ʼಥಗ್ ಲೈಫ್ʼ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶನ ಮಾಡಬೇಕು: ರಾಜ್ಯ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ ಸುಪ್ರೀಂ ಕೋರ್ಟ್

Photo credit: onlykollywood.com
ಹೊಸದಿಲ್ಲಿ: ಕರ್ನಾಟಕ ಚಿತ್ರಮಂದಿರಗಳಲ್ಲಿ ಕಮಲ್ ಹಾಸನ್ ಅವರ "ಥಗ್ ಲೈಫ್" ಚಿತ್ರ ಪ್ರದರ್ಶನದ ವಿರುದ್ಧದ ಬೆದರಿಕೆಗಳ ವಿರುದ್ಧ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದು, ಸಿಬಿಎಫ್ಸಿ ಪ್ರಮಾಣ ಪತ್ರ ಪಡೆದ ಚಿತ್ರವನ್ನು ಪ್ರತಿ ರಾಜ್ಯದಲ್ಲೂ ಬಿಡುಗಡೆ ಮಾಡಬಹುದು ಎಂದು ಹೇಳಿದೆ.
ಆದರೆ "ಜನರನ್ನು ಭಯಭೀತರನ್ನಾಗಿ ಮಾಡುವುದು, ಚಿತ್ರಮಂದಿರಗಳನ್ನು ಸುಡುವ ಬೆದರಿಕೆಯನ್ನು ಅನುಮತಿಸಲಾಗುವುದಿಲ್ಲ" ಎಂದು ಒತ್ತಿಹೇಳಿದ ಸುಪ್ರೀಂ ಕೋರ್ಟ್, ಗುಂಪು ಅಥವಾ ಜಾಗೃತ ದಳಗಳು ಬೀದಿಗಳಲ್ಲಿ ಆಕ್ರಮಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಇದೇ ವೇಳೆ, ಕಮಲ್ ಹಾಸನ್ ಹೇಳಿಕೆಗೆ ಕ್ಷಮೆಯಾಚನೆ ಕೇಳಿದ ಕರ್ನಾಟಕ ಹೈಕೋರ್ಟ್ ಅನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ.
ನಟ ಕಮಲ್ ಹಾಸನ್ ಏನಾದರೂ ಹೇಳಿದ್ದರೆ, ಜನರು ಅದರ ಬಗ್ಗೆ ಚರ್ಚಿಸಲಿ ಆದರೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನವನ್ನು ತಡೆಯಲು ಸಾಧ್ಯವಿಲ್ಲ. ಕಮಲ್ ಹಾಸನ್ ಏನಾದರೂ ಹೇಳಿದ್ದರೆ, ಅದರ ಬಗ್ಗೆ ಚರ್ಚೆ ಮಾಡಬಹುದು ಆದರೆ ಸಿಬಿಎಫ್ಸಿ ಅನುಮತಿ ನೀಡಿದ ಚಿತ್ರವನ್ನು ಪ್ರದರ್ಶಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಥಗ್ ಲೈಫ್' ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗುವ ಬಗ್ಗೆ ತಿಳಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಒಂದು ದಿನದ ಕಾಲಾವಕಾಶ ನೀಡಿದೆ.
ಥಗ್ ಲೈಫ್ ಚಿತ್ರವು ಜೂನ್ 5 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಆದರೆ ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ಅವರ ಹೇಳಿಕೆಗಳು ದೊಡ್ಡ ವಿವಾದವನ್ನು ಹುಟ್ಟುಹಾಕಿದ ನಂತರ ಕರ್ನಾಟಕದಲ್ಲಿ ಪ್ರದರ್ಶನವನ್ನು ನಿಷೇಧಿಸಲಾಯಿತು.