ನಟಿ ರಮ್ಯಾ ಮೃತಪಟ್ಟಿದ್ದಾರೆಂದು ಸುಳ್ಳು ಸುದ್ದಿ ಹರಡಿದ ದುಷ್ಕರ್ಮಿಗಳು
ಬೆಂಗಳೂರು: ನಟಿ ಹಾಗೂ ಕಾಂಗ್ರೆಸ್ ರಾಜಕಾರಣಿ ರಮ್ಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ರಮ್ಯಾ ಮೃತಪಟ್ಟಿದ್ದಾರೆಂಬ ಸುದ್ದಿಯನ್ನು ನಂಬಿದ ಬಹುತೇಕ ಅಭಿಮಾನಿಗಳು ತಮ್ಮ ಆಘಾತ ವ್ಯಕ್ತಪಡಿಸಿದ್ದು, ರಮ್ಯ ಅವರಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
ರಮ್ಯಾ ಸಾವಿನ ವದಂತಿ ಹರಡುತ್ತಿದ್ದಂತೆ ಟ್ವಿಟರ್‌ನಲ್ಲಿ #DivyaSpandana ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. ವದಂತಿ ವೈರಲ್ ಆಗುತ್ತಿದ್ದಂತೆ ಪತ್ರಕರ್ತೆಯರಾದ ಚಿತ್ರ ಸುಬ್ರಮಣಿಯಮ್ ಹಾಗೂ ಧನ್ಯ ರಾಜೇಂದ್ರನ್ ಸ್ಪಷ್ಟೀಕರಣ ನೀಡಿದ್ದಾರೆ.
ದಿವ್ಯಸ್ಪಂದನಾ (ರಮ್ಯ) ಜೊತೆ ಮಾತನಾಡಿದೆ. ಅವರು ಜಿನೀವಾದಲ್ಲಿದ್ದಾರೆ. ಈ ಸುದ್ದಿಯನ್ನು ಹರಡಿದ ಬೇಜವಾಬ್ದಾರಿ ಯಾರೇ ಆಗಲಿ ಅವರಿಗೆ ಹಾಗೂ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳಿಗೆ ನಾಚಿಕೆಯಾಗಬೇಕು ಎಂದು ಧನ್ಯ ರಾಜೇಂದ್ರನ್ ಟ್ವೀಟ್ ಮಾಡಿದ್ದಾರೆ.
ಚಿತ್ರ ಸುಬ್ರಮಣಿಯಮ್ ಟ್ವೀಟ್ ಮಾಡಿ, ನಾನು ಈಗಷ್ಟೇ ರಮ್ಯ ಜೊತೆ ಮಾತನಾಡಿದೆ, ಆಕೆ ಆರಾಮವಾಗಿದ್ದಾರೆ. ನಾಳೆ ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.
“ನಿನ್ನೆ ರಾತ್ರಿ ನಟಿ ರಮ್ಯಾ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ” ಎಂದು ಹಲವರು ಟ್ವೀಟ್ ಮಾಡಿದ್ದರು.
Wonderful meeting the very talented and genteel lady @divyaspandana for dinner in Geneva. We talked about many things including our love for Bangalore. pic.twitter.com/1kN5ybEHcD
— Chitra Subramaniam (@chitraSD) September 6, 2023