Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಸ್, ದೆವ್ವ, ಶಂಕರ ಮತ್ತು ಪ್ರತೀಕಾರ

ಬಸ್, ದೆವ್ವ, ಶಂಕರ ಮತ್ತು ಪ್ರತೀಕಾರ

ಶಶಿಕರ ಪಾತೂರುಶಶಿಕರ ಪಾತೂರು21 Nov 2026 11:38 AM IST
share
ಬಸ್, ದೆವ್ವ, ಶಂಕರ ಮತ್ತು ಪ್ರತೀಕಾರ

ಚಿತ್ರ: ಶಂಕರಾಭರಣ

ನಿರ್ದೇಶನ: ಸುಮಂತ್ ಭಟ್

ನಿರ್ಮಾಣ: ರಂಗಸ್ಥಳ ಸ್ಟುಡಿಯೋಸ್

ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾವ್ ಮತ್ತು ತನ್ವಿ ರಾಮ್ ಮೊದಲಾದವರು.

ಕಮರ್ಷಿಯಲ್ ಸಿನೆಮಾಗಳಲ್ಲಿ ಪ್ರಯೋಗಗಳು ನಡೆಯುವುದು ಅಪರೂಪ. ಅಂಥ ಅಪರೂಪಗಳ ಪಟ್ಟಿಯಲ್ಲಿ ಸೇರುವಂಥ ಚಿತ್ರ ಇದು. ಅದಕ್ಕೆ ಮುಖ್ಯ ಕಾರಣ ಬಸ್ ಡ್ರೈವರ್ ಆಗಿರುವಂಥ ನಾಯಕ. ವಾಸ್ತವದಲ್ಲಿ ಬಸ್ ನಿರ್ವಾಹಕನನ್ನು, ಚಾಲಕನ ಪುತ್ರನನ್ನು ಸ್ಟಾರ್ ಮಾಡಿದಂಥ ಚಿತ್ರರಂಗ ನಮ್ಮದು. ಆದರೆ ಪರದೆಯ ಮೇಲೆ ಮಾತ್ರ ಬಸ್ಸಿಗೆ ಸಂಬಂಧಿಸಿದ ಯಾವ ಪಾತ್ರಗಳು ಕೂಡ ನಮ್ಮಲ್ಲಿ ಶೈನ್ ಆಗಿರಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಶೈನ್ ಆಗಲು ಬಂದಿದ್ದಾರೆ ಶೈನ್ ಶೆಟ್ಟಿ.

ಶಂಕರ ಓರ್ವ ಬಸ್ ಚಾಲಕನ ಪುತ್ರ. ತಂದೆ ವಿಠಲನ ಹಾಗೆ ತಾನು ಕೂಡ ಚಾಲಕನಾಗಬೇಕು ಎನ್ನುವುದೇ ಈತನ ಕನಸು. ಅದರಂತೆ ಚಾಲಕನಾಗುತ್ತಾನೆ ಕೂಡ. ಆದರೆ ತಾನು ಚಾಲಕನಾಗಿರುವ ಬಸ್ ಸಂಸ್ಥೆಯ ಮಾಲಕನೊಡನೆ ಯಾವುದೋ ಕಾರಣಕ್ಕೆ ಜಗಳವಾಗಿ ಅಲ್ಲಿಂದ ಕೆಲಸ ತೊರೆದು ಬಂದ ಬಳಿಕ ಶಂಕರನಿಗೆ ಎಲ್ಲಿಯೂ ಚಾಲಕನ ಕೆಲಸ ಸಿಗುವುದಿಲ್ಲ. ಆಗ ತಾನೇ ಬಸ್ಸು ಕೊಂಡು ಚಾಲಕನಾಗಲು ಮುಂದಾಗುತ್ತಾನೆ. ಆದರೆ ಆ ಪ್ರಯತ್ನದಲ್ಲಿ ಎದುರಾಗುವ ತೊಂದರೆಗಳೇನು? ಇಷ್ಟಕ್ಕೂ ಬಸ್ ಮಾಲಕನೊಡನೆ ಜಗಳವಾಗಿದ್ದು ಯಾಕೆ? ಬಸ್ ಕೊಂಡಾಗ ಎದುರಾಗುವ ಸಮಸ್ಯೆಗಳಲ್ಲಿ ಹಳೆಯ ಮಾಲಕನ ಪಾಲೇನು? ಶಂಕರ ಭಯಂಕರ ಎಂದೇ ಹೆಸರಾಗಿದ್ದ ನಾಯಕನಿಗೆ ಭಯಾನಕ ಅನುಭವ ಎದುರಾಗುವುದು ಹೇಗೆ ಎಂದು ತಿಳಿಯಲು ಶಂಕರಾಭರಣ ಚಿತ್ರ ನೋಡಬೇಕು.

