Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಜಾಗತಿಕವಾಗಿ ಗೆದ್ದ ‘ಒಬ್ಸೆಷನ್’;...

ಜಾಗತಿಕವಾಗಿ ಗೆದ್ದ ‘ಒಬ್ಸೆಷನ್’; ರಾತ್ರೋರಾತ್ರಿ ‘ಎ’ ಲಿಸ್ಟ್ ನಿರ್ದೇಶಕರಾದ ಯುಟ್ಯೂಬರ್

ವಾರ್ತಾಭಾರತಿವಾರ್ತಾಭಾರತಿ8 Jun 2026 8:39 PM IST
share
ಜಾಗತಿಕವಾಗಿ ಗೆದ್ದ ‘ಒಬ್ಸೆಷನ್’; ರಾತ್ರೋರಾತ್ರಿ ‘ಎ’ ಲಿಸ್ಟ್ ನಿರ್ದೇಶಕರಾದ ಯುಟ್ಯೂಬರ್

ಕೇವಲ 7 ಕೋಟಿ ರೂಪಾಯಿ ಬಜೆಟ್‌ ನಲ್ಲಿ ತಯಾರಿಸಿದ ಸಿನಿಮಾದ ಗಳಿಕೆ ಸಾವಿರ ಕೋಟಿ ರೂಪಾಯಿ ದಾಟಿದೆ! ಇದು ಈ ವರ್ಷದ ನಂಬರ್ 1 ಹಾಲಿವುಡ್ ಸಿನಿಮಾದ ಕಥೆ.

ಜಾಗತಿಕವಾಗಿ ‘ಒಬ್ಸೆಷನ್’ ಸಿನಿಮಾ ಜನಮನ ಗೆದ್ದಿದೆ. ಕರಿ ಬಾರ್ಕರ್ ಅವರ ಹಾರರ್ ಸಿನಿಮಾ ಗಳಿಕೆ ಜಾಗತಿಕವಾಗಿ 200 ದಶಲಕ್ಷ ಡಾಲರ್ ದಾಟಿದೆ. ಫೋಕಸ್ ಫೀಚರ್ಸ್‌ ನ ಸಾರ್ವಕಾಲಿಕ ಅತಿದೊಡ್ಡ ಸಿನಿಮಾ ಆಗಿ ಬೆಳೆದಿದೆ. 7.5 ಲಕ್ಷ ಅಮೆರಿಕನ್ ಡಾಲರ್‌ ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ಜಾಗತಿಕವಾಗಿ 224.7 ದಶಲಕ್ಷ ಡಾಲರ್ ಗಳಿಕೆ ಮಾಡಿದೆ. ಬ್ಲಮ್‌ ಹೌಸ್–ಅಟಾಮಿಕ್ ಮಾನ್‌ ಸ್ಟರ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ಇದೀಗ ವಿತರಕ ಸಂಸ್ಥೆ ಫೋಕಸ್ ಫೀಚರ್ಸ್‌ ನ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯ ಸಿನಿಮಾವಾಗಿದೆ.

ವಿಶ್ವಕ್ಕೇ ಮಾದರಿಯಾದ ಸಿನಿಮಾ

ಈ ಸಿನಿಮಾ ಇಂದು ಇಡೀ ವಿಶ್ವಕ್ಕೆ ಒಂದು ಮಾದರಿಯಾಗಿದೆ. ಸಿನಿಮಾ ಗೆಲ್ಲಲು ಕೋಟಿ ಕೋಟಿ ದುಡ್ಡು ಸುರಿಯಬೇಕಿಲ್ಲ, ಪ್ರಚಾರಕ್ಕೆ ತಾರೆಯರ ದಂಡಿನ ಅಗತ್ಯವಿಲ್ಲ. ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಕಲೆ ಗೊತ್ತಿರಬೇಕು ಮತ್ತು ಹೊಸತನ ನೀಡಬೇಕು ಎಂಬುದಕ್ಕೆ ಈ ಸಿನಿಮಾ ಮಾದರಿಯಾಗಿದೆ.

ಫೋಕಸ್ ಫೀಚರ್ಸ್ 2019ರಲ್ಲಿ ವಿತರಿಸಿದ್ದ ‘ಡೌನ್‌ ಟನ್ ಅಬ್ಬೆ’ ಜಾಗತಿಕವಾಗಿ 194.6 ದಶಲಕ್ಷ ಡಾಲರ್ ಗಳಿಕೆ ಮಾಡಿತ್ತು. ಇದೀಗ ‘ಒಬ್ಸೆಷನ್’ ಆ ದಾಖಲೆಯನ್ನು ಮೀರಿಸಿದೆ. ಸಿನಿಮಾ ಅಮೆರಿಕದಲ್ಲಿ 152.1 ದಶಲಕ್ಷ ಡಾಲರ್ ಗಳಿಕೆ ಮಾಡಿದ್ದರೆ, ವಿದೇಶದಲ್ಲಿ 57 ದೇಶಗಳ 6,825 ಚಿತ್ರಮಂದಿರಗಳಲ್ಲಿ 72.6 ದಶಲಕ್ಷ ಡಾಲರ್ ಗಳಿಕೆ ಮಾಡಿದೆ.

ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೋಕಸ್ ಸುಮಾರು 15 ದಶಲಕ್ಷ ಡಾಲರ್‌ ಗೆ ‘ಒಬ್ಸೆಷನ್’ ಚಿತ್ರದ ವಿತರಣಾ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡಾಗ, ಅದು ಯುನಿವರ್ಸಲ್ ಒಡೆತನದ ಸ್ಪೆಷಾಲಿಟಿ ಲೇಬಲ್‌ನ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ.

