Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಒಂದು ಕ್ಷೌರದ ಹಿಂದಿನ ರೌರವ ಕಥೆ!

ಒಂದು ಕ್ಷೌರದ ಹಿಂದಿನ ರೌರವ ಕಥೆ!

ಶಶಿಕರ ಪಾತೂರುಶಶಿಕರ ಪಾತೂರು5 July 2025 11:19 AM IST
share
ಒಂದು ಕ್ಷೌರದ ಹಿಂದಿನ ರೌರವ ಕಥೆ!
ಚಿತ್ರ: ಹೆಬ್ಬುಲಿ ಕಟ್ ನಿರ್ದೇಶನ: ಭೀಮರಾವ್ ಪಿ. ನಿರ್ಮಾಣ: ಭೀಮರಾವ್, ಕರ್ಣ ಮಲ್ಲದಕಲ್, ಸುರೇಶ್ ಬಿ., ಪ್ರಮೋದಿನಿ ಆರ್. ರುದ್ರಯ್ಯ ತಾರಾಗಣ: ಮೌನೇಶ್ ನಟರಂಗ, ಮಹಾದೇವ ಹಡಪದ್, ಅನನ್ಯಾ ನಿಹಾರಿಕಾ

ಹೆಬ್ಬುಲಿ ಕಟ್ ಎನ್ನುವ ಹೆಸರು ನೋಡಿ ಇದು ನಟ ಸುದೀಪ್ ಅಭಿಮಾನಿಗಳಷ್ಟೇ ನೋಡಬಹುದಾದ ಚಿತ್ರ ಎಂದುಕೊಂಡರೆ ತಪ್ಪು. ಹೇರ್ ಸ್ಟೈಲ್ ಹೇಗಿರಬೇಕು ಎಂದು ನಿರ್ಧರಿಸಲು ಹಣವೊಂದೇ ಸಾಕು ಎಂದುಕೊಂಡವರೇ ಅಧಿಕ. ಆದರೆ ಇಂತಹ ನವ ಜನಾಂಗದ ಮುಂದೆ ಕ್ಷೌರದೊಳಗೂ ಜನಾಂಗ ನಿಂದನೆಯ ಆಳವೆಷ್ಟಿದೆ ಎಂದು ತೋರಿಸಿಕೊಡುವ ಚಿತ್ರ ಇದು.

ನಗರವಾಗಿ ಬದಲಾಗುತ್ತಿರುವ ಹಳ್ಳಿಯೊಂದರಲ್ಲಿ ನಡೆಯುವ ಹಸಿದವರ ಹಸಿಹಸಿಯಾದ ಕಥೆ. ಆದರೆ ಇಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದರೂ ಜನರಲ್ಲಿ ಕೊಳೆಯುತ್ತಲೇ ಹೋದ ಜಾತಿ ಮನಸ್ಥಿತಿಗೆ ಹಿಡಿದ ಕನ್ನಡಿ ಈ ಸಿನೆಮಾ. ಮನೆಯಲ್ಲಿ, ಶಾಲೆಯಲ್ಲಿ ‘ವಿನ್ಯಾ’ ಎಂದೇ ಕರೆಯಲ್ಪಡುವ ವಿನಯನ ಬಾಳಲ್ಲಿ ನಡೆಯುವ ಕಥೆ ಇದು. ವಿನಯ ದಲಿತರ ಮನೆಯ ಹುಡುಗ. ಪ್ರೌಢಶಾಲೆಯಲ್ಲಿ ತನ್ನ ಸಹಪಾಠಿಯಾದ ಗೌಡರ ಮನೆ ಹುಡುಗಿ ರೇಖಾ ಎಂದರೆ ಇವನಿಗೆ ಒಂದು ಆಕರ್ಷಣೆ. ಈ ಬಗ್ಗೆ ಆತ್ಮೀಯವಾಗಿ ಹೇಳಿಕೊಳ್ಳಲು ಸಿಗುವ ಸ್ನೇಹಿತನೆಂದರೆ ತನಗಿಂತ ಏಳೆಂಟು ವರ್ಷ ಹಿರಿಯನಾದ ಪಂಕ್ಚರ್ ಅಂಗಡಿ ರಫೀಕ್. ಇಷ್ಟಕ್ಕೇ ಇದು ‘ಚೆಲುವಿನ ಚಿತ್ತಾರ’ ಎಂದುಕೊಳ್ಳಬಾರದು. ಅಥವಾ ಮರಾಠಿಯ ‘ಸೈರಾಟ್’ ಕೂಡ ಅಲ್ಲ. ಯಾಕೆಂದರೆ ಈ ಹುಡುಗನದು ಪ್ರೀತಿ ಪ್ರೇಮದ ವಯಸ್ಸೇ ಅಲ್ಲ. ಬರೀ ಹೈಸ್ಕೂಲು ಹುಡುಗನ ಹಗಲುಗನಸು.