ಚಿತ್ರದಲ್ಲಿ ಚಾಲಕ ಶಂಕರನಾಗಿ ಶೈನ್ ಶೆಟ್ಟಿ ನಟಿಸಿದ್ದಾರೆ. ಇಲ್ಲಿ ಬಸ್ಸಿಗೂ ಒಂದು ಪ್ರಧಾನ ಪಾತ್ರವಿದೆ. ಶಂಕರ ಆಭರಣಗಳನ್ನು ಅಡವಿಟ್ಟು ಕೊಂಡ ಬಸ್ಸೇ ಈ ಶಂಕರಾಭರಣ! ಹೀಗೆ ಪ್ರಾರಬ್ಧಗಳ ಮಧ್ಯೆಯೂ ಹಾಸ್ಯದ ಶಬ್ದಕೋಶ ಈ ಚಿತ್ರದಲ್ಲಿದೆ. ನಿರ್ವಾಹಕ ಮತ್ತು ಕ್ಲೀನರ್ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಆದರೆ ಅವೆಲ್ಲವನ್ನು ಮೀರಿ ಈ ಬಸ್ಸಿನೊಳಗೆ ಒಂದು ಹೆಣ್ಣು ದೆವ್ವ ಸೇರಿಕೊಂಡಿರುತ್ತದೆ. ಅದು ಯಾರು? ಅದರ ಹಿನ್ನೆಲೆ ಏನು? ಎನ್ನುವುದೇ ಚಿತ್ರದ ಕಥೆ.

ಶೈನ್ ಶೆಟ್ಟಿ ಒಂದಷ್ಟು ಸಮಯದ ಅಂತರದ ಬಳಿಕ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಎಳೆಯ ಯುವಕನಾಗಿ ನಟಿಸಲು, ದೈಹಿಕವಾಗಿ ಸೇರಿದಂತೆ ಪಾತ್ರಕ್ಕಾಗಿ ಶ್ರಮ ಪಟ್ಟಿರುವುದರ ಫಲಿತಾಂಶವನ್ನು ಪರದೆಯ ಮೇಲೆ ಕಾಣಬಹುದಾಗಿದೆ. ಬಸ್ಸನ್ನು ಪ್ರೀತಿಸುವ ಚಾಲಕನಾಗಿ, ಒಳ್ಳೆಯ ಮನಸ್ಸುಗಳನ್ನು ಕಾಣಬಲ್ಲ ಭಾವುಕನಾಗಿ ಗೆಲ್ಲುತ್ತಾರೆ.

