ಟಾಕ್ಸಿಸ್ ಗೆ ನೂರು ದಿನಗಳು ಬಾಕಿ; ಕೌಂಟ್ ಡೌನ್ ಆರಂಭಿಸಿದ ಯಶ್!

ಖ್ಯಾತ ನಟ ಯಶ್ ತಮ್ಮ ಮುಂದಿನ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಸಿನೆಮಾ ಬಿಡಗಡೆಗೆ ʼಕೌಂಟ್ ಡೌನ್ʼ ಆರಂಭಿಸಿದ್ದಾರೆ. ‘ಟಾಕ್ಸಿಸ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಸಿನಿಮಾ ಮಾರ್ಚ್ 19ರಂದು ಯುಗಾದಿಗೆ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೆ ನೂರು ದಿನಗಳು ಬಾಕಿ ಇವೆ. ಮಾರ್ಚ್ 19 ಗುರುವಾರ ಬರುವ ಕಾರಣ ಸಿನಿಮಾಗೆ ದೀರ್ಘ ವಾರಾಂತ್ಯ ಸಿಗುತ್ತದೆ. ಹೀಗಾಗಿ ಸಿನಿಮಾಗೆ ಉತ್ತಮ ಓಪನಿಂಗ್ ನಿರೀಕ್ಷೆಯಲ್ಲಿದ್ದಾರೆ ಯಶ್.
ಸ್ನಾನದ ತೊಟ್ಟಿಯಲ್ಲಿ ಕುಳಿತ ಪೋಸ್ಟರ್:
ಪೋಸ್ಟರ್ ನಲ್ಲಿ ಯಶ್ ರಕ್ತ ಸಿಕ್ತ ಸ್ನಾನದ ತೊಟ್ಟಿಯಲ್ಲಿ ಕೂದಲು ಬಿಚ್ಚಿ ಹಾಕಿ ಬೆನ್ನು ತೋರಿಸಿ ಕುಳಿತಿದ್ದಾರೆ. ಅವರ ಮುಖ ಮರೆಯಾಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಹಾಲಿವುಡ್ ನಿರ್ದೇಶಕರ ಸಾಹಸ ದೃಶ್ಯ:
“ಟಾಕ್ಸಿಸ್” ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿಯವರ ಛಾಯಾಗ್ರಹಣವಿದೆ. ಕೆಜಿಎಫ್ ಗೆ ಸಂಗೀತ ನೀಡಿರುವ ರವಿ ಬಸ್ರೂರ್ ‘ಟಾಕ್ಸಿಸ್’ಗೂ ಸಂಗೀತ ನೀಡಿದ್ದಾರೆ. ‘ಜಾನ್ ವಿಕ್’ ಸಿನಿಮಾದ ಕೆಲಸಕ್ಕಾಗಿ ಪ್ರಸಿದ್ಧಿ ಪಡೆದಿರುವ ಹಾಲಿವುಡ್ ಚಲನಚಿತ್ರ ನಿರ್ದೇಶಕ ಜೆಜೆ ಪೆರ್ರಿ ಸಿನಿಮಾದ ಕೆಲವು ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ಹೀಗಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ:
ಟಾಕ್ಸಿಕ್’ ಸಿನಿಮಾ ಚಿತ್ರಕತೆಯನ್ನು ಯಶ್ ಮತ್ತು ಗೀತು ಮೋಹನ್ ದಾಸ್ ಜೊತೆಗೂಡಿ ಬರೆದಿದ್ದಾರೆ. ಗೀತು ಮೋಹನ್ ದಾಸ್ ಈ ಸಿನಿಮಾದ ನಿರ್ದೇಶಕರೂ ಹೌದು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಜೊತೆಗೂಡಿ ನಿರ್ದೇಶಿಸಲಾಗಿರುವ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಉದ್ದೇಶವಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಶನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಮುಂದಿನ ವರ್ಷದ ಅತಿ ದೊಡ್ಡ ರಿಲೀಸ್ ಎನ್ನಲಾಗುತ್ತಿದೆ.