ಯುಟ್ಯೂಬರ್ ತಯಾರಿಸಿದ ಸಿನಿಮಾ

ಕರಿ ಬಾರ್ಕರ್ ಹೆಚ್ಚು ಪರಿಚಿತವಲ್ಲದ ಪಾತ್ರವರ್ಗದೊಂದಿಗೆ 7,50,000 ಡಾಲರ್ ವೆಚ್ಚದಲ್ಲಿ ‘ಒಬ್ಸೆಷನ್’ ನಿರ್ದೇಶಿಸಿದ್ದಾರೆ. ಹಾಲಿವುಡ್‌ನ ಘಟಾನುಘಟಿ ಸಿನಿಮಾಗಳಿಗೆ ಸೆಡ್ಡು ಹೊಡೆದ ಈ ಚಿತ್ರದ ಹಿಂದಿರುವ ಕರಿ ಬಾರ್ಕರ್ ಅವರು ಹಾರರ್ ಸಿನಿಮಾಗಳಿಗೆ ಸುಪರಿಚಿತರು.

ಇದಕ್ಕೂ ಮೊದಲು ಅವರು ಯೂಟ್ಯೂಬ್‌ ನಲ್ಲಿ ಉಚಿತವಾಗಿ ಪ್ರಕಟಿಸಿದ್ದ ‘ದಿ ಚೇರ್’ ಹಾರರ್ ಚಿತ್ರ ಹಾಗೂ ಅವರ ಹಾಸ್ಯ ಚಾನೆಲ್ ‘ದ್ಯಾಟ್ಸ್ ಎ ಬ್ಯಾಡ್ ಐಡಿಯಾ’ ಮೂಲಕ ಜನಪ್ರಿಯರಾಗಿದ್ದರು. ಯೂಟ್ಯೂಬ್‌ ನಲ್ಲಿ ಹಾಸ್ಯ ವಿಡಿಯೊಗಳನ್ನು ಮಾಡುತ್ತಿದ್ದ ಕಂಟೆಂಟ್ ಕ್ರಿಯೇಟರ್ ಆಗಿದ್ದ ಅವರು, ‘ಒಬ್ಸೆಷನ್’ ಮೂಲಕ ಈಗ ‘ಎ’ ಲಿಸ್ಟ್ ಚಲನಚಿತ್ರ ನಿರ್ದೇಶಕರ ಸಾಲಿಗೆ ಸೇರಿದ್ದಾರೆ.

ಈಗಾಗಲೇ ತಮ್ಮ ಮುಂದಿನ ಚಿತ್ರ ‘ಎನಿಥಿಂಗ್ ಬಟ್ ಘೋಸ್ಟ್’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ‘ಒಬ್ಸೆಷನ್’ ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಿತ್ರವಾಗುವತ್ತ ಸಾಗುತ್ತಿದ್ದು, ‘ಪ್ರಾಜೆಕ್ಟ್ ಹೇಲ್ ಮೇರಿ’ಯನ್ನು ಶೀಘ್ರವೇ ಮೀರಿಸುವ ಸಾಧ್ಯತೆಯಿದೆ.

ಕರಿ ಬಾರ್ಕರ್ ಕೇವಲ 800 ಡಾಲರ್‌ (ಸುಮಾರು 66 ಸಾವಿರ ರೂಪಾಯಿ) ವೆಚ್ಚದಲ್ಲಿ ನಿರ್ಮಿಸಿದ್ದ ‘ಮಿಲ್ಕ್ ಅಂಡ್ ಸೀರಿಯಲ್’ ಎಂಬ ಕಿರುಚಿತ್ರವನ್ನು ನೋಡಿದ ಬ್ಲಮ್‌ಹೌಸ್ ಪ್ರೊಡಕ್ಷನ್ಸ್ ಸಂಸ್ಥೆ ಅವರಿಗೆ ಸಿನಿಮಾ ಮಾಡುವ ಅವಕಾಶ ನೀಡಿತ್ತು. ಹೀಗೆ ತಯಾರಾದ ‘ಒಬ್ಸೆಷನ್’ ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ.

ಸಿನಿಮಾದ ವಿಶೇಷತೆ ಏನು?

ಈ ಸಿನಿಮಾ ಸರಳವಾದ ಕಥೆಯನ್ನು ಹೊಂದಿದ್ದರೂ ನೋಡುಗರಲ್ಲಿ ಚಳಿ ಹುಟ್ಟಿಸುತ್ತದೆ. ತನ್ನ ಬಾಲ್ಯದ ಗೆಳತಿಯ ಪ್ರೀತಿಯನ್ನು ಪಡೆಯಲು ಹಂಬಲಿಸುವ ಯುವಕ ಮಾಂತ್ರಿಕ ಆಟಿಕೆಯೊಂದರ ಮೊರೆ ಹೋಗುತ್ತಾನೆ. ಅವನಿಗೆ ಅಂದುಕೊಂಡಂತೆ ಪ್ರೀತಿ ಸಿಗುತ್ತದೆ. ಆದರೆ ಆ ಪ್ರೀತಿ ಮಿತಿಮೀರಿ ‘ಒಬ್ಸೆಷನ್’ ಅಥವಾ ಹುಚ್ಚುತನವಾಗಿ ಬದಲಾಗಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಹಾರರ್ ಜೊತೆಗೆ ಡಾರ್ಕ್ ಕಾಮಿಡಿ ಹಾಗೂ ರೊಮ್ಯಾಂಟಿಕ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವುದೇ ಈ ಚಿತ್ರದ ವಿಶೇಷತೆ.

Tags

obsessionsHollywood
share
ವಾರ್ತಾಭಾರತಿ
ವಾರ್ತಾಭಾರತಿ
Next Story
X