ಜವಾನ್ ಚಿತ್ರದಲ್ಲಿನ ವಿಜಯ್ ಸೇತುಪತಿ ಪೋಸ್ಟರ್ ಬಿಡುಗಡೆ: 'ಸಾವಿನ ವ್ಯಾಪಾರಿ' ಲುಕ್ಗೆ ಅಭಿಮಾನಿಗಳು ಫಿದಾ

Photo: Twitter/@iamsrk
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ʼಜವಾನ್ʼ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಅವರ ಪಾತ್ರವನ್ನು ರಿವೀಲ್ ಮಾಡುವ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ವಿಜಯ್ ಸೇತುಪತಿ ಅವರ ಪಾತ್ರವನ್ನು ʼಸಾವಿನ ವ್ಯಾಪಾರಿʼ ಎಂದು ಕರೆದಿರುವ ಚಿತ್ರತಂಡವು, ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಲಿದೆ.
ನಟ ಶಾರುಖ್ ಖಾನ್ ಅವರು ವಿಜಯ್ ಸೇತುಪತಿ ಅವರ ಪೋಸ್ಟರ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, “ಅವನನ್ನು ತಡೆಯುವವರು ಯಾರು ಇಲ್ಲ.. ಯಾರಾದರೂ ಇದ್ದಾರೆಯೇ? ಕಾದು ನೋಡಿ” ಎಂದು ಟ್ವೀಟ್ ಮಾಡಿದ್ದಾರೆ.
ವಿಜಯ್ ಸೇತುಪತಿಯ ನೂತನ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರವನ್ನು ವೀಕ್ಷಿಸಲು ಉತ್ಸುಕರಾಗಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮನ್ನು ಕಿಂಗ್ ಖಾನ್ (ಶಾರುಖ್ ಖಾನ್) ಜೊತೆಗೆ ನೋಡಲು ಕಾಯುತ್ತಿದ್ದೇವೆ ಎಂದು ನೆಟ್ಟಿಗರೊಬ್ಬರು ವಿಜಯ್ ಸೇತುಪತಿ ಅವರಿಗೆ ಪ್ರತಿಕ್ರಿಯಿಸಿದ್ದಾರೆ.
Vijay Sethupathi on fire ❣️
— Minar Rahman (@Minarrahman21) July 24, 2023







