Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕ್ರಾಂತಿಯ ಕಥೆಯಲ್ಲಿ ಕ್ರೌರ್ಯದ ಭೀತಿ

ಕ್ರಾಂತಿಯ ಕಥೆಯಲ್ಲಿ ಕ್ರೌರ್ಯದ ಭೀತಿ

ಶಶಿಕರ ಪಾತೂರುಶಶಿಕರ ಪಾತೂರು17 Oct 2026 2:34 PM IST
share
ಕ್ರಾಂತಿಯ ಕಥೆಯಲ್ಲಿ ಕ್ರೌರ್ಯದ ಭೀತಿ

ಚಿತ್ರ: ರಣಬಾಲಿ

ನಿರ್ದೇಶನ: ರಾಹುಲ್ ಸಂಕೃತಿಯನ್

ನಿರ್ಮಾಣ: ನವೀನ್ ಯೆರ್ನೇನಿ, ರವಿಶಂಕರ್.

ತಾರಾಗಣ: ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮೊದಲಾದವರು.

1876ರಿಂದ 1878ರ ಕಾಲಾವಧಿಯ ಬ್ರಿಟಿಷ್ ಆಡಳಿತದ ಸಂದರ್ಭ. ಮದ್ರಾಸ್ ಪ್ರಾಂತದಲ್ಲಿ ಬಾರೀ ಕ್ಷಾಮ ಎದುರಾಗಿತ್ತು. ಅದಕ್ಕೆ ಬ್ರಿಟಿಷ್ ದುರಾಡಳಿತ ಎಷ್ಟು ಕಾರಣ ಎನ್ನುವುದನ್ನು ಕಾಲ್ಪನಿಕವಾಗಿ ಕಟ್ಟಿಕೊಟ್ಟಿರುವ ಚಿತ್ರವೇ ‘ರಣಬಾಲಿ’.

ರಣಬಾಲಿ ಎನ್ನುವುದು ನಾಯಕನ ಹೆಸರು. ಸಿಂಗನಮಲ ಬೊಬ್ಬಿಲಿ ರಣಬಾಲಿ ಎನ್ನುವುದು ಪೂರ್ಣ ಹೆಸರು. ಒಂದು ರೀತಿಯಲ್ಲಿ ಅಲ್ಲಿನ ಪಾಳೇಗಾರ. ಆ ದಿನಗಳಲ್ಲಿ ಜನಸಾಮಾನ್ಯರು ಬ್ರಿಟಿಷರ ಭಯದಿಂದ ಅವರ ಜೀತದಾಳುಗಳಾಗಿ ಕಳೆಯುತ್ತಿರುತ್ತಾರೆ. ಆದರೆ ಅವರ ವಿರುದ್ಧ ತಿರುಗಿನಿಂತ ರಣಬಾಲಿ ಎನ್ನುವ ಒಬ್ಬ ಕಾಲ್ಪನಿಕ ಸ್ವಾತಂತ್ರ್ಯ ಹೋರಾಟಗಾರನ ಕಥೆ ಇದು.

ರಣಬಾಲಿಯಾಗಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ಹುರಿಮೀಸೆ ತಿರುಗಿಸಿ, ಮೈ ಕಟ್ಟು ಹುರಿಯಾಗಿಸಿ, ಕಣ್ಣುಗಳನ್ನು ಹಿಗ್ಗಿಸಿ, ಕಂಠವನ್ನೇ ಬದಲಾಯಿಸಿ ಪಾತ್ರವಾಗಿ ಬದಲಾಗಿದ್ದಾರೆ. ಅದೇ ವೇಳೆ ರಶ್ಮಿಕಾ ಮಂದಣ್ಣ ರಣಬಾಲಿಯ ಪತ್ನಿ ಜಯಮ್ಮನ ಪಾತ್ರ ನಿರ್ವಹಿಸಿದ್ದಾರೆ. ಹುಡುಗಾಟದ ಹುಡುಗಿಯಾಗಿ, ಜವಾಬ್ದಾರಿಯುತ ಮಡದಿಯಾಗಿ ಆ ಕಾಲಘಟ್ಟದ ಮಹಿಳೆಯನ್ನು ಮೈದುಂಬಿಸಿಕೊಂಡಿದ್ದಾರೆ. ರಣಬಾಲಿಯ ತಾಯಿಯಾಗಿ ರಾಯಲ ಸೀಮೆಯ ಗಂಡುಬೀರಿಯಂಥ ಹೆಣ್ಣುಮಗಳ ಪಾತ್ರಕ್ಕೆ ಈಶ್ವರಿ ರಾವ್ ಜೀವ ತುಂಬಿದ್ದಾರೆ. ಚಿತ್ರದ ಮುಖ್ಯ ಖಳ ಬ್ರಿಟಿಷ್ ಕಮಿಷನರ್ ಪಾತ್ರದಲ್ಲಿ ‘ದಿ ಮಮ್ಮಿ’ ಚಿತ್ರದ ಖ್ಯಾತಿಯ ನಟ ಅರ್ನಾಲ್ಡ್ ವೊಲ್ಲು ನಟಿಸಿದ್ದಾರೆ. ಇವಲ್ಲದೆ ಅಲಿವೇಲು ಮತ್ತು ಆಕೆಯ ಮಗಳ ಪಾತ್ರಗಳು ಕೂಡ ನೆನಪಲ್ಲಿ ಉಳಿಯುತ್ತವೆ.

