Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ನೋಡಬಹುದಾದ ಒಂದು ಕ್ರೈಂ ಥ್ರಿಲ್ಲರ್ ...

ನೋಡಬಹುದಾದ ಒಂದು ಕ್ರೈಂ ಥ್ರಿಲ್ಲರ್ ಚಲನಚಿತ್ರ 'ಲವಿಂಗ್ ಅಡಲ್ಟ್ಸ್'

ಸಲೀಂ ಅಬ್ಬಾಸ್ ವಳಾಲುಸಲೀಂ ಅಬ್ಬಾಸ್ ವಳಾಲು7 Jan 2024 10:41 AM IST
share
ನೋಡಬಹುದಾದ ಒಂದು ಕ್ರೈಂ ಥ್ರಿಲ್ಲರ್  ಚಲನಚಿತ್ರ ಲವಿಂಗ್ ಅಡಲ್ಟ್ಸ್

ಮೊದಲ ದೃಶ್ಯದಿಂದಲೇ ಪ್ರೇಕ್ಷಕನನ್ನು ಕುರ್ಚಿಯ ಅಂಚಿನಲ್ಲಿ ಕೂರಿಸುವ 2022 ರಲ್ಲಿ ತೆರೆಕಂಡ ಡ್ಯಾನಿಶ್ ಮೂಲದ ಚಿತ್ರ ‘ಲವಿಂಗ್ ಅಡಲ್ಟ್ಸ್’ ( ಮೂಲ ಹೆಸರು- kaerlighed for voksne) ಕೊನೆವರೆಗೂ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

ಗಂಡ ಹೆಂಡತಿ ಮಧ್ಯೆ ಮನಸ್ತಾಪ, ಅಪನಂಬಿಕೆ... ಗಂಡನ ವಿವಾಹೇತರ ಸಂಬಂಧ..ಈಗಷ್ಟೇ ಚೇತರಿಸಿ ಕೊಳ್ಳುತ್ತಿರುವ ರೋಗಗ್ರಸ್ಥ ಹದಿಹರೆಯದ ಮಗ..ಹೆಂಡತಿಯ ಜಿಗುಟುತನ.. ಅದರ ನಡುವೆ ಘಟಿಸುವ ಒಂದು ಕೊಲೆ.. ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರು.. ಪ್ರೇಯಸಿಯ ಆಷಾಢಭೂತಿತನ... ನಾಯಕನ ಕ್ರೌರ್ಯ.. ಅಸಹಾಯಕತೆ.. ಇವೆಲ್ಲವುಗಳನ್ನು ನಿರ್ದೇಶಕಿ ಬಾರ್ಬರಾ ತೋಪ್ಸೆ ರೋಥನ್‌ಬರ್ಗ್ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಪ್ರೀತಿ ಮತ್ತು ದ್ವೇಷದ ಸುತ್ತ ತಿರುಗುವ ಕಥೆ ಕೊನೆಗೆ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ. ವಿವಾಹೇತರ ಸಂಬಂಧಗಳ ಕ್ಷಣಿಕ ಸುಖವನ್ನು ಚಿತ್ರ ಆಳದಲ್ಲಿ ಖಂಡಿಸುತ್ತದೆ.

ಅನ್ನಾ ಎಕ್‌ಬರ್ಗ್ ಅವರ ಕಾದಂಬರಿ ಆಧರಿಸಿ ತೆಗೆದ ಚಿತ್ರ ತಾಂತ್ರಿಕವಾಗಿ ಉತ್ಕೃಷ್ಟವಾಗಿದೆ. ಕ್ರಿಶ್ಚಿಯನ್ ಎಡೆನ್ಸ್ ಆ್ಯಂಡರ್ಸನ್ ಮತ್ತು ರಸ್ಮುಸ್ ಕ್ರಿಶ್ಚೆನ್ಸನ್ ರವರ ಸಂಗೀತ ಜುಗಲ್ಬಂದಿ ಚಿತ್ರದ ಓಟಕ್ಕೆ, ಥ್ರಿಲ್ಲರ್ ಎಲಿಮೆಂಟ್‌ಗೆ ಪೂರಕ ವಾಗಿದೆ. ಫಿಲಿಫ್ ಕ್ರೆಸ್‌ರವರ ಛಾಯಾಗ್ರಹಣ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು. ಒಳಾಂಗಣ ಮತ್ತು ಹೊರಾಂಗಣದ ಚಿತ್ರವನ್ನು ಫಿಲಿಫ್ ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ ಮತ್ತು ದೃಶ್ಯಗಳನ್ನು ಅತ್ಯಂತ ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಎಡಿಟರ್ ಲಾರ್ಸ್ ವಿಸ್ಸಿಂಗ್ ಕೇವಲ ೧೦೪ ನಿಮಿಷಗಳಲ್ಲಿ ತನ್ನ ಕಟ್ಸ್ ಮೂಲಕ ಚಿತ್ರವನ್ನು ಬೇಗನೆ ಮುಗಿಸಿ ಬಿಟ್ಟು ತಮ್ಮ ಕೈ ಚಳಕ ತೋರಿದ್ದಾರೆ.

ಇರಾಕ್ ಮೂಲದ ಡ್ಯಾನಿಶ್( ಡೆನ್ಮಾರ್ಕ್ ) ನಟ ದಾರ್ ಸಲೀಮ್ , ನಟಿ ಸೋನಿಯಾ ರೀಚರ್ ಮತ್ತು ಇತರ ಎಲ್ಲಾ ಸಹನಟರು ಅದ್ಭುತವಾಗಿ ನಟಿಸಿ ದ್ದಾರೆ. ‘ಲವಿಂಗ್ ಅಡಲ್ಟ್ಸ್’ ನೋಡಲೇಬೇಕಾದ ಒಂದು ಥ್ರಿಲ್ಲರ್ ಚಿತ್ರ.

ಚಿತ್ರ ಇಂಗ್ಲಿಷ್ ಡಬ್ಬಿಂಗ್ ಮತ್ತು ಸಬ್ ಟೈಟಲ್ ನೊಂದಿಗೆ ನೆಟ್ ಫ್ಲಿಕ್‌ನಲ್ಲಿ ಲಭ್ಯವಿದೆ. ಚಿತ್ರದ IMDb ರೇಟಿಂಗ್ 6.5/10

share
ಸಲೀಂ ಅಬ್ಬಾಸ್ ವಳಾಲು
ಸಲೀಂ ಅಬ್ಬಾಸ್ ವಳಾಲು
Next Story
X