇದರಲ್ಲಿ ಎಸ್ ಜೆ ಸೂರ್ಯ ಮುಖ್ಯವಾಗಿ ಕಾಣಿಸಿಕೊಂಡಿದ್ದು, ಪ್ರಮುಖ ಖಳನ ಪಾತ್ರವನ್ನು ನಿರ್ವಹಿಸುತ್ತಿರುವಂತೆ ತೋರುತ್ತದೆ. ಹಾಗಿದ್ದರೂ ಪಾತ್ರಗಳು ಮತ್ತು ಉದ್ದೇಶಗಳ ಬಗ್ಗೆ ಟ್ರೇಲರ್ ಹೆಚ್ಚಿನ ಮಾಹಿತಿ ನೀಡುವುದಿಲ್ಲ.
ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ವಿದ್ಯಾ ಬಾಲನ್ ಕೂಡ ಟ್ರೇಲರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ವಿವರಗಳನ್ನು ಗೌಪ್ಯವಾಗಿಡಲಾಗಿದ್ದು, ಟೈಗರ್ ಜೊತೆಗೆ ಅವರ ಪಾತ್ರಕ್ಕೆ ಇರುವ ಸಂಬಂಧದ ಬಗ್ಗೆ ಟ್ರೇಲರ್ನಲ್ಲಿ ಸುಳಿವಿಲ್ಲ.
ಜಾಕಿ ಶ್ರಾಫ್ ಮತ್ತು ಮೋಹನ್ ಲಾಲ್ ಅವರೂ ಸಂಕ್ಷಿಪ್ತವಾಗಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿರುವ ಶಿವರಾಜ್ಕುಮಾರ್, ಇದೀಗ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟಿಸುವುದು ಖಚಿತವಾಗಿದ್ದ ವಿಜಯ್ ಸೇತುಪತಿ ಟ್ರೇಲರ್ನಲ್ಲಿ ಕಾಣಿಸಿಕೊಂಡಿಲ್ಲ.
ಎಸ್ ಜೆ ಸೂರ್ಯ, ಯೋಗಿ ಬಾಬು ಸೇರಿದಂತೆ ಹಲವು ಕಲಾವಿದರು ಟ್ರೇಲರ್ನಲ್ಲಿ ಗಮನ ಸೆಳೆದಿದ್ದಾರೆ. ಅನಿರುದ್ಧ್ ಸಂಗೀತ ನೀಡಿದರೆ, ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಮತ್ತು ಆರ್ ನಿರ್ಮಲ್ ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.