ಕಥಾ ವಸ್ತು, ಪಾತ್ರಧಾರಿಗಳ ಆಯ್ಕೆ, ಅಂದಿನ ಕಾಲಘಟ್ಟವನ್ನು ತೋರಿಸುವ ಕಲಾನಿರ್ದೇಶನ, ಸಂಗೀತ.. ಈ ಎಲ್ಲ ವಿಚಾರಗಳಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಆದರೆ ಚಿತ್ರದ ಮೂಲಕ ಒಂದು ಸರಿಯಾದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸೋತಿದ್ದಾರೆ. ಅದಕ್ಕೆ ಕಾರಣ ಈ ಚಿತ್ರ ನಾಯಕನ ವೀರತನದ ಹೋರಾಟಕ್ಕೆ ಸೀಮಿತವಾಗಿಲ್ಲ. ಚಿತ್ರ ಮುಗಿದ ಬಳಿಕ ಪ್ರೇಕ್ಷಕರಲ್ಲಿ ಬ್ರಿಟಿಷರ ಕ್ರೌರ್ಯ ಕಾಡುವಷ್ಟೇ ಮಟ್ಟದಲ್ಲಿ ನಾಯಕನ ಅತಿಮಾನುಷಿಕ ಹೊಡೆದಾಟಗಳು ನಗು ತರಿಸುತ್ತವೆ.

ಇವೆಲ್ಲದರ ಹೊರತಾಗಿ ಒಂದು ವಿಚಾರ ಇದೆ. ಇದುವರೆಗೆ ನಾವು ರೈಲ್ವೇ ಪ್ರಯಾಣ ಮಾಡುವಾಗ ದೇಶದ ಉದ್ದಗಲಕ್ಕೂ ಈ ಹಳಿಗಳನ್ನು ಹಾಕಿಸಿರುವುದು ಬ್ರಿಟಿಷರು ಎಂದು ನೆನಪಿಸಿಕೊಳ್ಳುತ್ತಿದ್ದೆವು. ಆದರೆ ಆ ಕೆಲಸಕ್ಕಾಗಿ ಬ್ರಿಟಿಷರು ಭಾರತೀಯರಿಗೆ ಜೀತದಾಳುಗಳಂತೆ ಕಷ್ಟ ನೀಡಿದ್ದಾರೆ ಎನ್ನುವ ಸ್ಮರಣೆ ಉಂಟಾಗಲಿದೆ.

ತೆಲುಗಲ್ಲಿ ಅದೆಷ್ಟೋ ವೈವಿಧ್ಯ ಮಯ ಚಿತ್ರಗಳು ಬಂದಿವೆ. ಆದರೂ ಕ್ರೌರ್ಯ ಮತ್ತು ಅದರ ವಿರುದ್ಧದ ಸಿಡಿದೇಳುವಿಕೆಗೆ ತಾವೇ ರಾಯಭಾರಿಗಳು ಎಂದು ರಣಬಾಲಿ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಿತ್ರ ತಂಡ ಹಾಕಿರುವ ಪರಿಶ್ರಮದಲ್ಲಿ ಒಬ್ಬ ನೈಜ ಕ್ರಾಂತಿಕಾರಿಯ ಸ್ವಾತಂತ್ರ್ಯ ಹೋರಾಟನ್ನೇ ತೋರಿಸಬಹುದಿತ್ತು. ಆದರೆ ಆಗ ಈ ಚಿತ್ರದಲ್ಲಿರುವಂತೆ ಹಿಂಸೆ ಮತ್ತು ಮೂಢನಂಬಿಕೆಗಳನ್ನು ತುರುಕುವುದು ಕಷ್ಟವಾದೀತು. ಇವನ್ನು ತೋರಿಸುವುದೇ ನಿರ್ದೇಶಕರ ಗುರಿಯಾಗಿದ್ದರೆ, ಅದಕ್ಕೆ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯನ್ನು ಬಳಸಿರುವುದು ಅಕ್ಷಮ್ಯ.

ಚಿತ್ರದ ಮೊದಲ ದೃಶ್ಯವಾದ ನಾಯಕನ ಜನನದ ದೃಶ್ಯವೇ ಸಾಮಾನ್ಯ ಪ್ರೇಕ್ಷಕರಿಗೆ ಅರಗಿಸುವುದು ಕಷ್ಟ. ಮಧ್ಯಂತರದ ಬಳಿಕ ನಾಯಕನೇ ಕೈಲಿ ಚೂರಿ ಹಿಡಿದು ಪತ್ನಿಯ ಹೆರಿಗೆ ನಡೆಸುವ ದೃಶ್ಯವಂತೂ ಭಯಾನಕ. ಯುದ್ಧದಲ್ಲಿ ನಾಯಕ ತನ್ನ ಮೈಗೆ ತಾಕುವ ಬಾಣ, ಖಡ್ಗಗಳನ್ನಂತೂ ಧೂಳು ಕೊಡವಿದಷ್ಟೇ ಸರಳವಾಗಿ ತಟ್ಟಿ ಹಾರಿಸುತ್ತಾನೆ! ಕ್ಲೈಮ್ಯಾಕ್ಸ್ ನಲ್ಲಂತೂ ನಿರ್ದೇಶಕರು ತಾವು ಇನ್ನೂ ಮೊದಲ ‘ಕಾಂತಾರ’ದ ಪ್ರಭಾವದಿಂದ ಹೊರಬಂದಿಲ್ಲ ಎಂದು ಸಾಬೀತು ಮಾಡಿದ್ದಾರೆ.

(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)

Tags

RANABAALImovie
share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X