ಊರಿನಲ್ಲಿ ಬಸನಗೌಡ ಅಂದರೆ ಬಹಳ ಭಯ, ಮರ್ಯಾದೆ. ಈತನ ತಂಗಿಯೇ ವಿನಯನ ಕ್ಲಾಸ್‌ಮೇಟ್ ರೇಖಾ. ಸುದೀಪ್‌ರ ‘ಹುಚ್ಚ’ ಸಿನೆಮಾದ ನಾಯಕಿ ರೇಖಾಳಂತೆ ಈ ಹುಡುಗಿ ರೇಖಾ ಕೂಡ ಪುಸ್ತಕದ ಮಧ್ಯೆ ನವಿಲುಗರಿ ಇಟ್ಟಿರುತ್ತಾಳೆ. ಅದರೊಂದಿಗೆ ಹೆಬ್ಬುಲಿ ಸಿನೆಮಾದ ಸುದೀಪ್ ಫೋಟೊ ಕೂಡ ಇರುತ್ತದೆ. ಈ ಹುಡುಗಿಗೆ ಕಿಚ್ಚನೆಂದರೆ ಇಷ್ಟ ಎಂದು ಅರಿವಾದೊಡನೆ ಅಂಥದೇ ಹೇರ್‌ಕಟ್ ಮಾಡಿಸುವ ಕನಸು ವಿನಯನದ್ದಾಗುತ್ತದೆ. ಆದರೆ ಇದಕ್ಕಾಗಿ ದುಡ್ಡು ಹೊಂದಿಸಿಕೊಂಡರೂ ಕೂಡ ಚೆನ್ನನ ಕ್ಷೌರದ ಅಂಗಡಿಯೊಳಗೆ ಕಾಲಿಡುವುದು ಎಷ್ಟು ದುಬಾರಿ ಎನ್ನುವುದನ್ನು ಚಿತ್ರದ ಕ್ಲೈಮ್ಯಾಕ್ಸ್ ತೋರಿಸಿ ಕೊಡುತ್ತದೆ.

ವಿನಯನ ಪಾತ್ರದಲ್ಲಿ ಮೌನೇಶ್ ನಟರಂಗ ಭರವಸೆಯ ಅಭಿನಯ ನೀಡಿದ್ದಾರೆ. ವಿನಯನ ತಂದೆಯಾಗಿ ‘ಫೋಟೊ’ ಖ್ಯಾತಿಯ ಮಹಾದೇವ ಹಡಪದ್ ಕಣ್ಣೋಟದಲ್ಲೇ ಎಷ್ಟೋ ಮಾತನಾಡುತ್ತಾರೆ. ಪಂಕ್ಚರ್ ಅಂಗಡಿ ರಫೀಕ್‌ನಾಗಿ, ಸುದೀಪ್ ಪಕ್ಕಾ ಅಭಿಮಾನಿಯಾಗಿ ಪುನೀತ್ ಶೆಟ್ಟಿ ಅಭಿನಯ ಆಕರ್ಷಕ. ರೇಖಾಳಾಗಿ ಅನನ್ಯಾ ನಿಹಾರಿಕಾ ಸೇರಿದಂತೆ ಪ್ರತಿಯೊಬ್ಬರೂ ಪಾತ್ರಕ್ಕೆ ಹೊಂದಿಕೊಂಡ ಆಯ್ಕೆ. ನಿರ್ದೇಶಕ ಭೀಮರಾವ್‌ಗೆ ಇದು ಮೊದಲ ಚಿತ್ರ. ಆದರೆ ಎಲ್ಲ ವಿಭಾಗದಿಂದ ನೈಜ ಕೆಲಸ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಂತ್ ಶಾಂದ್ರೇಯ ಸಂಭಾಷಣೆಯಲ್ಲಿ ಸಹಜತೆಯಿದೆ. ಉತ್ತರ ಕರ್ನಾಟಕದ ಸ್ಥಳೀಯ ಸೊಗಡಿನ ಮಾತಿನ ಮಿಂಚುಗಳೇ ಪ್ರೇಕ್ಷಕರನ್ನು ಚಿತ್ರದೊಳಗೆ ತಂದು ಕೂರಿಸುತ್ತವೆ. ನವನೀತ್ ಶ್ಯಾಮ್ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಬೆಂಬಲವಾದ ರೀತಿ ಅಮೋಘ. ಕಾಲ್ಪನಿಕ ಮತ್ತು ಸಾಹಸ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವ ದೀಪಕ್ ಯರಗೇರ ಛಾಯಾಗ್ರಹಣದ ರೀತಿ ಆಕರ್ಷಕ.

ಹಳ್ಳಿಯೊಂದರಲ್ಲಿ ಕಲ್ಲು ಎತ್ತುವ ಸ್ಪರ್ಧೆಯ ಮೂಲಕ ಸರಳವಾಗಿ ಶುರುವಾಗುವ ಚಿತ್ರ. ಆದರೆ ಜಾತಿ, ಧರ್ಮದ ಹೆಸರಲ್ಲಿ ಬದುಕಿಗೆ ಚಪ್ಪಡಿ ಕಲ್ಲನ್ನೇ ಹಾಕುವ ದೃಶ್ಯದೊಂದಿಗೆ ಮಾರ್ಮಿಕವಾಗಿ ಅಂತ್ಯ ಕಾಣುತ್ತದೆ. ಕೊನೆಯಲ್ಲಿ ಇದು ಸದ್ಯದ ಸತ್ಯವೆಂದು ಸಾರುವ ಇಂತಹ ಅನೇಕ ಘಟನೆಗಳ ಪತ್ರಿಕಾ ವರದಿಗಳು ಪರದೆಯ ಮೇಲೆ ರಾಚುತ್ತವೆ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X