ನಿತಿನ್ ಗಡ್ಕರಿ ಜೀವನಾಧರಿತ ಸಿನೆಮಾದ ಪೋಸ್ಟರ್ ಬಿಡುಗಡೆ

Photo:X/@taran_adarsh
ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೀವನಾಧಾರಿತ ಮರಾಠಿ ಬಯೋಪಿಕ್ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ಚಿತ್ರದಲ್ಲಿ ಗಡ್ಕರಿ ಪಾತ್ರದಲ್ಲಿ ನಟ ರಾಹುಲ್ ಚೋಪ್ಡಾ ನಟಿಸಿದ್ದಾರೆ.
ಈ ಚಿತ್ರದಲ್ಲಿ ನಿತಿನ್ ಗಡ್ಕರಿ ಅವರ ರಾಜಕೀಯ ಹೋರಾಟ, ಏಳುಬೀಳು ಹಾಗೂ ಕೇಂದ್ರ ಸಚಿವರಾಗುವವರೆಗಿನ ರಾಜಕೀಯ ಪಯಣ ಮೊದಲಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ನಿರೀಕ್ಷಿಸಲಾಗಿದೆ.
ಚಿತ್ರವನ್ನು ಅನುರಾಗ್ ರಾಜನ್ ಭೂಸಾರಿ ನಿರ್ದೇಶಿಸಿದ್ದು, ಅಕ್ಷಯ್ ಅನಂತ್ ದೇಶಮುಖ್ ನಿರ್ಮಿಸಿದ್ದಾರೆ. ಗಡ್ಕರಿ ಚಿತ್ರವನ್ನು ಅಭಿಜೀತ್ ಮಜುಂದಾರ್ ಪ್ರಸ್ತುತಪಡಿಸಲಿದ್ದು, ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
BIOPIC ON NITIN GADKARI: FIRST LOOK POSTER OUT NOW… 27 OCT RELEASE… #RahulChopda as #NitinGadkariji… #Gadkari - the #Marathi film based on the life of Hon. Minister #NitinGadkari ji - will release in *cinemas* on 27 Oct 2023.
— taran adarsh (@taran_adarsh) October 13, 2023
Directed by #AnuragRajanBhusari… Produced by… pic.twitter.com/ZkdCf6GWqS