ತಂದೆ ವಿಠಲನಾಗಿ ದೀಪಕ್ ರೈ ಪಾಣಾಜೆ ಕಾಣಿಸಿದ್ದಾರೆ. ಅವರ ಪಾತ್ರಕ್ಕೆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಮತ್ತಷ್ಟು ಪ್ರಾಮುಖ್ಯ ಇದೆ. ಶಂಕರನ ಅಕ್ಕ ಶಾಂತಿಯಾಗಿ ಕೃತಿ ಶೆಟ್ಟಿ ನೈಜ ನಟನೆ ನೀಡಿದ್ದಾರೆ. ಶಂಕರನ ಪ್ರೇಯಸಿ ಜೆನಿಯಾಗಿ ತನ್ವಿ ರಾಮ್ ನಟಿಸಿದ್ದಾರೆ. ಧನಲಕ್ಷ್ಮೀ ಸಹಕಾರಿ ಬ್ಯಾಂಕ್‌ನಲ್ಲಿ ವೃತ್ತಿಯಲ್ಲಿರುವ ಮಲಯಾಳಿ ಹುಡುಗಿಯ ಪಾತ್ರಕ್ಕೆ ಈ ಕೇರಳದ ನಟಿ ನ್ಯಾಯ ಒದಗಿಸಿದ್ದಾರೆ. ಚಿತ್ರಕ್ಕೆ ಹಾರರ್ ನೀಡುವ ದೆವ್ವವಾಗಿ ತನ್ವಿ ರಾವ್ ನಟಿಸಿದ್ದಾರೆ. ಕಲಾ ಎನ್ನುವ ಪಾತ್ರದಲ್ಲಿ ತನ್ಮಯವಾಗಿ ಅಭಿನಯಿಸಿ ತಮ್ಮ ಕಲೆಯನ್ನು ಸಾಬೀತು ಪಡಿಸಿದ್ದಾರೆ.

ಚಿತ್ರದಲ್ಲಿ ಮೂವರು ಖಳನಟರಿದ್ದಾರೆ. ಮಧುಕರ ಮತ್ತು ಆತನ ಪುತ್ರ ಪ್ರೇಮ್ ಹಾಗೂ ಮಧುಕರನ ಸಹೋದರ ಸುಧಾಕರ. ಮೂವರನ್ನು ಕೂಡ ಪಾತ್ರಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಮಧುಕರ್ ಪಾತ್ರದಲ್ಲಿ ಅನಿಲ್ ಅವರು ತಮಿಳಿನ ತ್ಯಾಗರಾಜ್ ಅವರನ್ನು ನೆನಪಿಸುತ್ತಾರೆ. ಸುಧಾಕರ್ ಪಾತ್ರದಲ್ಲಿ ಸಂಪತ್ ಮೆರೆದಾಡಿದ್ದಾರೆ. ಈ ಹಿಂದೆ ‘ಸು ಫ್ರಮ್ ಸೋ’ದಲ್ಲಿ ಜ್ಯೋತಿಷಿಯಾಗಿ ಹಾಸ್ಯರಸ ಉಕ್ಕಿಸಿದ್ದವರು ಅರ್ಜುನ್ ಕಜೆ. ಈ ಬಾರಿ ಪ್ರೇಮ್ ಎನ್ನುವ ಖಳ ಪಾತ್ರಕ್ಕೆ ನ್ಯಾಯ ಒದಗಿಸಿ ತಮ್ಮ ಪ್ರತಿಭಾ ವೈವಿಧ್ಯ ತೋರಿಸಿದ್ದಾರೆ.

ಶಂಕರಾಭರಣ ಬಸ್ಸು ತೌಡುಗೋಳಿಯಿಂದ ಉಡುಪಿಗೆ ಸಾಗುತ್ತದೆ. ಈ ಎರಡು ಹೆಸರಲ್ಲೂ ತುಳುನಾಡಿನಲ್ಲಿ ನೈಜ ಊರುಗಳಿವೆ. ಆದರೆ ಇಲ್ಲಿನದು ಮಾತ್ರ ಕಾಲ್ಪನಿಕ ಪರಿಸರ. ಆದರೆ ಚಿತ್ರದ ಆರಂಭದ ಸಂಭಾಷಣೆ ಮಂಗಳೂರಿನ ಬ್ಯಾರಿ ಭಾಷೆಯಲ್ಲೇ ಶುರುವಾಗುತ್ತದೆ. ಮುಹಮ್ಮದ್ ಅಲಿ ಬಡ್ಡೂರು, ಅಬೂಬಕರ್ ಬಡ್ಡೂರು ಮತ್ತು ಷರೀಫ್ ಬಡ್ಡೂರು ಮೊದಲಾದವರು ಬ್ಯಾರಿ ಭಾಷೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರಪೂರ್ತಿ ಮಂಗಳೂರು ಕನ್ನಡದ ಘಮ ಇದೆ.

