ಯುವನಟ ಸಂತೋಷ್ ಬಾಲರಾಜ್ ನಿಧನ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಯುವ ನಟ ಸಂತೋಷ್ ಬಾಲರಾಜ್(38) ಅವರು ನಗರದ ಕುಮಾರಸ್ವಾಮಿ ಲೇಔಟ್‍ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.
ಸಂತೋಷ್ ಅವರು ಒಂದು ತಿಂಗಳಿಂದಲೂ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚಿಗೆ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಸಂತೋಷ್ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಸಂತೋಷ್ ಅವರು ಗಣಪ, ಕರಿಯ-2, ಕೆಂಪ, ಬಕ್ರ್ಲೀ ಸಿನಿಮಾಗಳಲ್ಲಿ ನಟಿಸಿದ್ದರು. ಮುಂದಿನ ಚಿತ್ರ ‘ಸತ್ಯ’ ಬಿಡುಗಡೆ ಆಗಬೇಕಿತ್ತು. ಅವರ ತಂದೆ ಆನೇಕಲ್ ಬಾಲರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿದ್ದರು.
Next Story





