‘ಜನ ನಾಯಗನ್’ ಟ್ರೇಲರ್ ಗೆ 5 ನಿಮಿಷಗಳಲ್ಲಿ 5 ಮಿಲಿಯನ್ ಗೂ ಮೀರಿದ ವೀಕ್ಷಣೆ

Photo Credit ; youtube
2 ನಿಮಿಷ 52 ಸೆಕೆಂಡುಗಳ 'ಜನ ನಾಯಗನ್' ಟ್ರೈಲರ್ ಅದ್ಭುತ ಆಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ.
ತಮಿಳು ನಟ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಯಾಗಿದ್ದು, ವೀಕ್ಷಣೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಟ್ರೇಲರ್ ಬಿಡುಗಡೆಯಾದ 5 ನಿಮಿಷಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವ ದಾಖಲೆ ಬರೆದಿದೆ. ರವಿವಾರ ಬೆಳಗ್ಗಿನ ಹೊತ್ತಿಗೆ ಒಟ್ಟು 2.5 ಕೋಟಿಗೂ ಮೀರಿದ ವೀಕ್ಷಣೆ ಪಡೆದಿದೆ.
ಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರದ ಟ್ರೈಲರ್ ಶನಿವಾರ ಸಂಜೆ ಬಿಡುಗಡೆಯಾಗಿದೆ. ಸಿನಿಮಾದ ಟ್ರೇಲರ್ ಇಡೀ ಇಂಟರ್ನೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. 2 ನಿಮಿಷ 52 ಸೆಕೆಂಡುಗಳ 'ಜನ ನಾಯಗನ್' ಟ್ರೈಲರ್ ಅದ್ಭುತ ಆಕ್ಷನ್, ರೋಮಾಂಚಕ ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಪ್ರೇಕ್ಷಕರಿಗೆ ಚಿತ್ರದ ಭರ್ಜರಿ ಮೇಕಿಂಗ್ ಮತ್ತು ವಿಜಯ್ ಅವರ ಸ್ಟೈಲ್ ಇಷ್ಟವಾಗಿದೆ. ಸಿನಿಮಾ ಕೌಟುಂಬಿಕವಾಗಿ ನೋಡಬಹುದಾದ ಮನೋರಂಜನಾ ಚಿತ್ರ ಎಂದು ಚಿತ್ರತಂಡ ಹೇಳಿದೆ.
'ಜನ ನಾಯಗನ್' ಚಿತ್ರದಲ್ಲಿ ನಟ ವಿಜಯ್ ಅವರ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಎಚ್ ವಿನೋದ್ ನಿರ್ದೇಶನದ ಸಿನಿಮಾಗೆ ವೆಂಕಟ್ ಕೆ ನಾರಾಯಣ ಬಂಡವಾಳ ಹೂಡಿದ್ದಾರೆ. ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಹಾಗೂ ಪ್ರದೀಪ್ ಇ ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ.
ಈ ನಡುವೆ ಹೊಸ ವರ್ಷದ ಶುಭಾಶಯಗಳನ್ನು ಹೇಳುವ ಮೂಲಕ ವಿಜಯ್ ಪೋಸ್ಟ್ ಮಾಡಿರುವ ಚಿತ್ರಕ್ಕೆ 8 ಗಂಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಟಿವಿಕೆ ನಾಯಕ ವಿಜಯ್ ಅವರು ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ತಮ್ಮ ಕೈ ಮುಗಿಯುವ ಫೋಟೋ ಹಾಕುವ ಮೂಲಕ ಶುಭಾಶಯ ಕೋರಿದ್ದರು.