ಚರಣ್ ರಾಜ್ ಸಂಗೀತದಲ್ಲಿ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಹೆಚ್ಚು ಮನಸೆಳೆಯುತ್ತದೆ. ಹೋಟೆಲ್ ಅಡುಗೆ ಭಟ್ಟನಾಗಿ ಮೈಮ್ ರಾಮ್ ದಾಸ್, ಪೊಲೀಸ್ ಅಧಿಕಾರಿಯಾಗಿ ನಮಿತಾ ಕಿರಣ್ ಕೆಲವೇ ದೃಶ್ಯಗಳಲ್ಲಿ ಬಂದರೂ ನೆನಪಲ್ಲಿ ಉಳಿಯುತ್ತಾರೆ. ಬಸ್ಸಿನ ನಿರ್ವಾಹಕ ಪಾತ್ರದಲ್ಲಿ ಉಮೇಶ್ ಸೇಲಿ ಮತ್ತು ಕ್ಲೀನರ್ ಆಗಿ ನಿತೇಶ್ ಕುಲಾಲ್ ಅವರ ಹಾವಭಾವ ಹಾಸ್ಯಕ್ಕೆ ಪೂರಕವಾಗಿದೆ.

ಶಂಕರಾಭರಣ ಕಥೆಯ ಓಘ ಹಳೆಯ ಶಂಕರ ವಿಠಲ ಬಸ್ಸಿನಂತೆ ನಿಧಾನವಾಗಿದೆ. ಅದು ನಿರ್ದೇಶಕರು ಬೇಕೆಂದೇ ಮಾಡಿರುವ ಆಯ್ಕೆ ಎನ್ನುವುದನ್ನು ಕೆಲವು ದೃಶ್ಯಗಳಿಂದಲೇ ತೋರಿಸಿಕೊಟ್ಟಿದ್ದಾರೆ. ಉದಾಹರಣೆಗೆ ಶಂಕರ ಮಧುಕರ್‌ಗೆ ಸವಾಲು ಹಾಕಿ ಮರಳಿದ ಬಳಿಕ ಈಗೇನು ಮಾಡುತ್ತಾನೆ ನಿಮ್ಮ ಹೀರೋ ಎನ್ನುವ ಕೆಜಿಎಫ್ ದೃಶ್ಯ ಟಿ.ವಿಯಲ್ಲಿ ಮೂಡುತ್ತದೆ. ಅಂದರೆ ಆನಂತರದ ನಾಯಕನ ನಡೆಯ ಬಗ್ಗೆ ಪ್ರೇಕ್ಷಕರಲ್ಲಿ ಆ ಮಟ್ಟಿನ ನಿರೀಕ್ಷೆ ಇರುವ ಬಗ್ಗೆ ನಿರ್ದೇಶಕರಿಗೂ ಅರಿವಿದೆ. ಆದರೆ ಇಲ್ಲಿನ ನಾಯಕ ಶಂಕರ ಅಂಥ ಸಾಧಕನೇನೂ ಅಲ್ಲ ಎಂದು ಅವರು ತೀರ್ಮಾನಿಸಿದ್ದಾರೆ. ಮತ್ತೊಂದೆಡೆ ಸೂರ್ಯವಂಶದ ನಾಯಕನಂತೆ ಒಂದೇ ಹಾಡಲ್ಲಿ ಬಸ್ಸುಗಳ ಮಾಲಕನಾಗಿ ಬೆಳೆಯಬೇಕಿತ್ತು ಎನ್ನುವ ಸಂಭಾಷಣೆಯನ್ನು ಶಂಕರನಿಂದಲೇ ಹೇಳಿಸಿದ್ದಾರೆ. ಅಂಥ ಬೆಳವಣಿಗೆ ಇರದಿದ್ದರೂ ಪರವಾಗಿಲ್ಲ. ಆದರೆ ಮೊದಲೇ ನಿಧಾನಗತಿಯಲ್ಲಿ ಸಾಗುವ ಈ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ವೇಳೆ ಹಾಡೊಂದು ಪ್ರವೇಶಿಸಿ ತಾಳ್ಮೆ ಪರೀಕ್ಷಿಸುತ್ತದೆ.

ಶಂಕರಾಭರಣ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರ ಎಂದೇ ಹೇಳಿದರೂ ಬಸ್ಸು ಕೊಳ್ಳುವ ನಾಯಕನ ಕಥೆ ಚಿತ್ರರಂಗಕ್ಕೆ ಹೊಸದೇನೂ ಅಲ್ಲ. 1989ರಲ್ಲೇ ‘ವರವೇಲ್ಪ್’ ಹೆಸರಲ್ಲಿ ಮಲಯಾಳಂ ಚಿತ್ರ ಬಂದಿತ್ತು. ಅಲ್ಲಿ ನಾಯಕ ಮೋಹನ್‌ಲಾಲ್ ಕೊಳ್ಳುವ ಹಳೆಯ ಬಸ್ಸಿಗೂ ಇದೇ ಬಣ್ಣ ಇತ್ತು. ಆತನೂ ಬಸ್ಸು ಖರೀದಿಸಿ ಕಷ್ಟ ಪಡುತ್ತಾನೆ ಎನ್ನುವುದರ ಹೊರತಾಗಿ ಕಥೆಯಲ್ಲಿ ಅಂಥ ಹೋಲಿಕೆಗಳಿಲ್ಲ. ಬಸ್ಸೊಳಗೇ ಹುಡುಗಿ ಬಂದು ಸೇರಿಕೊಳ್ಳುವ ಕಥೆ ರಿಮೇಕ್ ಚಿತ್ರ ‘ಡಕೋಟ ಎಕ್ಸ್‌ಪ್ರೆಸ್’ನಲ್ಲಿ ಇತ್ತು. ಆದರೆ ಸಾಮಾನ್ಯ ನಾಯಕನಿಗೆ ಅತೀಂದ್ರೀಯ ಶಕ್ತಿ ಸೇರಿಕೊಳ್ಳುವ ದೃಶ್ಯ ವಿಕ್ರಮ್ ನಟನೆಯ ತಮಿಳು ಚಿತ್ರ ‘ಅನ್ನಿಯನ್’, ಮಲಯಾಳಂನ ‘ಮಿನ್ನಲ್ ಮುರಳಿ’ಯನ್ನು ನೆನಪಿಸಬಹುದು.

ಉಳಿದಂತೆ ಸತ್ತು ದೆವ್ವವಾದ ಹುಡುಗಿಯನ್ನು ಭಯಾನಕವಾಗಿಸದೆ ಸಹಜ ಸ್ಥಿತಿಯಲ್ಲಿ ತೋರಿಸಿದ್ದಾರೆ. ಇಂಥ ಪ್ರಯೋಗ ಕನ್ನಡದ ‘ಯು ಟರ್ನ್’ ಚಿತ್ರದಲ್ಲಿಯೂ ಇತ್ತು. ಕನ್ನಡದಲ್ಲಿ ವೈವಿಧ್ಯಮಯ ಸಿನೆಮಾ ನೋಡಲು ಬಯಸುವವರು ಖಂಡಿತಾ ನೋಡಬೇಕಾದ ಚಿತ್ರ ಇದು.

(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)

Tags

BusghostrevengeShankarabharannacinema
share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X